Author: ಮೃತ್ಯುಂಜಯಾಚಾರ್ ಬಿ

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

ದಾವಣಗೆರೆ ಕ್ಷೇತ್ರ ಪ್ರಚಾರಕ್ಕೆ ಕಡೆಗೂ ಜಮೀರ್ ಪ್ರವೇಶ ನನಗೆ ಮುನಿಸಿಲ್ಲ, ಎಸ್ಸೆಸ್‌ಎಂ ಆತ್ಮೀಯರು: ಸಚಿವ ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲಿಲ್ಲ ಎಂದು ಮುನಿಸಿ ಕೊಂಡು ಚುನಾವಣಾ ಪ್ರಚಾರದಿಂದ ದೂರ ಉಳಿ ದಿದ್ದ ಸಚಿವ ಜಮೀರ್ ಅಹಮದ್ ಖಾನ್, ಭಾನುವಾರ ದಾವಣಗೆರೆಗೆ ಆಗಮಿಸಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಪರ ಪ್ರಚಾರ ನಡೆಸಿದರು. ಕೇರಳದಿಂದ ಹುಬ್ಬಳ್ಳಿಗೆ ಬಂದು, ಅಲ್ಲಿಂದ ದಾವಣಗೆರೆಗೆ ಆಗಮಿಸಿದ ಸಚಿವರು, ಎಸ್.ಎಸ್. ಮಲ್ಲಿಕಾರ್ಜುನ ಅವರ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಜಮೀರ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾ ಯಿತು. ಈ ವೇಳೆ, ಅಭಿ ಮಾನಿಗಳಿಂದ ಬಿಝಡ್… ఎంబ … ಘೋಷಣೆಗಳು ಮೊಳಗಿ ದವು. ಜಮೀರ್‌ಭೇಟಿ ಹಿನ್ನೆಲೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮನೆ ಬಳಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ನನಗೆ ಮುನಿಸು ಇಲ್ಲ. ನಾನು, ಮಲ್ಲಿಕಾರ್ಜುನ ಇಬ್ಬರೂ ಆತ್ಮೀಯ ಸ್ನೇಹಿತರು.ಇಲ್ಲಿ ನೂರಕ್ಕೆ…

Read More

🗓️ ನಿತ್ಯ ಭವಿಷ್ಯ – 06/04/2024 ಮೇಷ ರಾಶಿ (Aries) ಇಂದು ನಿಮ್ಮ ಕೆಲಸಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ಧೈರ್ಯದಿಂದ ಮುಂದುವರಿದರೆ ಯಶಸ್ಸು ನಿಮ್ಮದಾಗುತ್ತದೆ. ಕುಟುಂಬದ ಸಹಕಾರ ಲಭ್ಯ. ವೃಷಭ ರಾಶಿ (Taurus) ಆರ್ಥಿಕವಾಗಿ ಒಳ್ಳೆಯ ದಿನ. ಹಳೆಯ ಬಾಕಿ ಹಣ ವಾಪಸು ಸಿಗುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನ ಕೊಡಿ. ಮಿಥುನ ರಾಶಿ (Gemini) ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಉದ್ಯೋಗದಲ್ಲಿ ಪ್ರಗತಿ. ಸ್ನೇಹಿತರ ಜೊತೆ ಸಂತೋಷದ ಕ್ಷಣಗಳು. ಕಟಕ ರಾಶಿ (Cancer) ಮನಸ್ಸಿನಲ್ಲಿ ಗೊಂದಲಗಳು ಕಂಡುಬರುವ ಸಾಧ್ಯತೆ ಇದೆ. ಶಾಂತವಾಗಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಕುಟುಂಬದ ಬೆಂಬಲ ಸಿಗಲಿದೆ. ಸಿಂಹ ರಾಶಿ (Leo) ನಿಮ್ಮ ನಾಯಕತ್ವ ಗುಣಗಳು ಹೊಳೆಯುತ್ತವೆ. ಕೆಲಸದ ಜಾಗದಲ್ಲಿ ಮೆಚ್ಚುಗೆ ಸಿಗಲಿದೆ. ಹಣಕಾಸಿನ ಸ್ಥಿತಿ ಸುಧಾರಣೆ. ಕನ್ಯಾ ರಾಶಿ (Virgo) ಇಂದು ಹೆಚ್ಚು ಶ್ರಮಪಟ್ಟು ಕೆಲಸ ಮಾಡಬೇಕಾಗಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಸಣ್ಣ ಪ್ರಯಾಣ ಸಾಧ್ಯ. ತುಲಾ ರಾಶಿ (Libra) ಸೃಜನಾತ್ಮಕ ಕೆಲಸಗಳಲ್ಲಿ…

