ಮಾಜಿ ಶಾಸಕನ ಪುತ್ರನ ಕೇಸ್ ; ಅಕ್ರಮ ಸಂಬಂಧದ ನಂಟು
ಧಾರವಾಡದ ಬಳಿ ಕಾರಿನಲ್ಲೇ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬೆಳಗಾವಿ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕನ ಪುತ್ರ ರಾಜು ಬೋಳಶೆಟ್ಟಿಯ ದೇಹ
ಪತ್ತೆಯಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಪ್ರಕರಣದ ಹಿಂದೆ ಅಕ್ರಮ ಸಂಬಂಧ ಹಾಗೂ ಓರ್ವ ಮಹಿಳೆ ಆ್ಯಂಡ್ ಗ್ಯಾಂಗ್ನ ಕೈವಾಡವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಬೇರೆ ಜಾಗದಲ್ಲಿ ಕೊಲೆ ಮಾಡಿ ಬಳಿಕ ಶವವನ್ನ ಅರಣ್ಯ ಪ್ರದೇಶಕ್ಕೆ ತಂದು ಹಂತಕರು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ. ಶವ ಸಾಗಾಟ ಮಾಡಿದ ಕಾರು ಹಾಗೂ ಬೆಂಕಿ ಹಚ್ಚಲು ತಂದಿದ್ದ ಪೆಟ್ರೋಲ್ ಪ್ರಕರಣದಲ್ಲಿ ಪೊಲೀಸರಿಗೆ ದೊಡ್ಡ ಸಾಕ್ಷಿಯಾಗಿದೆ.
ಹಂತಕರ ಗ್ಯಾಂಗ್ ಶವ ಸಾಗಿಸುವ ವೇಳೆ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಖರೀದಿಸಿದೆ. ಸ್ಥಳೀಯ ಪೆಟ್ರೋಲ್ ಬಂಕ್ ನ ಸಿಸಿಟಿವಿ ಟ್ರೇಸ್ ಮಾಡಿದ ಪೊಲೀಸರಿಗೆ ಶಾಕಿಂಗ್ ಮಾಹಿತಿ ಸಿಕ್ಕಿದೆ. ಎರಡು ಕಾರಿನಲ್ಲಿ ಹಂತಕರು ರಾಮಾಪುರದ ಕಾಡಿಗೆ ಹೋಗಿದ್ದಾರೆ. ಘಟನೆ ನಡೆದ 24 ಗಂಟೆಗಳಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.
