Author: ಮೃತ್ಯುಂಜಯಾಚಾರ್ ಬಿ

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

ಹೆಸರು ಅದಲು ಬದಲು-ಗಂಭೀರ ಪ್ರಮಾದ: ಕಠಿಣ ಕ್ರಮದ ಎಚ್ಚರಿಕೆ ಚಿತ್ರದುರ್ಗ: ನಿಗದಿತ ಸಮಯದೊಳಗೆ ಜನನ-ಮರಣ ನೋಂದಣಿ ಮಾಡಿ ಪ್ರಮಾಣ ಪತ್ರ ವಿತರಿಸಬೇಕು. ಯಾವುದೇ ಕಾರಣಕ್ಕೂ ಜನನ-ಮರಣ ಘಟನೆಗಳ ತಡೆ ನೋಂದಣಿ ಸಹಿಸಲಾಗುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ನಾಗರೀಕ ನೋಂದಣಿ ಪದ್ದತಿಯ ಮೊದಲನೇ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 2026ರ ಜನವರಿಯಿಂದ ಫೆಬ್ರವರಿ ಅಂತ್ಯದವರೆಗೆ ಒಟ್ಟು 139 ವಿಳಂಬ ನೋಂದಣಿಗಳಾಗಿದ್ದು, ಇದರಲ್ಲಿ 27 ಜನನ ಹಾಗೂ 112 ಮರಣ ಪ್ರಕರಣಗಳು ಸೇರಿವೆ. ಯಾವುದೇ ಘಟನೆ ನಡೆದ 21 ದಿನಗಳ ಒಳಗೆ ಉಚಿತವಾಗಿ ನೋಂದಣಿ ಮಾಡಿಸಬೇಕು. ಆದರೆ ಒಂದು ವರ್ಷಕ್ಕೂ ಮೀರಿದ 431 ಜನನ ಹಾಗೂ 468 ಮರಣ ಸೇರಿದಂತೆ ಒಟ್ಟು 899 ಪ್ರಕರಣಗಳು ಬಾಕಿ ಇರುವುದು ಅಧಿಕಾರಿಗಳ ಬೇಜವಾಬ್ದಾರಿತನ ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನನ-ಮರಣಗಳ ನೋಂದಣಿಯಲ್ಲಿ ವಿಳಂಬ ಮಾಡುತ್ತಿರುವ ಜಿಲ್ಲಾ…

Read More

ಆಸ್ತಿ ತೆರಿಗೆ, ನೀರಿನ ಶುಲ್ಕ ವಸೂಲಾತಿಗೆ ಅರ್ಜಿ ಆಹ್ವಾನ ಚಿತ್ರದುರ್ಗ: 2026-27ನೇ ಸಾಲಿಗೆ ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಸಮರ್ಪಕವಾಗಿ ವಸೂಲಿ ಮಾಡುವ ನಿಟ್ಟಿನಲ್ಲಿ, ಚಿತ್ರದುರ್ಗ ನಗರಸಭೆ ಕಾರ್ಯಾಲಯ ವ್ಯಾಪ್ತಿಯಲ್ಲಿ ರಚಿಸಲಾಗಿರುವ ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 6 ಅರ್ಜಿ ಸಲ್ಲಿಸಲು ಕೊನೆ ದಿನ. ಈ ಯೋಜನೆಯಡಿ ಆಯ್ಕೆಯಾಗ ಬಯಸುವ ಮಹಿಳಾ ಸ್ವ-ಸಹಾಯ ಸಂಘಗಳು ಈಗಾಗಲೇ ಡೇ-ನಲ್ಮ್ ಅಭಿಯಾನದಡಿ ನೋಂದಾಯಿಸಿಕೊಂಡಿರಬೇಕು ಹಾಗೂ ಪಂಚಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸುತ್ತಿರಬೇಕು. ಸಂಘದ ಸದಸ್ಯರು ಕನಿಷ್ಠ 7ನೇ ತರಗತಿಯವರೆಗೆ ಶಿಕ್ಷಣ ಮತ್ತು ಎಲೆಕ್ಟ್ರಾನಿಕ್ ಪರಿಕರಗಳ ಬಳಕೆ ಗೊತ್ತಿರಬೇಕು. ಸಂಘದ ಹೆಸರಿನಲ್ಲಿ ಸಕ್ರಿಯ ಬ್ಯಾಂಕ್ ಖಾತೆ ಹೊಂದಿರಬೇಕು. ಬ್ಯಾಂಕಿನಲ್ಲಿ ತಮ್ಮ ಖಾತೆಯಲ್ಲಿ ಸಾಲ ಪಡೆದು ನಿಯಮಿತವಾಗಿ ಮರು ಪಾವತಿ ಮಾಡಿರಬೇಕು. ಹೆಚ್ಚಿನ ಮಾಹಿತಿಗಾಗಿ ಆಸಕ್ತ ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳು ಚಿತ್ರದುರ್ಗ…