Read More

*ಬಾಬೂಜಿ ದೇಶದ ದಕ್ಷ ಆಡಳಿತಗಾರ; ಎಚ್.ಆಂಜನೇಯ* *ಚಿತ್ರದುರ್ಗ, ಏ.5:* ಅಂಬೇಡ್ಕರ್ ನಿಧನದ ಬಳಿಕ ಶೋಷಿತರು, ಅಸ್ಪೃಶ್ಯ ರು, ದುರ್ಬಲರಲ್ಲಿ ಮನೆ ಮಾಡಿದ್ದ ಅನಾಥ ಪ್ರಜ್ಞೆ ದೂರಗೊಳಿಸಿ, ಅವರನ್ನು ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸಿದ ಮಹಾನ್ ನಾಯಕ ಬಾಬು ಜಗಜೀವನ ರಾಂ ಎಂದು ಮಾಜಿ ಸಚಿವ ಎಚ್.ಆಂಜನೇಯ ಸ್ಮರಿಸಿದರು. ತಾಲೂಕಿನ ಸೀಬಾರದ ತಮ್ಮ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಬಾಬು ಜಗಜೀವನ ರಾಂ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. 1956ರಲ್ಲಿ ಅಂಬೇಡ್ಕರ್ ಅಗಲಿಕೆ ದೇಶದ ಪರಿಶಿಷ್ಟ ಸಮುದಾಯದ ಜನರಲ್ಲಿ ಕತ್ತಲು ಆವರಿಸಿಕೊಂಡಿತ್ತು. ಈ ವೇಳೆ ಸಂವಿಧಾನದ ಆಶಯಗಳನ್ನು ಸರ್ಕಾರದಲ್ಲಿ ಮಂತ್ರಿಯಾಗಿದ್ದುಕೊಂಡು ಸಮರ್ಥವಾಗಿ ಅನುಷ್ಠಾನಗೊಳಿಸಿ ಜನರ ಮನಗೆದ್ದ ನಿಜನಾಯಕ ಬಾಬು ಜಗಜೀವನ ರಾಂ ಎಂದು ಬಣ್ಣಿಸಿದರು. ಮೀಸಲಾತಿ ಅನುಷ್ಠಾನದ ಜೊತೆಗೆ ರೈಲ್ವೆ ಸೇರಿ ವಿವಿಧ ಇಲಾಖೆಯಲ್ಲಿ ಬಡ್ತಿ ಮೀಸಲಾತಿ ಸೌಲಭ್ಯ ಕಲ್ಪಿಸಿ ಶೋಷಿತರ ಬದುಕಿನಲ್ಲಿ ಆಶಾಕಿರಣರಾಗಿ ವಿಜೃಂಭಿಸಿದರು. ನೆಹರೂ, ಇಂದಿರಾಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವಧಿಯಲ್ಲಿ ಅನೇಕ ಖಾತೆಗಳ ಜೊತೆಗೆ ಒಮ್ಮೆ ಉಪ ಪ್ರಧಾನಿಯಾಗಿ ಆಡಳಿತ…

