Author: ಮೃತ್ಯುಂಜಯಾಚಾರ್ ಬಿ
ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.
ಕೆಲಸ ಇಲ್ಲ ಸಿಗ್ತಾ ಇಲ್ಲ ಅಂತ ಮನೇಲಿ ಕೂತಿದ್ದೀರಾ …ಇಲ್ಲಿದೆ ಬಂಪರ್ ಆಫರ್ ಚಿಕ್ಕಮಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಐಡಿಎಸ್‍ಜಿ ಕಾಲೇಜು ಸಹಭಾಗಿತ್ವದಲ್ಲಿ ಮಾರ್ಚ್ 23 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಐಡಿಎಸ್‍ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಒಂದೇ ಸೂರಿನಡಿ 80ಕ್ಕೂ ಅಧಿಕ ಕಂಪನಿಗಳು, 5000 ಕ್ಕೂ ಹೆಚ್ಚು ಉದ್ಯೋಗ ಅವಕಾಶವಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವೀಧರರು ಭಾಗವಹಿಸಬಹುದು. ಉಚಿತ ಪ್ರವೇಶವಿದ್ದು, 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ರೆಸ್ಯೂಮ್‍ಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಬಯಸುವವರು ಉದ್ಯೋಗಕ್ಕೆ ಸಂಬಂಧಿಸಿದಂತೆ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಕೋರಿದೆ. ಜಿಲ್ಲೆಯ ಯುವನಿಧಿ ಫಲಾನುಭವಿಗಳು ಉದ್ಯೋಗ ಮೇಳದಲ್ಲಿ ಕಡ್ಡಾಯವಾಗಿ ಹಾಜರಾಗಿ ಮಾರ್ಚ್-2026ರ ಮಾಹೆಯ ಸ್ವಯಂ ಘೋಷಣೆಯನ್ನು ಸ್ಥಳದಲ್ಲಿ ಮಾಡಲಾಗುವುದು ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ…
ಏಪ್ರಿಲ್ 1ರಿಂದ ಡಿಜಿಟಲ್ ಪಾವತಿಗೆ ಹೆಚ್ಚುವರಿ ಭದ್ರತೆ: RBI ಹೊಸ ನಿಯಮ ಜಾರಿ ನವದೆಹಲಿ: ದೇಶಾದ್ಯಂತ ಡಿಜಿಟಲ್ ವಹಿವಾಟುಗಳನ್ನು ಇನ್ನಷ್ಟು ಸುರಕ್ಷಿತಗೊಳಿಸುವ ಉದ್ದೇಶದಿಂದ Reserve Bank of India ಮಹತ್ವದ ಕ್ರಮ ಕೈಗೊಂಡಿದೆ. ಏಪ್ರಿಲ್ 1ರಿಂದ ‘ಹೆಚ್ಚುವರಿ ದೃಢೀಕರಣ’ (Additional Authentication) ಕಡ್ಡಾಯಗೊಳಿಸುವಂತೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಈ ಹೊಸ ನಿಯಮದ ಪ್ರಕಾರ, ಗ್ರಾಹಕರು ಆನ್‌ಲೈನ್ ಪಾವತಿ ಮಾಡುವಾಗ OTP, ಬಯೋಮೆಟ್ರಿಕ್ ಅಥವಾ ಪಿನ್‌ನಂತಹ ಹೆಚ್ಚುವರಿ ದೃಢೀಕರಣ ಹಂತಗಳನ್ನು ಪೂರೈಸಬೇಕು. ಇದರಿಂದ ಮೋಸ ಮತ್ತು ಅನಧಿಕೃತ ವ್ಯವಹಾರಗಳನ್ನು ಕಡಿಮೆ ಮಾಡುವ ಉದ್ದೇಶವಿದೆ. ವಿಶೇಷವಾಗಿ UPI, ಕಾರ್ಡ್ ಪಾವತಿ ಹಾಗೂ ಇ-ಕಾಮರ್ಸ್ ವ್ಯವಹಾರಗಳಲ್ಲಿ ಈ ನಿಯಮ ಅನ್ವಯವಾಗಲಿದೆ. ಗ್ರಾಹಕರ ಸುರಕ್ಷತೆಯನ್ನು ಹೆಚ್ಚಿಸುವತ್ತ RBIಯ ಈ ಕ್ರಮ ಮಹತ್ವದ್ದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬ್ಯಾಂಕ್‌ಗಳು ಹಾಗೂ ಪಾವತಿ ಅಪ್ಲಿಕೇಶನ್‌ಗಳು ಈಗಾಗಲೇ ಈ ನಿಯಮಕ್ಕೆ ತಯಾರಿ ನಡೆಸುತ್ತಿದ್ದು, ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು ಅಪ್‌ಡೇಟ್ ಮಾಡಿಕೊಂಡಿರಲು ಸಲಹೆ…
ಸರ್ಕಾರದ ಒಳಮೀಸಲಾತಿ ನೀತಿ, ಆಯೋಗಗಳ ವರದಿ ಹಾಗೂ ರೋಸ್ಟರ್ ವ್ಯವಸ್ಥೆಗಳ ವಿರುದ್ಧವಾಗಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟವು ಮಾ.24ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಂಡಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ. ವಸಂತನಗರದ ಜಸ್ಮಾಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ, ಬಂಜಾರ, ಕೊರಮ, ಕೊರಚ ಸೇರಿದಂತೆ ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಅಲೆಮಾರಿ ಸಮುದಾಯಗಳ 59 ಜಾತಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು ಅವೈಜ್ಞಾನಿಕವಾಗಿದ್ದು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕಸದಸ್ಯ ಆಯೋಗದ ವರದಿ ಅಪೂರ್ಣವಾಗಿದೆ ಎಂದು ಟೀಕಿಸಿದರು. ಆಯೋಗದ ವರದಿಯಲ್ಲಿ ಸಮುದಾಯಗಳ ನಿಜವಾದ ಜನಸಂಖ್ಯೆ ಸರಿಯಾಗಿ ಪ್ರತಿಬಿಂಬಿತವಾಗಿಲ್ಲ. 2011ರ ಜನಗಣತಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿದ್ದ ಭೋವಿ ಸಮುದಾಯವನ್ನು ಕಡಿಮೆ ಪ್ರಮಾಣದಲ್ಲಿ ತೋರಿಸಲಾಗಿದೆ. ಇದೇ ವೇಳೆ ವರದಿಯಲ್ಲೇ ಈ ಸಮುದಾಯಗಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿವೆ ಎಂಬುದು ಸ್ಪಷ್ಟವಾಗಿದ್ದರೂ, ಸರ್ಕಾರ…
ಅಖಾಡಕ್ಕೆ ಸಿಎಂ-ಡಿಸಿಎಂ ; ಗೆಲುವಿಗೆ ರಣತಂತ್ರ ದಾವಣಗೆರೆ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ನಾನಾ ರಣತಂತ್ರ ರೂಪಸಿದೆ. ಸೋಮವಾರ ದಾವಣಗೆರೆ ಹಾಗೂ ಬಾಗಲಕೋಟೆ ಎರಡೂ ಕ್ಷೇತ್ರಗಳಿಗೆ ಹೆಲಿಕಾಪ್ಟರ್ ಮೂಲಕ ಸಿಎಂ, ಡಿಸಿಎಂ ತೆರಳಲಿದ್ದಾರೆ. ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಲಿದ್ದಾರೆ. ಬೆಳಿಗ್ಗೆ 11.15ಕ್ಕೆ ದಾವಣಗೆರೆ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಭ್ಯರ್ಥಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿರಲಿದ್ದಾರೆ. ಬಳಿಕ ಮಧ್ಯಾಹ್ನ 2 ಘಂಟೆಗೆ ಬಾಗಲಕೋಟೆ ಮಿನಿವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಲಿರುವ ಕಾಂಗ್ರೆಸ್ ಅಭ್ಯರ್ಥಿಗೂ ಸಾಥ್ ನೀಡಲಿದ್ದಾರೆ.
