Author: ಮೃತ್ಯುಂಜಯಾಚಾರ್ ಬಿ
ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.
ಅಖಾಡದಲ್ಲಿ ಕೋಟಿವೀರರು; ಕೈ-ಕಮಲ ನಡುವೆ ಜಿದ್ದಾಜಿದ್ದಿ ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಖಾಡಕ್ಕೆ ಕೋಟಿವೀರರು ಇಳಿದಿದ್ದು, ಇದೀಗ ಕೈ-ಕಮಲ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ನಾಮಪತ್ರ ಸಲ್ಲಿಕೆ ಮಾಡಿದ ಸ್ಪರ್ಧಿಗಳು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ. ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಯುವ ಉದ್ಯಮಿಯಾಗಿದ್ದು ಒಟ್ಟು 4.25 ಕೋಟಿ ರೂ.ಗೂ ಅಧಿಕ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ಲ್ಲಿ ವಿವರ ನೀಡಿದ್ದಾರೆ. 2.17 ಕೋಟಿ ರೂ. ಮೌಲ್ಯದ ಚರ ಆಸ್ತಿ ಹಾಗೂ 2.08 ಕೋಟಿ ಮೌಲ್ಯದ ಕೃಷಿ ಭೂಮಿ ಸೇರಿದಂತೆ ಸ್ಥಿರ ಆಸ್ತಿಯಿದೆ ಎಂದು ಉಲ್ಲೇಖಿಸಿದ್ದಾರೆ. ಆನೆಕೊಂಡ ಹಾಗು ಬೇತೂರು ಗ್ರಾಮಗಳಲ್ಲಿ ಒಟ್ಟು 6 ಎಕರೆ 14 ಗುಂಟೆ ಕೃಷಿ ಭೂಮಿ ಹೊಂದಿದ್ದು, ಅವರ ಹೆಸರಿನಲ್ಲಿ 8.35 ಲಕ್ಷ ರೂ. ನಗದು ಹಣವಿದೆ. ಅಲ್ಲದೆ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಹಣ ಹಾಗೂ 14.45 ಲಕ್ಷ…
ತಾಲ್ಲೂಕು ಅಧಿಕಾರಿ ಆತ್ಮಹತ್ಯೆ: ಪ್ರಕರಣ ದಾಖಲು ತುಮಕೂರು: ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ. ಮೂಲತಃ ಪಾವಗಡ ತಾಲೂಕಿನ ಗುಂಡರ್ಲಾಹಳ್ಳಿ ಮೂಲದ ಮಲ್ಲಿಕಾರ್ಜುನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಆತ್ಮಹತ್ಯೆಗೆ ಮುನ್ನ ವಿಡಿಯೋ ಮಾಡಿದ್ದು, ಮೇಲಧಿಕಾರಿ ನೀಡಿದ ಕಿರುಕುಳದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಕುಟುಂಬ ಅವರ ಮೇಲೆ ಯಾವುದೇ ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅವರಿಗೆ ದೇವರು ಹಾಗೂ ಕಾನೂನು ಶಿಕ್ಷೆ ನೀಡಲಿದೆ. ನನ್ನ ತಾಯಿ, ಪತ್ನಿ ಮತ್ತು ಮಕ್ಕಳು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ನನಗೆ ಒಳ್ಳೆಯ ಬೆಲೆ ನೀಡಿದ್ದಾರೆ. ನಾನು ಕೂಡ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಸಹಾಯ ಮಾಡಬೇಕಿತ್ತು. ಆದರೆ, ಸಹಾಯ ಮಾಡಲಾಗುತ್ತಿಲ್ಲ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಮಲ್ಲಿಕಾರ್ಜುನ್ ಅವರ ಕುಟುಂಬ ಸಲ್ಲಿಸಿದ ದೂರು ಮತ್ತು ಸೆಲ್ಫಿ ವಿಡಿಯೋ ಆಧಾರದ ಮೇಲೆ, ಜಂಟಿ ನಿರ್ದೇಶಕರ ವಿರುದ್ಧ ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 108…
