Author: ಮೃತ್ಯುಂಜಯಾಚಾರ್ ಬಿ

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

ಡಿಕೆಶಿ ದುಡಿಮೆಗೆ ಕೂಲಿ ಸಿಗಬೇಕು, ಸಿಎಂ ಆಗಬೇಕು: ಪ್ರಣವಾನಂದ ಶ್ರೀ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಅವರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದು ಅವರಿಗೆ ಕೂಲಿ ಸಿಗಬೇಕು. ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಬಳಿ ಒತ್ತಾಯಿಸುತ್ತೇವೆ ಎಂದು ಬ್ರಹಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. ಶನಿವಾರ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿ ಎಂದು ಒತ್ತಾಯಿಸಿದ ಸ್ವಾಮೀಜಿಗಳ ಮಠಕ್ಕೆ ಬಜೆಟ್‌ನಲ್ಲಿ ನಯಾಪೈಸೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಸಮುದಾಯದ ಯಾವ ಬೇಡಿಕೆಯನ್ನೂ ಸಿದ್ದರಾಮಯ್ಯ ಈಡೇರಿಸಲಿಲ್ಲ, ಹೀಗಾಗಿ ಮೇ ತಿಂಗಳಲ್ಲಿ ವಿವಿಧ ಮಠಾಧೀಶರ ಬೃಹತ್ ಸಭೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಡಿ.ಕೆ.ಶಿವಕುಮಾ‌ರ್ ಅವರ ಸಮಯ ಕೇಳಲು ಬಂದಿದ್ದೆವು. ಸಮಯ ನೀಡಲು ಅವರು ಒಪ್ಪಿದ್ದಾರೆ ಎಂದರು

Read More

ಸಚಿವ ಸಂಪುಟದಲ್ಲಿ ಅವಕಾಶ ಕೋರಿ ಸಿದ್ದು, ಡಿಕೆಶಿಗೆ ಮನವಿ: ಭರತ್ ರೆಡ್ಡಿ ಬಳ್ಳಾರಿ: ಯುವ ಶಾಸಕರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವಂತೆ ಕೋರಿ ಮತ್ತೊಮ್ಮೆ ಸಿಎಂ ಬಳಿ ಮನವಿ ಮಾಡಲಾಗುವುದು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ. ಈದ್ದಾ ಮೈದಾನದಲ್ಲಿ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತ ರಣೆ ವೇಳೆ ಯುವಕರಿಗೆ ಅವಕಾಶ ನೀಡಬೇಕೆಂದು ರಾಜ್ಯದ 45-48 ಜನ ಶಾಸಕರು ಸೇರಿ ಸಭೆ ನಡೆಸಿ ರುವುದು ನಿಜ. ಮೊದಲ ಬಾರಿಗೆ ಹಾಗೂ ಎರಡನೇ ಬಾರಿ ಶಾಸಕರಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅರ್ಹರಿಗೆ ಅವಕಾಶ ನೀಡುವಂತೆ ಸಿಎಂ ,ಡಿ. ಸಿ. ಎಂ. ಬಳಿ ಮಾನವಿ ಮಾಡಿಕೊಳ್ಳಲಾಗುವುದು. ದೆಹಲಿಗೆ ತೆರಳಿ, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು

Read More

ಆ್ಯಂಬುಲೆನ್ಸಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಕಿ 17 ವರ್ಷದ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡು, ಚಾಮ ರಾಜನಗರ ಸಿಮ್ಸ್ ಆಸ್ಪತ್ರೆಗೆ ತೆರಳುವಾಗ ಆ್ಯಂಬುಲೆನ್ಸ್‌ನಲ್ಲಿಯೇ ಹೆರಿಗೆಯಾ ಗಿರುವ ಘಟನೆಯು ತಾಲೂಕಿನ ದೇಶಿಪುರ ಗ್ರಾಮದಲ್ಲಿ ನಡೆದಿದೆ. ಆಕೆಯನ್ನು ಗರ್ಭಿಣಿ ಮಾಡಿದ ಆರೋಪದ ಮೇರೆಗೆ ಅಪ್ರಾಪ್ತಿಯ ಸಂಬಂಧಿಯೂ ಆಗಿ ರುವ ದೇಶಿಪುರ ಗ್ರಾಮದ ಸುರೇಶ್ (46) ಎಂಬಾತನ ವಿರುದ್ಧ ಪೋಕೋ ಕಾಯ್ದೆಯಡಿಪ್ರಕರಣದಾಖಲಿಸಿದ್ದಾರೆ. ಬಾಲಕಿಗೆ 3 ದಿನಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಗುಂಡ್ಲುಪೇಟೆ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದ್ದಾರೆ. ಬಳಿಕ ಅಲ್ಲಿಂದ ಚಾಮರಾಜನಗರದ ಸಿಮ್ಸ್‌ಗೆ ತೆರಳಲು ವೈದ್ಯರು ಸೂಚಿಸಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್‌ನಲ್ಲಿ ತೆರಳುವಾಗ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಾಳೆ. ಇದೇ ವೇಳೆ ಗರ್ಭಿಣಿಯಾಗಲು ಸಂಬಂಧಿಕ ಸುರೇಶ್ ಕಾರಣ ಎಂದು ಅಪ್ರಾಪ್ತಯು ತನ್ನ ತಂದೆ ಬಳಿ ನಿವೇದಿಸಿಕೊಂಡಿದ್ದಾಳೆ. ಬಳಿಕ ಅಪ್ರಾಪ್ತಿಯ ತಂದೆ ದೂರು ನೀಡಿದ್ದು, ಸುರೇಶ್ ವಿರುದ್ಧ ಪೋಟೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Read More

ಅಮೆರಿಕದ ಅಕ್ಕ ರಜತ ಉತ್ಸವಕ್ಕೆ ನಟ ರಿಷಬ್ ಶೆಟ್ಟಿ ರಾಯಭಾರಿ : ಅಮೆರಿಕದಲ್ಲಿರುವ ಕನ್ನಡಿಗರ ಅತಿ ದೊಡ್ಡ ಸಾಂಸ್ಕೃತಿಕ ಸಂಭ್ರ ಮ ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ-ಫಿಲಡೆಲ್ಪಿಯಾ 2026’ ಇದೀಗ ಮತ್ತಷ್ಟು ವೈಭವ ಪಡೆದುಕೊಂಡಿದೆ. ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಅಂಗ ನಡೆಯುತ್ತಿರುವ ಐತಿಹಾಸಿಕ ಮಹೋತ್ಸವಕ್ಕೆ ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಸಾಂಸ್ಕೃತಿಕ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ-ಫಿಲಡೆಲಿಯಾ 2026’ ಸೆಪ್ಟೆಂಬರ್ 4ರಿಂದ 6ರವರೆಗೆ ನಡೆಯಲಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿ ಮೇಲಿನ ಪ್ರೀತಿ, ವಿಶಿಷ್ಟ ಕಲಾತ್ಮಕ ದೃಷ್ಟಿಕೋನ ಹೊಂದಿರುವ ರಿಷಬ್ ಅವರನ್ನು ಸಾಂಸ್ಕೃತಿಕ ರಾಯಭಾ ರಿಯಾಗಿ ಆಯ್ಕೆ ಮಾಡಿರುವುದು ಉತ್ತರ ಅಮೆರಿಕದ ಕನ್ನಡ ಸಮುದಾಯಕ್ಕೆ ಹೆಮ್ಮೆ, ಸಂತೋಷ ಎಂದು ಅಕ್ಕ ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

Read More

‘ಕೈ’ ಟಿಕೆಟ್ ಕಗ್ಗಂಟು ಶಮನ! ; ಯಾರ ‘ಕೈ’ ಗೆ ಬಿಫಾರಂ ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ನಲ್ಲಿ ಟಿಕೆಟ್ ಕಗ್ಗಂಟು ದೊಡ್ಡ ತಲೆನೋವಾಗಿತ್ತು. ಅದರಲ್ಲೂ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ದೊಡ್ಡ ಪೈಪೋಟಿ ನಡೆದು ಹೋಗಿತ್ತು. ಇದೀಗ ಈ ಎಲ್ಲಾ ಗೊಂದಲಗಳಿಗೂ ಕೊನೆಗೂ ಬ್ರೇಕ್ ಬಿದ್ದಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಸರಣಿ ಸಭೆಗಳನ್ನು ನಡೆಸುವ ಮೂಲಕ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಲ್ಲಿ ಸಫಲರಾಗಿದ್ದಾರೆ. ವಸತಿ ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವು ಮುಖಂಡರು ಈ ಬಾರಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ನೀಡಬೇಕು ಎಂದು ಬಿಗಿಪಟ್ಟು ಹಿಡಿದಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಸೇರಿ ಹಲವರು, ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ, ಅವರ ಮಗ ತೋಟಗಾರಿಕೆ…

