Author: ಮೃತ್ಯುಂಜಯಾಚಾರ್ ಬಿ

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

ಅಧ್ಯಾತ್ಮ ರಶ್ಮಿ – 2   ಶ್ವೇತವಸ್ತ್ರದ ಸಂತ ಬೆಳಗೆರೆಯ  ಕೃಷ್ಣಶಾಸ್ತ್ರಿಗಳು ಅದು ನಾನು ಹತ್ತನೇ ತರಗತಿಯನ್ನು ಮುಗಿಸಿ, ಪಿಯುಸಿಯ ಮೆಟ್ಟಿಲೇರುವ ಸಮಯ. ಕೇವಲ ಹಳ್ಳಿಯ ಶಾಲೆಗಳಲ್ಲೇ ಓದಿ ಬರೆದ ನಾನು ಸ್ವಲ್ಪ ದಡ್ಡನಾದ್ದರಿಂದ ಅಂದರೆ town ನಲ್ಲಿ ಓದಿದ್ದರೆ ಬುದ್ಧಿವಂತನಾಗಿರುತ್ತಿದ್ದೆ ಎಂದಲ್ಲ. ಪಿಯುಸಿ ಯಲ್ಲಿ ಎಲ್ಲರಂತೆ science ಓದಬೇಕು ಎಂಬ ಇಚ್ಛೆಯಿಂದ ಶಿರಾ ನಗರದ ಕಾಲೇಜೊಂದರಲ್ಲಿ science ಮುಗಿಸಿದೆ. ಆದರೆ ಅದು ಅಪೂರ್ಣವೆನಿಸಿತು. ಆಗ commerce ವಿಭಾಗಕ್ಕಿದ್ದ demand ನನ್ನನ್ನು ಆಕರ್ಷಿಸಿತು. ಆ ಸಂದರ್ಭದಲ್ಲಿ ನನ್ನ ಮನಸ್ಸು ಕೂಡ ವ್ಯಗ್ರವಾಗಿತ್ತು. ಅದಕ್ಕೆ ಕಾರಣವೇನೋ ಗೊತ್ತಿಲ್ಲ. ಅಪ್ಪ ತುಂಬಾ ಭಾವುಕರು ಅದರಲ್ಲೂ ನನ್ನ ವಿಷಯದಲ್ಲಿ ಅವರಿಗೆ ತುಂಬಾ ಕಾಳಜಿ. ಸರಿ, ಮಗ ಕಣ್ಮುಂದೆ ಓದಲಿ ಅಂತ ಬೆಳಗೆರೆ ಕಾಲೇಜಿಗೆ ಮತ್ತೆ ಕಾಮರ್ಸ್ ಓದಲು  admission ಮಾಡಿಸಿದರು‌. ಎರಡು ವಿಭಾಗಗಳಲ್ಲಿ ಪಿಯುಸಿ ಮಾಡಿದವನು ನಾನೇ‌ ಏನೋ ತಿಳಿಯದು. ಬೆಳಗೆರೆ ಎಂದರೆ ಕೃಷ್ಣಶಾಸ್ತ್ರಿಗಳ ಬಗ್ಗೆ ಕೇಳಿದ್ದೆ. ಆ ವ್ಯಕ್ತಿ ಹೇಗಿರಬಹುದು..? ಅಪ್ಪ ಯಾವಾಗ್ಲೂ ಹೇಳ್ತಿರ್ತಾರೆ “…

