Author: ಮೃತ್ಯುಂಜಯಾಚಾರ್ ಬಿ

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

ಪಿಯು ಆಡಳಿತ ಪ್ರಸ್ತಾವ ಹಿಂಪಡೆದು ಉಪನ್ಯಾಸಕರಿಗೆ ಭರವಸೆ: ಮೌಲ್ಯಮಾಪನ ಬಹಿಷ್ಕಾರ ಹಿಂಪಡೆದ ಸಂಘಟನೆ ಪಿಯು ಆಡಳಿತ ನಿಯಂತ್ರಣವನ್ನು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ವಹಿಸುವ ಪ್ರಸ್ತಾವನೆಯನ್ನು ಸದ್ಯಕ್ಕೆ ಕೈಬಿಟ್ಟಿರುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ನೀಡಿದ ಭರವಸೆಯನ್ನು ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಸ್ವಾಗತಿಸಿದೆ. ಸಂಘದ ಜಿಲ್ಲಾಧ್ಯಕ್ಷ ಬಿ.ಆರ್. ಮಲ್ಲೇಶ್ ಅವರು ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದು, ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆ ಗುಣಮಟ್ಟದ ಶಿಕ್ಷಣದಲ್ಲಿ ತನ್ನದೇ ಆದ ಅಸ್ತಿತ್ವ ಹೊಂದಿದೆ ಎಂದು ತಿಳಿಸಿದ್ದಾರೆ. ಪಿಯು ಇಲಾಖೆ ನಿಯಂತ್ರಣವನ್ನು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ವರ್ಗಾಯಿಸುವ ಪ್ರಸ್ತಾವಕ್ಕೆ ವಿರೋಧವಾಗಿ ಸಂಘಟನೆಗಳು ಮೌಲ್ಯಮಾಪನ ಬಹಿಷ್ಕಾರಕ್ಕೆ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಮಾರ್ಚ್ 12ರಂದು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದು, ಸರ್ಕಾರವು ಈ ಪ್ರಸ್ತಾವ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಉಪನ್ಯಾಸಕರ ಐದು ಬೇಡಿಕೆಗಳ ಬಗ್ಗೆ ಸಕಾರಾತ್ಮಕ…

Read More

ಕರ್ನಾಟಕದಲ್ಲಿ ಯುಗಾದಿ ಹಬ್ಬ: ಆಚರಣೆ, ಊಟ ಮತ್ತು ಸಂಪ್ರದಾಯ – ಸಂಕ್ಷಿಪ್ತ ಮಾಹಿತಿ ಕರ್ನಾಟಕದಲ್ಲಿ ಸಂಭ್ರಮದಿಂದ ಆಚರಿಸಲಾಗುವ ಯುಗಾದಿ ಹಬ್ಬವು ಕನ್ನಡ ಹೊಸ ವರ್ಷದ ಆರಂಭದ ಸಂಕೇತವಾಗಿದೆ. ಚೈತ್ರ ಮಾಸದ ಶುಕ್ಲ ಪಾಡ್ಯಮಿ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದಂದು ಮನೆಗಳನ್ನು ಸ್ವಚ್ಛಗೊಳಿಸಿ, ಬಾಗಿಲಿಗೆ ಮಾವಿನ ಎಲೆಗಳ ತೋರಣ ಕಟ್ಟಲಾಗುತ್ತದೆ. ಬೆಳಿಗ್ಗೆ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ದೇವರ ಪೂಜೆ ಮಾಡುವುದು ಪ್ರಮುಖ ಸಂಪ್ರದಾಯವಾಗಿದೆ. ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯಲಾಗುತ್ತದೆ. ಯುಗಾದಿಯ ವಿಶೇಷ ಆಹಾರಗಳಲ್ಲಿ ಯುಗಾದಿ ಪಚಡಿ, ಹೋಳಿಗೆ (ಒಬ್ಬಟ್ಟು), ಪಾಯಸ, ಕೋಸಂಬರಿ ಪ್ರಮುಖವಾಗಿವೆ. ಯುಗಾದಿ ಪಚಡಿ ಆರು ರುಚಿಗಳನ್ನು ಹೊಂದಿದ್ದು, ಜೀವನದ ಸುಖ-ದುಃಖಗಳ ಪ್ರತೀಕವಾಗಿದೆ. ಹಬ್ಬದಂದು ಪಂಚಾಂಗ ಶ್ರವಣ ನಡೆಸಲಾಗುತ್ತಿದ್ದು, ಹೊಸ ವರ್ಷದ ಭವಿಷ್ಯ, ಮಳೆಯ ಸ್ಥಿತಿ ಹಾಗೂ ಕೃಷಿ ಫಲಿತಾಂಶಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕುಟುಂಬದೊಂದಿಗೆ ಊಟ ಮಾಡಿ, ಬಂಧು-ಬಳಗದೊಂದಿಗೆ ಶುಭಾಶಯ ವಿನಿಮಯ ಮಾಡುವ ಮೂಲಕ ಯುಗಾದಿ ಹಬ್ಬವು ಸಾಂಸ್ಕೃತಿಕ ಮತ್ತು ಸಾಮಾಜಿಕ ಬಾಂಧವ್ಯವನ್ನು…

