Author: ಮೃತ್ಯುಂಜಯಾಚಾರ್ ಬಿ

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

ಗ್ರಾಮಪಂಚಾಯಿತಿ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ – ಪ್ರಿಯಾಂಕ ಖರ್ಗೆ ಇದೇ ಮಾರ್ಚ್ ಅಂತ್ಯದೊಳಗೆ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಲಿರುವುದರಿಂದ ಗ್ರಾಮ ಪಂಚಾಯಿತಿ ಚುನಾವಣೆ ಗೆ ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಅವರು ತಿಳಿಸಿದರು. ಇಂದು ಮಧ್ಯಾಹ್ನ ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆಯಡಿ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ್ ಅವರು ರಾಜ್ಯ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಅವಧಿಯು ಮುಕ್ತಾಯಗೊಳ್ಳುತ್ತಿರುವುದರಿಂದ ಮುಂದಿನ ಚುನಾವಣೆ ನಡೆಸುವವರೆಗೂ ಆಡಳಿತಾಧಿಕಾರಿಯನ್ನು ನೇಮಿಸುವ ಬದಲು ಈಗಿರುವ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸಬೇಕೆಂದು ತಿಳಿಸಿದ್ದಕ್ಕೆ ಉತ್ತರಿಸಿದ ಸಚಿವರು, ಚುನಾವಣೆ ನಡೆಸುವುದು ತುಂಬಾ ತಡವಾಗುವುದಾದರೆ ಮಾತ್ರ ಕಾನೂನಿನಡಿ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸಲು ಅವಕಾಶವಿರುತ್ತದೆ. ಆದರೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿರುವುದರಿಂದ ಗ್ರಾಮ ಪಂಚಾಯಿತಿ ಸದಸ್ಯರನ್ನೇ ಮುಂದುವರೆಸುವ ಅವಶ್ಯಕತೆ ಬರುವುದಿಲ್ಲ. ಚುನಾವಣೆಯನ್ನು ಸರ್ಕಾರ ಆದಷ್ಟು ಬೇಗ ನಡೆಸಲಿದೆ.…

Read More

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಸರ್ಕಾರಿ ನೌಕರರು ಕೆಲಸದ ಒತ್ತಡದ ನಡುವೆಯೂ ಆರೋಗ್ಯದ ಕಡೆ ಗಮನಹರಿಸಿ. ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಅತ್ಯಂತ ಮಹತ್ವದಾಗಿದ್ದು, ಸರ್ಕಾರಿ ನೌಕರರು ಕೆಲಸದ ಒತ್ತಡದ ನಡುವೆಯೂ ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಪಿ. ರಘು ಅವರು ನೌಕರರಿಗೆ ಸಲಹೆ ನೀಡಿದರು. ನಗರದ ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರದ ಬೆನ್ನೆಲುಬಾಗಿ ಕೆಲಸ ಮಾಡುವ ನೌಕರರ ಮಾನಸಿಕ ಉಲ್ಲಾಸಕ್ಕಾಗಿ ಕ್ರೀಡಾಕೂಟಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಅತ್ಯಗತ್ಯ ಎಂದು…

Read More

ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮಿಗಳ ಸಾನಿಧ್ಯ ದಲ್ಲಿ ಗಮಕ ವಾಚನವ್ಯಾಖ್ಯಾನ; ಕಿರಾತುರ್ಜನೀಯ