Read More

🗓️ ನಿತ್ಯ ಭವಿಷ್ಯ – 09/04/2026 (ಗುರುವಾರ) ಮೇಷ ರಾಶಿ ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಕೆಲಸಗಳಲ್ಲಿ ಸಾಧನೆ ಕಾಣಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ. ಹಣಕಾಸಿನಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ. ವೃಷಭ ರಾಶಿ ವ್ಯವಹಾರದಲ್ಲಿ ಉತ್ತಮ ಲಾಭದ ಸೂಚನೆ ಇದೆ. ಹೊಸ ಅವಕಾಶಗಳು ಬರಬಹುದು. ಆರೋಗ್ಯದ ಕಡೆ ಗಮನ ಕೊಡಿ. ಸ್ನೇಹಿತರ ಸಹಕಾರ ಸಿಗುತ್ತದೆ. ಮಿಥುನ ರಾಶಿ ಇಂದು ನೀವು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ಲಾಭ ತರುತ್ತವೆ. ಉದ್ಯೋಗದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಕುಟುಂಬದಲ್ಲಿ ಶಾಂತಿ. ಕರ್ಕಾಟಕ ರಾಶಿ ಭಾವನಾತ್ಮಕವಾಗಿ ಸ್ವಲ್ಪ ಅಸ್ಥಿರತೆ ಕಾಣಬಹುದು. ಧೈರ್ಯದಿಂದ ಮುಂದೆ ಸಾಗಿರಿ. ಹಣಕಾಸಿನಲ್ಲಿ ಸುಧಾರಣೆ. ಬಂಧುಗಳ ಜೊತೆ ಉತ್ತಮ ಸಮಯ. ಸಿಂಹ ರಾಶಿ ಪ್ರತಿಷ್ಠೆ ಹೆಚ್ಚಾಗುವ ದಿನ. ಕೆಲಸದಲ್ಲಿ ಮೆಚ್ಚುಗೆ ದೊರೆಯುತ್ತದೆ. ಹೊಸ ಪರಿಚಯಗಳು ಉಪಯೋಗಕರವಾಗುತ್ತವೆ. ಆರೋಗ್ಯ ಉತ್ತಮ. ಕನ್ಯಾ ರಾಶಿ ಇಂದು ನಿಮ್ಮ ಪರಿಶ್ರಮಕ್ಕೆ ಫಲ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಶುಭ ಸುದ್ದಿ. ಹಣಕಾಸು ವ್ಯವಹಾರದಲ್ಲಿ ಜಾಗ್ರತೆ ಇರಲಿ. ತುಲಾ ರಾಶಿ ಮನಸ್ಸಿನಲ್ಲಿ ಹೊಸ ಆಲೋಚನೆಗಳು…

Read More

ಇನ್ನೂ ಬಾರದ ಬೆಳೆ ವಿಮೆ ; ಸಂಕಷ್ಟದಲ್ಲಿ ಅನ್ನದಾತ ಚಳ್ಳಕೆರೆ: ತಾಲ್ಲೂಕಿನ ಸಾವಿರಾರು ಶೇಂಗಾ ಬೆಳೆಗಾರರಿಗೆ ಇನ್ನೂ ಬೆಳೆ ವಿಮೆ ಪರಿಹಾರ ಹಣ ದೊರೆಯದೇ ಸಂಕಷ್ಟ ಮುಂದುವರಿದಿರುವ ಹಿನ್ನೆಲೆಯಲ್ಲಿ, ತಕ್ಷಣ ವಿಮೆ ಹಣ ಮಂಜೂರು ಮಾಡಿಸಬೇಕೆಂದು ರೈತರು ಶಾಸಕ ಟಿ. ರಘುಮೂರ್ತಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. 2025-26ನೇ ಸಾಲಿನಲ್ಲಿ ಖಾಸಗಿ ಬೆಳೆ ವಿಮೆ ಕಂಪನಿಯಿಂದ ತಾಲ್ಲೂಕಿನ ಸುಮಾರು 36,766 ರೈತರು ಒಟ್ಟು 1,14,900 ಎಕರೆ ಪ್ರದೇಶಕ್ಕೆ ಬೆಳೆ ವಿಮೆ ಮಾಡಿಸಿದ್ದರೂ, ಕಂಪನಿಯ ನಿರ್ಲಕ್ಷ್ಯದಿಂದ ಪರಿಹಾರ ಹಣ ಬಿಡುಗಡೆಯಾಗಿಲ್ಲ ಎಂದು ರೈತರು ದೂರಿದ್ದಾರೆ. ಈ ಕುರಿತು ಕೃಷಿ ಆಯುಕ್ತರಿಗೆ ಶಿಫಾರಸು ಮಾಡಿ ತಕ್ಷಣ ಪರಿಹಾರ ನೀಡಿಸಬೇಕೆಂದು ತಾಲ್ಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘ ಮನವಿ ಸಲ್ಲಿಸಿದೆ. ಸಂಘದ ಅಧ್ಯಕ್ಷರು ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಶಿವಲಿಂಗಪ್ಪ ಮಾತನಾಡಿ, ಕಳೆದ ವರ್ಷವೂ ಖಾಸಗಿ ಬೆಳೆ ವಿಮಾ ಕಂಪನಿಯ ನಿರ್ಲಕ್ಷ್ಯದಿಂದ ತಾಲ್ಲೂಕಿನ ಸಾವಿರಾರು ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಹೇಳಿದರು.…

