Author: ಮೃತ್ಯುಂಜಯಾಚಾರ್ ಬಿ
ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.
ಟಿ20 ವಿಶ್ವಕಪ್ ಗೆದ್ದ ನಾಯಕ ಸೂರ್ಯ ಉಡುಪಿ ಅಳಿಯ ತಂಡದ ಗೆಲುವಿಗೆ ಹರಕೆ ಹೊತ್ತಿದ್ದ ಪತ್ನಿ ದೇವಿಶಾ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್‌ಯಾದವ್ ಉಡುಪಿಯ ಅಳಿಯ, ಸೂರ್ಯ ಪತ್ನಿ ದೇವಿಶಾ ಶೆಟ್ಟಿ ಮೂಲತಃ ಕಾಪುವಿನವರು. ದೇವಿಶಾ ಮನೆಯವರು ಕಾಪು ಅಮ್ಮನ ಭಕ್ತರು. ದೇವಿಶಾ ಮತ್ತು ಸೂರ್ಯಮದುವೆ’ ಬಳಿಕ ಕಾಪುವಿಗೆ 2 ಬಾರಿ ಬಂದು ಅಮ್ಮನ ದರ್ಶನ ಪಡೆದಿದ್ದರು. ಅವರ ಯಶಸ್ಸಿಗೆ ಅಮ್ಮನ ಆಶೀರ್ವಾದವೇ ಕಾರಣ ಎಂದು ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. 2024ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಾಗ, ಸೂರ್ಯಕುಮಾರ್‌ಮತ್ತು ದೇವಿಶಾ ಆಗ ಜೀರ್ಣೋದ್ಧಾರಗೊಳ್ಳುತ್ತಿದ್ದ ಮಾರಿ ಯಮ್ಮನ ಗುಡಿಗೆ ಭೇಟಿ ನೀಡಿದ್ದು, ಕಲಾತ್ಮಕ ಕಂಬದವೆಚ್ಚಕ 25 ಲಕ್ಷ ದೇಣಿಗೆಯಾಗಿ ನೀಡಿದ್ದರು. ಆ ವೇಳೆ ಪ್ರಾರ್ಥನೆ ಮಾಡಿದ್ದ ಗುಡಿಯ ಅರ್ಚಕರು, ಸೂರ್ಯಕುಮಾರ್ ತಂಡದ ನಾಯಕನಾಗಲಿ ಎಂದು ಹಾರೈಸಿದ್ದರು. ಅದಾಗಿ 9 ದಿನಗಳಲ್ಲಿ, ತಂಡದ ಕ್ಯಾಪ್ಟನ್ ಆಗಿ ಘೋಷಣೆಯಾಗಿದ್ದರು.ದೇವಿಶಾಟಿ20 ಟೂರ್ನಿಆರಂಭಕ್ಕೆಮೊದಲುಇಲ್ಲಿಗೆ ಬಂದಿದ್ದರು. ಬೆಲ್ಲ ಮತ್ತು ಸಕ್ಕರೆ ತುಲಾಭಾರ ನಡೆಸುವುದಾಗಿ ಸಂಕಲ್ಪಿಸಿದ್ದರು. ಹೀಗಾಗಿ, ಸದ್ಯದಲ್ಲಿ…
ಪೊಲೀಸರು ಜನಪ್ರತಿನಿಧಿಗಳ ಕರೆ ಸ್ವೀಕರಿಸುವುದು ಕಡ್ಡಾಯ ದೂರವಾಣಿ ಸಂಖ್ಯೆ ಇಟ್ಟುಕೊಳ್ಳಲೇಬೇಕು: ಡಿಜಿಪಿ ಸುತ್ತೋಲೆ ಬೆಂಗಳೂರು ಶಾಸಕರು ಹಾಗೂ ಸಂಸದರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಇಟ್ಟುಕೊಳ್ಳ ಬೇಕು, ಆ ಜನಪ್ರತಿನಿಧಿಗಳ ಕರೆಗಳಿಗೆ ಪ್ರತಿಕ್ರಿಯಿಸಬೇಕು ಎಂದು ಅಧಿಕಾರಿಗಳಿಗೆ ರಾ ಜ್ಯ ಪೊಲೀಸ್ ಮಹಾನಿರ್ದೇ ಶಕ ಡಾ| ಎಂ.ಎ.