Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

18 ಏಪ್ರಿಲ್ 2026 (ಶನಿವಾರ) ರ ನಿತ್ಯ ಭವಿಷ್ಯ

ಆರೋಗ್ಯ ರಕ್ಷಣೆಗೆ ಜೀವನ ಶೈಲಿ ಬದಲಾಗಬೇಕು: ಮಾಜಿ ಸಚಿವ ಹೆಚ್. ಆಂಜನೇಯ ಸಲಹೆ

ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ತೀರ್ಪು: ವಿನಯ್ ಕುಲಕರ್ಣಿಗೆ ಜೀವಾವಧಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಮುಖಪುಟ»ಲವ್ ಜಿಹಾದ್…..ಪ್ರೀತಿ – ಪ್ರೇಮದ ಧರ್ಮ ಯುದ್ಧ…..ಒಂದು ಆತ್ಮಾವಲೋಕನ
ಮುಖಪುಟ

ಲವ್ ಜಿಹಾದ್…..ಪ್ರೀತಿ – ಪ್ರೇಮದ ಧರ್ಮ ಯುದ್ಧ…..ಒಂದು ಆತ್ಮಾವಲೋಕನ

Times Of Bayaluseeme StaffBy Times Of Bayaluseeme StaffApril 17, 2026No Comments3 Mins Read
Share WhatsApp Facebook Twitter Threads Telegram
Follow Us
Facebook Instagram
ಪ್ರೀತಿ ಮತ್ತು ಧರ್ಮದ ಸಂಘರ್ಷದ ಕುರಿತಾದ ಸಾಂಕೇತಿಕ ಚಿತ್ರ - ಲವ್ ಜಿಹಾದ್ ಆತ್ಮಾವಲೋಕನ ಲೇಖನ
Share
WhatsApp Twitter Facebook Telegram

ಲವ್ ಜಿಹಾದ್ ಎಂಬುದು ವ್ಯವಸ್ಥಿತ ಜಾಲವೇ ಅಥವಾ ಪ್ರೀತಿಯ ಹೆಸರಿನಲ್ಲಿ ನಡೆಯುವ ರಾಜಕೀಯವೇ? ನಾಸಿಕ್ ಮತ್ತು ಕರ್ನಾಟಕದ ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ವಿವೇಕಾನಂದ ಎಚ್. ಕೆ. ಅವರ ವಿಶೇಷ ಆತ್ಮಾವಲೋಕನ ಲೇಖನ.”

ನಿಜ ಪ್ರೀತಿಯನ್ನು ಅನುಮಾನದಿಂದ ನೋಡುವ ಅತ್ಯಂತ ಕೆಟ್ಟ, ದುಷ್ಟ ಸಮಾಜ ನಿರ್ಮಾಣವಾಗದಿರಲಿ, ಹಾಗೆಯೇ ಪ್ರೀತಿಯ ಮುಗ್ಧತೆ ಧರ್ಮದ ಹೆಸರಿನಲ್ಲಿ ನಾಶವಾಗದಿರಲಿ……

ಈಗಿನ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಟಿಸಿಎಸ್ ಕಂಪನಿಯ ಲವ್ ಜಿಹಾದ್ ಪ್ರಕರಣ, ಹಾಗೆಯೇ ಕರ್ನಾಟಕದ ಹುಬ್ಬಳ್ಳಿ ಸೇರಿ ಕೆಲವು ಜಿಲ್ಲೆಗಳ ಘಟನೆಗಳು, ಕೇರಳ ಸೇರಿ ಕೆಲವು ರಾಜ್ಯಗಳ ಕಡೆ ಒಂದಷ್ಟು ಪ್ರಕರಣಗಳು ಹೀಗೆ ಆಗಾಗ ಸುದ್ದಿಗಳು ಬರುತ್ತಿರುತ್ತವೆ.

