Author: ಮೃತ್ಯುಂಜಯಾಚಾರ್ ಬಿ
ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.
16,000 ಕೋಟಿ ರೂ.ಗೆ ಆರ್‌ಸಿಬಿ ಮಾರಾಟ? ಆದಿತ್ಯ ಬಿರ್ಲಾ ಗ್ರೂಪ್‌ಗೆ ಮಾಲೀಕತ್ವ ವರ್ಗಾವಣೆ ಸುದ್ದಿ ಐಪಿಎಲ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಸುದ್ದಿಯಂತೆ Royal Challengers Bangalore (ಆರ್‌ಸಿಬಿ) ತಂಡವು ಸುಮಾರು 16,000 ಕೋಟಿ ರೂಪಾಯಿಗೆ ಮಾರಾಟವಾಗಿರುವುದಾಗಿ ವರದಿಗಳು ತಿಳಿಸಿವೆ. ತಂಡದ ಇತ್ತಿಚಿನ ಮಾಲೀಕರಾದ United Spirits Limited ತಮ್ಮ ಹಂಚಿಕೆಯನ್ನು ದೇಶದ ಪ್ರಮುಖ ಉದ್ಯಮ ಸಮೂಹ Aditya Birla Group ಗೆ ಹಸ್ತಾಂತರಿಸಲು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. Indian Premier League ಇತಿಹಾಸದಲ್ಲೇ ಅತಿ ದೊಡ್ಡ ಡೀಲ್‌ಗಳಲ್ಲಿ ಒಂದಾಗಿ ಈ ವ್ಯವಹಾರ ಪರಿಗಣಿಸಲ್ಪಡುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಅಧಿಕೃತ ಮಾಹಿತಿ ಇನ್ನೂ ಬಾಕಿ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಂದಿಲ್ಲ. ಆದರೆ, ಒಪ್ಪಂದದ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲೇ ಸ್ಪಷ್ಟನೆ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಫ್ಯಾನ್ಸ್‌ಗಳಲ್ಲಿ ಚರ್ಚೆ ಜೋರಾಗಿದೆ ಹೊಸ ಮಾಲೀಕತ್ವದಲ್ಲಿ ತಂಡದ ಭವಿಷ್ಯ ಹೇಗಿರಲಿದೆ, ಆಟಗಾರರ ನೀತಿ ಹಾಗೂ ನಿರ್ವಹಣೆಯಲ್ಲಿ ಏನೆಲ್ಲ…
ಭಾರತೀಯ ರೈಲ್ವೆ ಟಿಕೆಟ್ ರದ್ದತಿ ಮತ್ತು ರೀಫಂಡ್ ನಿಯಮಗಳು 2026: ಪ್ರಯಾಣಿಕರು ತಿಳಿಯಲೇಬೇಕಾದ ಪ್ರಮುಖ ಬದಲಾವಣೆಗಳು ನವದೆಹಲಿ, ಮಾ.25: Indian Railways 2026ರಲ್ಲಿ ಪ್ರಯಾಣಿಕರ ಅನುಕೂಲತೆಗಾಗಿ ಟಿಕೆಟ್ ರದ್ದತಿ (Cancellation) ಮತ್ತು ರೀಫಂಡ್ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ಈ ಹೊಸ ನಿಯಮಗಳು ಆನ್‌ಲೈನ್ ಹಾಗೂ ಕೌಂಟರ್ ಟಿಕೆಟ್‌ಗಳಿಗೆ ಅನ್ವಯವಾಗಲಿದ್ದು, ಪ್ರಯಾಣಿಕರು ಅವುಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಮುಖ್ಯ ಬದಲಾವಣೆಗಳು ಹೀಗಿವೆ: 🔹 ಮುಂಗಡ ರದ್ದತಿಗೆ ಹೊಸ ನಿಯಮ ಪ್ರಯಾಣದ 48 ಗಂಟೆಗಳ ಮುಂಚಿತವಾಗಿ ಟಿಕೆಟ್ ರದ್ದತಿ ಮಾಡಿದರೆ ಹೆಚ್ಚಿನ ರೀಫಂಡ್ ದೊರೆಯಲಿದೆ. ಆದರೆ ಪ್ರಯಾಣ ಸಮಯಕ್ಕೆ ಸಮೀಪಿಸಿದಂತೆ ರೀಫಂಡ್ ಪ್ರಮಾಣ ಕಡಿಮೆಯಾಗುತ್ತದೆ. 