Author: ಮೃತ್ಯುಂಜಯಾಚಾರ್ ಬಿ

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

ಪಿಯು ಫಲಿತಾಂಶಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್: ಇನ್ನೂ ‘ಫೇಲ್’ ಅನ್ನೋ ಮಾತಿಲ್ಲ ! ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶದ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಲಕ್ಷಾಂತರ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಫೇಲ್ ಆದರೆ? ಎಂಬ ಆತಂಕ ಮನೆ ಮಾಡಿರುವುದು ಸಹಜ. ಆದರೆ ಈ ಬಾರಿ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ನೆಮ್ಮದಿ ನೀಡುವ ಸುದ್ದಿಯೊಂದು ಹೊರಬಿದ್ದಿದೆ. ಕರ್ನಾಟಕ ಶಿಕ್ಷಣ ಮಂಡಳಿ ಜಾರಿಗೆ ತಂದಿರುವ ವಿದ್ಯಾರ್ಥಿ ಸ್ನೇಹಿ ಉತ್ತೀರ್ಣ ನಿಯಮಗಳಿಂದ ಈ ಬಾರಿ ‘ಫೇಲ್’ ಎನ್ನುವ ಭಯ ಬಹುತೇಕ ಕಡಿಮೆಯಾಗುವ ಸಾಧ್ಯತೆ ಇದೆ. ಮಂಡಳಿಯ ಹೊಸ ನಿಯಮ ಪ್ರಕಾರ, ಪ್ರತಿ ವಿಷಯದಲ್ಲಿ ಉತ್ತೀರ್ಣರಾಗಲು ಕೇವಲ 30 ಅಂಕಗಳು ಸಾಕಾಗುತ್ತವೆ. ವಿಶೇಷವೆಂದರೆ ಈ 30 ಅಂಕಗಳಲ್ಲಿ ಥಿಯರಿ ಪರೀಕ್ಷೆಯ ಅಂಕಗಳ ಜೊತೆಗೆ ಕಾಲೇಜು ನೀಡುವ 20 ಅಂಕಗಳ ಆಂತರಿಕ ಮೌಲ್ಯಮಾಪನ ಕೂಡ ಸೇರಿರುತ್ತದೆ. ಅಂದರೆ, ವಿದ್ಯಾರ್ಥಿಗೆ ಕಾಲೇಜಿನಿಂದ ಉತ್ತಮ ಆಂತರಿಕ ಅಂಕಗಳು ದೊರೆತಿದ್ದರೆ, ಥಿಯರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೂ ಪಾಸ್ ಆಗುವ ಅವಕಾಶ ಹೆಚ್ಚುತ್ತದೆ. ಇದೇ ಕಾರಣದಿಂದ…

Read More

ಮೆಡಿಕಲ್ ಕಾಲೇಜು ಊಹಾಪೋಹಕ್ಕೆ ಬಿತ್ತು ತೆರೆ; ಯಾವುದೇ ಗೊಂದಲ, ಬದಲಾವಣೆಯಿಲ್ಲ ಚಿತ್ರದುರ್ಗ: ಜಿಲ್ಲೆಯ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ ನೀಡುವ ನಿರ್ಧಾರವಾಗಿ, ನಗರದ ಹೊರವಲಯದ ಕುಂಚಿಗನಾಳ್ ಗುಡ್ಡದಲ್ಲಿ ನಿರ್ಮಾಣಗೊಂಡಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೇ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಹತ್ವದ ಘೋಷಣೆ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜಿನ ಕಾಮಗಾರಿ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಬಗ್ಗೆ ಕಂದಾಯ ಇಲಾಖೆಯೊಂದಿಗೆ ನಡೆದ ಮಾತುಕತೆಯಲ್ಲಿ ಸಕಾರಾತ್ಮಕ ಒಪ್ಪಿಗೆ ದೊರೆತಿದೆ ಎಂದು ತಿಳಿಸಿದರು. ಡಿಸಿ ಕಚೇರಿಗಾಗಿ ನಿರ್ಮಿಸಲಾದ ಆಧುನಿಕ ಕಟ್ಟಡವನ್ನು ತಾತ್ಕಾಲಿಕವಾಗಿ ವೈದ್ಯಕೀಯ ಕಾಲೇಜಿಗೆ ಬಳಸಿಕೊಳ್ಳುವ ಮೂಲಕ ಶೀಘ್ರದಲ್ಲೇ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಗುತ್ತದೆ. ಆಸ್ಪತ್ರೆಯ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸಂಕೀರ್ಣವನ್ನು ನರ್ಸಿಂಗ್ ಕಾಲೇಜು, ಫಿಸಿಯೋಥೆರಪಿ ಹಾಗೂ ಮಕ್ಕಳ ಚಿಕಿತ್ಸಾ ವಿಭಾಗಗಳಿಗೆ ಮೀಸಲಿಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಸ್ವಲ್ಪ…

