Author: ಮೃತ್ಯುಂಜಯಾಚಾರ್ ಬಿ
ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.
ಆಯತಪ್ಪಿ ಬಾವಿಗೆ ಬಿದ್ದರೂ 3 ದಿನ ಪಂಪ್ ಮೇಲೆ ಕೂತು ಬದುಕಿದವೃದ! ಉಡುಪಿ: ಆಯತಪ್ಪಿ ಬಾವಿಗೆ ಬಿದ್ದಿದ್ದವೃದ್ಧರೊಬ್ಬರು 3 ದಿನ ಪಂಪ್ ಮೇಲೆ ಕೂತು ಜೀವ ಉಳಿಸಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಶ್ರೀನಿವಾಸ ಆಚಾರ್ಯ (63) ಸಾವನ್ನು ಗೆದ್ದು ಬಂದವರು. ನಿರ್ಜನ ಪ್ರದೇಶದ ಮನೆಯಲ್ಲಿ ಒಂಟಿಯಾಗಿ 3. ವಾಸವಿದ್ದ ಅವರು, ತೋಟಕ್ಕೆ ನೀರುಣಿಸಲು ಹೋದಾಗ ಆಯತಪ್ಪಿ ಬಾವಿಗೆ ಬಿದ್ದಿದ್ದರು. 30 ಅಡಿಯ ಬಾವಿಯಲ್ಲಿ ಸಾಕಷ್ಟು ನೀರಿತ್ತು. ಆಗ ಅದರಲ್ಲಿದ್ದ ಸಬ್ ಮರ್ಸಿಬಲ್ ಪಂಪಿನ ಮೇಲೆ ಕುಳಿತು ಮೇಲೆತ್ತುವಂತೆ ಕೂಗಿದರೂ, ಯಾರಿಗೂ ಕೇಳಲಿಲ್ಲ. ಗ್ಯಾಸ್ ಏಜೆನ್ಸಿಯವರು ಸಿಲಿಂಡರ್‌ನೀಡಲು ಬಂದಾಗ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ತೋಟದಲ್ಲಿ ಹುಡುಕಿದಾಗ ಆಚಾರ್ಯರು ಪಂಪಿನ ಮೇಲೆ ಕೂತಿರೋದು ಕಂಡುಬಂತು. ಅಗ್ನಿಶಾಮಕ ದಳ ಸಿಬ್ಬಂದಿ ಕರೆಸಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.
ನಡು ರಸ್ತೆಯಲ್ಲೇ ಶಿಕ್ಷಕಿಯನ್ನು ಕೊಚ್ಚಿ, ಪೆಟ್ರೋಲ್ ಹಾಕಿ ಸುಟ್ಟರು! ಕಲಬುರಗಿ: ಕಮಲಾಪುರ ತಾಲೂಕಿನ ಕಲ್ಕೂಡ ಗ್ರಾಮದ ಸಮೀಪ ನಡುರಸ್ತೆಯಲ್ಲೇ ಶಿಕ್ಷಕಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ದುಷ್ಕರ್ಮಿ ಗಳು, ಬಳಿಕ ಶವವನ್ನು ರಸ್ತೆಬದಿಯಲ್ಲಿ ಸುಟ್ಟುಹಾಕಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಜ್ಯೋತಿ ಕಪಾಳೆ (57) ಹತ್ಯೆಗೀಡಾದ ಶಿಕ್ಷಕಿ. ಜ್ಯೋತಿ ಬೀದರ್‌ಜಿಲ್ಲೆಯ ವಂಜರಖೇಡ ಗ್ರಾಮದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ವಾರಕ್ಕೊಮ್ಮೆ ಕಲಬುರಗಿಯಲ್ಲಿರುವ ಮನೆಗೆ ಆಗಮಿಸು ತ್ತಿದ್ದರು. ಘಟನೆಯ ದಿನ ಕಲಬುರಗಿಯಿಂದ ಬೀದರ್ ಕಡೆ ಪ್ರಯಾಣಿಸುತ್ತಿದ್ದ ವೇಳೆ, ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ ಬಳಿಕ, ಗುರುತು ಸಿಗದಂತೆ ಮಾಡಲು ಮಕ ದಳ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಕೊಲೆಯ ಹಿಂದಿನ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ
