Author: ಮೃತ್ಯುಂಜಯಾಚಾರ್ ಬಿ
ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.
ಉಗ್ರ ದಾವೂದ್ ಹೆಸರಿದ್ದ ಬಸ್ ಚಿಕ್ಕಮಗಳೂರು ಪೊಲೀಸ್ ವಶಕ್ಕೆ ಚಿಕ್ಕಮಗಳೂರು: ಭಯೋತ್ಪಾದಕ ದಾವೂದ್ ಇಬ್ರಾಹಿಂನನ್ನು ಹೀರೋ ರೀತಿ ಬಿಂಬಿಸಿ ಆತನ ಹೆಸರು ಹಾಗೂ ಹೊಗಳಿಕೆಯ ಬರಹದ ಸ್ಟಿಕ್ಟರ್‌ಗಳನ್ನು ಅಂಟಿಸಿದ್ದ ತಮಿಳುನಾಡು ಮೂಲದ ಖಾಸಗಿ ಬಸ್ ಅನ್ನು ಹಿಡಿದು ಹಿಂದೂ ಸಂಘಟನೆಗಳ ಕಾಠ್ಯಕರ್ತರು ಪೊಲೀಸರ ವಶಕ್ಕೆ ಒಪ್ಪಿ ಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ಗುರುವಾರ ನಡೆದಿದೆ. ತಮಿಳುನಾಡು ನೋಂದಣಿ ಬನ್ನೊಂದು ಗುರುವಾರ ಚಿಕ್ಕಮ ಗಳೂರಿಗೆ ಆಗಮಿಸಿತ್ತು. ಈ ಬಸ್ಸಿನ ಮೇಲೆ ಮುಂಬೈ ಸರಣಿ ಸ್ಪೋಟದ ಸಂಚುಕೋರ ದಾವೂದ್ ಹೆಸರು ಹಾಗೂ ಆತನನ್ನು ವೈಭವಿಕರಿಸುವ ಬರಹ ಇದ್ದವು. ಇದನ್ನು ಗಮನಿಸಿದ ಹಿಂದೂ ಸಂಘಟನೆ ಕಾರ್ಯಕರ್ತ ರು ನಗರದ ಎಸ್‌ಎಂಸಿ ಸರ್ಕಲ್ ಬಳಿ ಬಸ್ಸನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಪೊಲೀಸರು, ಬಸ್ಸನ್ನು ವಶಕ್ಕೆ ಪಡೆದರು.
ಮೋಟಾರು ವಾಹನ ನೋಂದಣಿ ತೆರಿಗೆ ಇಳಿಸುವ ಬಿಲ್ ಅಂಗೀಕಾರ ವಿಧಾನ ಪರಿಷತ್ತು: ತೆರಿಗೆ ಹೊರೆ ಹಿನ್ನೆಲೆಯಲ್ಲಿ ನೋಂದಣಿಗಾಗಿ ವಾಹನ ಮಾಲೀಕರು ಹೊರ ರಾಜ್ಯಗಳತ್ತ ಮುಖ ಮಾಡುವುದನ್ನು ತಡೆಯಲು ಸರ್ಕಾರ ಗುರುವಾರ ಮಂಡಿಸಿದ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕ 2026’ ಯಾವುದೇ ಚರ್ಚೆಯಿಲ್ಲದೇಮೇಲ್ಮನೆಯಲ್ಲಿ ಅಂಗೀಕಾರಗೊಂಡಿತು. ಗುರುವಾರ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಉತ್ತರ ಖಂಡಿಸಿ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಈ ನಡುವೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಈ ತಿದ್ದುಪಡಿ ವಿಧೇಯಕ ಮಂಡಿಸಿದರು. ವಿಪಕ್ಷಗಳ ಸದಸ್ಯರು ಸದನಕ್ಕೆ ವಾಪಸ್ ಬರುವ ವೇಳೆಗೆ ಯಾವುದೇ ಚರ್ಚೆ ಇಲ್ಲದೆ ಧ್ವನಿಮತದ ಮುಖಾಂತರ ವಿಧೇಯಕವನ್ನು ಅಂಗೀಕರಿಸಲಾಯಿತು.