ಸಮರ್ಥ್ ಗೆ ಸಾದಿಕ್ ಪೈಲ್ವಾನ್ ಸವಾಲ್ ; ಅಖಾಡಕ್ಕೆ ಇಳಿಯೋದು ಖಚಿತ ದಾವಣಗೆರೆ: ದಾವಣಗೆರೆಯಲ್ಲಿ ಶಾಮನೂರು ಮೊಮ್ಮಗನಿಗೆ ಟಿಕೆಟ್ ಘೋಷಣೆ ಆಗ್ತಿದ್ದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತರು ಸಿಡಿದೆದ್ದಿದ್ದಾರೆ. ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ಮುಸ್ಲಿಂ ನಾಯಕರು ಪಟ್ಟು ಹಿಡಿದಿದ್ದರು. ಆದರೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಅವರು ಮಗ ಸಮರ್ಥ್ಗೆ ಟಿಕೆಟ್ ಕೊಡಿಸುವಲ್ಲಿ ಗೆದ್ದಿದ್ದಾರೆ. ಇದೀಗ ಶಾಮನೂರು ಕುಟುಂಬದ ವಿರುದ್ದ ಮುಸ್ಲಿಂ ನಾಯಕರು ಸಿಡಿದೇಳು ಭೀತಿ ಎದುರಾಗಿದ್ದು, ಬಿ ಫಾರಂ ಸಿಗದ ಹಿನ್ನೆಲೆ ಮುಸ್ಲಿಂ ಮುಖಂಡ ಸಾದಿಕ್ ಪೈಲ್ವಾನ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗುವ ನಿರೀಕ್ಷೆಯಾಗಿದ್ದ ಸಾದಿಕ್ ಪೈಲ್ವಾನ್ಗೆ ನಿರಾಸೆಯಾಗಿದ್ದು, ಸಮರ್ಥ್ ಶಾಮನೂರು ವಿರುದ್ಧ ಸ್ಪರ್ಧೆಗೆ ಮುಂದಾಗಿದ್ದಾರೆ. ದಾವಣಗೆರೆಯಲ್ಲಿ ಮಾತಾಡಿದ ಮುಸ್ಲಿಂ ಮುಖಂಡ ಸಾದಿಕ್ ಪೈಲ್ವಾನ್, ಶುಕ್ರವಾದ ವರೆಗೆ ಬಿ- ಫಾರಂ ಸಿಗುವ ಭರವಸೆ ಇತ್ತು. ಆದರೆ ಸಿಕ್ಕಿಲ್ಲ ಇದೀಗ ಶಾಮನೂರು ಫ್ಯಾಮಿಲಿ ವಿರುದ್ಧ ಅಖಾಡಕ್ಕೆ ಇಳಿಯಲು ನಾನು ಸಿದ್ಧ ಎಂದಿದ್ದಾರೆ. ಅಲ್ಪಸಂಖ್ಯಾತರಿಗೆ…
ಬರಿಗಾಲಲ್ಲಿ ಶಾಮನೂರು ಮೊಮ್ಮಗ ಸುತ್ತಾಟ; ಎಲ್ಲ ದುಗ್ಗಮ್ಮ ದೇವಿ ಕೃಪೆ ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಅವರಿಗೆ ಟಿಕೆಟ್ ಖಚಿತವಾಗುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಸಿಹಿ ತಿನ್ನಿಸಿ, ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿದ ಜೈಕಾರ ಕೂಗಿದರು. ಕುರುಬರಕೇರಿಯಲ್ಲಿ ಕಾಂಗ್ರೆಸ್ ಮುಖಂಡರ ಮನೆಗಳಿಗೆ ಭೇಟಿ ನೀಡಿದ ಸಮರ್ಥ್ ಅವರು ಬರಿಗಾಲಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕ್ಷೇತ್ರ ಸುತ್ತಾಟ ನಡೆಸುತ್ತಿದ್ದಾರೆ. ಟಿಕೆಟ್ ಘೋಷಣೆ ಬಳಿಕ ದಾವಣಗೆರೆ ಕಾಂಗ್ರೆ ಅಭ್ಯರ್ಥಿ ಸಮರ್ಥ್ ಶಾಮನೂರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ದುಗ್ಗಮ್ಮ ದೇವಸ್ಥಾನ ಒಳಗಡೆ ಹೋಗಿ ಕೈ ಮುಗಿಯುತ್ತಿದ್ದಂತೆ ಟಿಕೆಟ್ ಘೋಷಣೆ ಆಯಿತು. ನಮ್ಮ ಜೊತೆ ಯಾವಾಗಲೂ ಶುಭ ಸೂಚನೆಗಳೇ ಇರುತ್ತವೆ ಎಂದರು. ನಮ್ಮ ಜನರ ಮೇಲೆ ನಮಗೆ ವಿಶ್ವಾಸ ಇದೆ. ಆಕಾಂಕ್ಷಿಗಳು ಬಹಳ ಜನ ಇದ್ದಾಗ ಗೊಂದಲ ಸಾಮಾನ್ಯ, ಆದರೆ ಯಾರು ಗೆಲ್ಲುವಂಥಹ ಅಭ್ಯರ್ಥಿ ಇರ್ತಾರೆ ಅವರಿಗೆ ಟಿಕೆಟ್ ಕೊಡುತ್ತಾರೆ. ಎಲ್ಲರೂ ನನ್ನನ್ನು ಊರಿನ ಮಗ ಅಂತ ಹೇಳುತ್ತಾರೆ. ಈ ಬಾರಿ…
ಡಿಜಿಟಲ್ ಅರೆಸ್ಟ್ ; ವಂಚಕರ ಜಾಲಕ್ಕೆ ಸಿಲುಕಿದ ಉದ್ಯಮಿ ಸೈಬರ್ ವಂಚಕರು ಹೆಣೆದ ಡಿಜಿಟಲ್ ಅರೆಸ್ಟ್‌ಗೆ ಬೆಳಗಾವಿಯ ಹಿರಿಯ ಉದ್ಯಮಿ ಸಿಲುಕಿದ್ದು, ಒಂದಲ್ಲ, ಎರಡಲ್ಲ ಬರೊಬ್ಬರಿ 15 ಕೋಟಿ ಹಣ ಕಳೆದುಕೊಂಡಿದ್ದಾರೆ. ಸೈಬರ್ ವಂಚನೆ ಕುರಿತು ಜಾಗೃತಿ ಹೆಚ್ಚಾದಂತೆ ವಂಚಕರೂ ತಮ್ಮ ಕೃತ್ಯದ ಮಾರ್ಗವನ್ನು ಬದಲಿಸಿದ್ದಾರೆ. ಹೀಗೆ ಡಿಜಿಟಲ್ ಅರೆಸ್ಟ್ ಮಾಡಿ ಬೆಳಗಾವಿ ನಗರದ 81 ವರ್ಷದ ವೃದ್ಧ ಉದ್ಯಮಿ ಒಬ್ಬರನ್ನು ತಮ್ಮ ವಂಚನೆ ಖೆಡ್ಡಾಗೆ ಕೆಡವಿ, ಬರೊಬ್ಬರಿ 15 ಕೋಟಿ ರೂಪಾಯಿಯನ್ನು ಎಗರಿಸಿದ್ದಾರೆ. ಡಾರ್ಕ್ ವೆಬ್‌ನಿಂದ ವ್ಯಕ್ತಿಯನ್ನು ಸಂಪರ್ಕಿಸಿರುವ ವಂಚಕರು, ಬಳಿಕ ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಪಟ್ಟಿಯಲ್ಲಿ ತೋರಿಸುತ್ತಿದೆ ಎಂದು ಹೆದರಿಸಿದ್ದಾರೆ. ವಿಡಿಯೋ ಕಾಲ್ ಮಾಡಿ ನಾವು ಇಡಿ ಅಧಿಕಾರಿಗಳು ಎಂದು ಬೆದರಿಸಿದ್ದಾರೆ. ನಾನೇನೂ ಮನಿ ಲಾಂಡ್ರಿಂಗ್ ಮಾಡಿಲ್ಲ ಎಂದು ವೃದ್ಧ ಹೇಳುತ್ತಿದ್ದಂತೆ ವರಸೆ ಬದಲಿಸಿರುವ ಖದೀಮರು, ಈಗ ತನಿಖೆ ಮಾಡುತ್ತಿದ್ದೇವೆ. ಅಲ್ಲಿಯವರೆಗೂ ನಿಮ್ಮ ಬಳಿಯ ಹಣವನ್ನು ನಾವು ಕೊಡುವ ಖಾತೆಗೆ ವರ್ಗಾಯಿಸಿ. ತನಿಖೆ ಮುಗಿಯುವವರೆಗೂ ನಿಮ್ಮ…
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸ್ವತಃ ಅಭ್ಯಂಜನ ಸ್ನಾನ ಮಾಡಿಸಿದ ಶಿಕ್ಷಕ! ಬೀರೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಕಳೆದಮಾ.18ರಿಂದಲೇ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ವಸತಿ ಶಾಲೆಯ ಪ್ರಾಂಶುಪಾಲರು ಯಾವ ಮಕ್ಕಳನ್ನು ತಮ್ಮ ಊರುಗಳಿಗೆ ಕಳುಹಿಸದೆ, ಶ್ರದ್ದೆ ಮತ್ತು ಏಕಾಗ್ರತೆಯಿಂದ ಮಕ್ಕಳನ್ನು ತಮ್ಮ ವಸತಿ ಶಾಲೆಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ಪಠ್ಯಗಳನ್ನು ಕಲಿಸುತ್ತಿದ್ದಾರೆ. ಯುಗಾದಿ ಹಬ್ಬವನ್ನು ನಾವು ಮಿಸ್ ಮಾಡಿಕೊಂಡೆವು, ಈ ಬಾರಿ ಊರಿಗೆ ಹೋಗಿದ್ದರೆ ಅಪ್ಪ-ಅಮ್ಮಂದಿರು ಎಣ್ಣೆ ಹಚ್ಚಿ ನಮಗೆ ಸ್ನಾನ ಮಾಡಿಸಿ, ಹೊಸ ಬಟ್ಟೆಗಳನ್ನು ಕೊಡಿಸುತ್ತಿದ್ದರು ಎಂಬ ವಿದ್ಯಾರ್ಥಿಗಳ ಮನೋಭಾವನೆ ಅರಿತ ಕಡೂರು ತಾಲೂಕಿನ ಜೋಡಿಹೋಚಿಹಳ್ಳಿ ಮೊರಾರ್ಜಿ ಶಾಲೆಯ ಶಿಕ್ಷಕ ಕೆ.ಎಚ್.ಗಿರೀಶ್ ಮತ್ತು ನಿಲಯಾಧಿಕಾರಿ ಹೊನ್ನಪ್ಪ, ಶಿಕ್ಷಕರ ತಂಡ ಮಕ್ಕಳೊಂದಿಗೆ ಯುಗಾದಿ ಆಚರಿಸಲು ಮುಂದಾಗಿ, ತಾವೇ ಅರಿಶಿಣ, ಹರಳೆಣ್ಣೆ ತರಿಸಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಚ್ಚಿ ಅವರಿಗೆಲ್ಲ ಅಭ್ಯಂಜನ ಸ್ನಾನ ಮಾಡಿಸಿ ಮಕ್ಕಳೊಂದಿಗೆ ಯುಗಾದಿ ಆಚರಿಸಿರುವುದು ವಿದ್ಯಾರ್ಥಿಗಳಲ್ಲಿ ಸಂತಸ ಹೆಚ್ಚಿಸಿದೆ.
ಪತ್ನಿ ಮನೆಗೆಲಸದಾಕೆಯಲ್ಲ: ಸುಪ್ರೀಂ ಕೋರ್ಟ್
ಮೊದಲ-ಎರಡನೇ ಬಾರಿ ಗೆದ್ದವರಿಗೆ ಮಂತ್ರಿಗಿರಿ ನೀಡಿ: ಇನ್ಸಾಲ್ ಆಗ್ರಹ ಮೊದಲ, ಎರಡನೇ ಬಾರಿ ಗೆದ್ದವರಿಗೆ ಸಂಪುಟ ಪುನಾರಚನೆ ವೇಳೆ ಮಂತ್ರಿಗಿರಿ ನೀಡಲಿ ಎಂದು ಕಾಂಗ್ರೆಸ್ ಶಾಸಕ ಇಕ್ಸಾಲ್ ಹುಸೇನ್ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ ಖರ್ಗೆ ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾಗ ಸಚಿವರಾಗಿದ್ದರು. ಹಾಗಾಗಿ, ಈಗಲೂ ಮೊದಲ ಬಾರಿ ಗೆದ್ದವರನ್ನು ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸುತ್ತಿದ್ದೇವೆ. 55 ಮಂದಿ ಸೇರಿ, ಒಟ್ಟಿಗೆ ಊಟ ಮಾಡಿ, ಈ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಸಿಎಂಗೆ ತಿಳಿಸಿದ್ದೇವೆ. ನಮ್ಮ ಮನವಿಗೆ ಸಿಎಂ ಸ್ಪಂದಿಸುವ ವಿಶ್ವಾಸ ಇದೆ ಎಂದರು. 3 -4ಬಾರಿ ಗೆದ್ದ ಶಾಸಕರು ಸಭೆ ಮಾಡಿ, ಮುಖ್ಯಮಂತ್ರಿಗಳಲ್ಲಿ ಸಚಿವ ಪದವಿಗೆ ಮನವಿ ಮಾಡಿದ್ದಾರೆ. ಹಾಗಾಗಿ, ಮೊದಲ ಬಾರಿ ಹಾಗೂ ಎರಡು ಬಾರಿ ಗೆದ್ದ ಶಾಸಕರು ಕೂಡ ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದೇವೆ ಎಂದು ಅವರು ಹೇಳಿದರು.
Subscribe to Updates
Get the latest creative news from FooBar about art, design and business.