Author: ಮೃತ್ಯುಂಜಯಾಚಾರ್ ಬಿ
ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.
ಮೀಸಲಾತಿ ವಿಚಾರದಲ್ಲಿ ರಾಜಕಾರಣ ಬೇಡ: ಶಾಸಕ ಟಿ.ರಘುಮೂರ್ತಿ ಚಿತ್ರದುರ್ಗ: ಕೇಂದ್ರ ಸರ್ಕಾರ ರಾಜಕಾರಣ ಮಾಡದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳವನ್ನು 9ನೇ ಶೆಡ್ಯೂಲ್ (ಒಂಬತ್ತನೇ ಅನುಸೂಚಿ)ಗೆ ಸೇರಿಸಿ ನ್ಯಾಯ ಒದಗಿಸುವುದನ್ನು ಬಿಟ್ಟು ರಾಜಕಾರಣ ಮಾಡಲು ಹೊರಟಿದೆ ಎಂದು ಕೇಂದ್ರದ ವಿರುದ್ಧ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು. ವಿಧಾನಮಂಡಲದ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿನ್ನು 2023ರಲ್ಲಿ ಪರಿಶಿಷ್ಟ ಜಾತಿ 15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡಕ್ಕೆ 3 ರಿಂದ 7ಕ್ಕೆ ಮೀಸಲಾತಿ ರಾಜ್ಯದಲ್ಲಿ ಜಾರಿಯಲ್ಲಿತ್ತು. ಈಚೆಗೆ ಹೈಕೋರ್ಟ್‍ನಲ್ಲಿ ದಾವೆ ಹೂಡಿರುವುದರಿಂದ ಮೀಸಲಾತಿ ಹೆಚ್ಚಳಕ್ಕೆ ತಡೆಯಾಗಿ ಸದ್ಯ ಹಳೆ ಮೀಸಲಾತಿ ಜಾರಿಯಲ್ಲಿದೆ. ಕಳೆದ ಸರ್ಕಾರದಲ್ಲಿ ಒಮ್ಮೆ ಮತ್ತು ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಎರಡು ಬಾರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಸಂವಿಧಾನದ…
ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ; ವೃತ್ತಿಪರ ಪ್ರವೇಶ ಪರೀಕ್ಷೆಗೆ ಉಚಿತ ತರಬೇತಿ ಚಿತ್ರದುರ್ಗ: ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನಲ್ಲಿ ಪಿಯುಸಿ ಶಿಕ್ಷಣದೊಂದಿಗೆ ನೀಟ್, ಐಐಟಿ-ಜೆಇಇ, ಕೆ-ಸೆಟ್, ಐಸಿಎಆರ್, ಸಿಯುಇಟಿ, ಸಿಎಲ್‍ಎಟಿ, ಸಿಎ-ಫೌಂಡೇಷನ್ ಪ್ರವೇಶ ಪರೀಕ್ಷೆಗಳ ಸಂಪೂರ್ಣ ಉಚಿತ ಶಿಕ್ಷಣಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 31 ಅರ್ಜಿ ಸಲ್ಲಿಸಲು ಕೊನೆಯ ದಿನ. ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳು ಇಲಾಖೆಯ ವೆಬ್‍ಸೈಟ್ https://gokdom.karnataka.gov.in ಈ ಲಿಂಕ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಪದವಿ ಪೂರ್ವ ಕಾಲೇಜು, ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರದುರ್ಗ ಮೆಡಿಕಲ್ ಕಾಲೇಜಿನಲ್ಲಿ ಆರೋಗ್ಯ ತಪಾಸಣಾ ಶಿಬಿರ ಚಿತ್ರದುರ್ಗ: ಚಿತ್ರದುರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಾ. 26 ಹಾಗೂ 27 ರಂದು ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಎಂಬಿಬಿಎಸ್ ವಿದ್ಯಾರ್ಥಿಗಳಿಗಾಗಿ ಉಚಿತ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಮಾ. 