ಲವ್ ಜಿಹಾದ್ ಮತ್ತೊಮ್ಮೆ ಇಡೀ ದೇಶಾದ್ಯಂತ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಹಾಗೆಯೇ ನಾಸಿಕ್ ಘಟನೆ ಪೊಲೀಸ್ ತನಿಖೆಯ ಹಂತದಲ್ಲಿದೆ. ದಿನದಿಂದ ದಿನಕ್ಕೆ ಒಂದಷ್ಟು ಆತಂಕಕಾರಿ ಸುದ್ದಿಗಳು ಹೊರ ಬರುತ್ತಿವೆ. ಇದರ ಸತ್ಯಾಸತ್ಯತೆಯ ಬಗ್ಗೆ ಚರ್ಚಿಸಲು ಇನ್ನೊಂದಿಷ್ಟು ಸಮಯ ಬೇಕಾಗುತ್ತದೆ. ಆದರೂ ಮೂಲಭೂತವಾಗಿ ಲವ್ ಜಿಹಾದ್ ಬಗ್ಗೆ ಒಂದಷ್ಟು ಆತ್ಮಾವಲೋಕನ ಮತ್ತು ಅಭಿಪ್ರಾಯ….

ಲವ್ ಜಿಹಾದ್ ಅಥವಾ ಪ್ರೀತಿ ಪ್ರೇಮದ ಧರ್ಮ ಯುದ್ದ ಅಥವಾ ಪ್ರೀತಿಯಿಂದ ಮತಾಂತರ ಯುದ್ಧ ………

ಇದು ನಿಜವೇ, ಆರೋಪ ಮಾತ್ರವೇ,
ಎಲ್ಲೋ ಅಪರೂಪದ ಸಣ್ಣ ಘಟನೆಗಳೇ, ವ್ಯವಸ್ಥಿತ ಜಾಲವೇ, ಸಹಜ ಪ್ರೀತಿ ಪ್ರೇಮದ ಪ್ರಕರಣಗಳೇ…..

ಮನುಷ್ಯರನ್ನೇ ಧರ್ಮದ ಆಧಾರದ ಮೇಲೆ ಒಡೆದು, ನಮ್ಮದೇ ಶ್ರೇಷ್ಠ ಎಂಬ ಮನೋಭಾವ ಬೆಳೆಸಿ, ಜೊತೆಗೆ ಇತರ ಧರ್ಮಗಳ ವಿರುದ್ಧ ದ್ವೇಷ ಭಾವನೆ ಮೂಡಿಸಿ ಅದರ ನಾಶಕ್ಕೆ ಪ್ರಯತ್ನಿಸುತ್ತಾ ಇರುವ ಧಾರ್ಮಿಕ ಮುಖಂಡರುಗಳು ಹೆಚ್ಚಾಗುತ್ತಿರುವ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಖಚಿತವಾಗಿ ಏನನ್ನಾದರೂ ಹೇಳುವುದು ಕಷ್ಟ. ಭಾರತದಲ್ಲಿ ರಾಜಕೀಯ ಕಾರಣದಿಂದಾಗಿ ಸತ್ಯ ಮತ್ತು ಸುಳ್ಳುಗಳ ನಡುವಿನ ಅಂತರ ತುಂಬಾ ಕಡಿಮೆಯಾಗಿದೆ.

ಲವ್ ಜಿಹಾದ್ ಎಂಬುದು ನನಗೆ ಅರ್ಥವಾಗಿರುವುದೇನೆಂದರೆ ,
ಮುಸ್ಲಿಂ ಮೂಲಭೂತವಾದಿಗಳು ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿಸಿ ಅಥವಾ ಪ್ರೀತಿಯ ನಾಟಕವಾಡಿ ಅವರನ್ನು ಮದುವೆಯಾಗಿ, ಅವರನ್ನು ಮತ್ತು ಅವರ ಮಕ್ಕಳನ್ನು ಇಸ್ಲಾಮೀಕರಣ ಮಾಡಿ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಒಳಸಂಚು ಎಂದು.