Read More

ರಣಬಿಸಿಲಿನಲ್ಲಿ 3 ಗಂಟೆ ಬಂದೂಕು ಹಿಡಿದು ನಿಂತ ಖಾಕಿ ! ಚಿತ್ರದುರ್ಗ: ಶಿಸ್ತಿನ ಪ್ರತೀಕವೆಂದು ಕರೆಯಲ್ಪಡುವ ಪೊಲೀಸ್ ಇಲಾಖೆಯಲ್ಲೇ ಬೆಚ್ಚಿಬೀಳಿಸುವಂತಹ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ನೇತ್ರಾವತಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, 12 ಮಂದಿ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ರಣಬಿಸಿಲಿನಲ್ಲಿ ಸತತ ಮೂರು ಗಂಟೆಗಳ ಕಾಲ ಬಂದೂಕು ಹಿಡಿಸಿ ನಿಲ್ಲಿಸಿ ಶಿಕ್ಷೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಮೂರು ದಿನಗಳ ಹಿಂದೆ ನಡೆದಿದ್ದ ಈ ಘಟನೆ ತಡವಾಗಿ ಬಹಿರಂಗವಾಗಿದ್ದು, ಪ್ರಕರಣ ಈಗ ಪೊಲೀಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಶಿಕ್ಷೆಗೆ ಒಳಗಾದ ಸಿಬ್ಬಂದಿಯಲ್ಲಿ ಮೂವರು ಪೊಲೀಸರ ಆರೋಗ್ಯ ಹದಗೆಟ್ಟಿದ್ದು, ಹೊಳಲ್ಕೆರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ನಡೆದ ಇಸ್ಪೀಟ್ ದಾಳಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಸಿಕ್ಕಿತ್ತು ಎಂಬ ವಿಷಯ ಪೊಲೀಸ್ ಸಿಬ್ಬಂದಿ ನಡುವೆ ಗುಸು ಗುಸು ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರದ ಹಿನ್ನೆಲೆ ಪಿಎಸ್‌ಐ ಅವರು ದ್ವೇಷದಿಂದ…

Read More

ನಿತ್ಯ ಭವಿಷ್ಯ – 08/04/2026 (ಬುಧವಾರ) ಮೇಷ ರಾಶಿ: ಇಂದು ನಿಮ್ಮಲ್ಲಿ ಹೊಸ ಉತ್ಸಾಹ ಕಂಡುಬರುತ್ತದೆ. ಕೆಲಸದಲ್ಲಿ ಪ್ರಗತಿ ಕಾಣಬಹುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ. ಕುಟುಂಬದವರ ಜೊತೆ ಸಮಯ ಕಳೆಯಿರಿ. ವೃಷಭ ರಾಶಿ: ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಮೆಚ್ಚುಗೆ ಸಿಗಬಹುದು. ಆರೋಗ್ಯದ ಕಡೆ ಗಮನ ಕೊಡಿ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಮಿಥುನ ರಾಶಿ: ಹೊಸ ಯೋಜನೆಗಳಿಗೆ ಶುಭಾರಂಭದ ದಿನ. ಸ್ನೇಹಿತರ ಸಹಾಯ ದೊರೆಯುತ್ತದೆ. ವ್ಯವಹಾರದಲ್ಲಿ ಲಾಭ ಸಾಧ್ಯ. ಮಾತಿನ ಮೇಲೆ ನಿಯಂತ್ರಣ ಇರಲಿ. ಕರ್ಕಾಟಕ ರಾಶಿ: ಮನಸ್ಸಿನಲ್ಲಿ ಚಿಂತೆ ಇರಬಹುದು. ಸಹನೆ ಮತ್ತು ಧೈರ್ಯದಿಂದ ಕೆಲಸ ಮಾಡಿ. ಕುಟುಂಬದ ಬೆಂಬಲ ಸಿಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಸಿಂಹ ರಾಶಿ: ಇಂದು ನಿಮ್ಮ ನಾಯಕತ್ವ ಗುಣ ಮೆರೆದಿಡುತ್ತೀರಿ. ಕೆಲಸದಲ್ಲಿ ಯಶಸ್ಸು. ಹಿರಿಯರಿಂದ ಪ್ರಶಂಸೆ ಸಿಗಲಿದೆ. ಪ್ರಯಾಣ ಸಾಧ್ಯತೆ ಇದೆ. ಕನ್ಯಾ ರಾಶಿ: ಹೊಸ ಅವಕಾಶಗಳು ಎದುರಾಗುತ್ತವೆ. ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶ. ಆರೋಗ್ಯ ಉತ್ತಮವಾಗಿರುತ್ತದೆ. ಹಣಕಾಸಿನ ಲಾಭ ಕಂಡುಬರುತ್ತದೆ. ತುಲಾ ರಾಶಿ:…