ಸಲೀಂ ಸೂಚಿಸಿದ್ದಾರೆ. ಈ ಸಂಬಂಧ ಸುತ್ತೋಲೆ ಹೊರಡಿಸಿ ರುವ ಡಿಜಿಪಿ ಅವರು, ಜನಪ್ರತಿನಿಧಿಗಳ ಕರೆಗಳಿಗೆ ಸ್ಪಂದಿಸುವಂತೆ ಹೇಳಿದ್ದಾರೆ. ಜನಪ್ರತಿನಿಧಿಗಳಾದವಿಧಾನಸಭಾಮತ್ತು ವಿಧಾನಪರಿಷತ್‌ಸದಸ್ಯರು, ಲೋಕಸಭಾ ಹಾಗೂರಾಜ್ಯ ಸಭಾಸದಸ್ಯರದೂರವಾಣಿ ಯನ್ನುಕಡ್ಡಾಯವಾಗಿಇಟ್ಟುಕೊಳ್ಳುವಂತೆ ಹಾಗೂ ಆ ಜನಪ್ರತಿನಿಧಿಗಳು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸುವಂತೆ ಹಿರಿಯ ಪೊಲೀಸ್ ಅಧಿಕಾರಿ ಗಳಿಗೆ ಕಟ್ಟಪ್ಪಣೆ ಮಾಡಿ ದ್ದಾರೆ. ಜನಪ್ರತಿನಿಧಿಗಳು ಕರೆ ಮಾಡಿದಾಗ ಒಂದು ವೇಳೆ ಅನ್ಯ ಕರ್ತವ್ಯ ದಲ್ಲಿನಿರತರಾಗಿ ದ್ದಲ್ಲಿ ಕರ್ತವ್ಯ ಮುಗಿದ ಬಳಿಕ ಮರು ಕರೆ ಮಾಡಬೇಕು. ಈ ಮೂಲಕ ಸಮಸ್ಯೆಗಳ ಕುರಿತು ಸ್ಪಂದಿಸು ವಂತೆ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ. ಇತ್ತೀಚೆಗೆ ಪೊಲೀಸ್ ಅಧಿಕಾರಿಗಳು ತಮ್ಮ ಕರೆ ಸ್ವೀಕರಿಸದೆ ಉದಾಸೀನತೆ ತೋರುತ್ತಿದ್ದಾರೆ ಎಂದು ಕೆಲ ಶಾಸಕರು ಹಾಗೂ ಸಂಸದರು…
ಭ್ರೂಣ ಹತ್ಯೆ ಬಗ್ಗೆ ಮಾಹಿತಿದಾರರಿಗೆ 1 ಲಕ್ಷ ಬಹುಮಾನ: ಗುಂಡೂರಾವ್ ವಿಧಾನ ಪರಿಷತ್: ರಾಜ್ಯದಲ್ಲಿ ಭ್ರೂಣ ಹತ್ಯೆ ಸಂಬಂಧ 13 ಪ್ರಕರಣಗಳು ದಾಖಲಾಗಿದ್ದು, ಇದರಜೊತೆ ಕಳೆದಮೂರುವರ್ಷಗಳಲ್ಲಿ ಕಾಯ್ದೆ ಉಲ್ಲಂಘಿಸಿರುವ ಸ್ಕ್ಯಾನಿಂಗ್ ಸೆಂಟರ್‌ಗಳ ಮಾಲೀಕರು/ ವೈದ್ಯರ ವಿರುದ್ಧ 150 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಈ ಪೈಕಿ 80 ಪ್ರಕರಣಗಳಿಗೆ ದಂಡ ವಿಧಿಸಲಾಗಿದೆ. 70 ಪ್ರಕರಣಗಳು ನ್ಯಾಯಾಲಯದವಿವಿಧಹಂತದಲ್ಲಿವೆ ಎಂದು ಆರೋಗ್ಯ ಮತ್ತು ಕುಟುಂಬಕಲ್ಯಾಣಸಚಿವದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಕಾಂಗ್ರೆಸ್ಸಿನ ಉಮಾಶ್ರೀ ಅವರ ಪರವಾಗಿ ಐವನ್ ಡಿಸೋಜಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಭ್ರೂಣ ಹತ್ಯೆ ಬಗ್ಗೆ ಮಾಹಿತಿ ನೀಡಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸಹಕರಿಸುವವರಿಗೆ ನೀಡುತ್ತಿದ್ದ ಬಹುಮಾನದ ಮೊತ್ತವನ್ನು 50 ಸಾವಿರ ರು.ಗಳಿಂದ 1 ಲಕ್ಷಗಳಿಗೆ ಏರಿಕೆ ಮಾಡಲಾಗಿದೆ ಎಂದರು.
*ವಾಹನ ಚಾಲನೆ ವೇಳೆ ಅವಸರ ಬೇಡ, ಎಚ್ಚರಿಕೆಯಿಂದ ವಾಹನ ಚಲಾಯಿಸಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ* *ಸೇಫ್ ಎ ಥಾನ್ ಗೆ ಚಾಲನೆ ನೀಡಿದ ಸಾರಿಗೆ ಸಚಿವರು* ದೈಹಿಕ ಚಟುವಟಿಕೆಗಳಿಂದ ಉತ್ತಮ ಆರೋಗ್ಯ, ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಮನಸ್ಸು ಶಾಂತವಾಗಿದ್ದರೆ ವಾಹನ ಚಾಲನೆ, ಪ್ರಯಾಣದ ವೇಳೆ ನಾವು ಎಚ್ಚರಿಕೆಯಿಂದ ಇರಲು ಸಾಧ್ಯ. ಅದರಿಂದ ರಸ್ತೆ ಸುರಕ್ಷತೆ ಸಾಧ್ಯವಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾರಿಗೆ ಇಲಾಖೆಯು ಬೆಂಗಳೂರು ಸಂಚಾರ ಪೊಲೀಸ್ ಸಹಯೋಗದೊಂದಿಗೆ ಶನಿವಾರ ಆಯೋಜಿಸಿದ್ದ “ನಮ್ಮ ರಸ್ತೆ ನಮ್ಮ ಸುರಕ್ಷತೆ” 5ಕೆ ‘ಸೇಫ್ ಎ ಥಾನ್’ ವಾಕಿಂಗ್, ರನ್ನಿಂಗ್, ಸೈಕ್ಲಿಂಗ್, ಬೈಕಿಂಗ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಸಚಿವರು ಮಾತನಾಡಿದರು. ಅಪಘಾತಗಳು, ರಸ್ತೆ ಸುರಕ್ಷತೆ ಬಗ್ಗೆ ಬೇರೆಯವರನ್ನು ದೂಷಿಸುವ ಬದಲು ನಾವು ಎಚ್ಚರಿಕೆ ವಹಿಸಬೇಕು. ಬೆಂಗಳೂರಿನಂತಹ ಮಹಾ ನಗರದಲ್ಲಿ ಅವಸರ, ಗಡಿಬಿಡಿಯಿಂದಲೇ ಬಹುತೇಕ ಅಪಘಾತ ಸಂಭವಿಸುತ್ತವೆ. ಅದೇ ನಾವು ಸ್ವಲ್ಪ ಬೇಗ…
WhatsApp New Rules : ಮಾರ್ಚ್ 1 ರಿಂದ ವಾಟ್ಸಾಪ್, ಟೆಲಿಗ್ರಾಮ್ ಬಳಕೆಯಲ್ಲಿ ಭಾರಿ ಬದಲಾವಣೆ! ನಿಮ್ಮ ಫೋನ್‌ನಲ್ಲಿ ಸಿಮ್ ಇಲ್ಲದಿದ್ದರೆ ಅಪ್ಲಿಕೇಶನ್ ಬಂದ್? ನವದೆಹಲಿ ; ಮಾರ್ಚ್ 1 ರಿಂದ ಭಾರತದಲ್ಲಿ ಮೆಸೇಜಿಂಗ್ ಅಪ್ಲಿಕೇಶನ್‌ಗಳ ನಿಯಮಗಳು ಬದಲಾಗಲಿವೆ. ನಿಮ್ಮ ಫೋನ್‌ನಲ್ಲಿ ಆಕ್ಟಿವ್ ಸಿಮ್ ಕಾರ್ಡ್ ಇಲ್ಲದಿದ್ದರೆ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಕಾರ್ಯನಿರ್ವಹಿಸುವುದಿಲ್ಲ. ಈ ‘ಸಿಮ್ ಬೈಂಡಿಂಗ್’ ನಿಯಮದ ಸಂಪೂರ್ಣ ಮಾಹಿತಿ ಇಲ್ಲಿದೆ. ಮಾರ್ಚ್ 1 ರಿಂದ ಭಾರತದ ಕೋಟ್ಯಂತರ ಇಂಟರ್ನೆಟ್ ಬಳಕೆದಾರರಿಗೆ ಪ್ರಮುಖ ಬದಲಾವಣೆಯೊಂದು ಎದುರಾಗಲಿದೆ. ನೀವು ವಾಟ್ಸಾಪ್ (WhatsApp) ಅಥವಾ ಟೆಲಿಗ್ರಾಮ್ (Telegram) ಬಳಕೆದಾರರಾಗಿದ್ದರೆ, ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಕೇಂದ್ರ ದೂರಸಂಪರ್ಕ ಇಲಾಖೆಯ (DoT) ಹೊಸ ನಿರ್ದೇಶನದಂತೆ, ಇನ್ಮುಂದೆ “ಸಿಮ್ ಬೈಂಡಿಂಗ್” (SIM Binding) ಪ್ರಕ್ರಿಯೆ ಕಡ್ಡಾಯವಾಗಲಿದೆ ಏನಿದು ‘ಸಿಮ್ ಬೈಂಡಿಂಗ್’ (SIM Binding) ನಿಯಮ? ಸದ್ಯದ ವ್ಯವಸ್ಥೆಯಲ್ಲಿ, ನಾವು ಒಮ್ಮೆ ವಾಟ್ಸಾಪ್ ಅಥವಾ ಟೆಲಿಗ್ರಾಮ್ ಅನ್ನು ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿ ಸಕ್ರಿಯಗೊಳಿಸಿದರೆ, ಆ…