🔹 ತತ್ಕಾಲ್ ಟಿಕೆಟ್ ರೀಫಂಡ್ ನಿಯಮ Tatkal Ticket ಟಿಕೆಟ್‌ಗಳ ರದ್ದತಿಗೆ ಸಾಮಾನ್ಯವಾಗಿ ರೀಫಂಡ್ ಇರುವುದಿಲ್ಲ. ಆದರೆ ರೈಲು ರದ್ದು ಅಥವಾ ವಿಳಂಬವಾದಲ್ಲಿ ಮಾತ್ರ ಹಣ ಹಿಂತಿರುಗಿಸಲಾಗುತ್ತದೆ. 🔹 RAC ಮತ್ತು ವೇಟ್‌ಲಿಸ್ಟ್ ಟಿಕೆಟ್‌ಗಳು RAC/ವೇಟ್‌ಲಿಸ್ಟ್ ಟಿಕೆಟ್‌ಗಳು ಸ್ವಯಂ ರದ್ದುಗೊಂಡು ಸಂಪೂರ್ಣ ರೀಫಂಡ್ (ಕಡಿತ ಶುಲ್ಕವಿಲ್ಲದೆ)…
ವಾಟ್ಸ್‌ಆಪ್ ಸಂದೇಶ ನಂಬಿದ ವೈದ್ಯನಿಗೆ ಉಂಡೆನಾಮ ಅಲ್ಪಾವಧಿಯಲ್ಲಿ ಕೋಟ್ಯಾಧೀಶರಾಗಬಹುದು ಎಂಬ ಆಮಿಷವೊಡ್ಡಿ ವೈದ್ಯರೊಬ್ಬರಿಗೆ 25 ಲಕ್ಷ ವಂಚಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮೊಬೈಲ್ ಫೋನ್ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿದರೆ ಲಕ್ಷಾಂತರ ಹಣ ಪಡೆಯಹುದು ಎಂಬ ವಾಟ್ಸ್‌ಆಪ್‌ಗೆ ಬಂದ ಸಂದೇಶವನ್ನು ನಂಬಿದ ಸರಸ್ವತಿ ಬಡಾವಣೆಯ ವೈದ್ಯ ಹಣ ಕಳೆದುಕೊಂಡಿದ್ದಾನೆ. ವಾಟ್ಸ್‌ಆಪ್‌ಗೆ ಬಂದ ಸಂದೇಶದಲ್ಲಿ ಹಣ ಹೂಡಿಕೆ ಮಾಡುವಂತೆ ಉತ್ತೇಜಿಸಲಾಗಿದೆ. ಸಾಲ್ಡ್‌ಕ್ಯಾಮ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ವೈದ್ಯ, ವಂಚಕರು ಹೇಳಿದಂತೆ ಹಣ ಹೂಡಿಕೆ ಮಾಡಿದ್ದಾರೆ. ಫೆ.27ರಿಂದ ಮಾರ್ಚ್ 20ರವರೆಗೆ 25 ಲಕ್ಷವನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸೈಬರ್ ಅಪರಾಧಗಳ ಸಹಾಯವಾಣಿ 1930 ಸಂಪರ್ಕಿಸಿ ವಿಚಾರಿಸಿದಾಗ ಮೋಸ ಹೋಗಿದ್ದು ಖಚಿತವಾಗಿದೆ. ಈ ಸಂಬಂಧ ಸಿಇಎನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಐಪಿಎಲ್ ಆರಂಭದ ಹೊಸ್ತಿಲಲ್ಲೇ ಬದಲಾಯ್ತು ನಿಯಮ ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಈ ಹೊತ್ತಲ್ಲೇ ಬಿಸಿಸಿಐ ಪ್ರಮುಖ ನಿಯಮಗಳನ್ನು ಬದಲಾಯಿಸಿದೆ. ಇದು ಪಂದ್ಯದ ದಿನಗಳಲ್ಲಿ ತಂಡಗಳಿಗೆ ಅಭ್ಯಾಸ ಸೆಷನ್, ಫಿಟ್‌ನೆಸ್ ಪರೀಕ್ಷೆ ನಿಷಿದ್ಧ. ಪಿಚ್ ರಕ್ಷಣೆ ಇದರ ಮುಖ್ಯ ಉದ್ದೇಶವಾಗಿದೆ. ಮಾರ್ಚ್ 28ರಿಂದ ಐಪಿಎಲ್ ಆರಂಭ ಆಗುತ್ತಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಆರ್ಸಿಬಿ ತಂಡ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಈ ಪಂದ್ಯ ನಡೆಯಲಿದೆ. ಹೊಸ ನಿಯಮ ಈ ಬಾರಿಯ ಸೀಸನ್ ಮೇಲೆ ಸಾಕಷ್ಟು ಪ್ರಭಾವ ಬೀರುವ ಸಾಧ್ಯತೆ ಇದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ, ಬಿಸಿಸಿಐ ಅಭ್ಯಾಸ ಪ್ರದೇಶದಲ್ಲಿ ಎರಡು ನೆಟ್‌ಗಳನ್ನು ನಿರ್ಮಾಣ ಮಾಡಲಿದೆ. ಎರಡು ತಂಡಗಳು ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಅಭ್ಯಾಸ ಮಾಡುತ್ತಿದ್ದರೆ, ಎರಡೂ ತಂಡಕ್ಕೆ ತಲಾ ಎರಡು ಪಿಚ್ಗಳನ್ನು ನೀಡಲಾಗುತ್ತದೆ. ತಂಡಗಳು ತಮ್ಮ ಎದುರಾಳಿ ತಂಡಗಳಿಗೆ ಮೀಸಲಿಟ್ಟ ಜಾಗವನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅವು ಖಾಲಿ ಇದ್ದರೂ ಸಹ ಅದನ್ನು ಬಳಸುವಂತಿಲ್ಲ. ನ್ಯಾಯ ಕಾಪಾಡಿಕೊಳ್ಳುವುದು ಇದರ…
ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ಗೆ ಮಾತೃ ವಿಯೋಗ ಚಿತ್ರದುರ್ಗ: ನಗರದ ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಸಂದೀಪ್ ಅವರ ತಾಯಿ ಪುಟ್ಟಮ್ಮ (67) ಮಂಗಳವಾರ ನಿಧನರಾದರು. ಚಳ್ಳಕೆರೆ ನಗರದ ಎಸ್.ಆರ್. ರೋಡ್ ನಿವಾಸಿಯಾಗಿದ್ದ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗಕ್ಕೆ ಕರೆತರುತ್ತಿರುವ ವೇಳೆ ದಾರಿ ಮಧ್ಯೆ ಅಸುನೀಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಪತಿ ಬ್ಯಾಂಕ್ ಸೂರನಾಯಕ, ಪುತ್ರರಾದ ಸಂದೀಪ್, ಸಾಗರ್, ಸುಹಾಸ್ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಜರ್ಮನಿಯಲ್ಲಿ ಇರುವ ಪುತ್ರ ಸುಹಾಸ್ ಆಗಮನದ ಬಳಿಕ, ಬುಧವಾರ ನೇರಲಗುಂಟೆ ಗ್ರಾಮದ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