Read More

ನಿತ್ಯ ಭವಿಷ್ಯ – 05/04/2026 (ಭಾನುವಾರ) ಮೇಷ (Aries): ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಕೆಲಸಗಳಲ್ಲಿ ಚುರುಕು ಕಾಣಿಸಿಕೊಳ್ಳುತ್ತದೆ. ಹೊಸ ಅವಕಾಶಗಳು ದೊರೆಯಬಹುದು. ಕುಟುಂಬದವರೊಂದಿಗೆ ಸಮಯ ಕಳೆಯಿರಿ. ವೃಷಭ (Taurus): ಆರ್ಥಿಕವಾಗಿ ಉತ್ತಮ ದಿನ. ಹಳೆಯ ಬಾಕಿಗಳು ವಾಪಸ್ಸಾಗುವ ಸಾಧ್ಯತೆ ಇದೆ. ಆದರೆ ಅನಾವಶ್ಯಕ ಖರ್ಚುಗಳನ್ನು ನಿಯಂತ್ರಿಸಿ. ಮಿಥುನ (Gemini): ಸ್ನೇಹಿತರ ಸಹಕಾರದಿಂದ ಕೆಲಸಗಳು ನೆರವೇರುತ್ತವೆ. ಮನಸ್ಸಿನಲ್ಲಿ ಶಾಂತಿ ಇರುತ್ತದೆ. ಹೊಸ ಪರಿಚಯಗಳು ಭವಿಷ್ಯದಲ್ಲಿ ಉಪಯುಕ್ತವಾಗಬಹುದು. ಕಟಕ (Cancer): ಕಾರ್ಯಸ್ಥಳದಲ್ಲಿ ಸ್ವಲ್ಪ ಒತ್ತಡ ಇರಬಹುದು. ಸಹನೆಯಿಂದ ನಡೆದುಕೊಂಡರೆ ಸಮಸ್ಯೆಗಳು ದೂರವಾಗುತ್ತವೆ. ಆರೋಗ್ಯದ ಕಡೆ ಗಮನ ಕೊಡಿ. ಸಿಂಹ (Leo): ಇಂದು ನಿಮ್ಮ ಪ್ರತಿಭೆ ಮೆರೆದೀತು. ಹಿರಿಯರಿಂದ ಪ್ರಶಂಸೆ ಸಿಗಬಹುದು. ಹಣಕಾಸಿನ ಲಾಭ ಸಾಧ್ಯತೆ ಇದೆ. ಕನ್ಯಾ (Virgo): ಪ್ರಯಾಣ ಯೋಗ ಇದೆ. ಹೊಸ ಯೋಜನೆಗಳಿಗೆ ಚಾಲನೆ ನೀಡಲು ಉತ್ತಮ ದಿನ. ಆದರೆ ತೀರ್ಮಾನಗಳಲ್ಲಿ ಎಚ್ಚರಿಕೆ ಅಗತ್ಯ. ತುಲಾ (Libra): ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಹಳೆಯ ಸಮಸ್ಯೆಗಳು ಪರಿಹಾರವಾಗಬಹುದು. ಧೈರ್ಯದಿಂದ ಮುಂದೆ…

Read More

ವ್ಯಾಪಾರ ವಹಿವಾಟು ಸ್ತಬ್ದ : ಬಿಕೋ ಎನ್ನುತ್ತಿರುವ ರಸ್ತೆ : ಚಳ್ಳಕೆರೆ: ನಗರದ ಹೃದಯ ಭಾಗದಲ್ಲಿರುವ ನೆಹರೂ ವೃತ್ತದ ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಬೆಳಗಿನಿಂದ ಸಂಜೆವರೆಗೂ ಸಾವಿರಾರು ವಾಹನ, ಸುತ್ತಮುತ್ತ ಹತ್ತಾರು ಗ್ರಾಮಗಳ ಜನರ ಓಡಾಟದ ಜೊತೆಯಲ್ಲಿ ನೂರಾರು ಅಂಗಡಿಗಳಿದ್ದು ಸದಾ ಈ ರಸ್ತೆ ಜನಜಂಗುಳಿಯಿಂದ ತುಂಬಿರುತ್ತಿತ್ತು.ವ್ಯಾಪಾರ ವಹಿವಾಟಿನ ಚಟುವಟಿಕೆಯ ಕೇಂದ್ರವಾಗಿತ್ತು. ಆದರೆ, ಇತ್ತೀಚೆಗೆ ನಗರಸಭೆ ಸದರಿ ಕಾಂಪ್ಲೆಕ್ಸ್ ಸೇರಿದಂತೆ ನಗರಸಭೆ ಒಡೆತನದ ಮಳಿಗೆಗಳನ್ನು ನೆಲಮಗೊಳಿಸಿದ್ದು ಪ್ರತಿನಿತ್ಯವೂ ದಾರಿಯಲ್ಲಿ ಹೋಗುವ ನೂರಾರು ಜನರು ವ್ಯಾಪಾರ, ವಹಿವಾಟಿನ ಕೇಂದ್ರ ಬಿಂದುವಾದ ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ಕರಗಿ ಮಣ್ಣಾಗಿರುವುದನ್ನು ಕಂಡು ಸಂತಸ ಪಡುತ್ತಿದ್ದಾರೆ. ಬಹಳ ವರ್ಷಗಳ ನಂತರ ನಗರಸಭೆ ಆಡಳಿತ ಸದರಿ ಜಾಗದಲ್ಲಿ ಕೋಟ್ಯಾಂತರ ವೆಚ್ಚದ ಸುಮಾರು 150 ಕ್ಕೂ ಹೆಚ್ಚು ಮಳಿಗೆಯ ಮಲ್ಟಿ ಕಾಂಪ್ಲೆಕ್ಸ್ ನಿರ್ಮಿಸಿ ಚಳ್ಳಕೆರೆ ನಗರದ ವಾಣಿಜ್ಯ ಕ್ಷೇತ್ರದಲ್ಲಿ ತನ್ನದೇಯಾದ ದಾಖಲೆದಾಖಲಿಸಲು ಮುಂದಾಗಿದೆ. ಇದಕ್ಕೆ ಪೂರಕವೆಂಬಂತೆ ನಿಗದಿಯ ಸಮಯದವರೆಗೂ ಬಹುತೇಕ ಎಲ್ಲಾ ಮಳಿಗೆಗಳು ನೆಲಸಮಗೊಂಡಿದ್ದು, ಪಾವಗಡ ರಸ್ತೆಯಲ್ಲಿ ಬಾಕಿ…

