Author: ಮೃತ್ಯುಂಜಯಾಚಾರ್ ಬಿ
ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.
₹449 ಕೋಟಿ ಆದಾಯದ ಐತಿಹಾಸಿಕ ಮೈಲಿಗಲ್ಲು; ಮೈಸೂರು ರೈಲ್ವೆ ವಿಭಾಗದ ಭರ್ಜರಿ ದಾಖಲ ಮೈಸೂರು: ಮೈಸೂರು ರೈಲ್ವೆ ವಿಭಾಗ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ₹449.13 ಕೋಟಿ ಪ್ರಯಾಣಿಕ ಆದಾಯ ಗಳಿಸಿ ಹೊಸ ದಾಖಲೆ ನಿರ್ಮಿಸಿದೆ. ಹಿಂದಿನ ₹419.89 ಕೋಟಿ ದಾಖಲೆಯನ್ನು ಧೂಳಿಪಟ ಮಾಡಿರುವ ವಿಭಾಗ, 2025-26 ಹಣಕಾಸು ವರ್ಷದಲ್ಲಿ ಹಲವು ವಲಯಗಳಲ್ಲಿ ಅಪೂರ್ವ ಸಾಧನೆ ಮೆರೆದಿದೆ. ಪ್ರಯಾಣಿಕರಿಂದ ಮಾತ್ರವಲ್ಲದೆ ಟಿಕೆಟ್ ಪರಿಶೀಲನೆ ಕಾರ್ಯಾಚರಣೆಗಳಿಂದಲೇ ₹9.75 ಕೋಟಿ ದಂಡ ಮತ್ತು ಆದಾಯ ಸಂಗ್ರಹವಾಗಿದ್ದು, ಇದು ವಾರ್ಷಿಕ ಗುರಿಯನ್ನೂ ಮೀರಿದ ಸಾಧನೆ ಎನ್ನಲಾಗಿದೆ. ಇನ್ನೊಂದೆಡೆ ನಾನ್-ಫೇರ್ ಆದಾಯ ವಲಯದಲ್ಲೂ ಮೈಸೂರು ವಿಭಾಗ ಭರ್ಜರಿ ಪ್ರದರ್ಶನ ನೀಡಿದೆ. ಜಾಹೀರಾತುಗಳಿಂದ ₹3.17 ಕೋಟಿ, ಪಾರ್ಕಿಂಗ್‌ನಿಂದ ₹4.02 ಕೋಟಿ, ಆಹಾರ ಪೂರೈಕೆಯಿಂದ ₹2.61 ಕೋಟಿ ಆದಾಯ ಹರಿದು ಬಂದಿದೆ. ಸರಕು ಸಾಗಣೆ ವಿಭಾಗದಲ್ಲಿ ₹900.19 ಕೋಟಿ ಆದಾಯ ದಾಖಲಾಗಿದ್ದು, ಇದು ವಿಭಾಗದ ಎರಡನೇ ಅತಿ ದೊಡ್ಡ ಸಾಧನೆ. ಜೊತೆಗೆ 8.665 ಮಿಲಿಯನ್ ಟನ್ ಕಬ್ಬಿಣದ ಅದಿರು ಲೋಡಿಂಗ್…
ಮಕ್ಕಳಿಗೆ ಭಾಷಾ ಕೌಶಲದ ಸಾಮರ್ಥ್ಯ ಬೆಳೆಸಿ; ಎಂ. ನಾಸಿರುದ್ದೀನ್ ಚಿತ್ರದುರ್ಗ: ಮಕ್ಕಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸಂವಹನಾ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬೆಳೆಸಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ಡಯಟ್‌ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದ್ವಿಭಾಷಾ ತರಗತಿ ಬೋಧನೆ ಕುರಿತು ಆಯೋಜಿಸಿದ್ದ ಜಿಲ್ಲಾ ಹಂತದ ಎಂ.ಆರ್.ಪಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕೆ.ಪಿ.ಎಸ್, ಪಿ.ಎಂ.ಶ್ರೀ ಮತ್ತು ದ್ವಿಭಾಷಾ ತರಗತಿ ಪ್ರಾರಂಭಿಸಿರುವ ಸರ್ಕಾರಿ ಶಾಲೆಗಳು, ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭಿಸಿರುವ ಸರ್ಕಾರಿ ಶಾಲೆಗಳು, ಗಣಿಬಾಧಿತ ತಾಲೂಕುಗಳಾದ ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು, ಹೊಸದುರ್ಗದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಗೆ ಬೋಧಿಸುವ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿಯಲ್ಲಿ ಕಲಿತ ಅಂಶಗಳನ್ನು ತರಗತಿಯಲ್ಲಿ ಅನುಷ್ಟಾನ ಮಾಡುವ ಮೂಲಕ ಮಕ್ಕಳಲ್ಲಿ ಭಾಷಾ ಕೌಶಲಗಳಲ್ಲಿ ಸಾಮರ್ಥ್ಯ ಬೆಳೆಸಬೇಕು ಎಂದರು. ಉಪ ಪ್ರಾಚಾರ್ಯ ಎಸ್.ನಾಗಭೂಷಣ್ ಮಾತನಾಡಿ ಜಿಲ್ಲಾ ಹಂತದಲ್ಲಿ ತರಬೇತಿ ಪಡೆಯುತ್ತಿರುವ ಎಂ.ಆರ್.ಪಿಗಳು 5 ದಿನಗಳ ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪರಸ್ಪರ ಚರ್ಚಿಸುವುದರ ಮೂಲಕ ವಿಷಯಜ್ಞಾನ…
ಜಿಲ್ಲಾಧಿಕಾರಿ ಬಂಧನಕ್ಕೆ ವಾರಂಟ್ ; ಜಮೀನು ವ್ಯಾಜ್ಯ ಪ್ರಕರಣ ಮೈಸೂರು: ಭೂ ವ್ಯಾಜ್ಯ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ವಿರುದ್ಧ ಬಂಧನ ವಾರಂಟ್ ಜಾರಿಯಾಗಿರುವುದು ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮೈಸೂರಿನ ಒಂದನೇ ಅಪರ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ನ್ಯಾಯಾಲಯವು ಈ ಆದೇಶ ಹೊರಡಿಸಿದ್ದು, ಕುಂಬಾರ ಕೊಪ್ಪಲಿನ ನಿವಾಸಿ ಜಯರಾಮು ಅವರಿಗೆ ಸಂಬಂಧಿಸಿದ ಜಮೀನು ಪ್ರಕರಣದಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ನಗರದ ಕುಂಬಾರ ಕೊಪ್ಪಲಿನ ಸೀತಾರಾಮೇಗೌಡ ಅವರಿಗೆ ಸೇರಿದ ಹೆಬ್ಬಾಳು ಗ್ರಾಮದ ಸರ್ವೇ ನಂ.155 ಹಾಗೂ 159/1 ವ್ಯಾಪ್ತಿಯ ಐದು ಎಕರೆ ಜಮೀನನ್ನು 1980ರಲ್ಲಿ ನಗರ ಭೂ ಮಿತಿ ಕಾಯಿದೆಯಡಿ ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿತ್ತು. ಇದನ್ನು ಪ್ರಶ್ನಿಸಿ ಸೀತಾರಾಮೇಗೌಡ ಅವರ ಪುತ್ರ ಚೆಲುವೇಗೌಡ ಹಾಗೂ ಮೊಮ್ಮಗ ಜಯರಾಮು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು ಅರ್ಜಿದಾರರ ಪರವಾಗಿ ತೀರ್ಪು ನೀಡಿತ್ತು. ಬಳಿಕ ಜಿಲ್ಲಾಡಳಿತ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರೂ, ಅಲ್ಲಿಯೂ…
ನಿತ್ಯ ಭವಿಷ್ಯ – 04/04/2026 (ಶನಿವಾರ) ಮೇಷ (Aries) ಇಂದು ಹೊಸ ಕಾರ್ಯಗಳಿಗೆ ಶುಭ ದಿನ. ಉದ್ಯೋಗದಲ್ಲಿ ಮೆಚ್ಚುಗೆ ಸಿಗಲಿದೆ. ಹಣಕಾಸು ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ವೃಷಭ (Taurus) ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಆರೋಗ್ಯದ ಕಡೆ ಗಮನ ಕೊಡಿ. ವ್ಯವಹಾರದಲ್ಲಿ ಲಾಭ ಸಾಧ್ಯತೆ. ಮಿಥುನ (Gemini) ಇಂದು ನಿಮ್ಮ ಮಾತುಗಳಿಂದ ಸಮಸ್ಯೆಗಳು ಪರಿಹಾರವಾಗುತ್ತವೆ. ಹೊಸ ಪರಿಚಯಗಳು ಲಾಭದಾಯಕ. ಕರ್ಕಾಟಕ (Cancer) ಮನಸ್ಸಿನಲ್ಲಿ ಚಿಂತೆ ಇರಬಹುದು. ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳಿ. ಧಾರ್ಮಿಕ ಚಿಂತನೆ ಹೆಚ್ಚಾಗುತ್ತದೆ. ಸಿಂಹ (Leo) ಉದ್ಯೋಗದಲ್ಲಿ ಉತ್ತೇಜನ ಸಿಗಬಹುದು. ಸ್ನೇಹಿತರ ಸಹಾಯದಿಂದ ಕೆಲಸಗಳು ಸುಗಮವಾಗುತ್ತವೆ. ಕನ್ಯಾ (Virgo) ಇಂದು ಪ್ರಯತ್ನಗಳಿಗೆ ಫಲ ಸಿಗಲಿದೆ. ಹಣಕಾಸು ವಿಷಯಗಳಲ್ಲಿ ಪ್ರಗತಿ. ಆರೋಗ್ಯ ಉತ್ತಮ. ತುಲಾ (Libra) ಸಂಬಂಧಗಳಲ್ಲಿ ಸಮತೋಲನ ಕಾಪಾಡಿಕೊಳ್ಳಿ. ವ್ಯವಹಾರದಲ್ಲಿ ಹೊಸ ಅವಕಾಶಗಳು ಬರುತ್ತವೆ. ವೃಶ್ಚಿಕ (Scorpio) ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಕೆಲಸಗಳಲ್ಲಿ ಯಶಸ್ಸು. ಹಿರಿಯರಿಂದ ಮಾರ್ಗದರ್ಶನ. ಧನು (Sagittarius) ಪ್ರಯಾಣ ಸಾಧ್ಯತೆ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ.…