Read More

ಕಡತಗಳ ವಿಲೇವಾರಿಗೆ ಡೆಡ್ ಲೈನ್ ಫಿಕ್ಸ್ ; ಕರ್ತವ್ಯ ಲೋಪ ಎಸಗಿದರೆ ಶಿಸ್ತು ಕ್ರಮ ಚಿತ್ರದುರ್ಗ: ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಬುಧವಾರ ನಗರಸಭೆ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ, ವಿವಿಧ ವಿಭಾಗಗಳ ಕಾರ್ಯವೈಖರಿಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಇ-ಸ್ವತ್ತು ವಿತರಣೆ ಹಾಗೂ ಸಾರ್ವಜನಿಕ ಕೆಲಸಗಳ ವಿಳಂಬಕ್ಕೆ ಅಸಮಧಾನ ವ್ಯಕ್ತಪಡಿಸಿದರು. ಪರಿಶೀಲನೆ ವೇಳೆ ಸಾರ್ವಜನಿಕರಿಂದ ಕೇಳಿಬಂದ ದೂರುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಇ-ಸ್ವತ್ತು ವಿತರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ತಿಂಗಳುಗಟ್ಟಲೆ ಇ-ಸ್ವತ್ತು ಅರ್ಜಿಗಳನ್ನು ಬಾಕಿ ಇಟ್ಟುಕೊಳ್ಳುವುದು ಸರಿಯಲ್ಲ. ನಿಗದಿತ ಕಾಲಮಿತಿಯೊಳಗೆ ಅರ್ಜಿಗಳನ್ನು ಪರಿಶೀಲಿಸಿ ವಿತರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಾಂತ್ರಿಕ ಕಾರಣಗಳನ್ನು ನೀಡಿ ಸಾರ್ವಜನಿಕರನ್ನು ಅಲೆದಾಡಿಸಬಾರದು. ಒಂದು ವೇಳೆ ಸಮಸ್ಯೆಗಳಿದ್ದರೆ ಕೂಡಲೇ ಗಮನಕ್ಕೆ ತಂದು ಬಗೆಹರಿಸಿಬೇಕು ಎಂದರು. ಕಚೇರಿಯ ಪ್ರತಿ ವಿಭಾಗಕ್ಕೂ ಭೇಟಿ ನೀಡಿ, ಬಾಕಿ ಇರುವ ಕಡತಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಗಡುವು ನೀಡಿದರು. ಕಂಪ್ಯೂಟರ್ ಮತ್ತು ಆನ್‌ಲೈನ್ ಸೌಲಭ್ಯಗಳಿದ್ದರೂ ಕೆಲಸ ವೇಗವಾಗಿ ನಡೆಯುತ್ತಿಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ…

Read More

ಸ್ವಯಂ ಗಣತಿಯಲ್ಲಿ ಕಾಣದ ಪ್ರಗತಿ; ಶೇ. 100 ರಷ್ಟು ಸಾಧನೆಗೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಚಿತ್ರದುರ್ಗ: ಭಾರತದ ಜನಗಣತಿ-2027ರ ಅಂಗವಾಗಿ ಜಿಲ್ಲೆಯಲ್ಲಿ ‘ಸ್ವಯಂ ಗಣತಿ’ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಸ್ವಯಂ ಗಣತಿ ಕಾರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯಲ್ಲಿ ಸ್ವಯಂ ಗಣತಿ ಕಾರ್ಯ ಕೈಗೊಳ್ಳುವ ಸಂಬಂಧ ವಿವಿಧ ಇಲಾಖಾ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನಗಣತಿಯ ಮೊದಲ ಹಂತವಾದ ಮನೆ ಪಟ್ಟಿ ತಯಾರಿಕೆ ಈಗಾಗಲೇ ಆರಂಭವಾಗಿದ್ದು, ಸಾರ್ವಜನಿಕರು ತಾವಾಗಿಯೇ ಮಾಹಿತಿ ನೀಡುವ ‘ಸ್ವಯಂ ಗಣತಿ’ ಕಾರ್ಯವನ್ನು ಜಿಲ್ಲೆಯಲ್ಲಿ ಚುರುಕುಗೊಳಿಸಬೇಕು ಎಂದು ತಿಳಿಸಿದ ಅವರು, ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ಗ್ರೂಪ್ ‘ಡಿ’ ವರೆಗಿನ ಎಲ್ಲಾ ಸಿಬ್ಬಂದಿಗಳು ಮೊದಲು ತಮ್ಮ ಸ್ವಯಂ ಗಣತಿಯನ್ನು ಪೂರ್ಣಗೊಳಿಸಬೇಕು. ಇಲಾಖಾ ಮುಖ್ಯಸ್ಥರು ತಮ್ಮ ಕಚೇರಿಯ ಶೇ.100 ರಷ್ಟು ಸ್ವಯಂ…

