ದಾವಣಗೆರೆ ದಕ್ಷಿಣದಲ್ಲಿ ಪೊಲಿಟಿಕಲ್ ಗೇಮ್ ; ಬಿಜೆಪಿಗೆ ಕೈ ಚೆಕ್ ಮೆಟ್ ; ಕೆಲ ಗಂಟೆಗಳಲ್ಲಿ ಅಚ್ಚರಿ ಬ್ರೇಕಿಂಗ್
ಟಿಒಬಿ ನ್ಯೂಸ್ ದಾವಣಗೆರೆ
ರಾಜ್ಯದಲ್ಲಿ ಉಪ ಚುನಾವಣೆ ರಂಗೇರಿದ್ದು , ಹೈವೋಲ್ಟೆಜ್ ಕ್ಷೇತ್ರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದತ್ತದ ಎಲ್ಲರ ಚಿತ್ತ ನೆಟ್ಟಿದೆ.
ಉಪ ಚುನಾವಣೆಯ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಮುಸ್ಲಿಂ ನಾಯಕರು ಕಾಂಗ್ರೆಸ್ ವಿರುದ್ದ ತಿರುಗಿಬಿದ್ದ ಪರಿಣಾಮ ಅಭ್ಯರ್ಥಿ ಸಮರ್ಥ್ ಶಾಮನೂರುಗೆ ಬಂಡಾಯದ ಬಿಸಿ ತಟ್ಟಿದೆ. ಮುಸ್ಲಿಂ ಮುಖಂಡ ಸಾದಿಕ್ ಅವರು ಶಾಮನೂರು ಫ್ಯಾಮಿಲಿ ವಿರುದ್ಧ ಅಖಾಡಕ್ಕಿಳಿದಿದ್ದಾರೆ. ಜತೆಗೆ 22 ಅಲ್ಪಸಂಖ್ಯಾತ ಅಭ್ಯರ್ಥಿಗಳ ನಾಮಪತ್ರ ಸ್ವೀಕೃತಗೊಂಡಿದ್ದವು. ಸಾದಿಕ್ ಪೈಲ್ವಾನ್ ಸೇರಿ 22 ಅಲ್ಪಸಂಖ್ಯಾತ ಅಭ್ಯರ್ಥಿಗಳ ಮನವೊಲಿಸುವ ಕಾರ್ಯ
ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.
ಉಸ್ತುವಾರಿ ಸುರ್ಜೇವಾಲ ಕಟ್ಟುನಿಟ್ಟಿನ ಸೂಚನೆ ಮೇರೆಗೆ
ಬೈ ಎಲೆಕ್ಷನ್ ಅಖಾಡಕ್ಕೆ ಎಂಟ್ರಿ ಆಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅಲ್ಪಸಂಖ್ಯಾತರ ಅಸಮಾಧಾನ ಶಮನಗೊಳಿಸುವಲ್ಲಿ ಮೈಲುಗೈ ಸಾಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಬಿಟ್ಟು ಕೊಡಬಾರದು ಎಂಬ ಹಠಕ್ಕೆ ಬಿದ್ದಿದ್ದು, ಗೆಲುವಿಗಾಗಿ ವಿಶೇಷ ರಣತಂತ್ರ ರೂಪಿಸಿದೆ. 45 ನಾಮಪತ್ರಗಳಲ್ಲಿ 41 ಸ್ವೀಕೃತ, 3 ತಿರಸ್ಕೃತ, 1 ವಾಪಸ್ ಆಗಿದೆ. ಇದರಲ್ಲಿ ಓರ್ವ ಅಲ್ಪಸಂಖ್ಯಾತ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿದೆ. ಒಟ್ಟು 22 ಅಲ್ಪಸಂಖ್ಯಾತ ಅಭ್ಯರ್ಥಿಗಳ ನಾಮಪತ್ರ ಸ್ವೀಕೃತಗೊಂಡಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, SDPI ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಸೇರಿ 22 ಅಲ್ಪಸಂಖ್ಯಾತ ಅಭ್ಯರ್ಥಿಗಳ ನಾಮಪತ್ರ ಸ್ವೀಕೃತಗೊಂಡಿದೆ.
ಇನ್ನೂ ಕೆಲ ಗಂಟೆಗಳಲ್ಲಿ ಬಹುತೇಕ 22 ಅಲ್ಪಸಂಖ್ಯಾತ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯುವ ಚಿತ್ರಣ ಸ್ಪಷ್ಟವಾಗುತ್ತಿದೆ. ಹೀಗೆ ನಡೆದರೆ ಇಂದೇ ದಾವಣಗೆರೆ ದಕ್ಷಿಣದ ಫಲಿತಾಂಶ ಅನಧಿಕೃತವಾಗಿ ಘೋಷಣೆಯಾದಂತೆ ಎಂಬುದು ರಾಜಕೀಯ ವಿಶ್ಲೇಷಕರ ಅನಿಸಿಕೆ.