Read More

ಬರ್‍ರಿ ಬೀದರಿಗೆ…ಶರಣು ಶರಣಾರ್ಥಿ ನಿಮಗ ಕೆಯುಡಬ್ಲ್ಯೂಜೆ ಬೀದರನಲ್ಲಿ ಆಯೋಜಿಸಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಹಿನ್ನೆಲೆಯಲ್ಲಿ ಪ್ರಜಾವಾಣಿ ಹಿರಿಯ ಪತ್ರಕರ್ತೆ ಎಸ್.ರಶ್ಮಿ ಅವರು ಪತ್ರಕರ್ತ ಸ್ಮರಣ ಸಂಚಿಕೆಗೆ ಕಳುಹಿಸಿರುವ ಲೇಖನದಲ್ಲಿ ಇಡೀ ಬೀದರ್ ನೆಲದ ಸಂಸ್ಕೃತಿ ಮತ್ತು ಮೆರಗನ್ನು ಹಿಡಿಯಾಗಿ ಕಟ್ಟಿಕೊಟ್ಟಿದ್ದಾರೆ. ಆ ಲೇಖನ ನಿಮ್ಮ ಓದಿಗಾಗಿ… ಬರ್‍ರಿ ಬೀದರಿಗೆ… ಓಹೊಹೊ.. ಬೀದರ್‌ ಕಡೆ ಬರ್ತೀರಿ ಶರಣು ಶರಣಾರ್ಥಿ ನಿಮಗ ಶರಣು ಅಂದ್ಕೂಡಲೆ ಇಂಥದ್ದೊಂದು ಪ್ರತಿಕ್ರಿಯೆ ನಿಮಗ ಸಿಕ್ಕೇ ಸಿಗ್ತದ. ಕೈ ಎದೆಗೊತ್ತಿ ಈ ಮಾತು ಹೇಳಿದ್ರಂದ್ರ ಮುಂದ ನೀವೂ ನಮ್ಮೋರೆ. ಬೀದರಿಗೆ ಬರೂದಾದ್ರ ಒಂದೆರಡು ದಿನ ಹೆಚ್ಗಿ ಇಟ್ಕೊಂಡು ಬರ್ರಿ. ಬ್ಯಾಸಗಿಯೊಳಗ ಬರಾತೀರಿ. ತುಸು ಬಿಸಿಲನಿಸಬಹುದು. ಬಿಸಿಲೇರೂದ್ರೊಳಗ, ಚೌಬಾರಾ ನೋಡ್ಕೊಂಡು, ಗವಾನ್‌ ಮದರಸಾ ನೋಡಿ, ಅಲ್ಲಿಯ ಮಿನಾರ ಮುಂದ ಒಂದಷ್ಟು ಫೋಟೊ ತೊಗೊಂಡು ಕೋಟೆ ಕಡೆ ಬರ್‍ರಿ. ಈ ಕೋಟೆಯ ಪ್ರವೇಶದ್ವಾರ ಬುಲಂದ್‌ ದರ್ವಾಜಾ. ಬುಲಂದ್‌ ಅಂದ್ರ ಪರ್ಷಿಯನ್‌ ಪದ ಇದು. ದಕ್ಖನಿ ಮತ್ತು…