Read More

ಮೂತ್ರಕೋಶ ತಪಾಸಣೆ ಶಿಬಿರ; ಇದು ಸಂಪೂರ್ಣ ಉಚಿತ ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಮತ್ತು ದಾವಣಗೆರೆಯ ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಇದೇ ಮಾರ್ಚ್ 28ರಂದು ನಗರದ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 15ರಲ್ಲಿ ಉಚಿತ ಮೂತ್ರಕೋಶ ತಪಾಸಣಾ ಶಿಬಿರ ನಡೆಯಲಿದೆ. ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆಯ ಮೂತ್ರಕೋಶ ತಜ್ಞ ವೈದ್ಯರಾದ (ಯುರಾಲಾಜಿಸ್ಟ್) ಡಾ.ಯು.ಎಸ್.ಕಾರ್ತಿಕ್ ಅವರು ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವೆಗೆ ಶಿಬಿರದಲ್ಲಿ ಲಭ್ಯವಿದ್ದು, ಮೂತ್ರಕೋಶ ತಪಾಸಣೆ ನಡೆಸುವರು. ಮೂತ್ರಪಿಂಡದಲ್ಲಿ ಕಲ್ಲು, ಹರಳು (ಕಿಡ್ನಿಸ್ಟೋನ್), ಪದೇ ಪದೇ ಮೂತ್ರ ವಿಸರ್ಜನೆ, ಪ್ರೋಸ್ಟೇಟ್‍ನ ಮೂತ್ರದ ತೊಂದರೆ, ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮೂತ್ರದಲ್ಲಿ ಸೋಂಕು, ಉರಿ ಮೂತ್ರ, ಮೂತ್ರದಲ್ಲಿ ರಕ್ತ ಕಾಣಿಸುವುದು, ಪುರುಷರ ಬಂಜೆತನ, ಚಿಕ್ಕ ಮಕ್ಕಳ ಮೂತ್ರದ ತೊಂದರೆಗಳು, ತಡೆದ ಮೂತ್ರ ಇತ್ಯಾದಿ ಮೂತ್ರಕೋಶ ಕಾಯಿಲೆಯ ಲಕ್ಷಣಗಳು ಕಂಡುಬಂದರೆ ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9535025743, 7259759982 ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ…

Read More

ಎದೆನೋವು: ಸಚಿವ ತಂಗಡಗಿಗೆ ಸೆಂಟ್ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದಾಗ ತುಮಕೂರು ಬಳಿ ಎದೆನೋವು ಕಾಣಿಸಿ ಕೊಂಡಿದ್ದರಿಂದ ಸಿದ್ದಗಂಗಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ, ಪಡೆದಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧ ವಾರ ಸ್ಟೆಂಟ್ ಅಳವಡಿ ಸಲಾಗಿದ್ದು ಗುಣಮುಖವಾಗಿದ್ದಾರೆ. ಪ್ರಾಥಮಿಕ ಚಿಕಿತ್ಸೆಯಲ್ಲಿ ಸಮಸ್ಯೆ ಏನು ಇಲ್ಲ ಎನ್ನಲಾಗಿತ್ತು. ಆದರೆ, ಆಪ್ತರು ಮತ್ತು ಸಂಬಂಧಿಕರು ಒತ್ತಾಯದ ಮೇರೆಗೆ ಬೆಂಗ ಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೆಕ್ ಮಾಡಿ ಸಿದಾಗ ಒಂದು ಬ್ಲಾಕೇಜ್ ಇರುವುದು ಪತ್ತೆ ಯಾಗಿತ್ತು. ಸ್ಟೆಂಟ್ ಅಳವಡಿಸ ಲಾಗಿದ್ದು ಆರೋಗ್ಯವಾಗಿದ್ದಾರೆ ಎಂದು ಅವರ ಆಪ್ತ ಮುಲಗಳಿಂದ ಮಾಹಿತಿ ದೊರೆತಿದೆ . ಗುರುವಾರದಿಂದ ಎಂದಿನಂತೆ ಕಾರ್ಯ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

