Author: ಮೃತ್ಯುಂಜಯಾಚಾರ್ ಬಿ
ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.
*ಆರೋಗ್ಯವನ್ನು ಆಲಸ್ಯತನದಿಂದ ಹಾಳು ಮಾಡಿಕೊಳ್ಳಬೇಡಿ ಕಾಯಕಯೋಗಿ ಜಗದ್ಗುರು ಶ್ರೀ ಶಾಂತಿವೀರ ಸ್ವಾಮೀಜಿ* ಹೊಸದುರ್ಗ:::: ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ ಸುಜ್ಞಾನ ಸಂಗಮ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು ಆಧುನಿಕ ಸಮಾಜದಲ್ಲಿ ಹಣಕ್ಕಿಂತ ಆರೋಗ್ಯವೇ ಶ್ರೇಷ್ಠವಾಗಿದೆ ಆರೋಗ್ಯ ವಿದ್ದರೆ ಹಣವನ್ನು ಸಂಪಾದಿಸಬಹುದು ಅಧಿಕಾರವನ್ನು ಹಿಡಿಯಬಹುದು ಆರೋಗ್ಯವೇ ಇಲ್ಲದಿದ್ದರೆ ಉತ್ಸಾಹ ಕಳೆದುಕೊಂಡು ಖಿನ್ನತೆಗೆ ಒಳಗಾಗುವ ಸಂಭವ ಹೆಚ್ಚಾಗಿದೆ ಹಾಗಾಗಿ ಇವತ್ತಿನ ಯುವಕರು ಮೊಬೈಲ್ ಗಿಳಿಯಿಂದ ಸಾಮಾಜಿಕ ಜಾಲತಾಣಗಳಾದ ಸೋಶಿಯಲ್ ಮೀಡಿಯಾದಿಂದ ದೂರವಿದ್ದು ವ್ಯಾಯಾಮ ವಾಯುವಿವಾಹರ ಕರಾಟೆ ಕುಸ್ತಿ ಕ್ರೀಡೆಗಳಲ್ಲಿ ತೊಡಗಿಸಿ ಕೊಂಡಾಗ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಮಾನಸಿಕ ಬಲವನ್ನು ಸಂಪಾದಿಸಲು ಸಾಧ್ಯವಾಗುತ್ತದೆ ವೈದ್ಯರೆಂದರೆ ದೇಹದ ಬಾಧೆಗಳನ್ನು ಹಾಗೂ ಕಾಯಿಲೆಗಳನ್ನು ದೂರ ಮಾಡುವ ಶ್ರೇಷ್ಠ ಸೇವಕರು ವೈದ್ಯರನ್ನು ಗೌರವದಿಂದ ಪ್ರೀತಿಯಿಂದ ಕಾಣುವ ಮೂಲಕ ಅವರ ವೃತ್ತಿಗೆ ಗೌರವಿಸಬೇಕು ಹಾಗೂ ವೈದ್ಯರು ಕೂಡ ತಾಯಿತನದ ಅಂತಃಕರಣದಿಂದ ರೋಗಿಗಳನ್ನು ನೋಡಿದಾಗ ಬೇಗ ಗುಣಮುಖರಾಗಲು ಸಾಧ್ಯ ಸಿಡುಕು ಕೋಪಗಳ ಮೂಲಕ ರೋಗಿಗಳಿಗೆ ಭಯಪಡಿಸದೆ…
ರಾಯಚೂರಿಗೆ 13ನೇ ಕೆಎಸ್‌ಆರ್‌ಪಿ ಪಡೆ ಸ್ಥಾಪನೆಗೆ ಒತ್ತಾಯ ಯುವ ಹೋರಾಟಗಾರ ಅರುಣ್ ಭೂಪಾಲ್ ಅವರಿಂದ ಸಿಎಂಗೆ ಬಹಿರಂಗ ಪತ್ರ
*ರಾಯಚೂರಿಗೆ 13ನೇ ಕೆಎಸ್‌ಆರ್‌ಪಿ ಪಡೆ ಸ್ಥಾಪನೆಗೆ ಒತ್ತಾಯ ಯುವ ಹೋರಾಟಗಾರ ಅರುಣ್ ಭೂಪಾಲ್ ಅವರಿಂದ ಸಿಎಂಗೆ ಬಹಿರಂಗ ಪತ್ರ* ರಾಯಚೂರು ಜಿಲ್ಲೆಯಲ್ಲಿ 13ನೇ ಕೆಎಸ್‌ಆರ್‌ಪಿ ಪಡೆಯನ್ನು ಸ್ಥಾಪಿಸಬೇಕೆಂದು ಯುವ ಹೋರಾಟಗಾರ ಅರುಣ್ ಭೂಪಾಲ್ ಅವರು ಮುಖ್ಯಮಂತ್ರಿ ಅವರಿಗೆ ಬಹಿರಂಗ ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಪತ್ರ ಖಾಕಿ ವಲಯ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಭದ್ರತಾ ಪರಿಸ್ಥಿತಿಯನ್ನು ಉಲ್ಲೇಖಿಸಿರುವ ಅವರು, “ಮಹಾನಗರಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ಮೀಸಲಿಡುವ ಸರ್ಕಾರ, ಗಡಿಭಾಗದ ಜಿಲ್ಲೆಗಳಿಗೆ ಕನಿಷ್ಠ ಭದ್ರತಾ ವ್ಯವಸ್ಥೆ ಒದಗಿಸಲು ಯಾಕೆ ಹಿಂದೇಟು ಹಾಕುತ್ತಿದೆ?” ಎಂದು ಪ್ರಶ್ನಿಸಿದ್ದಾರೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಆಂಧ್ರ–ತೆಲಂಗಾಣ ಗಡಿಭಾಗಕ್ಕೆ ಹೊಂದಿಕೊಂಡಿರುವುದರಿಂದ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಶಾಶ್ವತ ಕೆಎಸ್‌ಆರ್‌ಪಿ ಪಡೆಯ ಅಗತ್ಯವಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ವಿ.ವಿ.ಐ.ಪಿ ಭೇಟಿಗಳು, ರಾಜಕೀಯ ಸಮಾವೇಶಗಳು, ಧಾರ್ಮಿಕ ಜಾತ್ರೆಗಳು, ಹಟ್ಟಿ ಚಿನ್ನದ ಗಣಿ, ಶಕ್ತಿನಗರ ವಿದ್ಯುತ್ ಉತ್ಪಾದನಾ ಘಟಕ ಹಾಗೂ ಉದ್ದೇಶಿತ ವಿಮಾನ ನಿಲ್ದಾಣದ ಹಿನ್ನೆಲೆಯಲ್ಲಿ ಭದ್ರತಾ…
*ರಾಜಕಾರಣದಲ್ಲಿ ಇರುವವರು ರಾಜಕಾರಣ ಮಾಡಲೇ ಬೇಕು: ಡಿ ಕೆ ಶಿವಕುಮಾರ್* *ನನಗೆ ಸದಾ ಯಶಸ್ಸು ಸಿಗುತ್ತದೆ, ಸ್ವಲ್ಪ ಶ್ರಮ ಬೇಕಾಗುತ್ತದೆ* *ನಾಯಕರ ಜತೆಗಿನ ಚರ್ಚೆ ವಿವರ ಬಹಿರಂಗಪಡಿಸಲಾರೆ* *ಸರ್ಕಾರಕ್ಕೆ ಸಾವಿರ ದಿನಗಳ ಹಿನ್ನೆಲೆಯಲ್ಲಿ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ಜಾರಿ* *ಸಂಘರ್ಷವಿರುವುದು ಬಿಜೆಪಿಯಲ್ಲಿ, ನಮ್ಮಲ್ಲಿ ಅಲ್ಲ* “ನಾವು ರಾಜಕಾರಣದಲ್ಲಿದ್ದೇವೆ, ರಾಜಕಾರಣ ಮಾಡಲೇಬೇಕು. ನನಗೆ ಸದಾ ಯಶಸ್ಸು ಸಿಗುತ್ತದೆ. ಸ್ವಲ್ಪ ಶ್ರಮ ಬೇಕಾಗುತ್ತದೆ ಅಷ್ಟೇ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ದೆಹಲಿಯ ಕರ್ನಾಟಕ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. ನಿಮ್ಮ ಭೇಟಿ ಫಲಪ್ರದವಾಗಿದೆಯೇ, ಅಧಿಕಾರ ಹಂಚಿಕೆ ವಿಚಾರವಾಗಿ ಹೈಕಮಾಂಡ್ ನಿಂದ ಸ್ಪಷ್ಟನೆ ಸಿಕ್ಕಿದೆಯೇ ಎಂದು ಕೇಳಿದಾಗ, “ನಾವು ಈ ವಿಚಾರವಾಗಿ ಚರ್ಚೆ ಮಾಡಿಲ್ಲ. ಪಕ್ಷ ತನ್ನದೇ ಆದ ಗುರಿ ಹೊಂದಿದ್ದು, ಪಕ್ಷದ ಯಶಸ್ಸು ಹಾಗೂ ಪಕ್ಷದ ಹಿತಾಸಕ್ತಿ, ಕರ್ನಾಟಕ ಹಾಗೂ ದೇಶದ ಹಿತದೃಷ್ಟಿ ಆಧಾರದ ಮೇಲೆ ನಮ್ಮ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ…