ದಕ್ಷಿಣದಿಂದ ದೂರವಾದ್ರ ಜಮೀರ್ ?; ನಡೆಯುತ್ತಾ ಒಳ ತಂತ್ರಗಾರಿಕೆ ಟಿಒಬಿ ನ್ಯೂಸ್ ಬೆಂಗಳೂರು ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯುವಂತೆ ಮನವೊಲಿಕೆ ಕಸರತ್ತಿನಿಂದಲೂ ಸಚಿವ ಜಮೀರ್ ಅಹಮದ್ ದೂರ ಉಳಿದರು. ಇದು ರಾಜಕೀಯ ವಲಯದಲ್ಲಿ ಈಗ ಹಲವು ರೀತಿಯ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ನಾಮ ಪತ್ರ ಸಲ್ಲಿಸುವ ವೇಳೆ ಸಿಎಂ-ಡಿಸಿಎಂ ಹಾಜ ರಿದ್ದರು. ಆದರೆ, ಜಮೀರ್ ಗೈರುಹಾಜರಾಗಿದ್ದರು. ಇನ್ನು ದಾವಣಗೆರೆ ದಕ್ಷಿಣದಲ್ಲಿ ಅತಿಹೆಚ್ಚು 23 ಅಲ್ಪಸಂಖ್ಯಾತರು ನಾಮಪತ್ರ ಸಲ್ಲಿಸಿದ್ದರು. ಅವರ ಮನವೊಲಿಸಿ, ನಾಮಪತ್ರ ಹಿಂಪಡೆಯುವಂತೆ ಮಾಡಬೇಕು ಎಂದು ಒಂದು ದಿನದ ಹಿಂದಷ್ಟೇ ಕಾಂಗ್ರೆಸ್ ಶಾಸಕಾಂಗ ಪಕ್ಷ ದ ಸಭೆಯಲ್ಲಿ ಅಲ್ಪಸಂಖ್ಯಾತ ನಾಯಕರಿಗೆ ರಾಜ್ಯ ಉಸ್ತುವಾರಿ ಸುರ್ಜೇವಾಲ ಸೂಚಿಸಿದ್ದರು. ಅದರಂತೆ ಮೇಲ್ಪನೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್, ಶಾಸಕ ರಿಜ್ವಾನ್ ಅರ್ಷದ್ ಸೇರಿ ಕೆಲ ನಾಯಕರು ದಾವಣಗೆರೆ ತೆರಳಿ, ಮನವೊಲಿಕೆಗೆ ಕೊನೇ ಕಸರತ್ತು ನಡೆಸಿದರು. ಆದರೆ, ಜಮೀರ್ ದಾವಣಗೆರೆಗೆ ಹೋಗದೇ ಕೇರಳ ವಿಧಾನಸಭಾ…
ಅಂದು ನಕ್ಕವರಿಗೆ ಇಂದು ಟಾಂಗ್ ; ಅಚ್ಚರಿ ಮೂಡಿಸಿದ ಮಲ್ಯ ಟ್ವೀಟ್ ಲಂಡನ್: ವಿಜಯ್ ಮಲ್ಯ ಅವರು ಆರ್‌ಸಿಬಿ ತಂಡದ ಭಾರೀ ಮೌಲ್ಯ ಏರಿಕೆಯನ್ನು ಉಲ್ಲೇಖಿಸಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. 2008ರಲ್ಲಿ ಐಪಿಎಲ್ ಆರಂಭದ ವೇಳೆ 450 ಕೋಟಿ ರೂ. ನೀಡಿ ತಂಡವನ್ನು ಖರೀದಿಸಿದ್ದಾಗ ತಮ್ಮ ನಿರ್ಧಾರವನ್ನು ಹಲವರು ಹಾಸ್ಯ ಮಾಡಿದ್ದರು ಎಂದು ಮಲ್ಯ ನೆನೆಸಿಕೊಂಡಿದ್ದಾರೆ. ಅಂದು ನನ್ನ ಮೇಲೆ ನಕ್ಕವರು, ನನ್ನ ಹೂಡಿಕೆ ವ್ಯರ್ಥವಾಗುತ್ತದೆ ಎಂದು ಟೀಕಿಸಿದವರು, ಇಂದು ತಂಡದ ಮೌಲ್ಯ ₹16,500 ಕೋಟಿಗೆ ಏರಿರುವುದನ್ನು ನೋಡಿ ಮೌನವಾಗಿದ್ದಾರೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ‘ರಾಯಲ್ ಚಾಲೆಂಜರ್ಸ್’ ಎಂಬ ಹೆಸರು ತಮ್ಮ ಸಂಸ್ಥೆಯ ಮದ್ಯ ಬ್ರಾಂಡ್ ವಿಸ್ತರಣೆ ಉದ್ದೇಶದಿಂದ ಇಡಲಾಗಿತ್ತು ಎಂಬುದನ್ನೂ ಅವರು ಬಹಿರಂಗಪಡಿಸಿದ್ದಾರೆ. ಹೊಸ ಮಾಲಿಕರಿಗೆ ಶುಭಾಶಯ ಕೋರಿದ ಮಲ್ಯ, ಆರ್‌ಸಿಬಿ ತಂಡದ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಮತ್ತೆ ಲಾಕ್‌ಡೌನ್ ? ಮರುಕಳಿಸುತ್ತಾ ಕೊರೊನಾ ಕರಾಳ ದಿನ ಟಿಒಬಿ ನ್ಯೂಸ್ ನವದೆಹಲಿ ಕೊರೊನಾ ಕಾಲದ ಆ ಕರಾಳ ದಿನಗಳನ್ನು ನೆನಪಿಸುವಂತೆ ಮತ್ತೆ ದೇಶದಲ್ಲಿ ಲಾಕ್‌ಡೌನ್ ಜಾರಿಯಾಗಲಿದೆ ಎಂಬ ವದಂತಿಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿವೆ. ವಾಟ್ಸಾಪ್ ಮತ್ತು ಫೇಸ್‌ಬುಕ್‌ನಂತಹ ಜಾಲತಾಣಗಳಲ್ಲಿ ಮತ್ತೆ ಶಾಲೆ-ಕಾಲೇಜುಗಳು ಬಂದ್ ಆಗಲಿವೆ, ರೈಲು ಮತ್ತು ವಿಮಾನ ಸಂಚಾರ ಸ್ಥಗಿತಗೊಳ್ಳಲಿದೆ ಎಂಬ ಸಂದೇಶಗಳು ವೈರಲ್ ಆಗಿವೆ. ಇದು ಜನರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಲು ಶುರು ಮಾಡಿತ್ತು. ಈ ಸುದ್ದಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಶಾಲೆ-ಕಾಲೇಜುಗಳನ್ನು ತಕ್ಷಣ ಬಂದ್ ಮಾಡಲಾಗುತ್ತಾ, ರೈಲು ಮತ್ತು ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಾ, ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂಬ ಚರ್ಚೆ ಶುರುವಾಗಿವೆ. ದೇಶದಲ್ಲಿ ಸದ್ಯಕ್ಕೆ ಲಾಕ್‌ಡೌನ್ ಹೇರುವ ಯಾವುದೇ ಉದ್ದೇಶ ಸರ್ಕಾರದ ಮುಂದಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳಿಗೆ ಅಥವಾ ಆಧಾರರಹಿತ ವದಂತಿಗಳಿಗೆ ಕಿವಿಗೊಡಬಾರದು ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು…
ಪಟ್ಟು ಸಡಲಿಸದ ಪೈಲ್ವಾನ್ ; ಅಸಮಾಧಾನ ಶಮನಕ್ಕೆ ಯತ್ನ ಟಿಒಬಿ ನ್ಯೂಸ್ ದಾವಣಗೆರೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈಗಾಗಲೇ ಸಾಧಿಕ್ ಪೈಲ್ವಾನ್ ಅವರು ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದು, ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬೆಳವಣಿಗೆ ಅಲ್ಪಸಂಖ್ಯಾತ ಮತಗಳು ವಿಭಜನೆಯಾಗುವ ಆತಂಕ ಕಾಂಗ್ರೆಸ್ ನಾಯಕರಲ್ಲಿ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸುಭಾನ್ ಸಾಬ್ ಅವರ ಉಚ್ಚಾಟನೆಯು ಪಕ್ಷದ ಒಳಗಿನ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಇಂತಹ ಉಚ್ಚಾಟನೆಗಳು ಸಾಮಾನ್ಯವಾಗಿ ಪಕ್ಷದ ಶಿಸ್ತು ಉಲ್ಲಂಘನೆಗೆ ಕೈಗೊಳ್ಳುವ ಕ್ರಮವಾಗಿದೆ. ಆದರೆ ಉಪಚುನಾವಣೆಯ ಸಮಯದಲ್ಲಿ ಇದು ಪಕ್ಷದ ಕಾರ್ಯಕರ್ತರ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಸುಭಾನ್ ಸಾಬ್ ಅವರು ಜಿಲ್ಲಾ ಮಟ್ಟದಲ್ಲಿ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿದ್ದುದರಿಂದ ಅವರ ಅನುಯಾಯಿಗಳು ಮತ್ತು ಬೆಂಬಲಿಗರು ಈ ಕ್ರಮಕ್ಕೆ ಪ್ರತಿಕ್ರಿಯಿಸುವ ಸಾಧ್ಯತೆ ಇದೆ. ಈ ಘಟನೆ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೊಂದರೆ ತರುವಂತಿದೆ. ಏಪ್ರಿಲ್ 9ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳು ಯಾವ…