26ರಂದು ಬೆಳಿಗ್ಗೆ 10ಕ್ಕೆ ಜ್ಞಾನಗಂಗೋತ್ರಿ ಆವರಣದಲ್ಲಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಬಿ. ಟಿ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಪ್ರಸಾದ್ ಜಿ. ಪಿ. ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರವೀಂದ್ರ ಎಸ್. ಪಿ. ಉಪಸ್ಥಿತರಿರುವರು. ಸಿಎಂಸಿಆರ್ ಐ ನಿರ್ದೇಶಕ ಡಾ. ಯುವರಾಜ್ ಬಿ. ವೈ. ಅಧ್ಯಕ್ಷತೆ ವಹಿಸುವರು. ಸಮುದಾಯ ವೈದ್ಯಕೀಯ ವಿಭಾಗದ ಡಾ. ಅಶ್ವಿನಿ ಎಲ್. ಎಚ್. ಅವರು ಶಿಬಿರದ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಾ.26ರಂದು ಪ್ರಥಮ ವರ್ಷದ ಹಾಗೂ ಮಾ. 27ರಂದು ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9 ರಿಂದ ಸಂಜೆ…
ಪೆಟ್ರೋಲ್ ಮತ್ತು ಡೀಸೆಲ್ ಕೊರತೆ: ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಮನವಿ: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಾಗಿದೆ ಎಂಬ ಸುಳ್ಳು ವದಂತಿಗಳು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ವದಂತಿಗಳಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿ ಪೆಟ್ರೋಲ್ ಬಂಕ್‌ಗಳಲ್ಲಿ ಬಾಟಲಿ ಹಾಗೂ ಕ್ಯಾನ್‌ಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಇಂಧನ ಸಂಗ್ರಹಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟೀಕರಣ ನೀಡಿದೆ. ಸಾಕಷ್ಟು ದಾಸ್ತಾನು ಲಭ್ಯ: ಕೇಂದ್ರ ಸರ್ಕಾರದಿಂದ ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಸುಗಮವಾಗಿ ನಡೆಯುತ್ತಿದೆ. ಯಾವುದೇ ರೀತಿಯ ಕೊರತೆ ಉಂಟಾಗಿಲ್ಲ. ವದಂತಿಗಳನ್ನು ನಂಬಬೇಡಿ: ಇಂಧನ ಕೊರತೆಯ ಬಗ್ಗೆ ಹರಡುತ್ತಿರುವ ಸುದ್ದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಅನಗತ್ಯವಾಗಿ ಆತಂಕ ಪಡುವ ಅಗತ್ಯವಿಲ್ಲ. ಸುರಕ್ಷತೆಯ ಎಚ್ಚರಿಕೆ: ಚಿಲ್ಲರೆ ಮಾರಾಟ ಮಳಿಗೆಗಳು ವಾಹನಗಳ ಇಂಧನ ಟ್ಯಾಂಕ್‌ಗಳಿಗೆ ಮಾತ್ರ ನೇರವಾಗಿ ಇಂಧನವನ್ನು ಪೂರೈಸುತ್ತವೆ. ಯಾವುದೇ ರೀತಿಯ ಕ್ಯಾನ್ ಅಥವಾ ಬಾಟಲಿಯಲ್ಲಿ ಇಂಧನ…
ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆ; ಐತಿಹಾಸಿಕ ಮಸೂದೆಗೆ ಒಮ್ಮತದ ಅಂಗೀಕಾರ! ವಿಧಾನಸಭೆಯ ಬೆನ್ನಲ್ಲೇ, ಬುಧವಾರ ವಿಧಾನ ಪರಿಷತ್ತಿನಲ್ಲಿಯೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅತ್ಯಂತ ಮಹತ್ವದ ‘ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ (ರಕ್ಷಣೆ ಮತ್ತು ಸಕ್ರಮಾತಿ) ವಿಧೇಯಕ-2026’ ಅನ್ನು ಮಂಡಿಸಲಾಯಿತು. ಈ ಮಸೂದೆಗೆ ಮೇಲ್ಮನೆಯ ಎಲ್ಲಾ ಹಿರಿಯ ಸದಸ್ಯರು ಪಕ್ಷಭೇದ ಮರೆತು, ಸುದೀರ್ಘ ಚರ್ಚೆ ನಡೆಸಿ ಒಮ್ಮತದ ಬೆಂಬಲ ಸೂಚಿಸಿ ಅಂಗೀಕರಿಸಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ವಿಚಾರ. ದಶಕಗಳ ಹಿಂದೆ ಸರ್ಕಾರಿ ಶಾಲೆಗಳ ಉಳಿವಿಗಾಗಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಸ್ವಂತ ಜಮೀನುಗಳನ್ನು ನಿಸ್ವಾರ್ಥವಾಗಿ ನೀಡಿದ ದಾನಿಗಳ ಆಶಯವನ್ನು ಈ ಮಸೂದೆ ಎತ್ತಿಹಿಡಿಯಲಿದೆ. ದಾಖಲೆಗಳ ಕೊರತೆಯಿಂದ ಆಗಿದ್ದ ಸಮಸ್ಯೆಗಳನ್ನು ಸರಿಪಡಿಸಿ, ಜಮೀನುಗಳನ್ನು ಅಧಿಕೃತವಾಗಿ ಇಲಾಖೆಯ ಸುಪರ್ದಿಗೆ ತರುವ ಜೊತೆಗೆ ದಾನಿಗಳ ಹೆಸರನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ. ಕಳೆದ 12 ವರ್ಷಗಳಿಗೂ ಹೆಚ್ಚು ಕಾಲದಿಂದ ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿರುವ, ಆದರೆ ಇಲಾಖೆಯ ಹೆಸರಿಗೆ ನೋಂದಣಿಯಾಗದ ಖಾಸಗಿ…
ಮಾಜಿ ಶಾಸಕನ ಪುತ್ರನ ಕೇಸ್ ; ಅಕ್ರಮ ಸಂಬಂಧದ ನಂಟು ಧಾರವಾಡದ ಬಳಿ ಕಾರಿನಲ್ಲೇ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬೆಳಗಾವಿ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕನ ಪುತ್ರ ರಾಜು ಬೋಳಶೆಟ್ಟಿಯ ದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪ್ರಕರಣದ ಹಿಂದೆ ಅಕ್ರಮ ಸಂಬಂಧ ಹಾಗೂ ಓರ್ವ ಮಹಿಳೆ ಆ್ಯಂಡ್ ಗ್ಯಾಂಗ್ನ ಕೈವಾಡವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಬೇರೆ ಜಾಗದಲ್ಲಿ ಕೊಲೆ ಮಾಡಿ ಬಳಿಕ ಶವವನ್ನ ಅರಣ್ಯ ಪ್ರದೇಶಕ್ಕೆ ತಂದು ಹಂತಕರು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ. ಶವ ಸಾಗಾಟ ಮಾಡಿದ ಕಾರು ಹಾಗೂ ಬೆಂಕಿ ಹಚ್ಚಲು ತಂದಿದ್ದ ಪೆಟ್ರೋಲ್ ಪ್ರಕರಣದಲ್ಲಿ ಪೊಲೀಸರಿಗೆ ದೊಡ್ಡ ಸಾಕ್ಷಿಯಾಗಿದೆ. ಹಂತಕರ ಗ್ಯಾಂಗ್ ಶವ ಸಾಗಿಸುವ ವೇಳೆ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಖರೀದಿಸಿದೆ. ಸ್ಥಳೀಯ ಪೆಟ್ರೋಲ್ ಬಂಕ್ ನ ಸಿಸಿಟಿವಿ ಟ್ರೇಸ್ ಮಾಡಿದ ಪೊಲೀಸರಿಗೆ ಶಾಕಿಂಗ್ ಮಾಹಿತಿ ಸಿಕ್ಕಿದೆ. ಎರಡು ಕಾರಿನಲ್ಲಿ ಹಂತಕರು ರಾಮಾಪುರದ ಕಾಡಿಗೆ ಹೋಗಿದ್ದಾರೆ. ಘಟನೆ ನಡೆದ 24 ಗಂಟೆಗಳಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.
