Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

17/06/2026 ರ ನಿತ್ಯ ಭವಿಷ್ಯ (ಬುಧವಾರ)

ಕೆಂಪೇಗೌಡ ಬಡಾವಣೆಯಲ್ಲಿ ಈ ಬಾರಿಯ ಕೆಂಪೇಗೌಡ ಜಯಂತಿ; 15 ಲಕ್ಷ ಗಿಡ ನೆಡಲು ಬಿಡಿಎ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್

16/06/2026 ರ ನಿತ್ಯ ಭವಿಷ್ಯ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ಕೆ.ಎಚ್.ಮುನಿಯಪ್ಪ ಅವರಿಗೆ ಉನ್ನತ ಸ್ಥಾನ ನೀಡಿ; ಮಾದಿಗ ಸಮುದಾಯದ ನಿರೀಕ್ಷೆಗೆ ಸ್ಪಂದಿಸಿ: ಮುಖಂಡ ಯಶವಂತ್ ಆಗ್ರಹ
ಚಿತ್ರದುರ್ಗ

ಕೆ.ಎಚ್.ಮುನಿಯಪ್ಪ ಅವರಿಗೆ ಉನ್ನತ ಸ್ಥಾನ ನೀಡಿ; ಮಾದಿಗ ಸಮುದಾಯದ ನಿರೀಕ್ಷೆಗೆ ಸ್ಪಂದಿಸಿ: ಮುಖಂಡ ಯಶವಂತ್ ಆಗ್ರಹ

Times Of Bayaluseeme StaffBy Times Of Bayaluseeme StaffJune 7, 2026No Comments1 Min Read
Share WhatsApp Facebook Twitter Threads Telegram
Follow Us
Facebook Instagram
kh-muniyappa-madiga-leader-yashwanth-demand
Share
WhatsApp Twitter Facebook Telegram

ಚಿತ್ರದುರ್ಗ: ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಉನ್ನತ ಸ್ಥಾನಮಾನ ನೀಡಬೇಕಾಗಿತ್ತು ಎಂದು ಮಾದಿಗ ಸಮುದಾಯದ ಮುಖಂಡ ಯಶವಂತ್ ಒತ್ತಾಯಿಸಿದ್ದಾರೆ.

ಕೆ.ಎಚ್.ಮುನಿಯಪ್ಪ ಅವರಿಗೆ ಹಿಂದಿನ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನೇ ಮುಂದುವರಿಸಿರುವುದು ಸಮುದಾಯದ ನಿರೀಕ್ಷೆಗೆ ತಕ್ಕಂತಿಲ್ಲ. ಅವರ ದೀರ್ಘ ರಾಜಕೀಯ ಅನುಭವ, ಪಕ್ಷಕ್ಕೆ ನೀಡಿರುವ ಕೊಡುಗೆ ಹಾಗೂ ಹಿರಿತನವನ್ನು ಪರಿಗಣಿಸಿ ಸಮಾಜ ಕಲ್ಯಾಣ ಇಲಾಖೆ ಅಥವಾ ಗೃಹ ಇಲಾಖೆಯಂತಹ ಪ್ರಮುಖ ಖಾತೆ ನೀಡಬೇಕಾಗಿತ್ತು ಎಂದು ಹೇಳಿದ್ದಾರೆ.

ಕೆ.ಎಚ್.ಮುನಿಯಪ್ಪ ಅವರು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿರುವ ನಾಯಕರು. ಕೇಂದ್ರ ಸರ್ಕಾರದಲ್ಲಿ ಆರು ಬಾರಿ ಸಂಸದರಾಗಿ, ರೈಲ್ವೆ ಸೇರಿದಂತೆ ಮಹತ್ವದ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಹೆಗ್ಗಳಿಕೆ ಅವರದು. ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಹಲವು ವರ್ಷಗಳಿಂದ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ.

ಮಾದಿಗ ಸಮುದಾಯದ ಪರವಾಗಿ ಕೆ.ಎಚ್.ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ನಿರೀಕ್ಷೆ ಇತ್ತು. ಡಾ.ಜಿ.ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಕೆ.ಎಚ್.ಮುನಿಯಪ್ಪ ಅವರ ಹಿರಿತನ ಮತ್ತು ಅನುಭವವನ್ನು ಗಮನಿಸಿ ಅವರಿಗೆ ಇನ್ನೊಂದು ಉನ್ನತ ಸ್ಥಾನ ನೀಡಬಹುದಿತ್ತು.

ಮಾದಿಗ ಸಮುದಾಯದ ಹಿರಿಯ ನಾಯಕನಾಗಿರುವ ಕೆ.ಎಚ್.ಮುನಿಯಪ್ಪ ಅವರಿಗೆ ಸೂಕ್ತ ಗೌರವ ಮತ್ತು ಅಧಿಕಾರ ನೀಡುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಅವರಂತಹ ಅನುಭವಿಗಳ ಸೇವೆಯನ್ನು ಸರ್ಕಾರ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಯಶವಂತ್ ಮನವಿ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಅವರು ಕೆ.ಎಚ್.ಮುನಿಯಪ್ಪ ಅವರ ಅನುಭವ ಮತ್ತು ಹಿರಿತನಕ್ಕೆ ಹೆಚ್ಚಿನ ಆದ್ಯತೆ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಕರ್ನಾಟಕ ಸಚಿವ ಸಂಪುಟ ಕಾಂಗ್ರೆಸ್ ಹೈಕಮಾಂಡ್. ​ಕೆ.ಎಚ್.ಮುನಿಯಪ್ಪ ಚಿತ್ರದುರ್ಗ ಸುದ್ದಿ ಡಿ.ಕೆ. ಶಿವಕುಮಾರ್ ಮಾದಿಗ ಸಮುದಾಯ ಯಶವಂತ್ ಆಗ್ರಹ ಸಮಾಜ ಕಲ್ಯಾಣ ಇಲಾಖೆ
Follow on Facebook Follow on Instagram
Share. Facebook Twitter WhatsApp Telegram
Previous Articleಜೀರೋ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಮೆಟ್ರೋ ಮೊರೆ ಹೋದ ಸಿಎಂ ಡಿ.ಕೆ. ಶಿವಕುಮಾರ್!
Next Article ಅಹಿಂದ ವರ್ಗಕ್ಕೆ ರಾಜಕೀಯ ಮನ್ನಣೆ ನೀಡಿ, ಡಿ.ಕೆ.ಶಿವಕುಮಾರ್ ಸಾಮಾಜಿಕ ನ್ಯಾಯ ಪಾಲಿಸಲಿ: ಎಮ್ಮೆಹಟ್ಟಿ ಹನುಮಂತಪ್ಪ ಆಗ್ರಹ
Times Of Bayaluseeme Staff
  • Website

Related Posts

ಕೆಂಪೇಗೌಡ ಬಡಾವಣೆಯಲ್ಲಿ ಈ ಬಾರಿಯ ಕೆಂಪೇಗೌಡ ಜಯಂತಿ; 15 ಲಕ್ಷ ಗಿಡ ನೆಡಲು ಬಿಡಿಎ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್

June 16, 2026

ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ

June 15, 2026

ಚಿತ್ರದುರ್ಗದಲ್ಲಿ ಅತಿ ಶೀಘ್ರದಲ್ಲೇ ಹೈಟೆಕ್ ‘ಗುರುಭವನ’ ನಿರ್ಮಾಣಕ್ಕೆ ಭೂಮಿ ಪೂಜೆ: ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ

June 14, 2026
Add A Comment
Leave A Reply Cancel Reply

Advertisement
Latest Posts

17/06/2026 ರ ನಿತ್ಯ ಭವಿಷ್ಯ (ಬುಧವಾರ)

ಕೆಂಪೇಗೌಡ ಬಡಾವಣೆಯಲ್ಲಿ ಈ ಬಾರಿಯ ಕೆಂಪೇಗೌಡ ಜಯಂತಿ; 15 ಲಕ್ಷ ಗಿಡ ನೆಡಲು ಬಿಡಿಎ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್

16/06/2026 ರ ನಿತ್ಯ ಭವಿಷ್ಯ

ಗ್ಯಾಸ್ಟ್ರಿಕ್ ಮತ್ತು ಮುಟ್ಟಿನ ನೋವಿಗೆ ರಾಮಬಾಣ ‘ಇಂಗು’: ಬಳಸುವ ಸರಿಯಾದ ವಿಧಾನ ಇಲ್ಲಿದೆ!

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.