Read More

ನಾಟಕ ನಿರ್ದೇಶಕರು, ಸಹಾಯಕ ನಿರ್ದೇಶಕರ ಆಯ್ಕೆಗೆ ಅರ್ಜಿ ಆಹ್ವಾನ ಚಿಕ್ಕಮಗಳೂರು: ಇಲ್ಲಿನ ಬಸವ ತತ್ವ ಪೀಠದ ಡಾ. ಮರುಳಸಿದ್ಧ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಮಕ್ಕಳಿಗಾಗಿ ದಾಸೋಹಂ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಮಕ್ಕಳಿಗೆ ಮುಖ್ಯವಾಗಿ ವಚನ ಗಾಯನ, ನಾಟಕ, ರಂಗಗೀತೆ, ವಚನ ಮತ್ತು ಜನಪದ ನೃತ್ಯ, ಪೇಂಟಿಂಗ್, ಕುಂಬಾರಿಕೆ, ವನ ವಿಹಾರ, ಜಲ ವಿಹಾರ, ಕತೆ, ಮುಖವಾಡ ತಯಾರಿಕೆ, ಮಕ್ಕಳ ಚಲನಚಿತ್ರ ಪ್ರದರ್ಶನ, ಓರೆಗಾಮಿ, ಗಮನ ಕೇಂದ್ರೀಕರಣ ತರಬೇತಿ ಮುಂತಾದ ಚಟುವಟಿಕೆಗಳು ನಡೆಯಲಿವೆ. ಏಪ್ರಿಲ್ ನಲ್ಲಿ 17ದಿನ ಶಿಬಿರ ನಡೆಯಲಿದ್ದು, ಶಿಬಿರದ ಮಕ್ಕಳಿಗೆ ನಾಟಕ ನಿರ್ದೇಶನ ಮಾಡಲು ರಂಗಭೂಮಿ ಪರಿಣಿತರಿಂದ ಅರ್ಜಿ ಆಹ್ವಾನಿಸಲಾಗಿದೆ. ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕ ಕಾರ್ಯ ನಿರ್ವಹಿಸಲು ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ. ರಂಗಭೂಮಿಯಲ್ಲಿ ತರಬೇತಿ ಹೊಂದಿದವರು ಹಾಗೂ ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡಿರುವ ಅನುಭವ ಅಪೇಕ್ಷಣೀಯ. ಆಯ್ಕೆಯಾದವರಿಗೆ ಗೌರವ ಸಂಭಾವನೆ, ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಆಸಕ್ತರು ಅರ್ಜಿಯಲ್ಲಿ ತಮ್ಮ ರಂಗಾನುಭವದ…

Read More

ಯುಗಾದಿ ಜೂಜಾಟ ಚಿತ್ರದುರ್ಗ ಜಿಲ್ಲೆ ಯಲ್ಲಿ ವಶಪಡಿಸಿ ಕೊಂಡ ಹಣ ಎಷ್ಟು ಚಿತ್ರದುರ್ಗ: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜೂಜಾಟ ಪ್ರಕರಣಗಳನ್ನು ತಡೆಯಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಕೈಗೊಂಡಿದೆ. ಮಾ. 17 ರಿಂದ 21 ರವರೆಗೆ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 230 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಅವಧಿಯಲ್ಲಿ 1,189 ಆರೋಪಿತರನ್ನು ಪೊಲೀಸರು ಬಂಧಿಸಿದ್ದು, ಒಟ್ಟು ₹15,48,925 ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