Read More

ಫೆ. 22 ರಿಂದ ಫೆ.27 ರವರೆಗೆ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವ ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಬಸವಾಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಫೆ. 22 ರಿಂದ ಫೆ. 27 ರವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾವಿನಹಳ್ಳಿ ಬಸವೇಶ್ವರಸ್ವಾಮಿ ಟ್ರಸ್ಟ್‍ನ ಉಪಾಧ್ಯಕ್ಷರಾದ ಬಿ.ಎಸ್.ವಿಶ್ವನಾಥಪ್ಪ ಪಟೇಲ್ ತಿಳಿಸಿದ್ದಾರೆ. ಫೆ. 22 ರಂದು ರುದ್ರಾಭಿಷೇಕ, ಕಂಕಣಧಾರಣೆ, ಪಲ್ಲಕ್ಕಿ ಉತ್ಸವ ಧ್ವಜಾರೋಹಣ,23ರಂದು ಅಶ್ವೋತ್ಸವ, ಫೆ.24 ರಂದು ವೃಷಭೋತ್ಸವ, ಫೆ.25 ರಂದು ಹೂವಿನ ಉತ್ಸವ, ಸ್ವಾಮಿಗೆ ಗಜೋತ್ಸವ ಹಾಗೂ 10 ಗಂಟೆಗೆ ಕೆಂಡದಾರ್ಚನೆ ಸೇವೆ, ಫೆ.26 ರಂದು ಸ್ವಾಮಿಯ ಸಾನಿದ್ಯದಲ್ಲಿ ಬೆಳಿಗ್ಗೆ 11 ಗಂಟೆಗೆ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಮಧು-ವರನಿಗೆ ಬಟ್ಟೆ, ವಧುವಿಗೆ ತಾಳಿ ಯನ್ನು ನೀಡಲಾಗುವುದು. ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವವರು ದೇವಸ್ಥಾನದಲ್ಲಿ ಹೆಸರನ್ನು ನೊಂದಾಯಿಸಬಹುದಾಗಿದೆ. ಸಂಜೆ 4 ಗಂಟೆಗೆ ಹೂವಿನ ಅಡ್ಡಪಲ್ಲಕ್ಕಿ ನಂತರ 5 ಗಂಟೆಗೆ ಸ್ವಾಮಿಯ…

Read More

ಪ್ರೇಮಿ ಜತೆ ಪತ್ನಿ ಪರಾರಿ: ಪತಿ, ಮದುವೆ ಮಾಡಿಸಿದ್ದ ಮಾವ ಆತ್ಮಹತ್ಯೆ ದಾವಣಗೆರೆ: ವಿವಾಹವಾಗಿದ್ದ ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಪರಾ ರಿಯಾಗಿದ್ದಕ್ಕೆ ಮನನೊಂದ ಆಕೆಯ ಪತಿ ಹಾಗೂ ಮದುವೆ ಮಾಡಿಸಿದ್ದ ಸೋದರ ಮಾವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ತಾಲೂಕಿನ ಗುಮ್ಮನೂರು ನಿವಾಸಿ ಹರೀಶ್ (30) ಹಾಗೂ ದಾವಣಗೆರೆಯ ರುದ್ರೇಶ (40) ಮೃತರು. ಖಾಸಗಿ ಕಂಪನಿಯಲ್ಲಿ ಎಚ್‌ಆರ್‌ಆಗಿದ್ದ ಹರೀಶ್ 45 ದಿನದ ಹಿಂದಷ್ಟೇ ರುದ್ರೇಶ ಅವರ ಸೋದರಿಯ ಮಗಳಾದ ಸರಸ್ವತಿ ಎಂಬುವವರನ್ನು ಮದುವೆಯಾಗಿ ದ್ದರು. ಆದರೆ, ಸರಸ್ವತಿ ಮದುವೆಗೂ ಮುಂಚೆ ಪ್ರೀತಿ ಸುತ್ತಿದ್ದ ಕುಮಾರ ಎಂಬುವವರ ಜತೆ ಓಡಿ ಹೋಗಿದ್ದಾಳೆ. ಇದರಿಂದ ನೊಂದ ಹರೀಶ್ ಡೆತ್‌ ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾರೆ. ಇನ್ನು ರುದ್ರೇಶ ಅವರು ಹರೀಶ್ ಸಾವಿನ ಸುದ್ದಿ ಕೇಳಿ ವಿಷ ಸೇವಿಸಿ ಮೃತಪಟ್ಟಿದ್ದಾರೆ.

