Author: ಮೃತ್ಯುಂಜಯಾಚಾರ್ ಬಿ
ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.
*ಮರೆಯಾಗುತ್ತಿರುವ ಹರಿಕಥೆ: ಭಕ್ತಿಯ ಹೆಸರಿನಲ್ಲಿ ಮರೆತುಹೋಗುತ್ತಿರುವ ಸಾಂಸ್ಕೃತಿಕ ಪರಂಪರೆ* *ಆಧುನಿಕತೆಯ ಅಲೆಗಳಲ್ಲಿ ಮುಳುಗುತ್ತಿರುವ ಹರಿಕಥೆ ಪರಂಪರೆ: ಪತ್ರಕರ್ತ ಸಿ.ಎನ್ ಕುಮಾರ್ ಕಳವಳ* *ಮಡಿಲು ಸಂಸ್ಥೆ ವತಿಯಿಂದ ಹರಿಕಥೆ ಆಯೋಜನೆ* ಹೊಳಲ್ಕೆರೆ: ಹರಿಕಥೆ ಕಥೆ ಹೇಳುವಿಕೆ, ಸಂಗೀತ, ನೃತ್ಯ ಮತ್ತು ನಾಟಕೀಯ ಅಭಿನಯಗಳ ಸಮನ್ವಯದಿಂದ ರೂಪುಗೊಂಡಿರುವ ವಿಶಿಷ್ಟ ಹಿಂದೂ ಸಾಂಪ್ರದಾಯಿಕ ಕಲೆ. ಹರಿಯ ಕಥೆ ಎಂಬ ಅರ್ಥವನ್ನು ಹೊಂದಿರುವ ಈ ಕಲೆಯ ಪ್ರಧಾನ ಉದ್ದೇಶ ಜನರಲ್ಲಿ ಭಕ್ತಿ, ನೀತಿ ಮತ್ತು ಧರ್ಮಬೋಧನೆಯನ್ನು ಬೆಳೆಸುವುದಾಗಿದೆ. ಸರಳ ಭಾಷೆ, ಸಂಗೀತಾತ್ಮಕ ವಾಚನ ಹಾಗೂ ಹಾಸ್ಯ–ವ್ಯಂಗ್ಯದ ಸ್ಪರ್ಶದಿಂದ ಕಥೆಯನ್ನು ಜೀವಂತಗೊಳಿಸುವ ಹರಿಕಥೆ, ಗ್ರಾಮೀಣ ಜನಜೀವನದೊಂದಿಗೆ ಬೆಸೆದುಕೊಂಡು ಜನಮನ ಗೆದ್ದಿದೆ ಎಂದು ಹಿರಿಯ ಪತ್ರಕರ್ತರಾದ ಸಿ. ಎನ್ ಕುಮಾರ್ ಹೇಳಿದರು. ತಾಲೂಕಿನ ಮಲ್ಲಾಡಿಹಳ್ಳಿ ಸೇವಾಶ್ರಮದ ಸಭಾಂಗಣದಲ್ಲಿ ಶನಿವಾರ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ ಆಯೋಜಿಸಿದ ಹರಿಕಥೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಮಾನ್ಯವಾಗಿ ಏಕವ್ಯಕ್ತಿ ಪ್ರದರ್ಶನವಾಗುವ ಹರಿಕಥೆಯಲ್ಲಿ ಕಥನಕಾರರನ್ನು ‘ದಾಸ’ ಅಥವಾ…
ಬೆಂಗಳೂರು : ಹೃದಯಾಘಾತದಿಂದ ಸ್ಯಾಂಡಲ್ ವುಡ್ ಖ್ಯಾತ ಚಿತ್ರ ನಿರ್ದೇಶಕ ಜೋ ಸೈಮನ್ ನಿಧನರಾಗಿದ್ದಾರೆ. ಆ ಮೂಲಕ ಖ್ಯಾತ ಕನ್ನಡದ ಚಲನಚಿತ್ರ ನಿರ್ದೇಶಕ ಜೋ ಸೈಮನ್ ಇನ್ನಿಲ್ಲವಾಗಿದ್ದಾರೆ. ಇಂದು ಖ್ಯಾತ ಸ್ಯಾಂಡಲ್ ವುಡ್ ನಿರ್ದೇಶಕ ಜೋ ಸೈಮನ್ ಅವರು ಹೃದಯಾಘಾತದಿಂದ ದಿಢೀರ್ ಕುಸಿದು ಬಿದ್ದಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
*ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಬಜೆಟ್‌ನಲ್ಲಿ ಕನಿಷ್ಟ 15 ಸಾವಿರ ಕೋಟಿ ನೀಡಲಿ : ಪ್ರತಿಪಕ್ಷ ನಾಯಕ ಅಶೋಕ್ ಆಗ್ರಹ* *ಹಿಂದುಳಿಯುವಿಕೆಗೆ ಕಾಂಗ್ರೆಸ್, ಸಿದ್ದರಾಮಯ್ಯ ನೇರ ಹೊಣೆ ; ಈಗ ದಂಡ ನಿಮ್ಮ ಕೈನಲ್ಲೇ ಇದೆ, ಲೋಪ ಸರಿಪಡಿಸಿ* *ತಾರತಮ್ಯ ನಿವಾರಿಸಲು ಹೆಚ್ಚು ಅನುದಾನ ನೀಡಿದ ಸಿಎಂ ಎಂಬ ಎದೆಗಾರಿಕೆ ತೋರಿಸಿ ಎಂದು ಸವಾಲು* *ಅನುದಾನದ ಸದ್ಭಳಕೆಗೆ ನಿಗಾ ಮತ್ತು ಮೌಲ್ಯಮಾಪನ ವಿಶೇಷ ಘಟಕ ಸ್ಥಾಪನೆಗೂ ಅಶೋಕ್ ಒತ್ತಾಯ* *ಬೆಂಗಳೂರು :* ಮುಂದಿನ ಬಜೆಟ್‌ನಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಪ್ರೊ. ಗೋವಿಂದರಾವ್ ಸಮಿತಿ ಶಿಫಾರಸ್ಸುಗಳ ಅನುಷ್ಟಾನಕ್ಕಾಗಿ ಕನಿಷ್ಟ 15 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಹೆಚ್ಚು ಅವಧಿ ಅಧಿಕಾರದಲ್ಲಿದಿದ್ದುಕಾಂಗ್ರೆಸ್ ಪಕ್ಷ. ಅತಿ ಹೆಚ್ಚು ಬಜೆಟ್ ಮಂಡಿಸಿರುವುದು ಸಿದ್ದರಾಮಯ್ಯ. ಹೀಗಾಗಿ ಪ್ರಾದೇಶಿಕ ಅಸಮತೋಲನಕ್ಕೆ ಅವರೇ ಕಾರಣ. ಈಗ ಆ ತಪ್ಪನ್ನು ಸರಿಪಡಿಸಲು ಬಜೆಟ್‌ನಲ್ಲಿ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಪೊಲೀಸ್ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಕಾನ್ಸ್ ಟೇಬಲ್ ನಿಂದ ಎಎಸ್ಐ ದರ್ಜೆಯ ಸಿಬ್ಬಂದಿಗೆ ವಿಶೇಷ ರಜೆ ಮಂಜೂರು ಮಾಡಲಾಗಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಂದ ಸುತ್ತೋಲೆ ಹೊರಡಿಸಲಾಗಿದ್ದು, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ಕಡ್ಡಾಯವಾಗಿ ರಜೆ ನೀಡಬೇಕು. ಅರ್ಜಿ ಸಲ್ಲಿಸಿದರೇ ಕಡ್ಡಾಯವಾಗಿ ರಜೆ ನೀಡಬೇಕು ಎಂಬುದಾಗಿ ಸೂಚಿಸಿದ್ದಾರೆ. ರಾಜ್ಯದ ಕಾನ್ಸ್ ಟೇಬಲ್ ನಿಂದ ಎಎಸ್ಐ ದರ್ಜೆಯ ಸಿಬ್ಬಂದಿಗಳಿಗೆ ಹುಬ್ಬುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷ ರಜೆಯನ್ನು ಕಡ್ಡಾಯವಾಗಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆಯಲ್ಲಿ ಖಡಕ್ ಸೂಚನೆ ನೀಡಿದ್ದಾರೆ.