Read More

ಶಿವಲಿಂಗಪ್ಪ ಹತ್ಯೆ ಪ್ರಕರಣ; ಸಮಗ್ರ ತನಿಖೆಗೆ ಪಟ್ಟು ಚಿತ್ರದುರ್ಗ : ಐದು ದಿನಗಳ ಹಿಂದೆ ಕಾಣೆಯಾಗಿದ್ದ ಬಿ.ಶಿವಲಿಂಗಪ್ಪ ಗುರುವಾರ ಶವವಾಗಿ ಪತ್ತೆಯಾಗಿರುವುದನ್ನು ಗಮನಿಸಿದರೆ ಇದೊಂದು ಪೂರ್ವಯೋಜಿತ ಹತ್ಯೆ ಎನ್ನುವ ಅನುಮಾನವಿದ್ದು, ಸಮಗ್ರ ತನಿಖೆ ನಡೆಸಿ ಹತ್ಯೆಕೋರರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸುವಂತೆ ಜಿಲ್ಲಾ ಮಡಿವಾಳರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಸಹಾಯಕರ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಬಿ.ರಾಮಪ್ಪ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಉಪಾಧ್ಯಕ್ಷರಾಗಿದ್ದ ಬಿ.ಶಿವಲಿಂಗಪ್ಪನವರು ಕೇವಲ ಮಡಿವಾಳ ಜನಾಂಗದವರಿಗಷ್ಟೆ ಸೀಮಿತವಾಗಿರಲಿಲ್ಲ. ಎಲ್ಲಾ ಜಾತಿ ಧರ್ಮದವರೊಡನೆ ಅನ್ಯೋನ್ಯವಾಗಿದ್ದರು. ರೇಣುಕಾ ಆಗ್ರೋ ಫರ್ಟಿಲೈಸರ್ಸ್ ಅಂಗಡಿಯಿಟ್ಟುಕೊಂಡಿದ್ದ ಇವರು ಬಿತ್ತನೆ ಸಮಯದಲ್ಲಿ ರೈತರಿಗೆ ಗೊಬ್ಬರ ನೀಡುವ ಮೂಲಕ ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಇವರ ಏಳಿಗೆಯನ್ನು ಸಹಿಸದ ಯಾರೋ ದುಷ್ಕರ್ಮಿಗಳು ಮಾನವೀಯತೆ ಮೀರಿ ಕೊಲೈಗೈದಿರುವುದು ಮಡಿವಾಳ ಸಮಾಜಕ್ಕೆ ಹಾಗೂ ಅವರ ಕುಟುಂಬಕ್ಕೆ ಅತೀವ ನೋವುಂಟು ಮಾಡಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಹಂತಕರನ್ನು ಬಂಧಿಸಿ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಉಗ್ರವಾದ…

Read More

ಕೆರೆ ಒತ್ತುವರಿ ತೆರವು ಕಾರ್ಯಾಚರಣೆ; ನಿಗಧಿಯಾಯ್ತು ದಿನ ಚಿತ್ರದುರ್ಗ: ಸರ್ವೋಚ್ಛ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯ ಮತ್ತು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ-2014ರ ಕಾಯ್ದೆ ಅನುಸಾರ ಏಪ್ರಿಲ್ 8ರಂದು ಚಳ್ಳಕೆರೆ ರಾಣಿಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗುತ್ತಿದೆ. ಕಂದಾಯ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆ ವತಿಯಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