ಕಗ್ಗಂಟು ಬಿಡಿಸಿದ ‘ಸುರ್ಜೇವಾಲಾ’; ಟಿಕೆಟ್ ಘೋಷಣೆಗೆ ಕೌಂಟ್‌ಡೌನ್ ಬೆಂಗಳೂರು: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಅಂದುಕೊಂಡಂತೆ ನಡೆಯದ ಕಾರಣ ಕಗ್ಗಂಟ್ಟಾಗಿ ಪರಿಣಮಿಸಿತ್ತು. ಸರತಿ ಸಭೆ ನಡೆಸಿದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕೊನೆಗೂ ಎಲ್ಲ ಗೊಂದಲ, ಅಸಮಾಧಾನಕ್ಕೆ ತೆರೆ ಎಳೆದು ಇದೀಗ ಕಗ್ಗಂಟು ಬಿಡಿಸಿದ್ದು, ಟಿಕೆಟ್ ಘೋಷಣೆಗೆ ಕೌಂಟ್ ಡೌನ್ ಶುರುವಾಗಿದೆ ಎಂದಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಾತನಾಡಿದ ಅವರು, ಟಿಕೆಟ್ ವಿಚಾರವಾಗಿ ವ್ಯಾಪಕವಾಗಿ ಚರ್ಚೆ ಮಾಡಲಾಗಿದೆ. ಯಾವುದೇ ಒಬ್ಬ ಕಾರ್ಯಕರ್ತರ ಅಪಸ್ವರ ಇದ್ದರೂ ಕೂಡ ಪರಿಗಣನೆಗೆ ತೆಗೆದುಕೊಂಡಿದ್ದೇವೆ. ಶುಕ್ರವಾರ ತಡರಾತ್ರಿಯವರೆಗೆ ಟಿಕೆಟ್ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಎಲ್ಲರ ಅಭಿಪ್ರಾಯಗಳನ್ನ ಕೇಳಿದ್ದೇವೆ. ಅಂತಿಮವಾಗೊ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಒಳಗೆ ಟಿಕೆಟ್ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು. ಆಕಾಂಕ್ಷಿಗಳು ಸಿಎಂ, ಡಿಸಿಎಂ, ಸುರ್ಜೇವಾಲಾ, ಖರ್ಗೆ ಭೇಟಿ ಆಗಿ ಮಾತನಾಡಿದ್ದಾರೆ. ನಮ್ಮ ವೀಕ್ಷಕರು ಹೋಗಿ ಸರ್ವೇ ಮಾಡಿದ್ದಾರೆ. ಎಲ್ಲರೂ ಉಸ್ತುವಾರಿಗಳಿಗೆ ವರದಿ ಸಲ್ಲಿಸಿದ್ದಾರೆ.…
IPL 2026: ಚಾಂಪಿಯನ್ RCB ತಂಡದ ಬಲ-ವೇಳಾಪಟ್ಟಿ ಪ್ರಕಟ ಮಾ.28ರಿಂದ ಅಭಿಯಾನ ಆರಂಭ – ಮತ್ತೆ ಟ್ರೋಫಿ ಗುರಿ Royal Challengers Bengaluru (RCB) ತಂಡವು IPL 2026ರಿಗಾಗಿ ಸಜ್ಜಾಗಿದ್ದು, ಚಾಂಪಿಯನ್ ತಂಡವಾಗಿ ಮತ್ತೊಮ್ಮೆ ಕಣಕ್ಕಿಳಿಯುತ್ತಿದೆ. ಕಳೆದ ಸೀಸನ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿದ RCB, ಈ ಬಾರಿ ಟ್ರೋಫಿ ಉಳಿಸಿಕೊಳ್ಳುವ ಗುರಿಯೊಂದಿಗೆ ಅಭಿಯಾನ ಆರಂಭಿಸಲಿದೆ. 💪 ತಂಡದ ಬಲ RCB ತಂಡವು ಈ ಬಾರಿ ಸಮತೋಲನ ಹೊಂದಿದ ಸ್ಕ್ವಾಡ್‌ನೊಂದಿಗೆ ಬಲಿಷ್ಠವಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್ ಪ್ರಮುಖ ಆಧಾರವಾಗಿದ್ದು, ಮಧ್ಯಮ ಕ್ರಮದಲ್ಲಿ ಟಿಮ್ ಡೇವಿಡ್, ರೋಮಾರಿಯೊ ಶೆಫರ್ಡ್ ಪವರ್ ಹಿಟ್ಟಿಂಗ್‌ಗೆ ಹೆಸರಾಗಿದ್ದಾರೆ. ಆಲ್‌ರೌಂಡರ್ ವಿಭಾಗದಲ್ಲಿ ಕ್ರುನಾಲ್ ಪಾಂಡ್ಯ ಹಾಗೂ ವೆಂಕಟೇಶ್ ಅಯ್ಯರ್ ತಂಡಕ್ಕೆ ಬೆಂಬಲ ನೀಡಲಿದ್ದಾರೆ. ಬೌಲಿಂಗ್‌ನಲ್ಲಿ ಭುವನೇಶ್ವರ ಕುಮಾರ್ ಮತ್ತು ಜೋಶ್ ಹೇಝಲ್ವುಡ್ ಅನುಭವದ ಶಕ್ತಿ ಹೆಚ್ಚಿಸಲಿದೆ. 👥 ನಾಯಕತ್ವ ತಂಡದ ನಾಯಕತ್ವವನ್ನು ರಾಜತ್ ಪಾಟಿದಾರ್ ವಹಿಸಿಕೊಂಡಿದ್ದು, ಅನುಭವಿ ಆಟಗಾರರ ಜೊತೆ ಯುವ ಪ್ರತಿಭೆಗಳ…