Read More

ದ್ವಿತೀಯ ಪಿಯು ಫಲಿತಾಂಶ ಪ್ರಕಟಣೆಗೆ ಕೌಂಟ್ ಡೌನ್ ; ಹಲವು ವಿಶೇಷ ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. 2026ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಏ.9 ರ ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮಹತ್ವದ ಮಾಹಿತಿ ನೀಡಿದೆ. ಈ ಬಾರಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಫಲಿತಾಂಶವನ್ನು ಹಲವು ಮಾರ್ಗಗಳ ಮೂಲಕ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ / ಹಾಲ್ ಟಿಕೆಟ್ ಸಂಖ್ಯೆ ಬಳಸಿ ಕೆಳಗಿನ ಮಾರ್ಗಗಳ ಮೂಲಕ ಫಲಿತಾಂಶ ವೀಕ್ಷಿಸಬಹುದು: ಅಧಿಕೃತ ಜಾಲತಾಣ: karresults.nic.in ಮೊಬೈಲ್ ಆಪ್: ಕರ್ನಾಟಕ ಒನ್ (Karnataka One) SMS / WhatsApp: ನೊಂದಾಯಿತ ಮೊಬೈಲ್ ಸಂಖ್ಯೆಗೆ ನೇರ ಸಂದೇಶ ಕಾಲೇಜುಗಳಲ್ಲಿ ಮಧ್ಯಾಹ್ನ 3 ಗಂಟೆಯಿಂದ ಫಲಿತಾಂಶ ಪಟ್ಟಿ ಲಭ್ಯವಾಗಲಿದೆ. ಈ ವರ್ಷದ ವಿಶೇಷತೆ ಎಂದರೆ, ಇತಿಹಾಸದಲ್ಲೇ ಮೊದಲ ಬಾರಿಗೆ…

Read More

ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದ ಭವ್ಯ ಮೆರವಣಿಗೆಗೆ ಸಜ್ಜು ಚಿತ್ರದುರ್ಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಅಂಗವಾಗಿ ಏ.14ರಂದು ಬೆಳಿಗ್ಗೆ 9 ಗಂಟೆಗೆ ನಗರದ ಕೋಟೆ ಮುಂಭಾಗದಿಂದ ಭವ್ಯ ಮೆರವಣಿಗೆ ಆರಂಭವಾಗಲಿದೆ. ವಿವಿಧ ಜಾನಪದ ಕಲಾತಂಡಗಳೊಂದಿಗೆ ಹೊರಡುವ ಈ ಮೆರವಣಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಶ್ರೀ ಮಹರ್ಷಿ ವಾಲ್ಮೀಕಿ ಭವನವನ್ನು ತಲುಪಲಿದೆ. ನಂತರ 11 ಗಂಟೆಗೆ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಅಧಿಕೃತ ಜನ್ಮ ದಿನಾಚರಣೆ ಕಾರ್ಯಕ್ರಮ ಹಾಗು ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲಾ ಜಿಲ್ಲಾ ಅಧಿಕಾರಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿವಿಧ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆ ತಿಳಿಸಿದೆ.

Read More

ವಿದ್ಯಾರ್ಥಿಗಳೇ..ಪೋಷಕರೇ ನಿಮಗೊಂದು ಸಿಹಿ ಸುದ್ದಿ; ಇಲ್ಲಿ ಎಲ್ಲವೂ ಉಚಿತ ಚಿತ್ರದುರ್ಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ವಾಲಿಬಾಲ್ ಮತ್ತು ಅಥ್ಲೆಟಿಕ್ಸ್ ಕ್ರೀಡೆಗಳಿಗೆ ಸಂಬಂಧಿಸಿದಂತೆ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರ ಆಯೋಜಿಸಲಾಗಿದೆ. ಏಪ್ರಿಲ್ 10 ರಿಂದ 30ರ ವರೆಗೆ, ಪ್ರತಿನಿತ್ಯ ಬೆಳಗ್ಗೆ 6.30 ರಿಂದ 8.30 ಗಂಟೆಯ ವರೆಗೆ ಮತ್ತು ಸಂಜೆ 5 ರಿಂದ 7 ಗಂಟೆಯ ವರಗೆ ತರಬೇತಿ ನೀಡಲಾಗುವುದು. ಹಾಸ್ಟೆಲ್ ಮಕ್ಕಳು ಸೇರಿದಂತೆ ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ವಾಲಿಬಾಲ್ ತರಬೇತುದಾರ ಮಹಮ್ಮದ್ ಮಹೀಬುಲ್ಲಾ ಮೊಬೈಲ್ ಸಂಖ್ಯೆ 9611673475 ಮತ್ತು ಅಥ್ಲೆಟಿಕ್ ತರಬೇತುದಾರ ತಿಪ್ಪಣ್ಣ ಎಸ್. ಮಾಳಿ ಮೊಬೈಲ್ ಸಂಖ್ಯೆ 9380889647 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Read More