Read More

ವಿದ್ಯಾರ್ಥಿಗಳೇ..ಪೋಷಕರೇ ಗಮನಿಸಿ ; ಪ್ರವೇಶಾತಿಗೆ ಕೌಂಟ್ ಡೌನ್ ಶುರು ಚಿತ್ರದುರ್ಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2025-26ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯ ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಲಿಬ್‍ಐಎಸ್ಸಿ, ಬಿ.ಸಿ.ಎ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ, ಎಂ.ಎ, ಎಂ.ಕಾಂ, ಎಂ.ಎ.ಎಂ.ಸಿ.ಜೆ, ಎಂ.ಲಿಬ್‍ಐಎಸ್ಸಿ, ಎಂ.ಬಿ.ಎ, ಎಂ.ಎಸ್ಸಿ, ಎಂ.ಸಿ.ಎ, ಎಂ.ಎಸ್.ಡಬ್ಲ್ಯೂ, ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ಮತ್ತು ಪಿಜಿ-ಡಿಪ್ಲೊಮೊ, ಡಿಪ್ಲೊಮೊ ಸರ್ಟಿಫಿಕೇಟ್ ಕೋರ್ಸ್‍ಗಳಿಗೆ ಆನ್‍ಲೈನ್ ಅಡ್ಮಿಷನ್ ಪೋರ್ಟಲ್ (https://ksouportal.com/views/StudentHome.aspx) ಮೂಲಕ ಅರ್ಜಿ ಸಲ್ಲಿಸಿ ಪ್ರವೇಶಾತಿ ಪಡೆಯಲು ಏಪ್ರಿಲ್ 10 ಕೊನೆಯ ದಿನವಾಗಿದೆ. ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿಯ ಅಂತಿಮ ದಿನದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಚಿತ್ರದುರ್ಗ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಾ.ಕೆ.ಪಿ.ಮಹಾಲಿಂಗಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್ www.ksoumysuru.ac.in ವೀಕ್ಷಿಸುವುದು ಅಥವಾ ಮೊಬೈಲ್ ಸಂಖ್ಯೆ 9738014893, 7204352581, 9008905457, 8310111244, 9972499704, 7090762378 ಗೆ ಕರೆ ಮಾಡುವುದು ಅಥವಾ ಕರ್ನಾಟಕ ರಾಜ್ಯ…

Read More

ರೈತರ ತುರ್ತು ಗಮನಕ್ಕೆ ; ಯೂರಿಯಾ ರಸಗೊಬ್ಬರ ಖರೀದಿಗೆ ಎಫ್‍ಐಡಿ ಕಡ್ಡಾಯ” ಚಿತ್ರದುರ್ಗ: 2026-27ನೇ ಸಾಲಿನ ಮುಂಗಾರು ಹಂಗಾಮಿನಿಂದ ರೈತರು ಯೂರಿಯಾ ರಸಗೊಬ್ಬರ ಖರೀದಿಸಲು ರೈತರ ಎಫ್‍ಐಡಿ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಕೃಷಿ ಇಲಾಖೆಯು ಅಭಿವೃದ್ಧಿಪಡಿಸಿರುವ ಹೊಸ ತಂತ್ರಾಂಶದ ಮೂಲಕ, ರೈತರ ಎಫ್‍ಐಡಿ ಸಂಖ್ಯೆಯನ್ನು ಬಳಸಿಕೊಂಡು ಅವರು ಹೊಂದಿರುವ ಜಮೀನಿನ ವಿಸ್ತೀರ್ಣ ಮತ್ತು ಬೆಳೆದ ಬೆಳೆಗೆ ಅನುಗುಣವಾಗಿ ಎಷ್ಟು ಪ್ರಮಾಣದ ಯೂರಿಯಾ ಅಗತ್ಯವಿದೆಯೋ ಅಷ್ಟನ್ನು ಮಾತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯು ‘ಕೆ-ಕಿಸಾನ್’ ತಂತ್ರಾಂಶದ ಮೂಲಕವೇ ನಡೆಯಲಿದೆ. ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯುವುದು, ರೈತರು ಮಿತವ್ಯಯವಾಗಿ ಗೊಬ್ಬರ ಬಳಸುವಂತೆ ಮಾಡುವುದು ಹಾಗೂ ಮಾರಾಟದ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗಿದೆ. ಇನ್ನೂ ಎಫ್‍ಐಡಿ ಹೊಂದಿಲ್ಲದ ರೈತರು ತಕ್ಷಣವೇ ತಮ್ಮ ಪಹಣಿ, ಬ್ಯಾಂಕ್ ಪಾಸ್‍ಬುಕ್ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ…

Read More