200 ಕೋಟಿ ರೂ. ಬಂಗಲೆ ಮಾಹಿತಿ ಮರೆಮಾಚಿದ ಆರೋಪ: ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅನರ್ಹಗೊಳಿಸಲು ಕೇರಳ ಕಾಂಗ್ರೆಸ್ ಆಗ್ರಹ ತಿರುವನಂತಪುರಂ: ಬಿಜೆಪಿ ಅಭ್ಯರ್ಥಿ Rajeev Chandrasekhar ಅವರು ತಮ್ಮ 200 ಕೋಟಿ ರೂ. ಮೌಲ್ಯದ ಬಂಗಲೆ ವಿವರವನ್ನು ಚುನಾವಣಾ ಅಫಿಡವಿಟ್‌ನಲ್ಲಿ ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸುವಂತೆ ಕೇರಳ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ವಕ್ತಾರರು, ಅಭ್ಯರ್ಥಿಗಳು ತಮ್ಮ ಆಸ್ತಿ ವಿವರಗಳನ್ನು ಸಂಪೂರ್ಣವಾಗಿ ಮತ್ತು ನಿಖರವಾಗಿ ಬಹಿರಂಗಪಡಿಸುವುದು ಕಡ್ಡಾಯ ಎಂದು ಹೇಳಿ, ಈ ಪ್ರಕರಣದಲ್ಲಿ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಿದ್ದಾರೆ. ಇದು ಮತದಾರರನ್ನು ತಪ್ಪು ದಾರಿಗೆಳೆಯುವ ಕ್ರಮವಾಗಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು, ಈ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದು, ಎಲ್ಲಾ ಆಸ್ತಿ ವಿವರಗಳನ್ನು ನಿಯಮಾನುಸಾರ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಷಯ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ…
ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ ; ಹೈಕೋರ್ಟ್ ತರಾಟೆ ಬೆಂಗಳೂರು: ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿದ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ)ಯ ಜನನ ಮತ್ತು ಮರಣ ನೋಂದಣಾಧಿಕಾರಿಗೆ ಹೈಕೋರ್ಟ್ ಛಾಟಿ ಬೀಸಿದೆ. ಬೆಂಗಳೂರಿನ ಚಿಕ್ಕಪೇಟೆಯ ವಲಯ ಕಚೇರಿಯ ಜನನ ಮತ್ತು ಮರಣ ನೋಂದಣಾಧಿಕಾರಿ ನೀಡಿರುವ ತಾತ್ಕಾಲಿಕ ಮರಣ ಪ್ರಮಾಣಪತ್ರವನ್ನು ರದ್ದುಪಡಿಸಲು ನಿರ್ದೇಶಿಸಬೇಕೆಂದು ಕೋರಿ ಡಿ.ಮೆಹಬೂಬ್ ಬಾಷಾ ಎಂಬವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ, ಮುಂದಿನ ವಿಚಾರಣೆಯ ವೇಳೆಗೆ ಮರಣ ಪ್ರಮಾಣಪತ್ರವನ್ನು ರದ್ದುಪಡಿಸಿರುವ ಹಿಂಬರಹ ಸಲ್ಲಿಸಬೇಕು ತಾಕೀತು ಮಾಡಿತು. ಬದುಕಿರುವ ವ್ಯಕ್ತಿಯ ಹೆಸರಿನಲ್ಲಿ ನೀಡಿರುವ ಮರಣ ಪ್ರಮಾಣಪತ್ರವನ್ನು ಹಿಂಪಡೆಯದೇ ಇರುವುದರಿಂದ ಅವರು ಅನಿವಾರ್ಯವಾಗಿ ನ್ಯಾಯಾಲಯದ ಕದ ತಟ್ಟುವಂತಾಗಿದೆ. ಜನನ ಮತ್ತು ಮರಣಗಳ ರಿಜಿಸ್ಟ್ರಾರ್ ಅವರು ಬುಧವಾರದೊಳಗೆ ಮರಣ ಪ್ರಮಾಣಪತ್ರ ರದ್ದುಪಡಿಸಿರುವ ಹಿಂಬರಹವನ್ನು ಸಲ್ಲಿಸಬೇಕು. ಇಲ್ಲವಾದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ…