ಕೊಪ್ಪಳ ಹಣ್ಣು ಮೇಳದಲ್ಲಿ ಕೇಜಿಗೆ ₹15 ಲಕ್ಷದ ಅಣಬೆ ಪ್ರದರ್ಶನ ಕೊಪ್ಪಳ: ಇದು, ಅಂತಿಂಥ ಅಣಬೆಯಲ್ಲ, ಜಗತ್ತಿನ ದುಬಾರಿ ಅಣಬೆಯಾಗಿದೆ. ಯರ್ಸಗುಂಬಾ (yarsagumba) ಎಂದು ಕರೆಯಲ್ಪಡುವ ಈ ಅಣಬೆ ಕೆಜಿಗೆ ಬರೋಬ್ಬರಿ ₹15 ಲಕ್ಷ. ಇಂಥ ಅಣಬೆ ಕೊಪ್ಪಳ ನಗರದ ತೋಟಗಾರಿಕಾ ‘ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿರುವ ಹಣ್ಣು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಇಡಲಾಗಿದ್ದು, ಜನರ ಗಮನ ಸೆಳೆಯುತ್ತಿದೆ. ಏನು ವಿಶೇಷ?: ಹಿಮಾಲಯ ಪರ್ವತ ಹಾಗೂ ನೇಪಾಳದಲ್ಲಿ ಮಾತ್ರ ಬೆಳೆಯುವ ಅಣಬೆ ಇದು. ಇದು ದೇಹದ ಶಕ್ತಿ, ರೋಗ ನಿರೋಧಕ ಶಕ್ತಿ ಮತ್ತು ಮೆದುಳಿನ ಕಾರ್ಯಚಟುವಟಿಕೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾನ್ಸರ್‌ಗಡ್ಡೆಯ ಬೆಳವಣಿಗೆ ತಡೆಯುತ್ತದೆ. ಔಷಧಿಯ ಗುಣ ಹೊಂದಿರುವುದು ಅಲ್ಲದೆ ಹಿಮಾಲಯದ ವಯಾಗ್ರ ಎಂದೇ ಇದನ್ನು ಕರೆಯಲಾಗುತ್ತದೆ.
ಕೇದಾರ ಪೀಠಕ್ಕೆ ಕಣ್ವಕುಪ್ಪೆ ಶ್ರೀಗಳು ಉತ್ತರಾಧಿಕಾರಿ ಹಾನಗಲ್ಲ: ವೀರಶೈವ ಲಿಂಗಾಯತ ಪಂಚಪೀಠಗಳಲ್ಲಿ ಒಂದಾದ ಕೇದಾರ ಪೀಠಕ್ಕೆ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಕೋಡಿಯಲ್ಲಾಪುರ ಹಾಗೂ ದಾವಣಗೆರೆ ಕಣ್ವಕುಪ್ಪೆ ಮಠದ ಶ್ರೀ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನೇಮಕವಾಗಿದ್ದಾರೆ. ಮಹಾರಾಷ್ಟ್ರದ ನಾಂದೇಡದಲ್ಲಿ ನಡೆಯುತ್ತಿರುವ ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ 25ನೇ ಪಟ್ಟಾಧಿಕಾರ ರಜತ ಮಹೋತ್ಸವ ಸಮಾರಂಭದಲ್ಲಿ ಶ್ರೀಗಳನ್ನು ಸ್ವತಃ ಕೇದಾರ ಜಗದ್ಗುರು ಗಳೇ ಉತ್ತರಾಧಿಕಾರಿಯಾಗಿ ಘೋಷಣೆ ಮಾಡಿದರು
ಸರ್ಕಾರಕ್ಕೆ 1000 ದಿನ: ನಾಳೆ ಹಾವೇರೀಲಿ ಬೃಹತ್ ಕಾಠ್ಯಕ್ರಮ 6ನೇ ಗ್ಯಾರಂಟಿಯಾಗಿ ‘ಭೂ ಗ್ಯಾರಂಟಿ’ ಜಾರಿ 1.10 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಟೈಮ್ಸ್ ಆಫ್ ಬಯಲುಸೀಮೆ ಹಾವೇರಿ ರಾಜ್ಯ ಸರ್ಕಾರ 1000 ದಿನ ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಶನಿವಾರ ಬೃಹತ್ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದು ಸರ್ಕಾರದ ಜನಪ್ರಿಯ ಪಂಚ ಗ್ಯಾರಂಟಿಗಳ ಜತೆಗೆ 6ನೇ ಗ್ಯಾರಂಟಿಯಾಗಿ ‘ಭೂ ಗ್ಯಾರಂಟಿ’ ಯೋಜನೆಯಡಿ 1.10 0 ಲಕ್ಷ ಲಕ್ಷ ಬಡವರ ಬಡವರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುತ್ತದೆ. ನಗರದ ಹೊರವಲಯದ ಅಜ್ಜಯ್ಯನ ಗುಡಿ ಬಳಿ ಸಮಾವೇಶ ನಡೆಯಲಿದ್ದು, ಗುರುವಾರ ಸಮಾವೇಶದ ಸಿದ್ಧತೆಗಳನ್ನು ಸಚಿವಶಿವಾನಂದಪಾಟೀಲಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪಂಚ ಗ್ಯಾರಂಟಿಗಳ ಜತೆಗೆ 6ನೇಯದಾಗಿಭೂಗ್ಯಾರಂಟಿನೀಡುತ್ತಿದ್ದೇವೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಪಾರ ಮುತುವರ್ಜಿ ವಹಿಸಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹೊಸಪೇಟೆಯಲ್ಲಿ ಮೊದಲ ಸಮಾವೇಶದಲ್ಲಿ ಒಂದು ಲಕ್ಷ ಜನರಿಗೆ ಹಕ್ಕು ಪತ್ರ ವಿತರಿಸಲಾಗಿತ್ತು. ಪ್ರಸ್ತುತ ಹಾವೇರಿಯಲ್ಲಿ 1.10 ಲಕ್ಷ ಕುಟುಂಬಗಳಿಗೆ ಹಕ್ಕು…
ಭಾರತಕ್ಕೆ ಮರಳಲು ವಿಜಯ್ ಮಲ್ಯಗೆ ಕೋರ್ಟ್ ತಾಕೀತು ಮುಂಬಯಿ: ದೇಶ ಭ್ರಷ್ಟ ಆರ್ಥಿಕ ಅಪರಾಧಿಗಳ ನಿಯಂತ್ರಣ ಕಾಯಿದೆಯ ಸಿಂಧುತ್ವ ಪ್ರಶ್ನಿಸಿರುವ ಆರ್ಥಿಕ ಅಪರಾಧಿ ವಿಜಯ್ ಮಲ್ಯಗೆ ಚಾಟಿ ಬೀಸಿರುವ ಮುಂಬಯಿ ಹೈಕೋರ್ಟ್, “ನಿಮ್ಮ ಅರ್ಜಿ ವಿಚಾರಣೆಗೂ ಮೊದಲು ನಿಮ್ಮ ವಿರುದ್ಧ ದಾಖಲಾಗಿರುವ ಕೇಸ್ ಗಳ ವಿಚಾರಣೆಗೆ ಹಾಜರಾಗಿ. ನೀವು ಭಾರತಕ್ಕೆ ಬರಲೇಬೇಕು. ಬರುವುದಾರ ಯಾವಾಗ ಬರುತ್ತೀರಿ ಎಂಬ ಕುರಿತು ಅಫಿಡವಿಟ್ ಸಲ್ಲಿಸಿ,” ಎಂದು ತಾಕೀತು ಮಾಡಿದೆ. ಬ್ಯಾಂಕ್‌ಗಳಿಗೆ ವಂಚಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ವಿಜಯ್ 2016ರಿಂದ ಲಂಡನ್‌ನಲ್ಲಿ ನೆಲೆಸಿದ್ದಾರೆ ಭಾರತ ಸರಕಾರ ಆರ್ಥಿಕ ಅಪರಾಧಿ ಪಟ್ಟಿಯಲ್ಲಿ ಸೇರಿಸಿದ ಕ್ರಮವನ್ನು ಪ್ರಶ್ನಿಸಿ ಮಲ್ಯ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮುಂಬಯಿ ಹೈಕೋರ್ಟ್ ಸಿಜೆ ಚಂದ್ರಶೇಖರ್ ಹಾಗೂ ನ್ಯಾ.ಗೌತಮ್ ఆవిండా ನ್ಯಾಯಪೀಠ, “ನೀವು ಮಲ್ಯ ಅವರನ್ನು ಉದ್ದೇಶಪೂರ್ವಕ ವಾಗಿ ಕೋರ್ಟ್‌ಗೆ ಹಾಜರಾಗುವುದನ್ನು ತಪ್ಪಿಸುತ್ತಿದ್ದೀರಿ. ಭಾರತಕ್ಕೆ ಬಾರದ ಹೊರತು ನಿಮ್ಮ ಅರ್ಜಿಗಳ ವಿಚಾರಣೆ ನಡೆಸಲು ಸಾಧ್ಯವಿಲ್ಲ. ನಿಮಗೆ ಇನ್ನೊಂದು ಕೊನೆಯ ಅವಕಾಶ ನೀಡುತ್ತಿದ್ದೇವೆ.…