ನಿಧನ ವಾರ್ತೆ ಐ.ಎಂ.ಚಂದ್ರಶೇಖರಯ್ಯ ಚಿತ್ರದುರ್ಗದ ವಿದ್ಯಾನಗರ ನಿವಾಸಿ, ಜಿಲ್ಲಾ ಸಹಕಾರ ಬ್ಯಾಂಕ್ ನ ನಿವೃತ್ತ ಉದ್ಯೋಗಿ ಐ.ಎಂ.ಚಂದ್ರಶೇಖರಯ್ಯ ( 76) ಶುಕ್ರವಾರ ರಾತ್ರಿ ಬೆಂಗಳೂರಿನ. ಖಾಸಗಿ ಆಸ್ಪತ್ರೆಯಲ್ಕಿ ನಿಧನ ಹೊಂದಿದರು. ಮೃತರು ಜಿಲ್ಲಾ ಆಸ್ಪತ್ರೆ ನೇತ್ರ ತಜ್ಞೆ ಶಿಲ್ಪ ಕಂಬಾಳಿಮಠ್ ಸೇರಿದಂತೆ ಇಬ್ಬರು ಪುತ್ರಿಯರ ಅಗಲಿದ್ದಾರೆ. ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಚಿತ್ರದುರ್ಗದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟಜಂಬ ಮೂಲಗಳು ತಿಳಿಸಿವೆ
ಏಕನಾಥೇಶ್ವರಿ, ಬರಗೇರಮ್ಮ ದೇವಿ ವೈಭವದ ಮೆರವಣಿಗೆ * ಕಣ್ಮನ ಸೆಳೆದ ದೇವಿಯರ ಅಲಂಕಾರ * ಹರಕೆ ಸಲ್ಲಿಸಿದ ಭಕ್ತರು * ಮಜ್ಜಿಗೆ ಪಾನಕ ವಿತರಣೆ ಚಿತ್ರದುರ್ಗ : ಐತಿಹಾಸಿಕ ಚಿತ್ರದುರ್ಗ ನಗರದಲ್ಲಿ ಶುಕ್ರವಾರ ಏಕನಾಥೇಶ್ವರಿ ಹಾಗೂ ಬರಗೇರಮ್ಮನವರ ಮೆರವಣಿಗೆ ವೈಭವೋಪೇತವಾಗಿ ನಡೆಯಿತು. ಕೋಟೆ ರಸ್ತೆಯಲ್ಲಿರುವ ಪಾದಗುಡಿ ಮುಂಭಾಗದಲ್ಲಿ ತಹಶೀಲ್ದಾರ್ ಮೆರವಣಿಗೆ ಉದ್ಘಾಟಿಸಿದರು. ಡೊಳ್ಳು, ತಮಟೆ, ವಿವಿಧ ಕಲಾ ತಂಡಗಳೊಂದಿಗೆ ಸಾಗಿದ ಮೆರವಣಿಗೆ ಆನೆಬಾಗಿಲು, ಬುರುಜನಹಟ್ಟಿ, ಸಿಹಿನೀರು ಹೊಂಡದ ರಸ್ತೆ, ಸಿದ್ದರಾಮೇಶ್ವರ ಸರ್ಕಲ್, ಗಾಯತ್ರಿ ಭವನ ವೃತ್ತ, ಕರುವಿನಕಟ್ಟೆ, ಜೋಗಿಮಟ್ಟಿ ರಸ್ತೆಯಲ್ಲಿ ಸಂಚರಿಸಿತು. ಜೋಡೆತ್ತಿನ ಬಂಡಿಯಲ್ಲಿ ಏಕನಾಥೇಶ್ವರಿಯನ್ನು ವಿವಿಧ ಬಗೆಯ ಬೃಹಧಾಕಾರವಾದ ಹಾರ ಹಾಗೂ ಬಣ್ಣ ಬಣ್ಣದ ಹೂವುಗಳಿಂದ ಸಿಂಗರಿಸಲಾಗಿತ್ತು. ರಸ್ತೆಯುದ್ದಕ್ಕೂ ಅಲ್ಲಲ್ಲಿ ಭಕ್ತರು ಏಕನಾಥೇಶ್ವರಿ ಅಮ್ಮನಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಉರಿ ಬಿಸಿಲನ್ನು ಲೆಕ್ಕಿಸದೆ ಮೆರವಣಿಗೆಯಲ್ಲಿ ಹೊರಟವರಿಗೆ ಭಕ್ತರು ತಮ್ಮ ಮನೆಗಳ ಮುಂದೆ ತಂಪಾದ ಪಾನೀಯ ಹಾಗೂ ಮಜ್ಜಿಗೆಯನ್ನು ವಿತರಿಸಿದರು. ಹೊಳಲ್ಕೆರೆ ರಸ್ತೆಯಲ್ಲಿರುವ ಬರಗೇರಮ್ಮನ…