Read More

ರಶ್ಮಿಕಾ ಮಂದಣ್ಣಗೆ ತಮ್ಮ ಮನೆ ಉಡುಗೊರೆಯಾಗಿ ನೀಡಿದ ತಂದೆ ವಿರಾಜಪೇಟೆ: ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅವರ ತಂದೆ ಮದನ್ ಮಂದಣ್ಣ ಅವರು ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ್ದಾರೆ. ಕೊಡಗು ಮೂಲದ ಚಲನಚಿತ್ರ ನಟಿ ರಶ್ಮಿಕಾ ಅವರು ಇತ್ತೀಚಿಗಷ್ಟೇ ನಟ ವಿಜಯ ದೇವರಕೊಂಡ ಅವರನ್ನು ವರಿಸಿದ್ದರು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂ ಕಿನ ಕುಕ್ಕೂರು ಗ್ರಾಮದ ನಿವಾಸಿ, ವಿರಾಜ ಪೇಟೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮದನ್ ಮತ್ತು ಪತ್ನಿ ಸುಮನ್ ಮಂದಣ್ಣ ಅವರ ಹೆಸರಿನಲ್ಲಿದ್ದ ಸರ್ವೆ ಸಂಖ್ಯೆ 142/1 ಮತ್ತು 142/2 ಐಷಾರಾಮಿ (ಸೆರಿನಿಟಿ) ಮನೆಯನ್ನು ವಿರಾಜಪೇಟೆ ಉಪನೋಂದಣಿ ಕಚೇರಿಯಲ್ಲಿ ಮಗಳು ರಶ್ಮಿಕಾ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ

Read More

ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ ಪತಿ ಜತೆ ವಿಡಿಯೋ ಕಾಲ್ ವೇಳೆಯೇ ನೇಣಿಗೆ ಶರಣು ಚೆನ್ನೈ: ತಮಿಳಿನ ಕಿರುತೆರೆ ನಟಿ, ಸುಭಾಷಿಣಿ ಅಲಿಯಾಸ್ ಸಾಲ್ವಬಾಲಾ (36) ಪತಿಯ ಜತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿ ದ್ದಾಗಲೇ ನೇಣು ಬಿಗಿದುಕೊಂಡು ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಕೌಟುಂಬಿಕ ಕಲಹವೇ ದುಡುಕಿನ ನಿರ್ಧಾರಕ್ಕೆ ಕಾರಣವಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಶ್ರೀಲಂಕಾ ಮೂಲದ ಸುಭಾಷಿಣಿ, ಬೆಂಗಳೂರಿನ ಬಿಪಿನ್ ಚಂದ್ರ ಎನ್ನುವವರನ್ನು 2 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇಬ್ಬರೂ ಬೆಂಗಳೂರಿನಲ್ಲಿಯೇ ವಾಸವಾಗಿದ್ದರು. ಈ ಮಧ್ಯೆ ಸುಭಾಷಿಣಿ ಧಾರಾವಾಹಿ ಚಿತ್ರೀಕರಣಕ್ಕಾಗಿ ಚೆನ್ನೈಗೆ ತೆರಳಿ ಪೋರೂರು ಬಳಿಯ ಅಯ್ಯಪ್ಪಂತಂಗಲ್‌ನ ಬಾಡಿಗೆ ಅಪಾರ್ಟ್‌ಮೆಂಟ್‌ ನಲ್ಲಿ ವಾಸವಿದ್ದರು. ಭಾನುವಾರಪತಿಯ ಜತೆ ಜತೆವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ನಟಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಪತಿ ಕೂಡಲೇ ಅಪಾರ್ಟ್‌ಮೆಂಟ್ ಭದ್ರತಾ ಸಿಬ್ಬಂದಿಗೆ ವಿಚಾರ ಮುಟ್ಟಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ನಟಿಯನ್ನು ತಕ್ಷಣವೇ ಆಸ್ಪತ್ರೆಗೆ…

Read More

ವಿವಾಹಿತೆಗೆ ಪ್ರೇಮಿ ಜೊತೆ ಹೋಗಲು ಕೋರ್ಟ್ ಅಸ್ತು 40 ವರ್ಷದ ಪತಿ ಬೇಡ ಎಂದಿದ್ದ 19ರ ತರುಣಿ ಭೋಪಾಲ್: ‘ನನ್ನ ಗಂಡನಿಗೆ 40 ವರ್ಷ. ನನಗೆ 19 ವರ್ಷ. 21 ವರ್ಷ ವಯಸ್ಸಿನ ಅಂತರದ ಕಾರಣ ನಮ್ಮಿಬ್ಬರ ದಾಂಪತ್ಯ ಸರಿ ಹೊಂದುತ್ತಿಲ್ಲ. ಹಾಗಾಗಿ ಪ್ರಿಯತಮನ ಜೊತೆ ಜೀವನ ಮಾಡುತ್ತೇನೆ’ ಎಂದ ಯುವತಿಗೆ ಮಧ್ಯಪ್ರದೇಶ ಗಂಡನನ್ನು ಹೈಕೋರ್ಟ್ ಬಿಟ್ಟು ಪ್ರೇಮಿ ಜೊತೆ ತೆರಳಲು ಅನುವು ಮಾಡಿಕೊಟ್ಟ ಪ್ರಸಂಗ ನಡೆದಿದೆ. ಏನಿದು ಪ್ರಕರಣ?: ವರ್ಷದ ಹಿಂದೆ 40 ವರ್ಷದ ಅವಧೇಶ್ ಎಂಬಾತ 19ರ ‘ಯುವತಿಯ ಜೊತೆ ವಿವಾಹವಾಗಿದ್ದ. ಇತ್ತೀಚೆಗೆ, ಅನುಜ್ ಕುಮಾರ್ ಎಂಬಾತ ತನ್ನ ಪತ್ನಿಯನ್ನು ಅಕ್ರಮವಾಗಿ ಸೆರೆಹಿಡಿ ದಿಟ್ಟುಕೊಂಡಿದ್ದಾನೆ ಎಂದು ಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ. ಕೋರ್ಟ್ ಆದೇಶದಂತೆ ಪೊಲೀಸರು ಯುವತಿಯನ್ನು ಹುಡುಕಿ ತಂದಿದ್ದಾರೆ. ವಿಚಾರಣೆ ವೇಳೆ ಯುವತಿ ತನ್ನ ಪತಿ. ಪಾಲಕರು ಹಾಗೂ ಪ್ರೇಮಿ ಉಪಸ್ಥಿತರಿರುವಾಗಲೇ, ‘ನನ್ನ ಮತ್ತು ಗಂಡನ ನಡುವೆ 21 ವರ್ಷ ಅಂತರವಿದೆ. ನಮ್ಮಿಬ್ಬರ…

Read More

ಇನ್ನು ಮುಂದೆ ಸಿದ್ದರಾಮಯ್ಯ ಸಿಎಂ ಆಗಿ ದಾವಣಗೆರೆಗೆ ಬರಲ್ಲ: ಛಲವಾದಿ ದಾವಣಗೆರೆ: ಸಿದ್ದರಾಮಯ್ಯನವರು ಬಹಿರಂಗ ಸಭೆಗೆ ಹಣ ಕೊಟ್ಟು, ಜನರನ್ನು ಸೇರಿಸಿ, ಭಾಷಣ ಮಾಡುತ್ತಿದ್ದಾರೆ. ಇದು ಅವರ ರಾಜಕೀಯ ಜೀವನದ ಅಂತ್ಯದ ದಿನಗಳಾಗಿವೆ. ಇನ್ನು ಮುಂದೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ದಾವಣಗೆರೆಗೆ ಬರುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಕಾಂಗ್ರೆಸ್ಸಿನ ನಾಯಕರು ಜಮೀ‌ರ್ ಅಹಮ್ಮದ್ ಅವರ ಕಾಲು ಹಿಡಿದು, ಭಾನುವಾರ ದಾವಣಗೆರೆಗೆ ಕರೆದುಕೊಂಡು ಬಂದಿದ್ದಾರೆ. ಓಟಿಗಾಗಿ ಕಬಾಬು ತಿನ್ನಿಸುವ ಪರಿಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಕಾಂಗ್ರೆಸ್ಸಿನ ನಾಯಕರು ಏನೇ ಮಾಡಿದರೂ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಪವಾಡ ಆಗುವುದಿಲ್ಲ. ಎರಡೂ ಕ್ಷೇತ್ರದಲ್ಲೂ ಬಿಜೆಪಿ ಜಯ ಸಾಧಿಸಲಿದೆ ಎಂದರು