Read More

ನಿಮ್ಮ ಜತೆ ನಾವಿದ್ದೇವೆ; ತಿಪ್ಪೇಸ್ವಾಮಿಗೆ ಸಮಾನ ಮನಸ್ಕ ಪತ್ರಕರ್ತರ ಅಭಯ ನಿಸ್ವಾರ್ಥ ಹೋರಾಟಕ್ಕೆ ಸದಾ ಬೆಂಬಲ – ಆರೋಗ್ಯದತ್ತ ಗಮನಹರಿಸಿ – ನೀರಿನ ವಿಚಾರದಲ್ಲಿ ನಾವು ಧ್ವನಿ ಆಗುತ್ತೇವೆ ಚಿತ್ರದುರ್ಗ: ನಿಮ್ಮ ಜತೆ ನಾವಿದ್ದೇವೆ, ಯಾವುದೇ ಹಂತದಲ್ಲೂ ಎದೆಗುಂದ ಬೇಡಿ, ನಿಸ್ವಾರ್ಥ ಹೋರಾಟಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತೇವೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಅವರಿಗೆ ಸಮಾನ ಮನಸ್ಕ ಪತ್ರಕರ್ತರ ತಂಡ ವಿಶ್ವಾಸ ತುಂಬಿತು. ಹಿರಿಯೂರು ತಾಲ್ಲೂಕಿನ ಬೀರನಹಳ್ಳಿ ತಮ್ಮ ನಿವಾಸಕ್ಕೆ ಪತ್ರಕರ್ತರು, ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ತಂಡದ ಸದಸ್ಯರು, ಮೊದಲು ನಿಮ್ಮ ಆರೋಗ್ಯದತ್ತ ಗಮನಹರಿಸಿ, ನೀರಿನ ವಿಚಾರದಲ್ಲಿ ನಾವು ಧ್ವನಿ ಆಗುತ್ತೇವೆ ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಜಿಲ್ಲೆಯ ಬಹುತೇಕ ಪತ್ರಕರ್ತರು ಹೋರಾಟದ ಮನಸ್ಸುಳ್ಳವರು. ನನ್ನ ಆರೋಗ್ಯ ಕುರಿತು ಕಾಳಜಿ ವಹಿಸಿ ದೂರದಿಂದ ನಿವಾಸಕ್ಕೆ ಭೇಟಿ ನೀಡಿರುವುದು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ನಿಮ್ಮ ಈ ಪ್ರೀತಿಗೆ ಸದಾ ಚಿರಋಣಿ…

Read More

*ಗಮನ ಸೆಳೆಯುವ ಸೂಚನೆಗಳಿಗೆ ನಿಗದಿತ ಸಮಯದಲ್ಲಿ ಉತ್ತರ ನೀಡವಂತೆ ಅಧಿಕಾರಿಗಳಿಗೆ ಸೂಚಿನೆ – ಸಭಾಧ್ಯಕ್ಷ ಯು.ಟಿ. ಖಾದರ್* ವಿಧಾನಸಭೆಯ ಕಲಾಪದಲ್ಲಿ ಸರ್ಕಾರದ ಗಮನ ಸೆಳೆಯಲು ಶಾಸಕರುಗಳು ಪ್ರಶ್ನೆಗಳನ್ನು ಸಲ್ಲಿಸುತ್ತಾರೆ. ಆದರೆ ನಿಗದಿತ ಸಮಯದಲ್ಲಿ ಉತ್ತರಗಳನ್ನು ಇಲಾಖೆಗಳು ಸಲ್ಲಿಸುತ್ತಿಲ್ಲ . ಮುಂದಿನ ದಿನಗಳಲ್ಲಿ ನಿಗದಿತ ಸಮಯಕ್ಕೆ ಉತ್ತರಗಳನ್ನು ನೀಡುವಂತೆ ಸಭಾಧ್ಯಕ್ಷ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ವಿಧಾನಸಭೆಯ ಕಲಾಪದ ವೇಳೆ ವಿವಿಧ ಇಲಾಖೆಗಳು ನಿಗದಿತ ಸಮಯಕ್ಕೆ ಉತ್ತರಗಳನ್ನು ನೀಡುತ್ತಿಲ್ಲ. ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಉತ್ತರಗಳು ಸಲ್ಲಿಸಲ್ಪಟ್ಟಿವೆ ಎಂದು ಸದನಕ್ಕೆ ವಿವರಿಸಿದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 22 ಗಮನ ಸೆಳೆಯುವ ಸೂಚನೆಗೆ 6 ಉತ್ತರಗಳನ್ನು, ಆರ್ಥಿಕ ಇಲಾಖೆ 33ಕ್ಕೆ 6 ಉತ್ತರಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇಲಾಖೆ 9ಕ್ಕೆ ಒಂದು ಉತ್ತರ ನೀಡಿರುವುದಿಲ್ಲ, ಯುವ ಸಬಲೀಕರಣ ಇಲಾಖೆ 10ಕ್ಕೆ ಒಂದೂ ಉತ್ತರ ನೀಡಿಲ್ಲ. ಸಹಕಾರ ಇಲಾಖೆ 12ಕ್ಕೆ ಒಂದೂ ಉತ್ತರ ನೀಡಿಲ್ಲ. ವಾರ್ತಾ ಮತ್ತು…

Read More

ವಿಧಾನಸಭೆಯಲ್ಲಿ ವಿಧೇಯಕಗಳ ಅಂಗೀಕಾರ 2026ನೇ ಸಾಲಿನ ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕವನ್ನು ಗೃಹ ಸಚಿವ ಡಾ: ಜಿ.ಪರಮೇಶ್ವರ್ ಅವರು ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಕೋರಿದರು. ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖವಾದ ‘ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕ, 2026’ ಅನ್ನು ಮಂಡಿಸಿದರು ಈ ವಿಧೇಯಕದ ಪ್ರಮುಖ ಅಂಶಗಳು : ವರ್ಗಾವಣೆ ಅಧಿಕಾರದಲ್ಲಿ ಬದಲಾವಣೆ ಈ ವಿಧೇಯಕದ ಮುಖ್ಯ ಉದ್ದೇಶವೆಂದರೆ, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತಮ್ಮ ಕೆಳಗಿನ ಅಧಿಕಾರಿಗಳ ಮೇಲೆ ಹೆಚ್ಚಿನ ಶಿಸ್ತಿನ ನಿಯಂತ್ರಣವನ್ನು ನೀಡುವುದು. ಡೈರೆಕ್ಟ್ ಆಕ್ಷನ್: ಕರ್ತವ್ಯ ಲೋಪ, ದುರ್ನಡತೆ ಅಥವಾ ಅಶಿಸ್ತು ತೋರುವ ಡಿವೈಎಸ್ಪಿ (DySP) ಶ್ರೇಣಿಯವರೆಗಿನ ಅಧಿಕಾರಿಗಳನ್ನು ಸರ್ಕಾರದ ಪೂರ್ವಾನುಮತಿಗಾಗಿ ಕಾಯದೆ ನೇರವಾಗಿ ವರ್ಗಾವಣೆ ಮಾಡುವ ಅಧಿಕಾರವನ್ನು ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಬೋರ್ಡ್ (PEB) ಗೆ ನೀಡಲು ಉದ್ದೇಶಿಸಲಾಗಿದೆ. ಕನಿಷ್ಠ ಅವಧಿಯ ವಿನಾಯಿತಿ: ಈ ಮೊದಲು ಯಾವುದೇ ಅಧಿಕಾರಿಯನ್ನು ವರ್ಗಾಯಿಸಲು ಕನಿಷ್ಠ ಎರಡು ವರ್ಷಗಳ ಕಾಲಾವಕಾಶ ಇರಬೇಕಿತ್ತು. ಆದರೆ ಹೊಸ…

Read More

ಚಿತ್ರದುರ್ಗ. ಪತಿ-ಪತ್ನಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ ಚಿತ್ರದುರ್ಗ: ನಗರದ ಬುದ್ಧ ವೃತ್ತದ ಬಳಿ ವ್ಯಕ್ತಿಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಈ ದಾಳಿ ನಡೆದಿರುವುದು ತಿಳಿದುಬಂದಿದೆ. ಗಾಯಾಳುವಾದ ತಾಜ್ ಪೀರ್ (42) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ದಾವಣಗೆರೆಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ಚಿತ್ರದುರ್ಗದ ಸ್ಟೇಡಿಯಂ ರಸ್ತೆಯಲ್ಲಿರುವ ಬುದ್ಧ ವೃತ್ತದ ಬಳಿ ನಡೆದಿದೆ. ಸಾದಿಕ್ ವುಲ್ಲಾ ಎಂಬಾತ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿ. ಪತಿ-ಪತ್ನಿಯ ಜಗಳವನ್ನು ಬಿಡಿಸಲು ಬಂದಿದ್ದ ತಾಜ್ ಪೀರ್ ಮೇಲೆ ಏಕಾಏಕಿ ಸಾದಿಕ್ ವುಲ್ಲಾ ಮಚ್ಚಿನಿಂದ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಗಲಾಟೆಯನ್ನು ಬಿಡಿಸಲು ಬಂದ ಜನರ ಮೇಲೂ ಮಚ್ಚಿನಿಂದ ಹಲ್ಲೆ ಮಾಡಲು ಆರೋಪಿ ಯತ್ನಿಸಿದ್ದಾನೆ. ಬಳಿಕ ಗಾಯಾಳುವನ್ನು ಎಳೆದುಕೊಂಡು ಹೋಗಿ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಪ್ರಕರಣ ಸಂಬಂಧ…

Read More

*ಅಕ್ರಮ ಗ್ಯಾಸ್ ರೀಪಿಲ್ಲಿಂಗ್: ಗ್ಯಾಸ್ ಏಜಂಸ್ಸಿ ಅಂಗಡಿಯ ಮೇಲೆ ಪ್ರಕರಣ ದಾಖಲು* ಗೃಹಬಳಕೆ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿದ್ದಲ್ಲಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲು ಮಾನ್ಯ ಸಚಿವರು ಸೂಚಿಸಿದ್ದು ಅದರಂತೆ ಗೃಹ ಬಳಕೆ ಸಿಲಿಂಡರ್ಗ ಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದ ಬೆಂಗಳೂರಿನ ಪಿಣ್ಯ ದಲ್ಲಿ 45, ಚಿಕ್ಕಜಾಲದಲ್ಲಿ 209 ಶಿವಮೊಗ್ಗ ಜಿಲ್ಲೆಯಲ್ಲಿ 3 ,ಯಾದಗಿರಿ ಜಿಲ್ಲೆಯಲ್ಲಿ 46 ದಾವಣಗರೆ 13 ಅಗತ್ಯ ವಸ್ತುಗಳ ಕಾಯ್ದೆ 1955 ರ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿ ವಶಪಡಿಸಿಕೊಳ್ಳಲಾಗಿದೆ ಹಾಗೆಯೇ ಕೋಲಾರ ಜಿಲ್ಲೆಯ ಕೆಜಿಎಪ್ ನಲ್ಲಿ ಅಕ್ರಮ ರೀಪಿಲ್ಲಿಂಗ್ ನಡೆಸುತ್ತಿದ್ದ ಗ್ಯಾಸ್ ಏಜಂಸ್ಸಿ ಅಂಗಡಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಒಟ್ಟು ಶೇ 20% ಸಿಲಿಂಡರ್ ಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚನೆಗಳಂತೆ ಆಸ್ಪತ್ರೆ, ಶಾಲಾ ,ಶಿಕ್ಷಣ ಸಂಸ್ಥೆಗಳು ,ವಿಮಾನ ನಿಲ್ದಾನ,ರೈಲು ನಿಲ್ದಾಣ, ಬಸ್ ನಿಲ್ದಾಣ ಗಳ ಕ್ಯಾಂಟಿನ ಗಳಿಗೆ ಪ್ರಮುಖ ದೇವಸ್ಥಾನದ ಗಳಲ್ಲಿ ಪ್ರಸಾದ ವಿನಿಯೋಗ ಮಾಡಲು ಮತ್ತು ಸರ್ಕಾರಿ ಕಛೇರಿಗಳಲ್ಲಿ…