ಶಿವಲಿಂಗಪ್ಪ ಕೊಲೆ ಪ್ರಕರಣ; ಹಂತಕರ ಬಂಧನಕ್ಕೆ ಆಗ್ರಹ ಚಿತ್ರದುರ್ಗ : ಸಣ್ಣ ಸಮಾಜದಲ್ಲಿ ದೊಡ್ಡದಾಗಿ ಬೆಳೆದಿದ್ದ ಬಿ.ಶಿವಲಿಂಗಪ್ಪನ ಏಳಿಗೆಯನ್ನು ಸಹಿಸದೆ ಬರ್ಬರವಾಗಿ ಹತ್ಯೆಗೈದಿದ್ದು, ವೇಗವಾಗಿ ತನಿಖೆ ನಡೆಸಿ ಹಂತಕರನ್ನು ಬಂಧಿಸಿ ಉಗ್ರ ಶಿಕ್ಷೆಗೊಳಪಡಿಸುವಂತೆ ಜಿಲ್ಲಾ ಮಡಿವಾಳರ ಸಂಘದ ಗೌರವಾಧ್ಯಕ್ಷ ಡಾ.ವಿ.ಬಸವರಾಜ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು. ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾನವೀಯ ಗುಣ, ಸಮಾಜದ ಬಗ್ಗೆ ಕಳಕಳಿಯಿಟ್ಟುಕೊಂಡಿದ್ದ ಬಿ.ಶಿವಲಿಂಗಪ್ಪನವರ ಸಾವು ಕುಟುಂಬಕ್ಕಷ್ಟೆ ಅಲ್ಲ ಮಡಿವಾಳ ಸಮಾಜಕ್ಕೆ ಅತೀವ ನೋವುಂಟು ಮಾಡಿದೆ. ಇಂತಹ ಹೀನಾಯ ಕೃತ್ಯಗಳು ನಿಲ್ಲಬೇಕಾದರೆ ಕೊಲೆಗಡುಕರಿಗೆ ಶಿಕ್ಷೆಯಾಗಬೇಕು. ಮಡಿವಾಳ ಜನಾಂಗ ಸಣ್ಣ ಸಮಾಜ. ದುಃಖತಪ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅಲ್ಲಿಯವರೆಗೂ ನಾವುಗಳು ಹೋರಾಟಕ್ಕೆ ಸಿದ್ದರಿದ್ದೇವೆ. ತಪ್ಪಿತಸ್ಥರನ್ನು ಬಂಧಿಸುವಂತೆ ಸೋಮವಾರದವರೆಗೂ ಗಡುವು ನೀಡುತ್ತೇವೆ. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ದೊಡ್ಡ ಪ್ರತಿಭಟನೆ ನಡೆಸುತ್ತೇವೆಂದು ಹೇಳಿದರು. ಸಮಾಜಕ್ಕೆ ಬದುಕನ್ನು ಮುಡುಪಾಗಿಟ್ಟಿದ್ದ ಬಿ.ಶಿವಲಿಂಗಪ್ಪನವರು ಕಷ್ಟದಲ್ಲಿದ್ದವರಿಗೆ ಸದಾ ಮಿಡಿಯುತ್ತಿದ್ದರು. ಒಮ್ಮೆ ಅವರ ನಿವಾಸದಲ್ಲಿ ಬುದ್ದ, ಧಮ್ಮ ಸಂವಾದವನ್ನು ಇಟ್ಟುಕೊಂಡಿದ್ದರು. ಅದನ್ನು…
ಕೇಂದ್ರ ಸರ್ಕಾರದ ಯೋಜನೆ ಹೆಸರಲ್ಲಿ ಮನೆ ಕಳ್ಳತನ; ಖಾಕಿ ಬಲೆಗೆ ಅಂತರ ರಾಜ್ಯ ಕಳ್ಳರು ಟಿಒಬಿ ನ್ಯೂಸ್ ಚಿತ್ರದುರ್ಗ ಜಲಜೀವನ್ ಯೋಜನೆ ಸಿಬ್ಬಂದಿ ಎಂದು ನಂಬಿಸಿ ಮನೆಗಳಿಗೆ ಪ್ರವೇಶಿಸಿ ಕಳ್ಳತನ ಮಾಡುತ್ತಿದ್ದ ಅಂತರ್‌ರಾಜ್ಯ ಆರೋಪಿಗಳನ್ನು ಹೊಸದುರ್ಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ವಿವಿಧ ಠಾಣೆಗಳ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ₹13 ಲಕ್ಷ ಮೌಲ್ಯದ 94 ಗ್ರಾಂ ಚಿನ್ನಾಭರಣಗಳು ಹಾಗೂ ಎರಡು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊಸದುರ್ಗ ಪಟ್ಟಣದ ನ್ಯೂ ಮಾರುತಿ ನಗರದಲ್ಲಿ 2025ರ ಆಗಸ್ಟ್ 23ರಂದು ನಡೆದ ಮನೆ ಕಳ್ಳತನ ಪ್ರಕರಣದ ತನಿಖೆ ವೇಳೆ ಈ ಮಹತ್ವದ ಸಾಧನೆ ನಡೆದಿದೆ. ಪ್ರಕರಣದಲ್ಲಿ ಆರೋಪಿಗಳು ಮನೆಯ ಬಾಗಿಲು ತಟ್ಟಿ, ಮನೆಯಲ್ಲಿ ಗಂಡುಮಕ್ಕಳು ಇದ್ದಾರಾ? ಎಂದು ವಿಚಾರಿಸಿ, ಬಳಿಕ ಜಲಜೀವನ್ ಯೋಜನೆಯಡಿ ಮನೆಗೆ ಸಂಪರ್ಕ ಕಲ್ಪಿಸುವ ಕೆಲಸಕ್ಕಾಗಿ ಬಂದಿದ್ದೇವೆ ಎಂದು ನಂಬಿಸಿದ್ದರು. ಮನೆಯ ಮಹಿಳೆಯನ್ನು ಮೇಲ್ಚಾವಣಿಗೆ ಕರೆದುಕೊಂಡು ಹೋಗಿ ಅಳತೆ ತೆಗೆದುಕೊಳ್ಳುವ ನೆಪದಲ್ಲಿ ತೊಡಗಿಸಿಕೊಂಡಿದ್ದ ವೇಳೆ, ಇನ್ನಿಬ್ಬರು ಆರೋಪಿಗಳು ಒಳನುಗ್ಗಿ ಗಾಡ್ರೆಜ್ ಬೀರುವಿನಲ್ಲಿದ್ದ…
ಪರೀಕ್ಷೆ ಬಳಿಕ ಸಿಹಿ ಸಂಭ್ರಮ: ವಿದ್ಯಾರ್ಥಿಗಳ ಮೊಗದಲ್ಲಿ ನಗು ಚಿತ್ರದುರ್ಗ: ಪರೀಕ್ಷೆ ಎಂದರೆ ಸಾಮಾನ್ಯವಾಗಿ ಗಂಭೀರತೆ, ಒತ್ತಡ ಮತ್ತು ಆತಂಕದ ವಾತಾವರಣ ನೆನಪಾಗುತ್ತದೆ. ಆದರೆ ಭರಮಸಾಗರದ ಬಾಪೂಜಿ ಪ್ರೌಢಶಾಲೆ ಈ ಸಾಂಪ್ರದಾಯಿಕ ಚಿತ್ರಣಕ್ಕೆ ವಿಭಿನ್ನ ಸ್ಪರ್ಶ ನೀಡಿದ್ದು, ಪರೀಕ್ಷೆ ಮುಗಿದ ಕ್ಷಣವನ್ನು ವಿದ್ಯಾರ್ಥಿಗಳ ಜೀವನದ ಸಿಹಿ ನೆನಪಾಗಿಸಿದೆ. ಇಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಆರು ಪ್ರೌಢಶಾಲೆಗಳಿಂದ ಒಟ್ಟು 169 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು, ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆದ ವಾರ್ಷಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಗುರುವಾರ ಸಮಾಜ ವಿಜ್ಞಾನ ಪರೀಕ್ಷೆಯೊಂದಿಗೆ ಪರೀಕ್ಷಾ ಪ್ರಕ್ರಿಯೆಗೆ ತೆರೆ ಬಿದ್ದಿತು. ಪರೀಕ್ಷೆ ಮುಗಿದ ತಕ್ಷಣ ವಿದ್ಯಾರ್ಥಿಗಳ ಮುಖದಲ್ಲಿ ಮೂಡಿದ ನಗು, ನಿಟ್ಟುಸಿರು ಮತ್ತು ಸಂಭ್ರಮದ ಕ್ಷಣಗಳು ಶಾಲಾ ಆವರಣವನ್ನು ಹಬ್ಬದ ವಾತಾವರಣದಲ್ಲಿ ಮಿಂಚುವಂತೆ ಮಾಡಿದ್ದವು. ಈ ಕ್ಷಣವನ್ನು ಇನ್ನಷ್ಟು ವಿಶೇಷಗೊಳಿಸಲು ಶಾಲಾ ಆಡಳಿತವು ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ಲಾಡು ಉಂಡೆಗಳನ್ನು ವಿತರಿಸಿ ಹೃದಯಪೂರ್ವಕ ಬೀಳ್ಕೊಡುಗೆ ನೀಡಿತು. ಸಾಮಾನ್ಯವಾಗಿ ಪರೀಕ್ಷೆ ಆರಂಭದ ದಿನಗಳಲ್ಲಿ ಮಾತ್ರ…
ಭಕ್ತಿಯ ತೈಲದ ಕೊರತೆ ಎಂದೂ ಆಗದು : ಡಾ. ಶಿವಮೂರ್ತಿ ಸ್ವಾಮೀಜಿ ದಾವಣಗೆರೆ: ಸುಕ್ಷೇತ್ರ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆಯಿತು. ರಥೋತ್ಸವ ನಂತರ ಆಶೀರ್ವಚನ ದಯಪಾಲಿಸಿದ ಶ್ರೀ ಜಗದ್ಗುರುಗಳವರು ‘ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಯುದ್ಧದಿಂದ ಜಾಗತಿಕ ಆರ್ಥಿಕ ಅವ್ಯವಸ್ಥೆ ಉಂಟಾಗಿದೆ. ಪೆಟ್ರೋಲ್, ಎಲ್‌ಪಿಜಿ ಸಿಗದಂತಾಗಿದೆ. ಆದರೆ ಭಕ್ತಿಯ ತೈಲದಿಂದ ಪ್ರತಿ ವರ್ಷ ರಥ ಚಲಿಸುತ್ತಿದೆ’ ಎಂದು ಹೇಳಿದರು. ಎಲ್ಲರೂ ಹಣದ ವ್ಯಾಮೋಹಕ್ಕೆ ಬಿದ್ದಿದ್ದಾರೆ. ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಭಾಗ ಕೇಳುವ ಹಕ್ಕನ್ನು ನ್ಯಾಯಾಲಯ ನೀಡಿದೆ. ಆದರೆ ಧರ್ಮ ಏನು ಹೇಳುತ್ತದೆ ಎಂದು ತಿಳಿಯಬೇಕು. ಮಕ್ಕಳನ್ನು ಬೆಳೆಸಲು ಪಾಲಕರು ಪಟ್ಟ ಶ್ರಮಕ್ಕೆ ಬೆಲೆ ಕಟ್ಟಲಾಗದು. ಆದ್ದರಿಂದ ಇಂತಹ ಆಸ್ತಿ ಪ್ರಕರಣ ದಾಖಲಿಸಿದ್ದರೆ ಇಂದೇ ತೀರ್ಮಾನಿಸಿ ವಾಪಸ್ ಪಡೆಯಿರಿ’ ಎಂದು ಸೂಚ್ಯವಾಗಿ ತಿಳಿಸಿದರು. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಮೃತಪಟ್ಟವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ನಮನ ಸಲ್ಲಿಸಲಾಯಿತು. ಸಾಧು ವೀರಶೈವ ಸಮಾಜದ…
Subscribe to Updates
Get the latest creative news from FooBar about art, design and business.