Read More

ಗೈರಾದ ಸಚಿವರಿಗೆ ಛೀಮಾರಿ ಹಾಕಿ, ಮನೆಗೆ ಕಳುಹಿಸಿ: ವಿಪಕ್ಷಗಳ ಆಗ್ರಹ ವಿಧಾನಸಭೆ: ನಿಗದಿತ ಸಚಿವರು ಕಲಾಪಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಗೈರಾದ ಸಚಿವರಿಗೆ ಛೀಮಾರಿ ಹಾಕಿ ಮನೆಗೆ ಕಳುಹಿಸುವಂತೆ ವಿರೋಧ ಪಕ್ಷದ ಶಾಸಕರು ಸ್ಪೀಕರ್ ಯು.ಟಿ. ಖಾದರ್ ಅವರಲ್ಲಿ ಆಗ್ರಹಿಸಿದ ಪ್ರಸಂಗ ಮಂಗಳವಾರ ನಡೆಯಿತು. ವಿರೋಧ ಪಕ್ಷಗಳ ಆಕ್ರೋಶದ ಹಿನ್ನೆಲೆಯಲ್ಲಿ ಕಲಾಪಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಸಚಿವರಿಗೂ ಕಳೆದ ವಾರ ಪತ್ರ ಬರೆದಿದ್ದರು. ಆದರೆ, ಬಹುತೇಕ ಸಚಿವರು ರಾಜಭವನ ಚಲೋದಲ್ಲಿ ಪಾಲ್ಗೊಂಡ ಕಾರಣ ಕಲಾಪಕ್ಕೆ ಗೈರಾಗಿದ್ದರು. ಇದರಿಂದ ಸಿಟ್ಟಾದ ವಿರೋಧ ಪಕ್ಷದ ಶಾಸಕರು, ಯಾರೆಲ್ಲ ಸಚಿವರು ಸದನದಲ್ಲಿ ಹಾಜರಿರಬೇಕು ಎಂಬುದನ್ನು ಘೋಷಿಸುವಂತೆ ಸ್ಪೀಕರ್ ಯು.ಟಿ. ಖಾದ‌ರ್ ಅವರಲ್ಲಿ ಪಟ್ಟು ಹಿಡಿದರು. ಸ್ಪೀಕರ್ ಯು.ಟಿ. ಖಾದರ್ ಸಚಿವರ ಹೆಸರು ಹೇಳುತ್ತಿದ್ದಂತೆ, ವಿರೋಧ ಪಕ್ಷದ ಶಾಸಕರು ‘ಹಾಜರಿಲ್ಲ, ಹಾಜರಿಲ್ಲ’ ಎಂದು ಜೋರಾಗಿ ಕೂಗುತ್ತಾ ಗದ್ದಲ ಎಬ್ಬಿಸಿದರು

Read More

 ಶಾಸಕಿ ಕರೆಮ್ಮಗೆ ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮ: ಪರಮೇಶ್ವರ್ ವಿಧಾನಸಭೆ: ರಾಜ್ಯದ ಎಲ್ಲ ಶಾಸಕರ ರಕ್ಷಣೆ ನಮ್ಮ ಹೊಣೆ. ಜೆಡಿಎಸ್ ಶಾಸಕಿ ಕರೆಮ್ಮ ಅವರಿಗೆ ಮರಳು ದಂಧೆಕೋರರಿಂದ ಬೆದರಿಕೆ ಬಂದಿರುವ ಕುರಿತು ತನಿಖೆ ನಡೆಸಿ, ಎಷ್ಟೇ ದೊಡ್ಡವರಾದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು. ಪ್ರಶೋತ್ತರ ಕಲಾಪದಲ್ಲಿ ಉತ್ತರಿಸಿದ ಡಾ.ಪರಮೇಶ್ವರ್, ಯಾವುದೇ ಶಾಸಕರಿಗೂ ಸಮಸ್ಯೆಯಾಗಲು ಬಿಡುವುದಿಲ್ಲ. ರಕ್ಷಣೆ ನೀಡುವುದು ನಮ್ಮ ಪೊಲೀಸರ ಕರ್ತವ್ಯ. ದೇವದುರ್ಗ ಮಾತ್ರವಲ್ಲದೆ ರಾಜ್ಯದಲ್ಲಿ ಮರಳು ದಂಧೆ ನಡೆಯುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅದಕ್ಕೆ ಕಡಿವಾಣ ಹಾಕುತ್ತಿದ್ದಾರೆ. ಇಷ್ಟಾದರೂ ಮರಳು ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ ಕರೆಮ್ಮ ಅವರಿಗೆ ಬೆದರಿಕೆ ಹಾಕಿದವರ ಸ ವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

Read More

ನಮ್ಮಲ್ಲೇ ಓಂಕಾರಕ್ಕೆ ವಿರೋಧ ಇರೋದು ದುರದೃಷ್ಟ: ಸಂತೋಷ್ ಇಸ್ಲಾಂ ದೇಶಗಳೂ ಓಂಕಾರವನ್ನು ಗೌರವಿಸುತ್ತವೆ ಇಸ್ಲಾಂ ದೇಶಗಳಲ್ಲೂ ಸಹ ಓಂಕಾರದ ಮೂಲಕ ಯೋಗ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ನಮ್ಮ ದೇಶದ ಕೆಲವು ಎಡಬಿಡಂಗಿಗಳು ಓಂಕಾರ ವನ್ನು ವಿರೋಧಿಸುವ ಮಾನ ಸಿಕತೆಯನ್ನು ಹೊಂದಿರುವುದು ದುರಾದೃಷ್ಟ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಂಘಟನಾ ಬಿಎಲ್ ಸಂತೋಷ್ ಹೇಳಿದರು. ವಿಶ್ವಕ್ಕೆ ಶಾಂತಿ ಕೊಟ್ಟಿರುವ ಹಿಂದೂ ಧರ್ಮ ನಾಶಪಡಿಸಲು ಸಾಧ್ಯವಿಲ್ಲ: ಸಂತೋಷ್ ಧರ್ಮವನ್ನು ನಾಶ ಪಡಿಸಲು ಸಾಧ್ಯವಿಲ್ಲ, ఎల్లా ಧರ್ಮಗಳಿಗೂ ಆಶ್ರಯವನ್ನು ನೀಡುವ ಮೂಲಕ ಹಾಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶವಾದ * ಭಾರತದಲ್ಲಿ ಹಿಂದೂ ಸಮಾಜವನ್ನು ಒಗ್ಗೂಡಿಸಿ ನಮ್ಮ ಅಸ್ತಿತ್ವವನ್ನೂ ಉಳಿಸಿಕೊಳ್ಳುವ ಕಾರ್ಯ ಹಿಂದೂ ಸಮಾಜೋತ್ಸವ ಮೂಲಕ ಆಗಬೇಕಾಗಿದೆ ಎಂದರು. ಈ ವೇಳೆ ಸಿದ್ದಗಂಗಾ ಮಠದ ಕಿರಿಯ مه ಶಿವಸಿದ್ದೇಶ್ವರ ಸ್ವಾಮೀಜಿ, ಎಚ್‌ಜಿ ಚಂದ್ರಶೇಖರ್, ಇಂದಿರಮ್ಮ .ನಗರದ ಎಸ್‌ಐಟಿಯ ಬಿರ್ಲಾ ಸಭಾಂಗಣದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವಕ್ಕೆ ಶಾಂತಿಯನ್ನು…

Read More

ಹಸಿದವರ ಹೊಟ್ಟೆ ತುಂಬಿಸಿದ ಸಿದ್ದು ನನ್ನ ರಾಮ: ಪ್ರದೀಪ್ ಈಶ್ವರ್ ವಿಧಾನಸಭೆ ಬಡವರ, ಹಸಿದವರ ಹೊಟ್ಟೆ ತುಂಬಿಸಿದ ಸಿದ್ದರಾಮಯ್ಯ ಅವರು ನನ್ನ ಪಾಲಿನ ‘ಶ್ರೀರಾಮಚಂದ್ರ’ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಾಡಿಹೊಗಳಿದ್ದಾರೆ. ಮಂಗಳವಾರ ರಾಜ್ಯಪಾಲರ ಭಾಷ ಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವ ಅನುಮೋದಿಸಿ ಮಾತನಾಡಿ, ಕೇಂದ್ರ ಸರ್ಕಾರ ಮನರೇಗಾ ಯೋಜನೆ ಹೆಸರನ್ನು ವಿಬಿಜಿ ರಾಮ್ ಜಿ ಎಂದು ಬದ ಲಿಸಿದೆ. ಅಯೋಧ್ಯೆಯಲ್ಲಿ ರಾಮಂದಿರ ಕಟ್ಟಿದರು. ಆದರೆ, ಅಯೋಧ್ಯೆಯ ಶ್ರೀರಾಮಚಂದ್ರ ಮಾತ್ರ ಚುನಾವಣೆ ಯಲ್ಲಿ ಇಂಡಿಯಾ ಕೂಟಕ್ಕೆ ಒಲಿದುಬಿಟ್ಟ. ಈಗ ಮನರೇಗಾ ಹೆಸರು ಬದಲಿಸಿ ಶ್ರೀರಾಮಚಂದ್ರನನ್ನು ಒಲಿಸಿಕೊಳ್ಳಲು ಮತ್ತೆ ಯತ್ನಿಸಿದ್ದಾರೆ ಎಂದು ಆರೋಪಿಸಿ ದರು. ಜತೆಗೆ ಬಡವರ ಹಸಿವು ನೀಗಿಸುವ, ಹೊಟ್ಟೆ ತುಂಬಿಸುವ ಹಾಗೂ ಸ್ವಾಭಿಮಾನ ದಿಂದ ಬದುಕಲು ಪ್ರೇರೇಪಿಸಿದ ಸಿದ್ದರಾಮಯ್ಯ ಅವರು ನನ್ನ ಪಾಲಿನ ಶ್ರೀರಾಮಚಂದ್ರ ಎಂದರು.

Read More

12ನೇ ಶತಮಾನದ ಶರಣೆಯರು ಇಂದಿನ ಮಹಿಳೆಯರಿಗೆ ಆದರ್ಶವಾಗಬೇಕಿದೆ ಚಿತ್ರದುರ್ಗ ಜ. 28 12ನೇ ಶತಮಾನದ ಶರಣೆಯರು ಇಂದಿನ ಮಹಿಳೆಯರಿಗೆ ಆದರ್ಶವಾಗಬೇಕಿದೆ, ಮಹಿಳೆ ಯಾವುದರಲ್ಲೂ ಸಹಾ ಕಡಿಮೆ ಇಲ್ಲ ಎಲ್ಲದರಲ್ಲೂ ಸಹಾ ಸಾಧನೆ ಮಾಡಿದ್ದಾಳೆ, ಅವರಿವರ ಮಾತನ್ನು ಕೇಳದೆ ತಮ್ಮ ಸ್ವಂತಿಕೆ ಯಿಂದ ಬುದ್ದಿಯನ್ನು ಚಲಾಯಿಸಬೇಕಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ಖಂಡಿಮಠ ಮಹಿಳೆಯರಿಗೆ ಕರೆ ನೀಡಿದರು. ಜಾಗತಿಕ ಲಿಂಗಾಯತ ಮಹಾಸಭಾ(ರಿ)ಜಿಲ್ಲಾ ಮಹಿಳಾ ಘಟಕದವತಿಯಿಂದ ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ನಡೆದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಒಂದು ಕುಟುಂಬದಲ್ಲಿ ಮಹಿಳೆಯ ಪಾತ್ರ ಅತಿ ಮುಖ್ಯವಾಗಿದೆ ಯಾವ ಕುಟುಂಬದಲ್ಲೂ ಸಹಾ ಮಹಿಳೆ ಇಲ್ಲದೆ ಆ ಕುಟುಂಬ ನಡೆಯಲು ಸಾಧ್ಯವಿಲ್ಲ, ಹೆಣ್ಣು ಪುರುಷನ ಬದುಕಿಗೆ ಮುಖ್ಯವಾಗಿದ್ದಾಳೆ, ವಚನ ಸಾಹಿತ್ಯದಲ್ಲಿ ಗಂಡು, ಹೆಣ್ಣು ಎಂಬ ಬೇಧ ಇಲ್ಲದೆ ಎಲ್ಲರನ್ನು ಸಮನಾಗಿ ಕಾಣಲಾಗಿದೆ. ನಮಗೆ ಶರಣರ ಸಾಹಿತ್ಯ ಪ್ರೇರಣೆಯಾಗಬೇಕಿದೆ. ಸಂವಿಧಾನ ನೀಡಿದ ಅಭೀವ್ಯಕ್ತಿ ಸ್ವಾತಂತ್ರ್ಯವನ್ನು…

Read More