ಮೊರಾರ್ಜಿ ವಸತಿ ಶಾಲೆ ಪ್ರವೇಶ ಪರೀಕ್ಷೆಗೆ ದಿನಾಂಕ ನಿಗದಿ ಚಿತ್ರದುರ್ಗ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಡಾ.ಎಪಿಜೆ ಅಬ್ದುಲ್ ಕಲಾಂ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 6ನೇ ತರಗತಿ ಪ್ರವೇಶಕ್ಕಾಗಿ ಏ.12 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಇಲಾಖಾ ವೆಬ್‌ಸೈಟ್ https://erp.dom.karnataka.hov.in/adm/admission/studentHalltiket ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಗಳು ಹಾಗೂ ಜಿಲ್ಲಾ, ತಾಲ್ಲೂಕು ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Read More

ಕಲ್ಲೇಶ್ವರ ಸ್ವಾಮಿ ದೊಡ್ಡ ರಥೋತ್ಸವಕ್ಕೆ ಕ್ಷಣಗಣನೆ; ಕಲ್ಲೇದೇವರಪುರದಲ್ಲಿ ಭಕ್ತ ಸಮೂಹ ಜಗಳೂರು: ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ಆರಾಧ್ಯ ದೈವವಾದ ಶ್ರೀ ಕಲ್ಲೇಶ್ವರ ಸ್ವಾಮಿ ದೊಡ್ಡ ರಥೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಶ್ರೀ ಕ್ಷೇತ್ರದತ್ತ ಭಕ್ತ ಸಮೂಹ ಹರಿದು ಬರುತ್ತಿದೆ. ಸಂಜೆ 4.30 ಕ್ಕೆ ರಥೋತ್ಸವ ನೆರವೇರಲಿದೆ. ಗ್ರಾಮಕ್ಕೆ ಕಲ್ಲೇಶ್ವರ ದೇವರು ನೆಲೆಸಿದ ಕಾರಣವೇ ಕಲ್ಲೇದೇವರಪುರ ಎಂಬ ಹೆಸರು ಬಂದಿದ್ದು, ಪ್ರತಿವರ್ಷ ಮಾರ್ಚ್–ಏಪ್ರಿಲ್ ತಿಂಗಳಲ್ಲಿ ನಡೆಯುವ ಈ ಜಾತ್ರೆ ಭಕ್ತರ ಮನ ಸೆಳೆಯುತ್ತದೆ. ಆರು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ಅಡ್ಡಪಲ್ಲಕ್ಕಿ ಉತ್ಸವ, ಕೋಲಾಟ, ಓಕುಳಿ ಸೇವೆಗಳು ವಿಜೃಂಭಣೆಯಿಂದ ನಡೆಯುತ್ತಿದ್ದು, ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಉತ್ಸವದ ಅಂಗವಾಗಿ ಏಪ್ರಿಲ್ 4ರಂದು ಕಂಕಣಧಾರಣೆ, ಏಪ್ರಿಲ್ 5ರಂದು ಮದಲಿಂಗ ಶಾಸ್ತ್ರ, ಏಪ್ರಿಲ್ 6ರಂದು ಅಶ್ವವಾಹನೋತ್ಸವ ನೆರವೇರಿತ್ತು. ಏಪ್ರಿಲ್ 9ರಂದು ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಕೋಲಾಟ, ಏಪ್ರಿಲ್ 10ರಂದು ಓಕುಳಿ ಉತ್ಸವ ನಡೆಯಲಿದೆ. ಪ್ರತಿ ವರ್ಷ ವೈಶಾಖ ಮಾಸದ ಹುಣ್ಣಿಮೆಯಲ್ಲಿ ನಡೆಯುವ ಕಲ್ಲೇಶ್ವರ…

Read More