ಇದು ನಿಜವೇ ಅಥವಾ ಹಿಂದೂ ಮೂಲಭೂತವಾದಿಗಳ ಕುತಂತ್ರ ಆರೋಪವೇ ಅಥವಾ ಓಟ್ ಬ್ಯಾಂಕಿನ ರಾಜಕೀಯವೇ ?
ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಏಕೆಂದರೆ ಪ್ರೀತಿ ಮತ್ತು ಅಪರಾಧಗಳು ಸಾಮಾನ್ಯ ಗ್ರಹಿಕೆಗೆ ಸ್ಪಷ್ಟವಾಗಿ ನಿಲುಕುವುದಿಲ್ಲ.

ನಿಜವಾಗಿದ್ದಲ್ಲಿ ಅದು ಶಿಕ್ಷಾರ್ಹ ಅಪರಾಧ ಮತ್ತು ದೇಶದ್ರೋಹ ಹಾಗು ಮಾನವ ದ್ರೋಹ. ಸುಳ್ಳಾಗಿದ್ದಲ್ಲಿ ಆ ರೀತಿಯ ಸುಳ್ಳು ಸುದ್ದಿ ಹಬ್ಬಿಸಿ ತಮ್ಮ ಸ್ವಾರ್ಥ ಸಾಧನೆಗೆ ದೇಶ ಮತ್ತು ಧರ್ಮವನ್ನು ಉಪಯೋಗಿಸಿಕೊಳ್ಳುವವರೂ ದೇಶ ಮತ್ತು ಧರ್ಮ ದ್ರೋಹಿಗಳೇ.

ಆದರೆ ಮುಖ್ಯ ಪ್ರಶ್ನೆ ಎಂದರೆ……,.

ಭಾರತೀಯ ಹಿಂದೂ ಯುವತಿಯರು ಪ್ರೀತಿಯ ನಾಟಕವಾಡುವ ವ್ಯಕ್ತಿಗಳ ಆಕರ್ಷಣೆಗೆ ಸುಲಭವಾಗಿ ಬಲಿಯಾಗುವಷ್ಟು ದುರ್ಬಲರೇ ? ಅಥವಾ ನಮ್ಮ ಸಾಮಾಜಿಕ ವ್ಯವಸ್ಥೆ ನಮ್ಮ ಹೆಣ್ಣುಮಕ್ಕಳನ್ನು ಅಷ್ಟೊಂದು ಕೆಳಮಟ್ಟದಲ್ಲಿ ಬೆಳೆಸಿದೆಯೇ ? ಅಥವಾ ನಿಜ ಪ್ರೀತಿ ಮತ್ತು ಕಪಟತೆ ಅರಿಯದಷ್ಟು ಮುಗ್ಧರೇ ? ಅಥವಾ ಮಾತು, ರೂಪ, ಬಟ್ಟೆ, ಕಾರು, ಹಣದ ಆಸೆಗೆ ಸುಲಭವಾಗಿ ಮರುಳಾಗುವ ಚಂಚಲೆಯರೆ ? ( ಬಲವಂತವಾಗಿ ಅಥವಾ ಒತ್ತಾಯಪೂರ್ವಕವಾಗಿ ಪ್ರಯತ್ನಿಸುವುದು ಅತ್ಯಾಚಾರಕ್ಕೆ ಸಮ. ಅದು ಈ ವ್ಯಾಪ್ತಿಗೆ ಒಳಪಡುವುದಿಲ್ಲ)

ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ……….