ಚಿತ್ರದುರ್ಗ ನೂತನ ಡಿಸಿ ಆಫೀಸ್ ಕಟ್ಟಡಕ್ಕೆ ಭೂಮಿ ನೀಡಲು ತೋಟಗಾರಿಕೆ ಇಲಾಖೆ ಸಚಿವರ ಸಮ್ಮತಿ ಚಿತ್ರದುರ್ಗ ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಯ 6.30 ಎಕರೆ ಭೂಮಿಯನ್ನು ನೀಡಲು ತೋಟಗಾರಿಕೆ ಇಲಾಖೆ ಸಚಿವರು ಸಮ್ಮತಿ ಸೂಚಿಸಿದ್ದು, ಚಿತ್ರದುರ್ಗ ನಗರ ಸಮೀಪದ ಕುಂಚಿಗನಾಳು ಹತ್ತಿರ ನಿರ್ಮಾಣ ಮಾಡಲಾಗಿರುವ ಜಿಲ್ಲಾಧಿಕಾರಿಗಳ ನೂತನ ಕಚೇರಿ ಕಟ್ಟಡವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲು ಗುರುವಾರದಂದು ಬೆಂಗಳೂರಿನಲ್ಲಿ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಜಂಟಿಯಾಗಿ ನಡೆಸಿದ ಮಹತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಚಿತ್ರದುರ್ಗ ಜಿಲ್ಲೆಯ ಕುಂಚಿಗನಾಳು ಹತ್ತಿರ ನಿರ್ಮಾಣ ಮಾಡಲಾಗಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿಯು ಚಿತ್ರದುರ್ಗ ನಗರದಿಂದ ದೂರವಿದ್ದು, ಕಚೇರಿ ಕಾರ್ಯಗಳಿಗೆ ಬರುವ ಜಿಲ್ಲೆಯ ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆಯಾಗುವ ಕಾರಣದಿಂದ, ಈ ನೂತನ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡವನ್ನು ಚಿತ್ರದುರ್ಗ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ…
ದಿನಾಂಕ 19-02-2026ರ ಗುರುವಾರ ಸಂಜೆ 3:40ಕ್ಕೆ ಯೋಗ ಗುರುಗಳಾದ ಎಲ್.ಎಸ್ .ಚಿನ್ಮಯಾನಂದ ಇವರ ತಾಯಿ ಜಯಮ್ಮನವರು(80 ವರ್ಷ) ದೈವಾಧೀನರಾಗಿರುತ್ತಾರೆ. ಮೃತರಿಗೆ ಎರಡು ಗಂಡು ಹಾಗೂ ಮೂರು ಜನ ಹೆಣ್ಣು ಮಕ್ಕಳು ಇದ್ದು ಅಪಾರ ಬಂಧುಗಳನ್ನು ಅಗಲಿರುತ್ತಾರೆ.ಇವರ ಅಂತ್ಯಸಂಸ್ಕಾರವನ್ನು ಸ್ವಂತ ಊರಾದ ಚಿಕ್ಕನಾಯಕನಹಳ್ಳಿ ತಾಲೂಕಿನ ಲಕ್ಮೆನ ಹಳ್ಳಿಯಲ್ಲಿ 20- 02- 2026ರಂದು ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
BREAKING: ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗೆ ಲಘು ಹೃದಯಾಘಾತ: ಆಸ್ಪತ್ರೆಗೆ ದಾಖಲು !
ಪವಿತ್ರಾಗೌಡಗೆ ಬಿಗ್ ಶಾಕ್ : ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಕಾರ ಬೆಂಗಳೂರು : ರೇಣುಕಾಸ್ವಾಮಿ ಕೇಸ್ನಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ ಕಂಬಿ ಎಣಿಸುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವಂತಹ ಪವಿತ್ರಾ ಮಧ್ಯಂತರ ಜಾಮೀನು ನೀಡುವಂತೆ ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್ ಗೆ ಪವಿತ್ರಗೌಡ ಪರ ವಕೀಲರು ಅರ್ಜಿ ಸಲ್ಲಿಸಿದರು. ಆದರೆ ಪವಿತ್ರಗೌಡ ಗೆ ಮಧ್ಯಂತರ ಜಾಮೀನು ನೀಡಲು ಕೋರ್ಟ್ ನಿರಕಾರಿಸಿದೆ. ಮಗಳ ಬೋರ್ಡ್ ಎಕ್ಸಾಂ ಇರುವ ಕಾರಣ 20 ದಿನಗಳ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದ್ದರು, ಆದರೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಅರ್ಜಿ ವಜಾ ಮಾಡಿದರು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಹುಟ್ಟು ಹಬ್ಬದ ದಿನದಂದೆ ಪವಿತ್ರ ಗೌಡಗೆ ಬಿಗ್ ಶಾಕ್ ಎದುರಾಗಿದೆ. ಮಗಳ ಪರೀಕ್ಷೆ ಕಾರಣಕ್ಕೆ ಪವಿತ್ರ ಗೌಡ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ ಇದೀಗ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದೆ.
ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು | T20 World Cup ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಪಾಕಿಸ್ತಾನವನ್ನು ಟೀಂ ಇಂಡಿಯಾ ಬಗ್ಗು ಬಡೆದಿದೆ. ಶ್ರೀಲಂಕಾದ ಕೊಲಂಬೋದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಈ ಪಂದ್ಯದಲ್ಲಿ ಭಾರತವು ಭರ್ಜರಿ ಗೆಲುವು ಸಾಧಿಸಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಗೆಲುವು ಸಾಧಿಸಿದೆ. ಭಾರತದ ವೇಗ, ಸ್ಪಿನ್ ಮೋಡಿಗೆ ಪಾಕಿಸ್ತಾನದ ಬ್ಯಾಟರ್ ಗಳು ತತ್ತರಿಸಿ ಹೋಗಿದ್ದಾರೆ. ಬೂಮ್ರಾ, ಹಾರ್ದಿಕ್, ಅಕ್ಷರ್, ವರುಣ್ ಗೆ ತಲಾ ಎರಡು ವಿಕೆಟ್ ಬಿದ್ದಿವೆ. ಭಾರತ 175 ರನ್ ಅನ್ನು 7 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ ಪೇರಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದಂತ ಪಾಕಿಸ್ತಾನ 18 ಓವರ್ ಗಳಲ್ಲಿ 114 ರನ್ ಗಳಿಸಿ ಆಲ್ ಔಟ್ ಆಗಿ ಸೋಲು ಕಂಡಿತು. ಆ ಮೂಲಕ ಭಾರತವು ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದಂತೆ ಆಗಿದೆ.
Subscribe to Updates
Get the latest creative news from FooBar about art, design and business.