Read More

ಹೊಸ ಜಾಹೀರಾತು ನೀತಿಗೆ ಆಕ್ರೋಶ; ಪತ್ರಿಕೆಗಳ ದಮನಕ್ಕೆ ಮುಂದಾದ ಸರಕಾರ ಮೈಸೂರು: ರಾಜ್ಯ ಸರಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ ಹಾಗೂ ಸೇಡಿನ ಮನೋಭಾವ ಒಳಗೊಂಡ ನೀತಿಯಾಗಿದ್ದು, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಪಾಲಿಗೆ ಮರಣ ಶಾಸನವಾಗಿದೆ. ಪತ್ರಿಕೆಗಳು ನಾಶವಾದರೆ ಪ್ರಜಾಪ್ರಭುತ್ವವೂ ನಾಶವಾಗಲಿದೆ ಎಂಬ ಅರಿವು ಸರಕಾರಕ್ಕೆ ಇರಬೇಕು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಅಭಿಪ್ರಾಯಪಟ್ಟಿದೆ. ಈ ಸಂಬಂಧ ಪತ್ರಕರ್ತರ ಭವನದಲ್ಲಿ ಶನಿವಾರ ಸಂಘದ ಅಧ್ಯಕ್ಷ ಕೆ.ದೀಪಕ್‌ ನೇತೃತ್ವದಲ್ಲಿ ನಡೆದ ಪತ್ರಿಕಾ ಸಂಪಾದಕರ ಸಭೆಯಲ್ಲಿ ರಾಜ್ಯ ಸರಕಾರವು ʻಕರ್ನಾಟಕ ಜಾಹೀರಾತು ನೀತಿʼಯನ್ನು ಜಾರಿಗೆ ತರಲು ಮುಂದಾಗುವ ಮೂಲಕ ಸಂಕಷ್ಟದಲ್ಲಿರುವ ಪತ್ರಿಕೆಗಳನ್ನು ಮೇಲೆತ್ತುವ ಬದಲು ಕುತ್ತಿಗೆ ಹಿಸುಕಿ ಕೊಲ್ಲಲು ಸಂಚು ರೂಪಿಸಿದೆ ಎಂಬ ಅನಿಸಿಕೆ ಸಭೆಯಲ್ಲಿ ಪತ್ರಿಕಾ ಸಂಪಾದಕರು ಕಳವಳ ವ್ಯಕ್ತಪಡಿಸಿದರು. ಸಾಮಾನ್ಯ ವರ್ಗದ ಪತ್ರಿಕೆಗಳು ಮಾಧ್ಯಮ ಪಟ್ಟಿಗೆ ಸೇರಲು 2 ವರ್ಷದಿಂದ 3 ವರ್ಷಕ್ಕೆ ಪ್ರಕಟಣಾ ಅವಧಿಯನ್ನು ವಿಸ್ತರಿಸಿರುವುದು ಹಾಗೂ…