Read More

ದ್ವೇಷಭಾಷಣ ಆರೋಪ: ಯತ್ನಾಳ್ ಅನಂತಕುಮಾ‌ರ್ ವಿರುದ್ಧ ಪ್ರಕರಣ ಮದ್ದೂರು: ಕೋಮು ದ್ವೇಷ ಭಾಷಣ ಆರೋಪ ಹಿನ್ನೆಲೆಶಾಸಕ ಬಸವನಗೆ ಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಂಸದ ಅನಂತಕುಮಾರ್‌ಹೆಗಡೆ ಅವರ ವಿರುದ್ದ ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ಪಟ್ಟಣದಲ್ಲಿ ಹಿಂದೂ ಪರ ಸಂಘಟನೆಗಳ ವತಿಯಿಂದ ಸೋಮವಾರ ರಾತ್ರಿ ಆಯೋಜಿಸಿದ್ದ ಬಲಿದಾನ ದಿವಸ್ ಕಾರ್ಯಕ್ರಮ ದಲ್ಲಿ ಯತ್ನಾಳ್‌, ಅನಂತಕುಮಾರ್‌ಹೆಗಡೆ ಅಲ್ಪ ಸಂಖ್ಯಾತ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ರೀತಿ * ಪ್ರಚೋದನಕಾರಿ ಭಾಷಣ ಮಾಡಿ ದ್ದಾರೆಂದು ಆರೋ ಪಿಸಲಾಗಿದೆ. ನಾಯಕರು ಆಯೋಜಕರ ಮೇಲೆ ಪೊಲೀಸರು ಬಿಎನ್‌ಸ್ ಅಡಿ ಮದ್ದೂರು ಠಾಣೆಯ ಕಾನೂನು ಶಿಸ್ತು ವಿಭಾಗ ಪಿಎಸ್‌ಐ ಮಂಜುನಾಥ್‌ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ

Read More

ಹಣ, ಆಭರಣಕ್ಕಾಗಿ ಅಜ್ಜಿ ಕೊಂದ ಮೊಮ್ಮಗನಿಗೆ ಸಿಕ್ಕಿದ್ದು ನಕಲಿ ಚಿನ್ನ ಬಳ್ಳಾರಿ: ಹಣ ಹಾಗೂ ಬಂಗಾರವನ್ನು ಲಪಟಾಯಿಸಲು ಮೊಮ್ಮಗನೇ ಅಜ್ಜಿಯನ್ನು ಕೊಂದು ಹಾಕಿದ ಘಟನೆ ತಾಲೂಕಿನ ಕಾರೇಕಲ್ಲು ಗ್ರಾಮದಲ್ಲಿ ಭಾನುವಾರ ನಡೆದಿದೆ. ವೀರಮ್ಮ (60) ಕೊಲೆ ಆದ ವೃದ್ದೆ. ಸಿರುಗುಪ್ಪ ತಾಲೂಕಿನ ಹಾಗಲೂರು ಗ್ರಾಮದ ಮೃತ ವೀರಮ್ಮನ ಮಗಳ ಮಗ ಎಂ.ವೀರೇಂದ್ರ (21) ಆರೋಪಿ. ಅಜ್ಜಿಯ ಬಳಿ ಚಿನ್ನ ಹಾಗೂ ಹಣ ಇರುವುದನ್ನು ಗಮನಿಸಿರುವ ವೀರೇಂದ್ರ, ತಡರಾತ್ರಿ ನಿದ್ರೆಯಲ್ಲಿದ್ದ ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಂದು ಚಿನ್ನದ ಆಭರಣ ಹಾಗೂ ₹23 ಸಾವಿರ ನಗದು ದೋಚಿದ್ದಾನೆ. ಸಾಕ್ಷಿ ನಾಶಕ್ಕಾಗಿ ಶವಕ್ಕೆ ಪೆಟ್ರೋಲ್ ಹಾಕಿ ಸುಟ್ಟು ಪರಾರಿಯಾಗಿದ್ದಾನೆ. ವೀರೇಂದ್ರಗೆ ಅಜ್ಜಿ ಚಿನ್ನದ ಆಭರಣಗಳನ್ನು ಒತ್ತೆ ಇಟ್ಟು ಶೆಡ್ ಹಾಕಿಸಿಕೊಳ್ಳಲು ನೆರವಾಗಿದ್ದಳು. ಆರೋಪಿ ಬಂಧನದ ಬಳಿಕ ಸಿಕ್ಕ ಚಿನ್ನದಾಭರಣಗಳನ್ನು ಪರಿಶೀಲಿಸಿದಾಗ ಅವು ನಕಲಿ ಚಿನ್ನದ ಆಭರಣಗಳಾಗಿದ್ದವು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ

Read More

ಬೀದರ್: ಮಹಾರಾಷ್ಟ್ರಕ್ಕೆ 83 ಕೇಜಿ ಗಾಂಜಾ ಸಾಗಿಸುವಾಗ ಜಪ್ತಿ, ಸೆರೆ ಬೀದ‌ರ್: ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸುತ್ತಿದ್ದ 83 ಕೇಜಿ 670 ಗ್ರಾಂ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿರುವ ಘಟನೆ ಇಗೆಗಳಲ್ಲಿ ಬೀದರ್‌ಜಿಲ್ಲೆ ಮನ್ನಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭಂಗೂರ ಗ್ರಾಮ ಸಮೀಪದ ಹೈದರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಈ ಕುರಿತು ಬುಧವಾರ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಮಾ.25ರ ನಸುಕಿನ 1 ಗಂಟೆಗೆ ಇಬ್ಬರು ವ್ಯಕ್ತಿಗಳು ಅನಧಿಕೃತವಾಗಿ ಹೈದ್ರಾಬಾದ್ -ಮುಂಬೈ ಹೆದ್ದಾರಿ ಮಾರ್ಗದ ಮೂಲಕ ಮಹಾರಾಷ್ಟ್ರಕ್ಕೆ ಸಾಗಿಸಲು ಭಂಗೂರ ಹತ್ತಿರ ಸರ್ವಿಸ್ ರಸ್ತೆ ಬದಿಯಲ್ಲಿ ಗಾಂಜಾ ಸಂಗ್ರಹಿಸಿಟ್ಟಿದ್ದರು. ಸಾಗಾಣಿಕೆ ಮಾಡಲು ವಾಹನಕ್ಕಾಗಿ ಕಾಯುತ್ತಿರುವ ಬಗ್ಗೆ ಮನ್ನಳ್ಳಿ ಠಾಣೆಯ ಪಿಎಸ್‌ಐ ನಂದಿನಿ ಅವರು ಖಚಿತ ಮಾಹಿತಿ ಪಡೆದು ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೊಬ್ಬ ಕತ್ತಲಲ್ಲಿ ಓಡಿ ಹೋಗಿದ್ದಾನೆ.

Read More

ಅಂತಿಮಘಟ್ಟಕ್ಕೆ ಹೈ-ಪ್ರೊಫೈಲ್ ಕೊಲೆ ಪ್ರಕರಣ ; ಜಡ್ಜ್ ಮೆಂಟ್ ನತ್ತ ಎಲ್ಲರ ಚಿತ್ತ ; ಶುರುವಾಯ್ತು ಟೆನ್ಷನ್ ಟಿಒಬಿ ನ್ಯೂಸ್ ಬೆಂಗಳೂರು .ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಪ್ರಿಲ್ 2ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ಕಳೆದ ಆರು ತಿಂಗಳಿನಿಂದ ನಿರಂತರವಾಗಿ ನಡೆದ ವಿಚಾರಣೆ ಬುಧವಾರ ಅಂತ್ಯಗೊಂಡಿದೆ. ಈ ಪ್ರಕರಣದಲ್ಲಿ ಸಿಬಿಐ ಒಟ್ಟು 21 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದು, ಶಾಸಕ ವಿನಯ್ ಕುಲಕರ್ಣಿ 15ನೇ ಆರೋಪಿಯಾಗಿ ಹೆಸರು ಸೇರಿದೆ. 2016ರ ಜೂನ್ 16ರಂದು ಧಾರವಾಡದಲ್ಲಿ ರಾಜಕೀಯ ವೈಷಮ್ಯದಿಂದ ಯೋಗೇಶ್ ಗೌಡ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಅಪರಾಧಿಕ ಒಳಸಂಚು ನಡೆಸಿದ ಆರೋಪ ಇದೆ. 2019ರಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ತನಿಖೆ ಮುಂದುವರೆಸಿದ ಸಿಬಿಐ 2020ರಲ್ಲಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿತ್ತು. ಬಳಿಕ 2021ರಲ್ಲಿ ಸುಪ್ರೀಂ…