ವಿದ್ಯಾರ್ಥಿಗಳ ಕೈಗೆ ಮೊಬೈಲ್; ನಿಷೇಧವೋ..ನಿರ್ಬಂಧವೋ ? ಬೆಂಗಳೂರು: 16 ವರ್ಷದೊಳಗಿನ ಎಲ್ಲಾ ಶಾಲಾ-ಕಾಲೇಜುಗಳ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸಬೇಕೋ ಅಥವಾ ನಿರ್ಬಂಧಿಸಬೇಕೋ ಎಂಬುದರ ಕುರಿತು ಪೋಷಕರು ಸೇರಿದಂತೆ ಎಲ್ಲರೊಂದಿಗೆ ಚರ್ಚಿಸಿ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಕ್ಕಳಿಗೆ ಮೊಬೈಲ್ ಕೊಡದಿದ್ದರೆ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. ಮೊಬೈಲ್ ಚಟವು ರೋಗವಾಗಿ ಪರಿವರ್ತನೆಯಾಗುತ್ತಿದೆ. ಸರ್ಕಾರವು ಇದಕ್ಕೆ ನಿಯಂತ್ರಣ ಹೇರಬೇಕು ಎಂದರು. ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕವು 16 ವರ್ಷದ ಎಲ್ಲಾ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿ ಮೊಬೈಲ್ ಬಳಕೆ ನಿಯಂತ್ರಣ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಇಲಾಖೆಯು ಸಮಿತಿ ರಚಿಸಲಾಗಿದ್ದು, ಅವರಿಂದ ನೆರವು ಪಡೆಯಲಾಗುತ್ತಿದೆ. ಸಂಪೂರ್ಣವಾಗಿ ಮೊಬೈಲ್ ಬಳಕೆ ನಿಷೇಧಿಸಬೇಕೋ ಅಥವಾ ನಿರ್ಬಂಧಿಸಬೇಕೋ ಎಂಬುದರ ಬಗ್ಗೆ ಎಲ್ಲರೊಂದಿಗೆ ಕೂಲಂಕಷವಾಗಿ ಚರ್ಚಿಸಿ ಮುಂದಿನ ಅಧಿವೇಶನದ…
ಭದ್ರಾದಲ್ಲಿ ಬ್ಲ್ಯಾಕ್ ಪ್ಯಾಂಥರ್; ಜತೆಯಾದ ಚುಕ್ಕಿ ಚಿರತೆ ಚಿಕ್ಕಮಗಳೂರು: ಇಲ್ಲಿನ ಭದ್ರಾ ಅಭಯಾರಣ್ಯದಲ್ಲಿ ಎರಡು ದಶಕಗಳ ಬಳಿಕ ಬ್ಲ್ಯಾಕ್ ಪ್ಯಾಂಥರ್ ಕಾಣಿಸಿಕೊಳ್ಳುತ್ತಿದ್ದು, ಈ ಅಪರೂಪದ ಪ್ರಾಣಿಯನ್ನು ನೋಡಲು ಪ್ರವಾಸಿಗರು ಇಲ್ಲಿಗೆ ದಾಂಗುಡಿ ಇಡುತ್ತಿದ್ದಾರೆ. ಕಪ್ಪು ಚಿರತೆಗೆ ಜೊತೆಯಾಗಿರುವ ಚುಕ್ಕಿ ಚಿರತೆ ಕೂಡ ಪ್ರಾಣಿ ಪ್ರಿಯರ ಗಮನ ಸೆಳೆಯುತ್ತಿದೆ. ಕರ್ನಾಟಕದ ಪಶ್ಚಿಮ ಘಟ್ಟದ ಹೃದಯ ಭಾಗದಲ್ಲಿರುವ ಅಭಯಾರಣ್ಯವು ಈ ಹಿಂದೆ ಹುಲಿ ಸಫಾರಿಗೆ ಪ್ರಸಿದ್ದಿ ಪಡೆದಿತ್ತು. ಆದರೆ, ಈಗ ಕಪ್ಪು ಚಿರತೆ – ಚುಕ್ಕಿ ಚಿರತೆ ನಿರಂತರವಾಗಿ ಕಳೆದೊಂದು ವಾರದಿಂದ ಗೋಚರಿಸುತ್ತಿರುವುದರಿಂದ ಸಹಜವಾಗಿಯೇ ಸಫಾರಿ ಪ್ರಿಯರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಸಾಮಾನ್ಯವಾಗಿ ಕಪ್ಪು ಚಿರತೆಗಳು ಒಂಟಿಯಾಗಿಯೇ ಜೀವನ ನಡೆಸುವುದು ಹೆಚ್ಚು. ಆದರೆ, ಈ ಕಪ್ಪು ಚಿರತೆ ತನ್ನ ಕುಟುಂಬದೊಂದಿಗೆ ಸಿಗುತ್ತಿರುವುದು ಅಪರೂಪವಾಗಿದೆ. ತಾಯಿ ಚಿರತೆ ಮತ್ತು ಎರಡು ಮರಿಗಳು ಒಟ್ಟಿಗೇ ಕಾಣಿಸುತ್ತಿವೆ. ಈ ಭಾಗದಲ್ಲಿ ಒಟ್ಟು ನಾಲ್ಕು ಚಿರತೆಗಳಿದ್ದು, ನಾಲ್ಕೂ ಒಟ್ಟೊಟ್ಟಿಗೆ ಇರುತ್ತವೆ. ಈ ಬ್ಲ್ಯಾಕ್ ಪ್ಯಾಂಥರ್ ಹುಟ್ಟಿ ಒಂದು ವರ್ಷವಾಗಿದೆ. ಇದರ ಜೊತೆ…
ಪಾನಿಪೂರಿಗೂ ‘ಗ್ಯಾಸ್’ ಟ್ರಬಲ್; ವ್ಯಾಪಾರ ಬಂದ್ ಚಿತ್ರದುರ್ಗ: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ದೊಡ್ಡ ಉದ್ಯಮಗಳು ಸೇರಿದಂತೆ ಬೀದಿಬದಿಯ ವ್ಯಾಪಾರಿಗಳಿಗೂ ಸಮಸ್ಯೆ ಎದುರಾಗಿದೆ. ಅದರಂತೆ ಪಾನಿಪೂರಿ ವ್ಯಾಪಾರಕ್ಕೂ ಗ್ಯಾಸ್ ಸಿಲಿಂಡರ್ ಬಿಸಿ ತಟ್ಟಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಾನಿಪೂರಿ ವ್ಯಾಪಾರಕ್ಕೂ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಟ್ರಬಲ್ ಶುರುವಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳು ಸಿಗದೇ ನಾಲ್ಕೈದು ದಿನಗಳಿಂದ ಪಾನಿಪೂರಿ ವ್ಯಾಪಾರಸ್ಥರು ತಮ್ಮ ಗಾಡಿಗಳನ್ನು ಬಂದ್ ಮಾಡಿದ್ದಾರೆ. ಖಾಲಿ ಗ್ಯಾಸ್ ಸಿಲಿಂಡರ್‌ಗಳನ್ನು ಹಿಡಿದು ಎಜೆನ್ಸಿಗಳಿಗೆ ಹೋದರೂ ಗ್ಯಾಸ್ ಸಿಗುತ್ತಿಲ್ಲ. ಇನ್ನೂ ಕಾಳಸಂತೆಯಲ್ಲಿ ನಾಲ್ಕೈದು ಸಾವಿರ ರೂ. ನೀಡಿದ್ರೂ ಕೂಡ ಗ್ಯಾಸ್ ಸಿಗುತ್ತಿಲ್ಲ. ಹೀಗಾಗಿ ಪ್ರತಿದಿನ 2 ಸಾವಿರದಿಂದ 3 ಸಾವಿರ ರೂ. ದುಡಿದು ಜೀವನ ಮಾಡುತ್ತಿದ್ದ ಪಾನಿಪೂರಿ ವ್ಯಾಪಾರಸ್ಥರು ಎಲ್‌ಪಿಸಿ ಸಿಲಿಂಡರ್ ಸಿಗದೇ ವ್ಯಾಪಾರ ಬಂದ್ ಮಾಡಿದ್ದಾರೆ. ಪಾನಿಪೂರಿ ವ್ಯಾಪಾರಕ್ಕೆ ಗ್ಯಾಸ್ ಬಿಸಿ ತಟ್ಟಿ ವ್ಯಾಪಾರ ಬಂದ್ ಮಾಡಲಾಗಿದೆ. ಗ್ಯಾಸ್‌ಗಾಗಿ ಅಲೆದು ಅಲೆದು ಸುಸ್ತಾಗಿದ್ದು, ಕಾಳಸಂತೆಯಲ್ಲಿ ನಾಲ್ಕೈದು ಸಾವಿರ ರೂ.ಗೆ ಗ್ಯಾಸ್ ಪಡೆದು ಲಾಭ ಗಳಿಸೋಕೆ ಸಾಧ್ಯವಿಲ್ಲ.…
Subscribe to Updates
Get the latest creative news from FooBar about art, design and business.