ಅಂಜನಾದ್ರಿ: ₹31.30 ಲಕ್ಷ ಕಾಣಿಕೆ ಸಂಗ್ರಹ ಗಂಗಾವತಿ (ಕೊಪ್ಪಳ): ತಾಲೂಕಿನ ಆನೆಗೊಂದಿ ಬಳಿಯ ಅಂಜನಾದ್ರಿ ಆಂಜನೇಯ ದೇವಸ್ಥಾನಕ್ಕೆ ಕಳೆದ 51 ದಿನಗಳಲ್ಲಿ 31,30,730 ರೂ. ಕಾಣಿಕೆ ಸಲ್ಲಿಕೆಯಾಗಿದೆ. ಹುಂಡಿಗಳಲ್ಲಿ ಸಂಗ್ರಹವಾದ ಕಾಣಿಕೆಯನ್ನು ಗುರುವಾರ ಎಣಿಕೆ ಮಾಡಲಾಯಿತು. ದೇವಸ್ಥಾನ ಸಮಿತಿ ಕಾರ್ಯನಿರ್ವಹಣಾಧಿಕಾರಿಯೂ ಆದ ತಹಸೀಲ್ದಾರ್ ವಿಶ್ವನಾಥ್ ಮುರುಡಿ ಸಮ್ಮುಖದಲ್ಲಿ ಎಣಿಕೆ ಪ್ರಕ್ರಿಯೆ ನೆರವೇರಿಸಲಾ ಯಿತು. ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು. ಅಮೆರಿಕ, ದುಬೈ, ನೇಪಾಳದ ಕೆಲವು ನೋಟುಗಳೂ ಹುಂಡಿಯಲ್ಲಿ ಪತ್ತೆಯಾಗಿವೆ. ಇದೇ ವರ್ಷದ ಫೆ.3ರಂದು ನಡೆದ ಎಣಿಕೆ ವೇಳೆ 68,85, 965ರೂ. ಕಾಣಿಕೆ ಸಂಗ್ರಹವಾಗಿತ್ತು.
ರಂಗೇರಿದ ಬೈ ಎಲೆಕ್ಷನ್ ಅಖಾಡ; ಸ್ಟಾರ್ ಪ್ರಚಾರಕರು ಎಂಟ್ರಿ ಟಿಒಬಿ ನ್ಯೂಸ್ ದಾವಣಗೆರೆ ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು, ಎರಡು ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಲು ಕಾಂಗ್ರೆಸ್ ಸಜ್ಜಾಗಿದ್ದು, ಇದೀಗ ಮೂವರು ಪ್ರಭಾವಿ ನಾಯಕರಿಗೆ ಮಹತ್ವದ ಜವಾಬ್ದಾರಿಗಳನ್ನು ನೀಡಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಜವಾಬ್ದಾರಿಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಬಾಗಲಕೋಟೆಗೆ ಸಚಿವ ಸತೀಶ್ ಜಾರಕಿಹೊಳಿಗೆ ಸಂಪೂರ್ಣ ಹೊಣೆಗಾರಿಕೆ ನೀಡಲಾಗಿದೆ. ಸ್ಟಾರ್ ಪ್ರಚಾರಕರಾಗಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರನ್ನು ನಿಯೋಜಿಸಲಾಗಿದೆ. ಕಾಂಗ್ರೆಸ್‌ಗೆ ಬಾಗಲಕೋಟೆಗಿಂದ ದಾವಣಗೆರೆಯೇ ದೊಡ್ಡ ಸವಾಲಾಗಿದೆ. ಗುಂಪು ರಾಜಕೀಯ, ಅಭ್ಯರ್ಥಿ ಆಯ್ಕೆ ಕುರಿತ ಅಸಮಾಧಾನ ಮತ್ತು ವಿರೋಧ ಪಕ್ಷಗಳ ಆಕ್ರಮಣಕಾರಿ ಪ್ರಚಾರ ಈ ಕದನವನ್ನು ಇನ್ನಷ್ಟು ಕಠಿಣಗೊಳಿಸಿದೆ. ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಸವದಿ, ಅಹಿಂದ ಸಮೀಕರಣವನ್ನು ಗಟ್ಟಿಗೊಳಿಸಲು ಜಾರಕಿಹೊಳಿ, ಹೆಬ್ಬಾಳ್ಕರ್ ಕಾರ್ಯತಂತ್ರ ರೂಪಿಸಲಿದ್ದಾರೆ. ಇವೆರಡರ ಸಮನ್ವಯವೇ ಗೆಲುವಿನ ದಿಕ್ಕು ನಿರ್ಧರಿಸುವ ಪ್ರಮುಖ ಅಂಶವಾಗಲಿದೆ ಎನ್ನಲಾಗಿದೆ.