ಜಾಮೀನು ರದ್ದು ಕೋರಿ ಇ.ಡಿ. ಅರ್ಜಿ: ಶಾಸಕ ಪಪ್ಪಿಗೆ ನೋಟಿಸ್ ಬೆಂಗಳೂರು: ಆನ್‌ಲೈನ್, ಆಫ್‌ಲೈನ್ ಬೆಟ್ಟಿಂಗ್ ಸಂಬಂಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಬಂಧಿತರಾಗಿದ್ದ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ಜಾಮೀನು ರದ್ದು ಕೋರಿ ಜಾರಿ ನಿರ್ದೇಶನಾ ಲಯ ಸಲ್ಲಿಸಿರುವ ಅರ್ಜಿ ಕುರಿತಂತೆ ವೀರೇಂದ್ರ ಅವ ರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಪ್ರಕರಣ ದಲ್ಲಿ ವೀರೇಂದ್ರ ಅವರಿಗೆ ಜನಪ್ರತಿ ನಿಧಿಗಳ ಕೋರ್ಟ್ 2025ರ ಡಿ.30ರಂದು ಜಾಮೀನು ನೀಡಿರುವ ಆದೇಶ ರದ್ದು ಕೋರಿ ಇ.ಡಿ. ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದೆ. ಗುರುವಾರ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ನ್ಯಾಯಪೀಠ ವೀರೇಂದ್ರ ಅವರಿಗೆ ನೋಟಿಸ್ ನೀಡಿ ವಿಚಾರಣೆ ಫೆ.26ಕ್ಕೆ ಮುಂದೂಡಿತು.
RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಚಿನ್ನಸ್ವಾಮಿ ಮೈದಾನದಲ್ಲಿ IPL ಪಂದ್ಯ ಆಡಿಸಲು ರಾಜ್ಯ ಸರ್ಕಾರ ಒಪ್ಪಿಗೆ ಬೆಂಗಳೂರು: ಆರ್ ಸಿ ಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದ ನಂತ್ರ ಕ್ರಿಕೆಟ್ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಆಡಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆರ್ ಸಿ ಬಿ ಕಾಲ್ತುಳಿತದ ನಂತ್ರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿ ಆಟಕ್ಕೆ ತೊಡಕು ಉಂಟಾಗಿತ್ತು. ಇದಕ್ಕಾಗಿ ಸರ್ಕಾರ ಸಮಿತಿಯನ್ನು ರಚಿಸಿತ್ತು. ಈ ವರದಿಯ ಶಿಫಾರಸ್ಸಿನ ನಿಯಮಗಳನ್ನು ಅಳವಡಿಸಿಕೊಂಡು, ಐಪಿಎಲ್ ಪಂದ್ಯಾವಳಿಗಳನ್ನು ಆಡೋದಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಐಪಿಎಲ್ ಪಂದ್ಯಾವಳಿಯನ್ನು ಆಡಿಸೋದಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಹೀಗಾಗಿ…
Subscribe to Updates
Get the latest creative news from FooBar about art, design and business.