ಆಸ್ತಿಯಲ್ಲಿ ಭಾಗ ಕೇಳಿದ ತಂಗಿಯನ್ನೇ ಕುಡುಗೋಲಿಂದ ಕೊಚ್ಚಿ ಕೊಂದ ಅಣ್ಣ ಧಾರವಾಡ: ತಂದೆಯ ಆಸ್ತಿಯಲ್ಲಿ ನನಗೂ ಭಾಗ ನೀಡಬೇಕೆಂದು ಹಠ ಹಿಡಿದಿದ್ದ ತಂಗಿಯನ್ನು ಅಣ್ಣನೇ ಕುಡುಗೋಲಿನಿಂದ ಕೊಚ್ಚಿಬರ್ಬರವಾಗಿ ಕೊಲೆಮಾಡಿರುವ ದುರ್ಘಟನೆ ಧಾರವಾಡ ಜಿಲ್ಲೆ ಅಮ್ಮಿನಬಾವಿಯಲ್ಲಿ ಯುಗಾದಿ ದಿನದಂದು ನಡೆದಿದೆ. ಹನುಮಂತ ಯಲಿವಾಳ (35) ಕೊಲೆ ಆರೋಪಿ. ಈತನ ತಂಗಿ ಶಿವಲೀಲಾ ಸಂಗೊಳ್ಳಿ (32) ಕೊಲೆಯಾದ ದುರ್ದೈವಿ. ಶಿವಲೀಲಾ ಅವರನ್ನು ಸಮೀಪದ ತಡಕೋಡ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ತಾಯಿ ಸಾವಿನ ಬಳಿಕ ಅಣ್ಣ-ತಂಗಿ ಮಧ್ಯೆ ಆಸ್ತಿ ವಿಚಾರವಾಗಿ ಗಲಾಟೆ ಆಗಿತ್ತು. ಯುಗಾದಿ ದಿನ (ಗುರುವಾರ) ‘ತಂದೆಯ 4 ಎಕರೆ ಹೊಲದಲ್ಲಿ ನನಗೆ 2 ಎಕರೆ ನೀಡಬೇಕು’ ಎಂದು ಹೇಳಿ ಹೊಲದ ಪೂಜೆಗೆ ಹೋಗಿದ್ದಳು. ಈ ವೇಳೆ ಹನುಮಂತ ಹೊಲಕ್ಕೆ ತೆರಳಿ ಕುಡುಗೋಲಿನಿಂದ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಹೈಕಮಾಂಡ್‌ಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ರವಾನೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್‌ಗೆ ಶುಕ್ರವಾರವೇ ಪಟ್ಟಿರವಾನಿಸಿದ್ದೇವೆ. ಅಂತಿಮವಾಗಿ ಅವರು ತೀರ್ಮಾನ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಶುಕ್ರವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮ ಗೊಳಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ನೇತೃತ್ವದ ನಿಯೋಗ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದೆ. ಎಲ್ಲರ ಅಭಿಪ್ರಾಯ ಹಾಗೂ ಪಕ್ಷದ ಆಂತರಿಕ ಸಮೀಕ್ಷೆ ಅನುಸಾರ ಹೈಕಮಾಂಡ್‌ಗೆ ನಮ್ಮ ಪಟ್ಟಿ ಕಳಿಸಿದ್ದೇವೆ. ಅಂತಿಮವಾಗಿ ಅಭ್ಯರ್ಥಿಯನ್ನು ಅವರೇ ಆಯ್ಕೆ ಮಾಡುತ್ತಾರೆ ಎಂದರು