Read More

ವಿದ್ಯುತ್ ವ್ಯತ್ಯಯ; ಬೆಸ್ಕಾಂ ಚಿತ್ರದುರ್ಗ: ಚಿತ್ರದುರ್ಗದಿಂದ ಅಮೃತಾಪುರ ರೈಲ್ವೇ ನಿಲ್ದಾಣದವರಗೆ ಮಾರ್ಚ್ 22 ರಂದು 66/11 ಕೆ.ವಿ ಹೆಚ್.ಡಿ.ಪುರ, ಗೊಡಬನಾಳ್, ಚಿತ್ರಹಳ್ಳಿ, ಅರಸನಕಘಟ್ಟ ಮತ್ತು ಚಿಕ್ಕಜಾಜೂರು ಮಾರ್ಗಗಳಲ್ಲಿ ವಿದ್ಯುತ್ ಮಾರ್ಗ ಮುಕ್ತತೆ ನೀಡಲಾಗಿದೆ. ಸದರಿ ಮಾರ್ಗದಲ್ಲಿ ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಎಚ್.ಡಿ.ಪುರ, ತಾಳ್ಯ ಕಾವಲು, ಉಪ್ಪರಿಗೇನಹಳ್ಳಿ, ಬೂದಿಪುರ, ನಲ್ಲಿಕಟ್ಟೆ, ತಾಳ್ಯ, ಮತ್ತಿಘಟ್ಟ, ಕೆರೆಯಾಗಲಹಳ್ಳಿ, ಚೌಡಗೊಂಡನಹಳ್ಳಿ, ತೇಕಲವಟ್ಟಿ, ಬಿ.ಆರ್.ಗುಡಿ, ಚಾಮುಂಡೇಶ್ವರಿ, ಮಹದೇವನಕಟ್ಟೆ, ದೊಡ್ಡಾಪುರ, ಕಕ್ಕೇರು, ಹೋಸೂರು, ಜುಂಜಪ್ಪ ಮಾರ್ಗ, ಗೊಡಬನಹಾಳ್, ಆನ್ನೆಹಾಳು, ವಜ್ರ ಮಾರ್ಗ, ಈಚಘಟ್ಟ, ಟಿ.ನುಲೆನೂರು, ಬಿ.ಜಿಹಳ್ಳಿ, ಚಿತ್ರಹಳ್ಳಿ, ಮದ್ದೇರು, ಶಿವಗಂಗ, ಲಿಂಗದಹಳ್ಳಿ, ಕೇಶವಪುರ, ದಾಸಯ್ಯನಹಟ್ಟಿ, ಕೊಂಡಾಪುರ, ಆಂನೇಯ ದೇವಸ್ಥಾನ ಪ್ರದೇಶ, ಬಸವೇಶ್ವರ ದೇವಸ್ಥಾನ ಪ್ರದೇಶ, ಮೇಕೇನಹಟ್ಟಿ, ಕಾಟಯ್ಯನಕೆರೆ ಪ್ರದೇಶ, ನರಸಿಂಹಸ್ವಾಮಿ ದೇವಸ್ಥಾನ(ಗರಗ), ಅರಸನಘಟ್ಟ, ಗರಗ ಕಾವಲು, ಸಾದರಹಳ್ಳಿ, ಚಿಕ್ಕಂದವಾಡಿ, ಕರೀಮಟ್ಟಿ, ಚಿಕ್ಕನಕಟ್ಟೆ, ಚಿಕ್ಕಹೆಮ್ಮಿಗನೂರು, ಕೆ.ಎನ್.ಹಳ್ಳಿ, ತನಿಗೆಹಳ್ಳಿ, ಹೆರೇಕಂದವಾಡಿ, ಗುಂಜಿಗನೂರು, ರಂಗವ್ವನಹಳ್ಳಿ, ಬಿ.ದುರ್ಗ, ಐಯನಹಳ್ಳಿ, ಕಡೂರು, ಕೋಟೇಹಾಳು, ಎಸ್.ಹೆಚ್.ಹಳ್ಳಿ, ಚಿಕ್ಕಂದವಾಡಿ, ಚಿಕ್ಕಜಾಜೂರು, ಕವಲಹಟ್ಟಿ, ಹೋಸಹಳ್ಳಿ,…

Read More

ರಂಜಾನ್‌ ನಮಾಜ್ ವೇಳೆ ಹೆಜ್ಜೇನು ದಾಳಿ; ಐವರ ಸ್ಥಿತಿ ಗಂಭೀರ ದಾವಣಗೆರೆ: ರಂಜಾನ್‌ ನಮಾಜ್‌ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಐವರ ಸ್ಥಿತಿ ಗಂಭೀರವಾದ ಘಟನೆ ಆನಗೋಡು ಗ್ರಾಮದ ಬಳಿ ಶನಿವಾರ ನಡೆದಿದೆ. ಗ್ರಾಮದ ಬಳಿ ರಂಜಾನ್‌ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಹೆಜ್ಜೇನುಗಳು ಏಕಾಏಕಿ ದಾಳಿ ನಡೆಸಿದ್ದು, ಸುಮಾರು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ. ಕೂಡಲೇ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಮಾಜ್ ಮಾಡುತ್ತಿದ್ದ ಸಂದರ್ಭದಲ್ಲಿ, ಕೆಲವು ಯುವಕರು ಅಲ್ಲಿದ್ದ ಹೆಜ್ಜೇನು ಗೂಡಿಗೆ ಕಲ್ಲೆಸೆದಿದ್ದಾರೆ ಎನ್ನಲಾಗಿದೆ. ಇದರಿಂದ ಕೆರಳಿದ ಹೆಜ್ಜೇನುಗಳ ಗುಂಪು ಪ್ರಾರ್ಥನೆಯಲ್ಲಿದ್ದ ಜನರ ಮೇಲೆ ಏಕಾಏಕಿ ಎರಗಿದೆ. ಹೆಜ್ಜೇನು ದಾಳಿ ಮಾಡುತ್ತಿದ್ದಂತೆ ನೂರಾರು ಜನರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಐಸಿಯು ವಿಭಾಗದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಮಾಯಕೊಂಡ ಶಾಸಕ ಕೆ.ಎಸ್‌.ಬಸವಂತಪ್ಪ…

Read More