ಚಿತ್ರದುರ್ಗ | ನಿವೃತ್ತ ಶಿಕ್ಷಕ ಪಿ. ತಿಪ್ಪೇಶಾಚಾರ್ಯ ನಿಧನ ಚಿತ್ರದುರ್ಗ, ಫೆಬ್ರವರಿ. 07 : ನಗರದ ಜೆಸಿಆರ್ ಬಡಾವಣೆ ನಿವಾಸಿ ಹಾಗೂ ನಿವೃತ್ತ ಶಿಕ್ಷಕ ಪಿ. ತಿಪ್ಪೇಶಾಚಾರ್ಯ (85 ವರ್ಷ) ಅವರು ಶನಿವಾರ ಇಂದು ಬೆಳಿಗ್ಗೆ ಸುಮಾರು 11:50 ರ ವೇಳೆಗೆ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ಚಿತ್ರದುರ್ಗ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಿಧನದ ನಂತರ ಕಣ್ಣುಗಳನ್ನು ನಗರದ ಬಸವೇಶ್ವರ ಆಸ್ಪತ್ರೆಯ ಶ್ರೀ ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಗೆ ನೇತ್ರದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅಂತ್ಯಕ್ರಿಯೆ ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನಾಳೆ (ಫೆಬ್ರವರಿ. 08, ಭಾನುವಾರ) ಬೆಳಿಗ್ಗೆ 11 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಂತಾಪ : ಮೃತರ ನಿಧನಕ್ಕೆ ಚಿತ್ರದುರ್ಗ ಜಿಲ್ಲಾ ವಿಶ್ವಕರ್ಮ ಸಮಾಜ, ನಿವೃತ್ತ ನೌಕರರ ಸಂಘ ಸೇರಿದಂತೆ ಜೆಸಿಆರ್ ಬಡಾವಣೆಯ ನಾಗರೀಕರು ಸಂತಾಪ ಸೂಚಿಸಿದ್ದಾರೆ.
*ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಿತ್ತು ಹಾಕಿದ್ದೇವೆ; ಕಾಂಗ್ರೆಸ್ಸಿನ ಬಣ್ಣ ಬಯಲು ಮಾಡುವಲ್ಲಿ ಯಶಸ್ವಿ: ವಿಪಕ್ಷ ನಾಯಕ ಅಶೋಕ್* *ಶೂನ್ಯ ಸಾಧನೆಯ ಸರ್ಕಾರಕ್ಕೆ ದಿಕು ತಪ್ಪಿಸುವುದೇ ಕಾಯಕ; ಅದಕ್ಕಾಗಿ ಕೇಂದ್ರದ ವಿರುದ್ಧ ಗೂಬೆ ಕೂರಿಸಲಾಗುತ್ತಿದೆ ಎಂದು ಆಕ್ರೋಶ* *ತಿಮ್ಮಾಪುರ ರಾಜೀನಾಮೆ ತನಕ ಹೋರಾಟ; ಜನತಾ ನ್ಯಾಯಾಲಯಕ್ಕೆ ಅಬಕಾರಿ ಹಗರಣ* *ಅಧಿವೇಶನದಲ್ಲಿ ಸ್ಪೀಕರ್ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ, ಅಸಂಸದೀಯ ನಡುವಳಿಕೆ ವೇಳೆ ನಗುತ್ತಾ ಕುಳಿತ್ತಿದ್ದರು ಎಂದು ಆಕ್ಷೇಪ* *ಬೆಂಗಳೂರು:* ಸಿದ್ದರಾಮಯ್ಯ ನೇತೇತ್ವದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಮುಖವಾಡವನ್ನು ಅಧಿವೇಶನದಲ್ಲಿ ಕಳಚಿ ಹಾಕುವಲ್ಲಿ ಯಶಸ್ವಿಯಾಗಿರುವುದಾಗಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಅಧಿಕಾರಕ್ಕೆ ಬಂದ ದಿನದಿಂದ ಹಗರಣಗಳ ಸುಳಿಯಲ್ಲೇ ಸರ್ಕಾರ ಸಿಕ್ಕಿಕೊಂಡಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿರುವ ಆರು ಸಾವಿರ ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ಲೂಟಿ ಹಗರಣಗಳ ಪಟ್ಟಿಗೆ ಹೊಸ ಸೇರ್ಪಡೆ ಎಂದು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಗುರುವಾರ ಆರೋಪಿಸಿದ್ದಾರೆ. ಹೇಳಿಕೊಳ್ಳಲು ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿಲ್ಲ. ಜತೆಗೆ ಖಜಾನೆ ಖಾಲಿಯಾಗಿದೆ.…