ಬಂದ್ರು ನಿಂತ್ರು ಹೋದರು ; ಇಂದಿರಾ ಕಾಂಪ್ಲೆಕ್ಸ್ ನೆಲಸಮಕ್ಕೆ ಇಟ್ಟಿದ್ದ ಮೂರ್ತ ಈಗಲೂ ಮಿಸ್. ಬುಧವಾರ ಬೆಳ್ಳಂಬೆಳಗ್ಗೆ ನಗರದ ಬೆಂಗಳೂರು ರಸ್ತೆಯ ಇಂದಿರಾ ಕಾಂಪ್ಲೆಕ್ಸ್, ಚಿತ್ರದುರ್ಗ, ಪಾವಗಡ ಮತ್ತು ಮಹದೇವ ರಸ್ತೆಯ ನಗರಸಭೆ ಸುಪರ್ದಿಗೆ ಒಳಪಡುವ ಸುಮಾರು 94 ಮಳಿಗೆಗಳನ್ನು ಜಿಲ್ಲೆಯ 200ಕ್ಕೂ ಹೆಚ್ಚು ಪೊಲೀಸ್ ಬಂದೋಬಸ್ತ್ ನಲ್ಲಿ ಐದಾರು ಜೆಸಿಬಿಗಳು ನೆಲಸಮ ಮಾಡಲು ಮುಂದಾದಾಗ ಹೈಡ್ರಾಮವೇ ನಡೆಯಿತು, ಬಂದ್ರು, ನಿಂತ್ರು ಹೋದ್ರು ಎಂಬತಾಯಿತು. ನಗರದ ಮಹದೇವಿ ರಸ್ತೆಯಲ್ಲಿ ಎರಡು ಮಳಿಗೆ ನೆಲಸಮ, ಚಿತ್ರದುರ್ಗ ರಸ್ತೆಯಲ್ಲಿ ಮೂರು ಅಂಗಡಿಯ ಮುಂದಿನ ಸೆಡ್ ಗೆ ಜೆಸಿಬಿ ಘರ್ಜಿಸುತ್ತಲೇ ಜನರು ಹೌಹಾರಿದರು. ಮಳಿಗೆಗಳನ್ನು ಒಡೆಯುವ ಎಲ್ಲಾ ರಸ್ತೆಗಳನ್ನು ಬ್ಯಾರಿಕೆಟ್ ಹಾಕಿ ಬಂದೋಬಸ್ತ್ ಮಾಡಿ, ಪೊಲೀಸ್ ನಿಯೋಜಿಸಿದರು. ವಿಶೇಷವೆಂದರೆ ನಗರಸಭೆ ಎಷ್ಟೇ ಸೂಚನೆ ನೀಡಿದರೂ 94 ಮಳಿಗೆ ಅಲ್ಲೊಬ್ಬರು, ಇಲ್ಲೊಬ್ಬರು ಖಾಲಿಮಾಡಿಕೊಂಡಿದ್ದು ಬಿಟ್ಟರೇ ಯಾರೊಬ್ಬರೂ ಅಂಗಡಿಗಳನ್ನು ಖಾಲಿಮಾಡದೆ ತಮ್ಮ ಎಲ್ಲಾ ವಸ್ತುಗಳನ್ನ ಅಂಗಡಿಯಲ್ಲೇ ಬಿಟ್ಟುಕೊಂಡಿದ್ದರು. ಜೆಸಿಬಿ ಸ್ಥಳಕ್ಕೆ ಬರುತ್ತಲೇ ಬಾಡಿಗೆದಾರರಲ್ಲಿ ಆತಂಕವು ಮನೆ ಮಾಡಿತು. ಕೆಲ…
ಗೃಹ ಸಚಿವರ ಆಪ್ತನ ಮೇಲೆ ಅಟ್ಯಾಕ್; ಗೋವಾ ಗ್ಯಾಂಗ್ ಶಂಕೆ ಅಂಕೋಲಾ: ಗೃಹ ಸಚಿವರ ಆಪ್ತ ಗೋಪಾಲಕೃಷ್ಣ ನಾಯಕ್ ಮೇಲೆ ದುಷ್ಕರ್ಮಿಗಳ ಗುಂಪು ಅಟ್ಯಾಕ್ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ನಡೆದಿದೆ. ಚಾಕುವಿನಿಂದ ಹೊಟ್ಟೆ ಮತ್ತು ತಲೆಗೆ ಚಾಕು ಇರಿದು ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಅವರ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿಗೂ ಚಾಕು ಇರಿತವಾಗಿದೆ. ಗೋವಾ ನೋಂದಣಿಯ ಕಾರ್‌ನಲ್ಲಿ ಬಂದ ಆರು ಅಪರಿಚಿತರು ಗೋಪಾಲಕೃಷ್ಣ ನಾಯಕ್ ಅವರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಕೋರರು ಚಾಕು ಬಳಸಿ ಹೊಟ್ಟೆ ಮತ್ತು ತಲೆಗೆ ಇರಿದಿದ್ದಾರೆ. ಗಾಯಗಳು ತೀವ್ರವಾಗಿರುವುದರಿಂದ ಗೋಪಾಲಕೃಷ್ಣ ನಾಯಕ್ ಅವರನ್ನು ಅಂಕೋಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಜೊತೆಗಿದ್ದ ವ್ಯಕ್ತಿಗೂ ಚಾಕು ಇರಿತವಾಗಿದ್ದು, ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ತಕ್ಷಣ ತಲುಪಿದ ಅಂಕೋಲಾ ಪೊಲೀಸರು ಘಟನೆಯ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೀಪನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಿದ್ದಾರೆ. ಆರೋಪಿಗಳನ್ನು…
ಬೆಳ್ಳಿ-ಬಂಗಾರದ ದರದಲ್ಲಿ ಏರಿಳಿತ: ಇಂದಿನ ಮಾರುಕಟ್ಟೆ ದರ ಇಲ್ಲಿದೆ ದೇಶೀಯ ಮಾರುಕಟ್ಟೆಯಲ್ಲಿ ಇಂದು ಬಂಗಾರ ಹಾಗೂ ಬೆಳ್ಳಿ ದರಗಳಲ್ಲಿ ಸಣ್ಣ ಮಟ್ಟಿನ ಏರಿಳಿತ ಕಂಡುಬಂದಿದೆ. ಹೂಡಿಕೆದಾರರು ಮತ್ತು ಖರೀದಿದಾರರು ದರಗಳ ಮೇಲಿನ ಚಲನವಲನವನ್ನು ಗಮನಿಸುತ್ತಿದ್ದಾರೆ. ಇಂದಿನ ಬಂಗಾರದ ದರ (24 ಕ್ಯಾರೆಟ್) 1 ಗ್ರಾಂ: ₹6,650 10 ಗ್ರಾಂ: ₹66,500 ಇಂದಿನ ಬಂಗಾರದ ದರ (22 ಕ್ಯಾರೆಟ್) 1 ಗ್ರಾಂ: ₹6,100 10 ಗ್ರಾಂ: ₹61,000 ಇಂದಿನ ಬೆಳ್ಳಿ ದರ 1 ಗ್ರಾಂ: ₹78 1 ಕೆಜಿ: ₹78,000 ದರ ಬದಲಾವಣೆಗೆ ಕಾರಣಗಳು ಅಂತರಾಷ್ಟ್ರೀಯ ಮಾರುಕಟ್ಟೆ ಚಲನೆ, ಡಾಲರ್ ಮೌಲ್ಯದಲ್ಲಿ ಏರಿಳಿತ ಹಾಗೂ ಹಬ್ಬಗಳ ಕಾಲದ ಬೇಡಿಕೆ ಇತ್ಯಾದಿ ಪ್ರಮುಖ ಕಾರಣಗಳಿಂದ ದರಗಳಲ್ಲಿ ಬದಲಾವಣೆ ಆಗುತ್ತಿದೆ. ಖರೀದಿದಾರರಿಗೆ ಸಲಹೆ ✔️ ದರಗಳನ್ನು ಪ್ರತಿದಿನ ಪರಿಶೀಲಿಸಿ ಖರೀದಿ ಮಾಡುವುದು ಒಳಿತು ✔️ ಹಾಲ್‌ಮಾರ್ಕ್ ಇರುವ ಬಂಗಾರವನ್ನು ಮಾತ್ರ ಖರೀದಿಸಿ ✔️ ದೀರ್ಘಾವಧಿ ಹೂಡಿಕೆಗೆ ಬಂಗಾರ ಸುರಕ್ಷಿತ ಆಯ್ಕೆ ಎಂದು ಪರಿಣಿತರು ಸಲಹೆ ನೀಡುತ್ತಾರೆ…
ತರಾತುರಿ ಸಮೀಕ್ಷೆಯಲ್ಲಿ ಪ್ರಮಾದ ಎಸಗಲಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು. ಮಂಗಳವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ನೇತೃತ್ವದಲ್ಲಿ ಹಮ್ಮಿಕೊಂಡ `ಬೆಂಗಳೂರು ಚಲೋ’ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭೋವಿ, ಲಂಬಾಣಿ ಮತ್ತು ಕೊರಮ-ಕೊರಚ ಸಮುದಾಯಗಳ ರಾಜಕೀಯ ನಾಯಕರು, ಮುಖಂಡರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಕುಟುಂಬಗಳನ್ನು ಗುರುತಿಸಲು ಪಡಿತರ ಚೀಟಿಯನ್ನು ಒಂದು ಮಾನದಂಡವಾಗಿ ಬಳಸಲಾಗಿದೆ. ಆದರೆ ವರದಿಯಲ್ಲಿ ತಿಳಿಸಿರುವಂತೆ ಸುಮಾರು 7 ಲಕ್ಷ ಪರಿಶಿಷ್ಟ ಜಾತಿ ಕುಟುಂಬಗಳು ಪಡಿತರ ಚೀಟಿಯೇ ಹೊಂದಿಲ್ಲ (ಪುಟ ಸಂಖ್ಯೆ 98) ಅಂದ ಮೇಲೆ ಪರಿಶಿಷ್ಟ ಜಾತಿ ಕುಟುಂಬಗಳನ್ನು ಗುರುತಿಸುವಲ್ಲಿ ಲೋಪವಾಗಿ ಸುಮಾರು 30 ಲಕ್ಷ ಜನರನ್ನು ಕೈ ಬಿಡಲಾಗಿದೆ ಹಾಗೂ ಭೋವಿ ಜನಾಂಗದ ಸುಮಾರು 3.5 ಲಕ್ಷ ಜನರನ್ನು ಸಮೀಕ್ಷೆಯಿಂದ ಕೈಬಿಡಲಾಗಿದೆ ಎಂದು ಹೇಳಿದರು. ಭೋವಿ ಸಮಾಜವು 2026ರಲ್ಲಿ ಕೇಂದ್ರ ಸರ್ಕಾರ ನಡೆಸುವ ಜನಗಣತಿ ಆದಾರದ ಮೇಲೆ…
Subscribe to Updates
Get the latest creative news from FooBar about art, design and business.