ನೀರಾವರಿಗೆ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ: ಡಿಕೆಶಿದಿಲ್ಲಿ ಸಂಸದರ ಸಭೆಯಲ್ಲಿ ಮಹತ್ವದ ತೀರ್ಮಾನ ಬೆಂಗಳೂರು, ಮಾ.21: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಕೇಂದ್ರದ ಸಹಕಾರ ಪಡೆಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಗುರುವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ರಾಜ್ಯದ ಸಂಸದರ ಸಭೆ ನಡೆಸಲಾಗಿದ್ದು, ಜನತಾ ದಳ (ಸೆಕ್ಯುಲರ್) ಹೊರತುಪಡಿಸಿ ಉಳಿದ ಪಕ್ಷಗಳ 24 ಸಂಸದರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು. ಸಭೆಯಲ್ಲಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ವಿಶ್ಲೇಷಣಾತ್ಮಕ ಚರ್ಚೆ ನಡೆದಿದ್ದು, ಭಾರತೀಯ ಜನತಾ ಪಾರ್ಟಿಯ ಬಹುತೇಕ ಸಂಸದರು ಸಹ ಭಾಗವಹಿಸಿದ್ದರು. ಕೇಂದ್ರ ಸಚಿವರಾದ ವಿ. ಸೋಮಣ್ಣ ಹಾಗೂ ಪ್ರಲ್ಹಾದ್ ಜೋಶಿ ದೂರವಾಣಿ ಮೂಲಕ ಸಭೆಯಲ್ಲಿ ಭಾಗಿಯಾದರು ಎಂದು ತಿಳಿಸಿದರು. ಆಲಮಟ್ಟಿ ಅಣೆಕಟ್ಟು ವಿಚಾರ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ತೊಡಕು ಅಥವಾ ತಡೆಯಾಜ್ಞೆ…
ರಿಷಬ್ ಶೆಟ್ಟಿ – ಹೊಂಬಾಳೆ ಫಿಲಂಸ್ ನಡುವೆ ಬಿರುಕು? ಸೋಷಿಯಲ್ ಮೀಡಿಯಾ ಚಟುವಟಿಕೆ ಬೆನ್ನಿಗೆ ವದಂತಿ ಗಾಳಿ ಬೆಂಗಳೂರು, ಮಾ.21: ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಕಾಂತಾರ ಯಶಸ್ಸಿನ ಜೋಡಿ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ನಡುವೆ ಬಿರುಕು ಮೂಡಿದೆಯೇ ಎಂಬ ಪ್ರಶ್ನೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲಂಸ್ ಮತ್ತು ಕಾಂತಾರ ಚಿತ್ರದ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳನ್ನು ‘ಅನ್‌ಫಾಲೋ’ ಮಾಡಿದ ಘಟನೆ ಈ ವದಂತಿಗಳಿಗೆ ಕಾರಣವಾಗಿದೆ. ಈ ಬೆಳವಣಿಗೆ ಅಭಿಮಾನಿಗಳಲ್ಲಿ ಕುತೂಹಲ ಮತ್ತು ಆತಂಕವನ್ನು ಹೆಚ್ಚಿಸಿದೆ. ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿಗಳ ಪ್ರಕಾರ, ಮುಂದಿನ ಸಿನಿಮಾಗಳ ಆಯ್ಕೆ, ಕ್ರಿಯೇಟಿವ್ ಭಿನ್ನಾಭಿಪ್ರಾಯಗಳು ಹಾಗೂ ಹೊಸ ನಿರ್ಮಾಣ ಸಂಸ್ಥೆಗಳ ಜೊತೆಗಿನ ಒಪ್ಪಂದಗಳು ಈ ಅಸಮಾಧಾನಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಆದರೆ, ಈ ಎಲ್ಲಾ ವಿಚಾರಗಳ ನಡುವೆ ಗಮನಾರ್ಹ ಸಂಗತಿಯೆಂದರೆ ರಿಷಬ್ ಶೆಟ್ಟಿ ಅವರು ಹೊಂಬಾಳೆ ಸಂಸ್ಥೆಯ ಮುಖ್ಯಸ್ಥರನ್ನು ಇನ್ನೂ ಫಾಲೋ ಮಾಡುತ್ತಿರುವುದು. ಇದರಿಂದ…