ಸಮರ್ಥ್ ಪಟ್ಟಾಭಿಷೇಕಕ್ಕೆ ‘ಕೈ’ ಪಟ್ಟು; ಶುರುವಾಯ್ತು ಮೇಜರ್ ಸರ್ಜರಿ ಟಿಒಬಿ ನ್ಯೂಸ್ ದಾವಣಗೆರೆ ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಪಟ್ಟಾಭಿಷೇಕಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ನಿರ್ಧರಿಸಿರುವುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ನಾಮಪತ್ರ ವಾಪಸ್ ಪಡೆಯುವ ವಿಚಾರದಲ್ಲಿ ನಡೆದ ಹೈಡ್ರಾಮಕ್ಕೆ ಇದೀಗ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯ ತಲೆದಂಡವಾಗಿದೆ. ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಓರ್ವನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಬರೋಬ್ಬರಿ 6 ವರ್ಷ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ. ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಮೇಜರ್ ಸರ್ಜರಿ ಹೌದು, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಎಚ್. ಸುಭಾನ್ ಸಾಬ್ ಅವರನ್ನು ಪಕ್ಷವು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಈ ಬಗ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ಆದೇಶ ಹೊರಡಿಸಿದ್ದಾರೆ. ಸುಭಾನ್ ಸಾಬ್ ಕಾಂಗ್ರೆಸ್ ಪಕ್ಷದಲ್ಲಿ ದೀರ್ಘಕಾಲದಿಂದಲೂ ಕಾರ್ಯಕರ್ತರಾಗಿ, ನಂತರ ಜಿಲ್ಲಾ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಬಾರಿ…
ನಿತ್ಯ ಭವಿಷ್ಯ – 27/03/2026 (ಶುಕ್ರವಾರ) 🔯 ಮೇಷ (Aries) ಇಂದು ಕೆಲಸಗಳಲ್ಲಿ ಚುರುಕು ಹೆಚ್ಚಾಗುತ್ತದೆ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸೂಕ್ತ ಸಮಯ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಹಣಕಾಸು ವಿಷಯದಲ್ಲಿ ಜಾಗ್ರತೆ ಅಗತ್ಯ. 🔯 ವೃಷಭ (Taurus) ಆರ್ಥಿಕ ಲಾಭದ ಸೂಚನೆಗಳು ಕಂಡುಬರುತ್ತವೆ. ವ್ಯವಹಾರದಲ್ಲಿ ಯಶಸ್ಸು ಸಿಗಬಹುದು. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ. 🔯 ಮಿಥುನ (Gemini) ಮನಸ್ಸಿನಲ್ಲಿ ಅಶಾಂತಿ ಕಾಣಬಹುದು. ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ. ಸಹನೆ ಮತ್ತು ಸಮಾಧಾನದಿಂದ ನಡೆದುಕೊಳ್ಳುವುದು ಉತ್ತಮ. ಪ್ರಯಾಣದ ಯೋಗ ಇದೆ. 🔯 ಕರ್ಕಾಟಕ (Cancer) ಇಂದು ಶುಭ ದಿನ. ಕುಟುಂಬದ ಬೆಂಬಲ ದೊರೆಯುತ್ತದೆ. ಉದ್ಯೋಗದಲ್ಲಿ ಪ್ರಗತಿ ಸಾಧ್ಯ. ಹೊಸ ಅವಕಾಶಗಳು ಎದುರಾಗಬಹುದು. 🔯 ಸಿಂಹ (Leo) ಹಣಕಾಸಿನಲ್ಲಿ ಲಾಭ. ಗೌರವ ಹೆಚ್ಚಾಗುತ್ತದೆ. ನಾಯಕತ್ವದ ಗುಣಗಳು ಮೆರೆದಿಡುವ ದಿನ. ಆದರೆ ಅಹಂಕಾರದಿಂದ ದೂರ ಇರಬೇಕು. 🔯 ಕನ್ಯಾ (Virgo) ಆರೋಗ್ಯದ ಬಗ್ಗೆ ಜಾಗ್ರತೆ ಅಗತ್ಯ. ಕೆಲಸದಲ್ಲಿ…
Subscribe to Updates
Get the latest creative news from FooBar about art, design and business.