ಕಾಂಗ್ರೆಸ್ಸಲ್ಲಿ ಕುಟುಂಬ ರಾಜಕಾರಣ, ಓಲೈಕೆ ಪರಾಕಾಷ್ಠೆಗೆ: ಪ್ರಲ್ಲಾದ ಜೋಶಿ ದಾವಣಗೆರೆ: ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ, ದುರಾಡಳಿತ ಸರ್ವೇ ಸಾಮಾನ್ಯ. ಕುಟುಂಬ ರಾಜಕಾರಣ, ಓಲೈಕೆ ಪರಾಕಾಷ್ಠೆ ತಲುಪಿದೆ. ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಲ್ಲೂ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದೆ ಎಂದು ಕೇಂದ್ರ ಸಚಿವ ಪ್ರಲಾದ ಜೋಶಿ ಟೀಕಿಸಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಕುಟುಂಬ ರಾಜಕಾರಣ ದಿಂದ ಪ್ರಜಾಪ್ರಭುತ್ವ ನಿರ್ನಾಮವಾಗಲಿದೆ. ಒಂದೇ ಕುಟುಂಬಕ್ಕೆ ಯಾಕೆ ಮನ್ನಣೆ ನೀಡಬೇಕು ಎಂದು ಯೋ ಸಿರುವಮತದಾರರು ಬಿಜೆಪಿಗೆ ಮತ ನೀಡುವ ಮೂಲಕ ಆಶೀರ್ವದಿಸಲಿದ್ದಾರೆ. ಕೇಂದ್ರ ಕೊಟ್ಟ ಅಕ್ಕಿಗೆ ನಿಮ್ಮ ಅನ್ನಭಾಗ್ಯದೇ ಹೆಸರಿಟ್ಟಿದ್ದೀರಿ. ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ತಪ್ಪುದಾರಿಗೆ ಎಳೆಯುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಉತ್ತರ-ದಕ್ಷಿಣ ಎಂಬಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು
ಕಾಂಗ್ರೆಸ್‌ಗೆ ಅದೃಶ್ಯ ಮತದಾರರಿದ್ದು 2 ಕ್ಷೇತ್ರದಲ್ಲೂ ಗೆಲ್ಲೇವೆ: ರಾಜಣ್ಣ ತುಮಕೂರು: ಕಾಂಗ್ರೆಸ್‌ಗೆ ಅದೃಶ್ಯ ಮತದಾರರಿದ್ದು ಎರಡೂ ಕ್ಷೇತ್ರಗಳಲ್ಲಿಗೆಲ್ಲುತ್ತೇವೆಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದ ಜೊತೆಗೆ ನಿಲ್ಲುವವರು ಎಲ್ಲರೂ ಬಹಳ ಬಡವರು. ಯಾವತ್ತು ಕೂಡ ಉಪಕಾರ ಸ್ಮರಣೆ ಇಟ್ಟುಕೊಂಡವರು. ನಾವು ಗ್ಯಾರಂಟಿಗಳನ್ನು ಏನು ಆಶ್ವಾಸನೆ ಕೊಟ್ಟಿದ್ದೆವೋ ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುವ ಎರಡು ಕಡೆಗೂ ನಾವು ಗೆಲ್ಲುತ್ತೇವೆ ಎಂದರು. ಒಳಮೀಸಲಾತಿ ಒಂದು ರೀತಿ ಗೊಂದಲದ ಗೂಡಾಗಿದೆ. ಯಾರೊಬ್ಬರು ಕೂಡ ಅದರಿಂದ ಸಮಾಧಾನ ಆದ ಹಾಗೆ ಅನ್ನಿಸುತ್ತಿಲ್ಲ. ಎಡ, ಬಲ ಮತ್ತು ಇತರೆ ಆಗಲಿ ಗೊಂದಲ ಇದೆ ಎಂದು ಹೇಳಿದರು.
ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಲ್ಲ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಸರ್ಕಾರಿ ಸಾರಿಗೆ ಬಸ್ ಪ್ರಯಾಣ ದರದಲ್ಲಿ ಏರಿಕೆಯಾಗುವುದಿಲ್ಲ. ಇನ್ನು ಆಟೋ ಗ್ಯಾಸ್ ಸೇರಿ ಪೆಟ್ರೋಲಿಯಂ ಉತ್ಪನ್ನಗಳ ಅಭಾವ ಸರಿಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸೋಮ ವಾರಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಸಾರಿಗೆ ಬಸ್‌ಗಳಿಗೆ ಪೂರೈಸಲಾಗುತ್ತಿರುವ ಡೀಸೆಲ್ ಬೆಲೆಯಲ್ಲೂ ಹೆಚ್ಚಳವಾಗುತ್ತದೆ ಎಂಬ ಊಹಾ ಪೋಹಗಳಿದ್ದವು. ಅದಕ್ಕಾಗಿ ಸಿಎಂರಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಸಿ, ಸಾರಿಗೆ ಬಸ್‌ಗಳಿಗೆ ಪೂರೈ ಸಲಾಗುತ್ತಿರುವ ಡೀಸೆಲ್ ಬೆಲೆ ಹೆಚ್ಚಿಸದಂತೆ ಕೋರ ಲಾಗಿತ್ತು. ಇನ್ನು, ಯುದ್ಧ ತಾತ್ಕಾಲಿಕವಾಗಿದ್ದು, ಅದರಿಂದ ಹೆಚ್ಚಿನ ಪರಿಣಾಮ ಬೀರುತ್ತಿಲ್ಲ, ಅಲ್ಲದೆ, ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದರು.
ಚಿತ್ರದುರ್ಗದಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟಾಚಾರ ಆರೋಪದಡಿ ಮಾಜಿ ಅಕೌಂಟೆಂಟ್ ಮನೆಗಳ ಶೋಧ ಚಿತ್ರದುರ್ಗ, ಏ.7: ಜಿಲ್ಲೆಯಲ್ಲಿ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭರ್ಜರಿ ದಾಳಿ ನಡೆಸಿದ್ದು, ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಸುಶೀಲಮ್ಮ ಅವರ ಮನೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಸುಶೀಲಮ್ಮ ಅವರು ವರ್ಷಕ್ಕಿಂತ ಹಿಂದೆ ಸ್ವಯಂ ನಿವೃತ್ತಿ (ವಿಆರ್‌ಎಸ್) ಪಡೆದಿದ್ದರೂ, ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ಆದಾಯಕ್ಕೆ ಮೀರಿ ಆಸ್ತಿ ಮತ್ತು ಹಣ ಸಂಪಾದನೆ ಮಾಡಿದ್ದಾರೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಲೋಕಾಯುಕ್ತ ತಂಡವು ಚಿತ್ರದುರ್ಗ ನಗರದ ಮೆದೇಹಳ್ಳಿ ಬಡಾವಣೆಯಲ್ಲಿರುವ ನಿವಾಸದ ಜೊತೆಗೆ ಹಿರಿಯೂರು ತಾಲೂಕಿನ ಯರದಕಟ್ಟೆ ಗ್ರಾಮದಲ್ಲಿರುವ ತೋಟದ ಮನೆಯನ್ನು ಸಹ ಶೋಧಿಸಿದೆ. ದಾಳಿಯ ವೇಳೆ ಆಸ್ತಿ ದಾಖಲೆಗಳು, ನಗದು, ಆಭರಣ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ಹಾಗೂ ಡಿವೈಎಸ್ಪಿ ಮೃತ್ಯುಂಜಯ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಜಿಲ್ಲೆಯಲ್ಲೇ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ತನಿಖೆಯ ವರದಿ ಮೇಲೆ…