ಗ್ರಹಣ ಹಿಡಿದ ಭದ್ರಾ ಮೇಲ್ದಂಡೆಗೆ ಚಂದ್ರ ದರ್ಶನ ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಸುದೀರ್ಘ ಕಾಲ ಹಿಡಿದಿದ್ದ ಗ್ರಹಣವನ್ನು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯಿಂದ ನಿವಾರಣೆಯಾಗಿದೆ. ಶುಕ್ರವಾರ ದೆಹಲಿಯಲ್ಲಿ ನಡೆದ ತಾಂತ್ರಿಕ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭದ್ರಾ ಮೇಲ್ದಂಡೆ ಪರಿಷ್ಕೃತ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದೆ. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಸಂಕಲ್ಪ ಹೊತ್ತ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಯುಗಾದಿ ಹಬ್ಬವನ್ನು ಲೆಕ್ಕಿಸದೆ ಹಬ್ಬದ ಸಂದರ್ಭದಲ್ಲಿ 2ದಿನ ಮುಂಚಿತವಾಗಿ ದೆಹಲಿಗೆ ತೆರಳಿ ಸಂಬಂಧಪಟ್ಟ ಹಲವಾರು ರಾಷ್ಟ್ರೀಯ ನಾಯಕರು, ಕೇಂದ್ರ ಸಚಿವರುಗಳೊಂದಿಗೆ ಎಡಬಿಡದೆ ರಾಜ್ಯದ ಅನೇಕ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ ಪರಿಣಾಮ ಭದ್ರಾ ಮೇಲ್ದಂಡೆ ಯೋಜನೆ ಪರಿಷ್ಕೃತ ಪ್ರಸ್ತಾವನೆಗೆ ತಾಂತ್ರಿಕ ನೀರಾವರಿ ಸಲಹಾ ಸಮಿತಿಯಲ್ಲಿ ಅನುಮೋದನೆ ದೊರತಿದೆ. ಇನ್ನೂ 2 ಹಂತದಲ್ಲಿ ಅಂದರೆ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಬೋರ್ಡ್ ( PIB) ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಬೇಕಾಗಿದೆ. ಈ 2 ಹಂತಗಳಲ್ಲೂ…
ಯುಗಾದಿ ಹಬ್ಬದಲ್ಲಿ ಚಂದ್ರ ದರ್ಶನದ ನಂತರ ಪಠಿಸಬೇಕಾದ ಮಂತ್ರ – ಧಾರ್ಮಿಕ ಹಿನ್ನಲೆ ಧಾರ್ಮಿಕ ವಿಶೇಷ: ಯುಗಾದಿ ಹಬ್ಬವು ಕನ್ನಡ ಹಾಗೂ ದಕ್ಷಿಣ ಭಾರತದ ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಈ ದಿನ ಪಂಚಾಂಗ ಪಠಣ, ಬೇವು-ಬೆಲ್ಲ ಸೇವನೆ ಜೊತೆಗೆ ಕೆಲಡೆ ಚಂದ್ರ ದರ್ಶನಕ್ಕೂ ವಿಶೇಷ ಮಹತ್ವ ನೀಡಲಾಗುತ್ತದೆ. ಚಂದ್ರ ದರ್ಶನದ ನಂತರ ಪಠಿಸಬೇಕಾದ ಮಂತ್ರ: “ದಧಿಶಂಖ ತುಷಾರಾಭಂ ಕ್ಷೀರೋದಾರ್ಣವ ಸಂಭವಂ ನಮಾಮಿ ಶಶಿನಂ ಸೋಮಂ ಶಂಭೋರ್ಮಕುಟ ಭೂಷಣಂ॥” ಅಥವಾ “ಓಂ ಶ್ರಾಂ ಶ್ರೀಂ ಶ್ರೌಂ ಸಃ ಚಂದ್ರಾಯ ನಮಃ॥” ಮಂತ್ರದ ಅರ್ಥ: ಈ ಮಂತ್ರವು ಚಂದ್ರನನ್ನು ಹಾಲಿನಂತೆ ಶ್ವೇತವರ್ಣ, ಶಾಂತಸ್ವಭಾವ ಹಾಗೂ ಶೀತಳತೆಯ ಪ್ರತೀಕವಾಗಿ ಕೊಂಡಾಡುತ್ತದೆ. ಈ ಮಂತ್ರ ಪಠಿಸುವುದರಿಂದ ಮನಸ್ಸಿಗೆ ಶಾಂತಿ, ಆರೋಗ್ಯ ಹಾಗೂ ಸೌಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಧಾರ್ಮಿಕ ಹಿನ್ನಲೆ: ಹಿಂದೂ ಧರ್ಮದಲ್ಲಿ ಚಂದ್ರನನ್ನು ಚಂದ್ರ ದೇವ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನು ಮನಸ್ಸಿನ ಅಧಿಪತಿಯಾಗಿದ್ದು, ವ್ಯಕ್ತಿಯ ಭಾವನೆಗಳು ಮತ್ತು ಚಿಂತನೆಗಳ ಮೇಲೆ…
Subscribe to Updates
Get the latest creative news from FooBar about art, design and business.