Read More

ಸಿದ್ದು ಸಿಎಂ ಆಗಿ ಇನ್ನೂ 2 ವರ್ಷ ಇದ್ದಾರೆ: ಡಾ.ಪರಂ ಈ ಬಗ್ಗೆ ಹೈಕಮಾಂಡಿಂದ ಪ್ರತ್ಯೇಕ ಸ್ಪಷ್ಟಿಕರಣ ಬೇಕಿಲ್ಲ ಸಿದ್ದರಾಮಯರೇ ಸಿಎಂ ಆಗಿ ಇನ್ನೂ 2.5 ವರ್ಷ ಇರುತ್ತಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತ ನಾಡಿ, 2013ರಲ್ಲಿ ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಹೈಕ ಮಾಂಡ್ ಘೋಷಿಸಿರಲಿಲ್ಲ. ಆದರೂ 5 ವರ್ಷ ಸಿಎಂ ಆಗಿದ್ದರು ತಾನೇ?. ಈ ಬಾರಿ ಯೂ 2023ರಲ್ಲಿ ಸಿದ್ದರಾಮಯ್ಯ ಸಿಎಂ ಎಂದು ಹೈಕಮಾಂಡ್ ಘೋಷಣೆ ಮಾಡಿ ತ್ತು. ಅದರ ಅವಧಿ 2028, ಅದನ್ನ ಮುಗಿಸ ಬೇಕು ತಾನೇ?. ಹೈಕಮಾಂಡ್ ನೀವೇ 5 ವರ್ಷ ಸಿಎಂ ಎಂದು ಪ್ರತ್ಯೇಕವಾಗಿ ಸೃಷ್ಟಿ ಕರಣ ಕೊಡುವ ಅವಶ್ಯಕತೆ ಇಲ್ಲ ಎನ್ನುವ ಮೂಲಕ ಸಿದ್ದು ಪರ ಬ್ಯಾಟ್ ಬೀಸಿದರು. ಹೈಕಮಾಂಡ್ ಯಾವ ಗೊಂದಲಗಳನ್ನು ಸೃಷ್ಟಿ ಮಾಡಿಲ್ಲ. ಹೈಕಮಾಂಡ್ ಯಾವತ್ತಾ ದರೂ ಸಿದ್ದರಾಮಯ್ಯ ಅವಧಿ ಇಷ್ಟು ಎಂದು ಹೇಳಿದ್ಯಾ?. ಬದಲಾವಣೆ ಬಗ್ಗೆ ಮಾತನಾಡಿ ದ್ದಾರಾ?. ಅದರ ಅರ್ಥ…

Read More

ರಾಜ್ಯದಲ್ಲಿರೋದು ಎಸ್ಸಿ-ಎಸ್ಟಿ, ಒಬಿಸಿ ವಿರೋಧಿ ಸರ್ಕಾರ: ಬೊಮ್ಮಾಯಿ ಬಾಗಲಕೋಟೆ: ರಾಜ್ಯದಲ್ಲಿ ಎಸ್ಸಿ, ಎಸ್ಟಿ, ಒಬಿಸಿ ವಿರೋಧಿ ಸರ್ಕಾರ ಇದೆ. ಯಾರ ಮತ ಪಡೆದಿದ್ದಾರೋ ಅವರಿಗೆ ಅನ್ಯಾಯ ಮಾಡುವ ಸರ್ಕಾರ ಇದೆ. ಗಂಗಾಮತಸ್ಥರೇ, ಸುಶಿಕ್ಷಿತರಾದ ನೀವು ಎಲ್ಲಿರುತ್ತೇವೆ, ಅಲ್ಲಿ ಗೆಲುವಿದೆ ಎಂದು ತೋರಿಸಿ. ಆಗ ಎಲ್ಲ ರಾಜಕೀಯ ಪಕ್ಷಗಳು ನಿಮ್ಮ ಮನೆ ಬಾಗಿಲಿಗೆ ಬರುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ಬಮ್ಮಣಗಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಮತಯಾಚನೆ ಮಾಡಿ, ಅವರು ಮಾತನಾಡಿದರು. ಅಂಬಿಗರ ಚೌಡಯ್ಯನವರ ಕುಲಬಾಂಧವರನ್ನು ನೋಡುವುದು ಬಹಳ ಸಂತೋಷವಾಗುತ್ತದೆ. ಅತ್ಯಂತ ಕಠಿಣ ಪರಿಶ್ರಮ ಪಡುವ ಕುಲ ಅದು. ಈ ಸಮುದಾಯ ಮುಂದೆ ಬರಬೇಕು ಎಂದರು.

Read More