ನಿತ್ಯ ಭವಿಷ್ಯ – 07/04/2026 (ಮಂಗಳವಾರ) ಮೇಷ (Aries): ಇಂದು ಹೊಸ ಅವಕಾಶಗಳು ನಿಮ್ಮ ಕಡೆ ಬರುತ್ತವೆ. ಉದ್ಯೋಗದಲ್ಲಿ ಮೆಚ್ಚುಗೆ ಸಿಗಬಹುದು. ಆರ್ಥಿಕವಾಗಿ ಸ್ಥಿರತೆ. ಕುಟುಂಬದಲ್ಲಿ ಸಂತೋಷದ ವಾತಾವರಣ. ವೃಷಭ (Taurus): ಸ್ವಲ್ಪ ಒತ್ತಡ ಕಂಡುಬರುವ ದಿನ. ಕೆಲಸಗಳಲ್ಲಿ ವಿಳಂಬ ಸಾಧ್ಯ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಅಗತ್ಯ. ಆರೋಗ್ಯದ ಕಡೆ ಗಮನ ಕೊಡಿ. ಮಿಥುನ (Gemini): ಸಂವಹನದಿಂದ ಯಶಸ್ಸು ಸಿಗುವ ದಿನ. ಸ್ನೇಹಿತರ ಸಹಕಾರ ಲಭ್ಯ. ವ್ಯವಹಾರದಲ್ಲಿ ಲಾಭ ಸಾಧ್ಯ. ಹೊಸ ಪರಿಚಯಗಳು ಆಗಬಹುದು. ಕಟಕ (Cancer): ಮನಸ್ಸಿಗೆ ಶಾಂತಿ ಕಡಿಮೆ ಇರಬಹುದು. ಕುಟುಂಬದ ವಿಚಾರದಲ್ಲಿ ಚರ್ಚೆಗಳು ಹೆಚ್ಚಾಗಬಹುದು. ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳಿ. ಸಿಂಹ (Leo): ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಾಯಕತ್ವ ಗುಣ ತೋರಿಸುವ ಅವಕಾಶ. ಉದ್ಯೋಗದಲ್ಲಿ ಪ್ರಗತಿ. ಹಿರಿಯರಿಂದ ಪ್ರಶಂಸೆ. ಕನ್ಯಾ (Virgo): ಕೆಲಸದ ಒತ್ತಡ ಹೆಚ್ಚಾಗಬಹುದು. ಸಮಯ ನಿರ್ವಹಣೆ ಮುಖ್ಯ. ಹಣಕಾಸಿನಲ್ಲಿ ಸಮತೋಲನ ಇರಲಿ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ತುಲಾ (Libra): ಸಂತೋಷದ ದಿನ. ಪ್ರೀತಿಯ ವಿಚಾರಗಳಲ್ಲಿ ಉತ್ತಮ…
ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು: ಸುರ್ಜೇವಾಲಾ ಅಸಮಾಧಾನ ಸರಿ ಹೋಗುತ್ತೆ: ಕಾಂಗ್ರೆಸ್ ಉಸ್ತುವಾರಿ ಕನ್ನಡಪ್ರಭ ವಾರ್ತೆ ಬೆಂಗಳೂರು ದಾವಣಗೆರೆ, ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ಮುಸ್ಲಿಂ ಮತಗಳ ಬಗೆಗಿನ ನಿಮ್ಮ ಅನುಮಾನಕ್ಕೆ ಫಲಿತಾಂಶದ ದಿನ ಉತ್ತರ ತಿಳಿಯಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. ಪತ್ರಿಕಾಗೋಷ್ಠಿ ಉದ್ದೇ ಶಿಸಿ ಮಾತ ನಾಡಿ, ಅಸಮಾಧಾನಗೊಂಡಿ ರುವ ಅಲ್ಪಸಂಖ್ಯಾತ ನಾಯಕರ ನಿಲುವು ಬದಲಾಗುವ ಸಮಯಕ್ಕೆ ಕಾಯಿರಿ. ಮತದಾರರು ಬುದ್ದಿವಂತರಿದ್ದಾರೆ. ರಾಜ್ಯ ಸರ್ಕಾರದ ಸಾಧನೆ, ಪಂಚಗ್ಯಾ ರಂಟಿ, ಅಭಿವೃದ್ಧಿ ಯೋಜನೆ ಹಾಗೂ ಕೇಂದ್ರದ ವಂಚನೆ ಬಗ್ಗೆ ಅವರಿಗೆ ಅರಿವಿದೆ. ನಿಮ್ಮ ಸಂದೇಹಕ್ಕೆ ಮತದಾರರು ಉತ್ತರ ನೀಡುತ್ತಾರೆ ಎಂದರು. 5.5 ಕೋಟಿ ಕನ್ನಡಿಗರಿಗೆ ಮೋದಿ ಸರ್ಕಾರದ ಅನ್ಯಾ ಯದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಮೌನವಾಗಿ ದ್ದಾರೆ. ಆದರೆ, ರಾಜ್ಯದ ₹1,31,000 ಕೋಟಿ ತಲುಪಿಸಿರುವ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿಯಂಥ ಗ್ಯಾರಂಟಿಗಳನ್ನು ವಿರೋಧಿಸುತ್ತಿದ್ದಾರೆ. ಕೇಂದ್ರದ ನಿರ್ಲಕ್ಷ್ಯ ಧೋರಣೆ ಪ್ರಶ್ನಿಸದೆ…