Read More

ಡಿಸಿ ಸಹಿ ನಕಲಿ ಮಾಡಿ ₹15 ಲಕ್ಷ ವಂಚನೆ ಯತ್ನ: ಐವರು ಬಂಧನ ಚಿತ್ರದುರ್ಗ, ಮಾ.13: ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳ ಸಹಿಯನ್ನು ನಕಲಿ ಮಾಡಿ ₹15 ಲಕ್ಷ ಹಣ ವಂಚನೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಐವರನ್ನು ಚಿತ್ರದುರ್ಗ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಸೈಯ್ಯದ್ ಸಾಧಿಕ್ ಹಾಗೂ FDA ವೆಂಕಟೇಶ್ ನೇತೃತ್ವದ ತಂಡ ಈ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಜಿಲ್ಲಾ ನಗರಾಭಿವೃದ್ಧಿ ಕೋಶದ CLTC ವಿಭಾಗದ ಹೊರ ಗುತ್ತಿಗೆ ಸಿಬ್ಬಂದಿಗಳ ಗೌರವಧನ ಬಿಡುಗಡೆ ಮಾಡುವ ನೆಪದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಲು ಯತ್ನಿಸಿದ್ದರು. ಮಾರ್ಚ್ 12ರಂದು ಬೆಳಗ್ಗೆ ಆರೋಪಿಗಳು ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶಿಸಿ ಸುಮಾರು ₹15 ಲಕ್ಷ ಬಾಕಿ ವೇತನದ ಬಿಲ್ ಡ್ರಾ ಮಾಡಲು ನಕಲಿ ದಾಖಲೆಗಳನ್ನು ಸಿದ್ಧಪಡಿಸಿದ್ದರು. ಎಡಿಸಿ ಕಚೇರಿಯ ಡಿಜಿಟಲ್ ಸಿಗ್ನೇಚರ್ ಅನ್ನು ಪೋರ್ಜರಿ ಮಾಡಿದ್ದಲ್ಲದೇ, ಜಿಲ್ಲಾಧಿಕಾರಿ ಟಿ.…

Read More

ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ: ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮತದಾರರ ಪಟ್ಟಿ ಮ್ಯಾಪಿಂಗ್: ಮಾರ್ಚ್ 20ರ ಗಡುವು ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ (ಎಸ್‍ಐಆರ್)-2026ರ ಸಂಬಂಧ ಬಾಕಿ ಇರುವ ಮತದಾರರ ಪಟ್ಟಿಗಳ ಮ್ಯಾಪಿಂಗ್ ಕಾರ್ಯವನ್ನು ಇದೇ ಮಾರ್ಚ್ 20ರೊಳಗಾಗಿ ಶೇ.100ರಷ್ಟು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದ್ದಾರೆ. 2002ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವ ಪ್ರಕ್ರಿಯೆಯು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಪ್ರಗತಿಯಲ್ಲಿದೆ. 2025ರ ಸೆಪ್ಟೆಂಬರ್ ಮಾಹೆಯಿಂದ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‍ಒ) ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಮತಗಟ್ಟೆ ಮಟ್ಟದ ಅಧಿಕಾರಿಗಳು ಶೇ.50 ರಿಂದ 80ರಷ್ಟು ಪೂರ್ಣಗೊಳಿಸಿದ್ದು, ಇನ್ನೂ ಬಾಕಿ ಇರುವ ಮತದಾರರ ಮ್ಯಾಪಿಂಗ್ ಕಾರ್ಯವನ್ನು ಇದೇ ಮಾರ್ಚ್ 20ರೊಳಗಾಗಿ ಶೇ.100ರಷ್ಟು ಪೂರ್ಣಗೊಳಿಸಬೇಕು. ಮತದಾರರ ಪಟ್ಟಿಗಳ ಮ್ಯಾಪಿಂಗ್ ಕಾರ್ಯವನ್ನು ಬಾಕಿ ಉಳಿಸಿಕೊಂಡು ನಿರ್ಲಕ್ಷ್ಯ ತೋರುವ ಮತಗಟ್ಟೆ ಮಟ್ಟದ ಅಧಿಕಾರಿಗಳ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯ್ದೆಯಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು…

Read More