Read More

ದಾವಣಗೆರೆ ದಕ್ಷಿಣದಲ್ಲಿ ಪೊಲಿಟಿಕಲ್ ಗೇಮ್ ; ಬಿಜೆಪಿಗೆ ಕೈ ಚೆಕ್ ಮೆಟ್ ; ಕೆಲ ಗಂಟೆಗಳಲ್ಲಿ ಅಚ್ಚರಿ ಬ್ರೇಕಿಂಗ್ ಟಿಒಬಿ ನ್ಯೂಸ್ ದಾವಣಗೆರೆ ರಾಜ್ಯದಲ್ಲಿ ಉಪ ಚುನಾವಣೆ ರಂಗೇರಿದ್ದು , ಹೈವೋಲ್ಟೆಜ್ ಕ್ಷೇತ್ರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದತ್ತದ ಎಲ್ಲರ ಚಿತ್ತ ನೆಟ್ಟಿದೆ. ಉಪ ಚುನಾವಣೆಯ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಮುಸ್ಲಿಂ ನಾಯಕರು ಕಾಂಗ್ರೆಸ್ ವಿರುದ್ದ ತಿರುಗಿಬಿದ್ದ ಪರಿಣಾಮ ಅಭ್ಯರ್ಥಿ ಸಮರ್ಥ್ ಶಾಮನೂರುಗೆ ಬಂಡಾಯದ ಬಿಸಿ ತಟ್ಟಿದೆ. ಮುಸ್ಲಿಂ ಮುಖಂಡ ಸಾದಿಕ್ ಅವರು ಶಾಮನೂರು ಫ್ಯಾಮಿಲಿ ವಿರುದ್ಧ ಅಖಾಡಕ್ಕಿಳಿದಿದ್ದಾರೆ. ಜತೆಗೆ 22 ಅಲ್ಪಸಂಖ್ಯಾತ ಅಭ್ಯರ್ಥಿಗಳ ನಾಮಪತ್ರ ಸ್ವೀಕೃತಗೊಂಡಿದ್ದವು. ಸಾದಿಕ್ ಪೈಲ್ವಾನ್ ಸೇರಿ 22 ಅಲ್ಪಸಂಖ್ಯಾತ ಅಭ್ಯರ್ಥಿಗಳ ಮನವೊಲಿಸುವ ಕಾರ್ಯ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ. ಉಸ್ತುವಾರಿ ಸುರ್ಜೇವಾಲ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಬೈ ಎಲೆಕ್ಷನ್ ಅಖಾಡಕ್ಕೆ ಎಂಟ್ರಿ ಆಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅಲ್ಪಸಂಖ್ಯಾತರ ಅಸಮಾಧಾನ ಶಮನಗೊಳಿಸುವಲ್ಲಿ ಮೈಲುಗೈ ಸಾಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಕಾರಣಕ್ಕೂ ಕ್ಷೇತ್ರವನ್ನು…

Read More

ಶ್ರೀರಾಮನವಮಿ ಸಂಭ್ರಮ; ವಿಶೇಷ ಕ್ಷಣಕ್ಕೆ ಸಜ್ಜು ಟಿಒಬಿ ನ್ಯೂಸ್ ಚಿತ್ರದುರ್ಗ ನಗರದ ಬುರುಜನಹಟ್ಟಿ ಕೋಣನಹಟ್ಟಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 27ರಂದು ಶ್ರೀರಾಮನವಮಿ ಅಂಗವಾಗಿ ವಿಶೇಷ ರಾಮತಾರಕ ಹೋಮ ಹಾಗೂ ಗಣಪತಿ ಹೋಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9ಕ್ಕೆ ರಾಮತಾರಕ ಹೋಮ ಆರಂಭವಾಗಲಿದ್ದು, ಮಹಾಮಂಗಳಾರತಿ ನಂತರ ಪಾನಕ ಕೋಸುಂಬರಿ ಪ್ರಸಾದ ವಿತರಣೆ ನಡೆಯಲಿದೆ. ಮಾ. 28ರಂದು ಶ್ರೀರಾಮನ ಭಾವಚಿತ್ರದ ಜೊತೆಗೆ ಕುಂಭಮೇಳ ಗಂಗಾ ಪೂಜಾ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದೇ ದಿನ ಮಧ್ಯಾಹ್ನ 12.30ಕ್ಕೆ ಸರ್ವರಿಗೂ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎನ್.ಅಶ್ವಥ ರಾವ್, ಕಾರ್ಯದರ್ಶಿ ಎಚ್.ಯೋಗೇಶ್ ತಿಳಿಸಿದ್ದಾರೆ.

Read More