ಮೂಲಭೂತವಾಗಿ ಭಾರತದ ಎಲ್ಲಾ ವರ್ಗದ ಸಂಸ್ಕೃತಿ ಮತ್ತು ಜೀವನಶೈಲಿಯಲ್ಲಿ ಪ್ರೀತಿಗೆ ಅತ್ಯುನ್ನತ ಸ್ಥಾನವಿದೆ. ಪ್ರೀತಿ ಮಾಡುವುದಲ್ಲ ಅದು ಆಗುವುದು – ತನಗರಿವಿಲ್ಲದೆ ಘಟಿಸುವುದು, ಅನುಭವಿಸುವುದು.
ಪ್ರೀತಿ ಎಂಬುದು ಪ್ರೀತಿ, ಪ್ರೇಮ, ಪ್ರಣಯ, ತ್ಯಾಗ, ಸಹಕಾರ, ಆಕರ್ಷಣೆ, ಅವಲಂಬನೆ, ಹೊಂದಾಣಿಕೆ, ಜವಾಬ್ದಾರಿ ಮುಂತಾದ ಅನೇಕ ಅಂಶಗಳ ಹೃದಯದ ಭಾಷೆ, ಭಾವನೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಸಮ್ಮಿಲನ.
ಕೇವಲ ಹಣ, ಅಧಿಕಾರ, ಸೌಂದರ್ಯ, ಮಾತಿನ ಕಲೆಗಾರಿಕೆ ಮುಂತಾದವುಗಳಿಗೆ ಒಲಿಯುವುದು ಒಂದು ಮೋಹವೇ ಹೊರತು ನಿಜ ಪ್ರೀತಿಯಲ್ಲ….‌

ಚೆಂಡು ಈಗ ನಮ್ಮ ಅಂಗಳದಲ್ಲೇ ಇದೆ, ನಾವೇ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು….

ಪ್ರೀತಿಸುವ ಮನಸ್ಸುಗಳನ್ನು ಮುಗ್ಧ ಮನಸ್ಸು ಎಂದು ಸಮಾಧಾನ ಮಾಡಿಕೊಳ್ಳಬಾರದು. ಅದು ಆಸೆ, ಅಜ್ಞಾನ, ಆಕರ್ಷಣೆ ಅಥವಾ ನಿಜ ಪ್ರೀತಿಯೇ ಆಗಿರಬೇಕೆ ಹೊರತು ಮುಗ್ಧತೆಯಲ್ಲ.

ಒಂದುವೇಳೆ ಲವ್ ಜಿಹಾದ್ ಶತ್ರುಗಳ ಪ್ರಬಲ ಅಸ್ತ್ರವೇ ಆಗಿದ್ದಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆ ದೃಢವಾಗಿದ್ದಲ್ಲಿ ಭಯಪಡುವ ಅವಶ್ಯಕತೆಯೇ ಇಲ್ಲ. ಬಲವಂತವಾದಲ್ಲಿ ಮಾತ್ರ ಅದು ಕಾನೂನು ಸುವ್ಯವಸ್ಥೆಯ ಸಮಸ್ಯೆ.

ಅದಕ್ಕಾಗಿ ಎಲ್ಲಾ ಮುಸ್ಲಿಮರನ್ನು ತೆಗಳಿ ಅವರನ್ನು ಮುಖ್ಯವಾಹಿನಿಯಿಂದ ದೂರತಳ್ಳಿ ಮತ್ತಷ್ಟು ಅವಮಾನಕ್ಕೀಡುಮಾಡುವುದೂ ಸರಿಯಲ್ಲ. ಧರ್ಮಕ್ಕಾಗಿ
ಎಳೆಯ ಪ್ರೀತಿಯ ಮನಸ್ಸುಗಳನ್ನು ನೋಯಿಸುವುದು ತರವಲ್ಲ.