ಹಾವೇರಿ ವಿವಿಯ ಗೌರವ ಡಾಕ್ಟರೆಟ್ ತಿರಸ್ಕರಿಸಿದ ಸಂಸದ ಬೊಮ್ಮಾಯಿ ಹಾವೇರಿ ವಿವಿಯ ಮೊದಲ ಘಟಿಕೋತ್ಸವದ ನಿಮಿತ್ತ ಘೋಷಣೆ ಮಾಡಿದ್ದ ಗೌರವ ಡಾಕ್ಟರೆಟ್ ಪದವಿಯನ್ನು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತಿರಸ್ಕರಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಾವೇರಿ ವಿವಿಯ ಸಿಂಡಿಕೇಟ್ ಸಭೆ ನನಗೆ ಗೌರವ ಡಾಕ್ಟರೆಟ್ ನೀಡಲು ತೀರ್ಮಾನಿ ಸಿದೆ. ಆದರೆ ನಾನು `ಗೌರವ ಡಾಕ್ಟರೆಟ್ ಸ್ವೀಕರಿಸುವುದಿಲ್ಲ ಎಂದಿದ್ದಾರೆ. ನನಗೆ ಗೌರವ ಡಾಕ್ಟ ರೆಟ್ ನೀಡಲು ತೀರ್ಮಾನಿಸಿ ರುವುದಕ್ಕೆ ಕುಲಪತಿ, ಕುಲ ಸಚಿವರು, ಸಿಂಡಿಕೇಟ್ ಸದಸ್ಯರಿಗೆ ಹೃತ್ತೂರ್ವಕ ಕೃತಜ್ಞತೆಗಳು, ಧನ್ಯ ವಾದಗಳು. ನಾನು ಗೌರವ ಡಾಕ್ಟರೆಟ್ ಸ್ವೀಕರಿಸಲ್ಲ ವೆಂದು ಈಗಾಗಲೇ ಕುಲಪತಿಗೆ ತಿಳಿಸಿದ್ದೇನೆ. ನಾನು ಸಾರ್ವಜನಿಕ ಸೇವೆಯಲ್ಲಿ ದ್ದೇನೆ. ಈ ಸೇವೆಗೆ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸುವುದಿಲ್ಲ ಎಂದಿದ್ದಾರೆ. https://timesofbayaluseeme.com/nithya-baivishya/
ಪತ್ನಿಯನ್ನು ಬೆಡ್‌ರೂಮಲ್ಲಿ ಲಾಕ್ ಮಾಡಿ ಪತಿ ಚಿತ್ರಹಿಂಸೆ: ‘ಅಕ್ಕ’ ರಕ್ಷಣೆ ಪತ್ನಿಯನ್ನು ಮನೆಯಲ್ಲಿ ಬಂಧಿಸಿಟ್ಟು ಚಿತ್ರಹಿಂಸೆ ನೀಡುತ್ತಿದ್ದ ಪ್ರಕರಣ ವೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಬಂದ ಫೋನ್ ಕರೆ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಅಕ್ಕ ಪಡೆಯು ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ರಕ್ಷಿಸಿ, ಅಗತ್ಯ ವೈದ್ಯಕೀಯ ಸೇವೆ ನೀಡಿದ್ದಾರೆ. ಟಿಳಕ ವಾಡಿಯಲ್ಲಿ ಪತಿಯೇ ಪತ್ನಿಯನ್ನು ಬೆಡ್ ರೂಮ್‌ನಲ್ಲಿ ಲಾಕ್ ಮಾಡಿಟ್ಟಿದ್ದು ಮಾನಸಿಕ, ದೈಹಿಕ ಕಿರುಕುಳ ನೀಡು ತ್ತಿದ್ದಾನೆ ಎಂದು ಪೊಲೀಸರಿಗೆ ಫೋನ್ ಕರೆ ಬಂದಿತ್ತು. ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್‌ಡಿ.ಪಿ.ನಿಂಬಾಳಕರಗೆ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸ್ ಆಯುಕ್ತ ಭೂಷಣ ಬೋರಸೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮನೆಯನ್ನು ಪತ್ತೆ ಮಾಡಿ, ರಕ್ಷಿಸುವಂತೆ ಅಕ್ಕ ಪಡೆಗೆ ನಿರ್ದೇಶನ ನೀಡಲಾಗಿತ್ತು. ಕಾರ್ಯಪ್ರವೃತ್ತರಾದ ಅಕ್ಕಪಡೆ, ಮನೆಗೆ ತೆರಳಿ, ಬಾಗಿಲು ಮಹಿಳೆ ಮತ್ತು ಮಕ್ಕಳಿಬ್ಬರನ್ನು ರಕ್ಷಿಸಿ ಸದ್ಯ ವಿಮಾನದ ಮೂಲಕ ತವರೂರಿಗೆ ರವಾನಿಸಿದ್ದಾರೆ. ಪತಿ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
Subscribe to Updates
Get the latest creative news from FooBar about art, design and business.