ಅಧಿಕಾರಿಗಳು ಮಂತ್ರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಅದಕ್ಕೆ ಮಂತ್ರಿಗಳು ಹೇಗೆ ಹೊಣೆಗಾರರಾಗುತ್ತಾರೆ-ಆರ್.ಬಿ.ತಿಮ್ಮಾಪುರ ಭ್ರಷ್ಟ ಅಧಿಕಾರಿಗಳು ತಾವು ಮಾಡುವ ಭ್ರಷ್ಟಾಚಾರದಲ್ಲಿ ಮಂತ್ರಿಗಳ ಹೆಸರನ್ನು ದುರುಪಯೋಗ ಮಾಡಿಕೊಂಡರೆ, ಅದರಲ್ಲಿ ಮಂತ್ರಿಗಳ ತಪ್ಪೇನಿದೆ. ಇಲ್ಲಸಲ್ಲದ ಆರೋಪಗಳಿಗೆ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅಬಕಾರಿ ಸಚಿವರು ವಿಧಾನಸಭೆಯಲ್ಲಿ ಇಂದು ತಿಳಿಸಿದರು. ಇಂದು ರಾತ್ರಿ ನಿಯಮ ೬೯ ಮೇರೆಗೆ ಸಾರ್ವಜನಿಕ ಮಹತ್ವದ ಅಲ್ಪಕಾಲಾವಧಿ ಚರ್ಚೆಯ ಮೇಲೆ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ, ಅರಗ ಜ್ಞಾನೇಂದ್ರ, ಬಿ.ವೈ ವಿಜಯೇಂದ್ರ , ಡಾ. ಅಶ್ವಥ್ ನಾಯಾರಣ, ಸಿ.ಎನ್.ಸುರೇಶ್ ಬಾಬು ಸಿ.ಬಿ ಹಾಗೂ ಮತ್ತಿತರು ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾದ ಹಿನ್ನೆಲೆಯಲ್ಲಿ ಅಬಕಾರಿ ಸಚಿವರು ರಾಜಿನಾಮೆ ನೀಡಬೇಕೆಂದು ಪಟ್ಟು ಹಿಡಿದಿರುವುದಕ್ಕೆ ಸದನಕ್ಕೆ ಉತ್ತರ ನೀಡಿದರು. ಹಿಂದಿನ ಸರ್ಕಾರಗಳಲ್ಲಿ ಈ ಇಲಾಖೆಯಲ್ಲೇ ನಡೆದಿರುವ ಹಲವು ಹಗರಣಗಳಲ್ಲಿ ಯಾವುದೇ ಮಂತ್ರಿಗಳು ರಾಜೀನಾಮೆ ನೀಡದಿರುವುದನ್ನು ತಿಳಿಸಿದ ಅವರು, ನಾನು ಅಬಕಾರಿ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಾಗಿನಿಂದ ಕೈಗೊಂಡಿರುವ ಹಲವು ಸುಧಾರಣೆಗಳ ಬಗ್ಗೆ ಒಂದೂ…
ಚಿತ್ರದುರ್ಗ ವೈದ್ಯಕೀಯ ಕಾಲೇಜು ನೇಮಕಾತಿ: ಮಧ್ಯವರ್ತಿಗಳ ಬಗ್ಗೆ ಎಚ್ಚರ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶುಶ್ರೂಷಾಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು 18 ಡಿಸೆಂಬರ್ 2025 ರಂದು ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಕೆಲವು ಮಧ್ಯವರ್ತಿಗಳು ಇದರ ದುರುಪಯೋಗ ಪಡೆದುಕೊಂಡು ಶುಶ್ರೂಷಾಧಿಕಾರಿಗಳ ಉದ್ಯೋಗ ಕೊಡಿಸುವುದಾಗಿ ಸಾರ್ವಜನಿಕರಿಗೆ ಆಮಿಷವೊಡ್ಡಿ ಹಣದ ಬೇಡಿಕೆಯಿಡುತ್ತಿರುವುದು ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಸಂಸ್ಥೆಯಲ್ಲಿ ಪಾರದರ್ಶಕ ಹಾಗೂ ನಿಯಮಾನುಸಾರವೇ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಉದ್ಯೋಗ ಕೊಡಿಸುವುದಾಗಿ ನಂಬಿಸುವ ಮಧ್ಯವರ್ತಿಗಳಿಗೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಹಣ ನೀಡಿ ಮೋಸ ಹೋಗಬಾರದು. ಕೆಲಸ ಕೊಡಿಸುವ ಆಮಿಷವೊಡ್ಡಿ ಯಾರಾದರೂ ಹಣ ಕೇಳಿದರೆ, ಅವರ ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆಯೊAದಿಗೆ ತಕ್ಷಣವೇ ಸಂಸ್ಥೆಯ ಗಮನಕ್ಕೆ ತರುವಂತೆ ಚಿತ್ರದುರ್ಗ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಬಿ.ವೈ.ಯುವರಾಜರಾಜ್ ತಿಳಿಸಿದ್ದಾರೆ
*ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆ, ಸಚಿವ ತಿಮ್ಮಾಪುರ ರಾಜೀನಾಮೆ ನೀಡಲಿ: ಪ್ರತಿಪಕ್ಷ ನಾಯಕ ಆರ್.ಅಶೋಕ* *ಅಧಿಕಾರಿಗಳ ಮಾತುಕತೆಯ ಆಡಿಯೋಗಳಿವೆ, ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ* *ಕೇಂದ್ರ ಸರ್ಕಾರದ ವಿರುದ್ಧದ ನಿರ್ಣಯ ನಿಯಮಬಾಹಿರ* *ಬೆಂಗಳೂರು, ಫೆಬ್ರವರಿ 3* ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್ ಮಂಜೂರಾತಿಗೆ ಲಂಚ, ವರ್ಗಾವಣೆ ಮಾಡಿಸಲು ಲಂಚ ಪಡೆಯಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೋಗಳು ಬಿಡುಗಡೆಯಾಗಿ ಲೋಕಾಯುಕ್ತದಲ್ಲಿ ದೂರುಗಳು ದಾಖಲಾಗಿವೆ. ಆದ್ದರಿಂದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಅಬಕಾರಿ ಇಲಾಖೆಯು ಭ್ರಷ್ಟಾಚಾರದ ಅಪರಾಧಿ ನಂ.1 ಇಲಾಖೆಯಾಗಿದೆ. ಲೈಸೆನ್ಸ್‌ಗೆ ಲಂಚ, ವರ್ಗಾವಣೆಗೆ ಹಣ ಫಿಕ್ಸ್ ಹೀಗೆ ಮೊದಲಾದ ರೀತಿಯಲ್ಲಿ ಅಕ್ರಮ ನಡೆಯುತ್ತಿದೆ. ವಿಬಿ ಜಿ ರಾಮ್ ಜಿ ಯೋಜನೆಯನ್ನು ವಿರೋಧಿಸಿರುವ ಕಾಂಗ್ರೆಸ್ ನಾಯಕರು ಮಹಾತ್ಮ ಗಾಂಧೀಜಿಯ ಆದರ್ಶಗಳ ಬಗ್ಗೆ ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಗಾಂಧೀಜಿಯ ಆದರ್ಶ ಪಾಲಿಸುತ್ತಿಲ್ಲ. ಸರ್ಕಾರಿ ಅಧಿಕಾರಿಗಳ ಕಡೆಯಿಂದ ಮಾಡಿರುವ ವಾಟ್ಸಾಪ್ ಸಂದೇಶದಲ್ಲಿ,…
ಬೆಂಗಳೂರು : ಗೃಹಲಕ್ಷ್ಮೀ ಯೋಜನೆ ಸಂಬಂಧ ರೂಪಿಸಿರುವ ಸಾಫ್ಟ್‌ವೇರ್‌ನಲ್ಲಿ ಜಿಎಸ್‌ಟಿ, ಆದಾಯ ತೆರಿಗೆ ಅಂತ ತೋರಿಸಿದರೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಸರ್ಕಾರ ಅಥವಾ ಇಲಾಖೆಯ ಯಾವುದೇ ತಪ್ಪಿಲ್ಲ. ಗೃಹಲಕ್ಷ್ಮೀ ಯೋಜನೆ ನಿರಂತರ ಪ್ರಕ್ರಿಯೆ, ಈಗಲೂ ಅರ್ಜಿ ಸಲ್ಲಿಸಿದವರಿಗೆ ಹಣ ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ವಿಧಾನ ಪರಿಷತ್ ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎಂಬ ಕಾರಣದಿಂದ ಸುಮಾರು 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುತ್ತಿಲ್ಲ. ಈ ಪೈಕಿ ಸುಮಾರು 20 ಸಾವಿರ ಫಲಾನುಭವಿಗಳ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗಿದ್ದು, ಉಳಿದವರ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಹೇಳಿದರು. ಬಿಜೆಪಿಯ ಪಿ.ಎಚ್.ಪೂಜಾರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸುಮಾರು 1.26 ಕೋಟಿ ಗೃಹ ಲಕ್ಷ್ಮೀ ಫಲಾನುಭವಿಗಳಿದ್ದು, ಕೆಲ ಫಲಾನುಭವಿಗಳು ಕೆಲ ವೊಂದು ವ್ಯವಹಾರ ನಡೆಸುವಾಗಜಿಎಸ್‌ಟಿ, ಆದಾಯತೆರಿಗೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ಗೃಹಲಕ್ಷ್ಮೀ ಯೋಜನೆ ಸಂಬಂಧ…
ಬೆಂಗಳೂರು ನಗರ ಮಹಿಯರಿಗೆ ಹೆಚ್ಚು ಸುರಕ್ಷಿತ ನಗರ-ಡಾ.ಜಿ.ಪರಮೇಶ್ವರ್ ರಾಷ್ಟ್ರಮಟ್ಟದ ಪ್ರತಿಷ್ಠಿತ ಚೆನ್ನೈ ಸಂಸ್ಥೆಯೊಂದು ೧೨೫ ನಗರಗಳನ್ನೊಳಗೊಂಡಂತೆ ನಡೆಸಿರುವ ಸಮೀಕ್ಷೆಯ ವರದಿ ಪ್ರಕಾರ ಬೆಂಗಳೂರು ನಗರವು ಮಹಿಳೆಯರಿಗೆ ಹೆಚ್ಚು ಸುರಕ್ಷಿತ ನಗರವೆಂಬ ಹೆಗ್ಗಳಿಕೆಯನ್ನು ಹೆಗ್ಗಳಿಕೆಯನ್ನು ಪಡೆದಿದೆ ಎಂದು ಗೃಹ ಸಚಿವರಾದ ಡಾ.ಜಿ. ಪರಮೇಶ್ ಅವರು ಇಂದು ಮಧ್ಯಾಹ್ನ ವಿಧಾನಸಭೆಯಲ್ಲಿ ತಿಳಿಸಿದರು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ , ಸುನಿಲ್ ಕುಮಾರ್ ಹಾಗೂ ಅರಗ ಜ್ಞಾನೇಂದ್ರ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಹದಗೆಟ್ಟಿದೆ ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ಉತ್ತರವನ್ನು ನೀಡಿದ ಗೃಹ ಸಚಿವರು ಈ ಸಮೀಕ್ಷೆಯಲ್ಲಿ ಕರ್ನಾಟಕವು ೫೩.೮೨ ಅಂಕವನ್ನು ಪಡೆದು ಮೊದಲ ಸ್ಥಾನವನ್ನು, ಚನ್ನೈ ೪೯.೮೬ ಪಡೆದು ಎರಡನೇ ಸ್ಥಾನವನ್ನು ಪಡೆದಿವೆ ಎಂದರು. ಇಂಡಿಯಾ ಜಸ್ಟೀಸ್ ರಿಪೋರ್ಟ್ -೨೦೨೫ ರ ಪ್ರಕಾರ ಕೂಡ ನಮ್ಮ ರಾಜ್ಯವು ಮೊದಲ ಸ್ಥಾನವನ್ನು ಪಡೆದಿರುವುದು ಕಾನೂನು ಸುವ್ಯವಸ್ಥೆಯಲ್ಲಿ ಸಮರ್ಥವಾಗಿ ಕಾರ್ಯನಿವರ್ಹಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು. ಈ…
Subscribe to Updates
Get the latest creative news from FooBar about art, design and business.