ಪ್ರೀತಿಯನ್ನು ಪ್ರೀತಿಯಾಗೇ ಉಳಿಸಿಕೊಳ್ಳಲು ಭಾರತೀಯ ಮನಸ್ಸುಗಳು ಪಣ ತೊಡೋಣ.
ಎಲ್ಲಾ ಧರ್ಮಗಳ ಮೂಲಭೂತವಾದಿ ಕ್ರೂರಿಗಳ ಕೈಯಲ್ಲಿ ಪ್ರೀತಿ ಬಂಧಿಯಾಗಿ ನಲುಗದಂತೆ ನೋಡಿಕೊಳ್ಳೋಣ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451….
9844013068……

ಇಸ್ಲಾಮೀಕರಣ ಆರೋಪ ಕರ್ನಾಟಕ ಕ್ರೈಂ ನ್ಯೂಸ್ ಧರ್ಮ ಮತ್ತು ಪ್ರೀತಿ ಧಾರ್ಮಿಕ ಮತಾಂತರ ನಾಸಿಕ್ ಟಿಸಿಎಸ್ ಪ್ರಕರಣ ಪ್ರೀತಿಯ ಸತ್ಯಾಸತ್ಯತೆ ​ಲವ್ ಜಿಹಾದ್ ಸಾಮಾಜಿಕ ಜಾಗೃತಿ ಹಿಂದೂ ಸಂಸ್ಕೃತಿ ಮತ್ತು ಯುವತಿಯರು ಹುಬ್ಬಳ್ಳಿ ನೇಹಾ ಹಿರೇಮಠ್ ಪ್ರಕರಣ
Follow on Facebook Follow on Instagram
Share. Facebook Twitter WhatsApp Telegram
Previous Articleಕರ್ನಾಟಕ ಲೋಕಾಯುಕ್ತದ ನಾಲ್ಕು ದಶಕಗಳ ಸಾರ್ಥಕ ಪಯಣ: ಏಪ್ರಿಲ್ 18 ರಂದು ವಿಶೇಷ ಕಾರ್ಯಕ್ರಮ
Next Article ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ತೀರ್ಪು: ವಿನಯ್ ಕುಲಕರ್ಣಿಗೆ ಜೀವಾವಧಿ
Times Of Bayaluseeme Staff
  • Website

Related Posts

ಜಗಜ್ಯೋತಿ ಬಸವೇಶ್ವರ ಜಯಂತಿ ವಿಶೇಷಾಂಕ ‘ಯುವ ಮನಸ್ಸಿನ ಚಿಂತನೆಗಳಿಗೆ ಸುವರ್ಣ ವೇದಿಕೆ’

April 12, 2026

ಯುವ ಮನಸ್ಸಿನ ಚಿಂತನೆಗಳಿಗೆ ವೇದಿಕೆ ಕಲ್ಪಿಸಿದೆ ‘ಟೈಮ್ಸ್ ಆಫ್ ಬಯಲುಸೀಮೆ ಕನ್ನಡ ದಿನಪತ್ರಿಕೆ’

April 12, 2026

ಅಮೃತಬಳ್ಳಿ (Basalli balli) ಔಷಧೀಯ ಪ್ರಯೋಜನಗಳು

April 12, 2026
Add A Comment
Leave A Reply Cancel Reply

Advertisement
Latest Posts

18 ಏಪ್ರಿಲ್ 2026 (ಶನಿವಾರ) ರ ನಿತ್ಯ ಭವಿಷ್ಯ

ಆರೋಗ್ಯ ರಕ್ಷಣೆಗೆ ಜೀವನ ಶೈಲಿ ಬದಲಾಗಬೇಕು: ಮಾಜಿ ಸಚಿವ ಹೆಚ್. ಆಂಜನೇಯ ಸಲಹೆ

ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ತೀರ್ಪು: ವಿನಯ್ ಕುಲಕರ್ಣಿಗೆ ಜೀವಾವಧಿ

ಲವ್ ಜಿಹಾದ್…..ಪ್ರೀತಿ – ಪ್ರೇಮದ ಧರ್ಮ ಯುದ್ಧ…..ಒಂದು ಆತ್ಮಾವಲೋಕನ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.