Author: Times Of Bayaluseeme Staff
ಸಾಮಾನ್ಯವಾಗಿ ಹಣ್ಣುಗಳ ರಾಜ ಯಾರು ಎಂದರೆ ನಾವು ಮಾವು ಅಥವಾ ಆಪಲ್ ಎನ್ನುತ್ತೇವೆ. ಆದರೆ ಪೋಷಕಾಂಶಗಳ ವಿಷಯಕ್ಕೆ ಬಂದರೆ ‘ಕಿವಿ’ (Kiwi Fruit) ಹಣ್ಣಿಗೆ ಸಾಟಿಯೇ ಇಲ್ಲ. ಸಣ್ಣ ಗಾತ್ರದ ಈ ಹಣ್ಣಿನಲ್ಲಿ ಅಡಗಿರುವ ಆರೋಗ್ಯದ ರಹಸ್ಯಗಳು ಒಂದೆರಡಲ್ಲ. ನೀವು ಆರೋಗ್ಯವಾಗಿರಲು ಈ ಹಣ್ಣು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ. ಕಿವಿ ಹಣ್ಣಿನಲ್ಲಿರುವ ಪೋಷಕಾಂಶಗಳ ಭಂಡಾರ ಕಿವಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರಮುಖ ಖನಿಜಗಳು ಮತ್ತು ಜೀವಸತ್ವಗಳು ಸಮೃದ್ಧವಾಗಿವೆ: ಫೋಲಿಕ್ ಆಮ್ಲ (Folic Acid): ರಕ್ತಹೀನತೆಯನ್ನು ತಡೆಯಲು ಮತ್ತು ಗರ್ಭಿಣಿಯರ ಆರೋಗ್ಯಕ್ಕೆ ಇದು ಅತ್ಯಂತ ಅಗತ್ಯ. ಕ್ಯಾಲ್ಸಿಯಂ ಮತ್ತು ಸತು (Calcium & Zinc): ಮೂಳೆ ಹಾಗೂ ಹಲ್ಲುಗಳ ಬಲವನ್ನು ಹೆಚ್ಚಿಸಲು ಸಹಕಾರಿ. ಕಬ್ಬಿಣ ಮತ್ತು ತಾಮ್ರ (Iron & Copper): ದೇಹದಲ್ಲಿ ರಕ್ತದ ಉತ್ಪತ್ತಿ ಮತ್ತು ಪರಿಚಲನೆಯನ್ನು ಸುಧಾರಿಸುತ್ತದೆ. ಪ್ರಮುಖ ಆರೋಗ್ಯ ಪ್ರಯೋಜನಗಳು 1. ಜೀರ್ಣಕ್ರಿಯೆಗೆ ರಾಮಬಾಣ ಕಿವಿ ಹಣ್ಣಿನಲ್ಲಿ ‘ಆಕ್ಟಿನಿಡಿನ್’ (Actinidin) ಎಂಬ ವಿಶೇಷ ಕಿಣ್ವ…
05 ಜೂನ್ 2026ರ ಇಂದಿನ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಫಲ, ಶುಭ ಸಂಖ್ಯೆ, ಶುಭ ಬಣ್ಣ ಮತ್ತು ಶುಭ ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಮೇಷ (Aries) ಇಂದು ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಧೈರ್ಯದ ನಿರ್ಧಾರಗಳು ಲಾಭ ತರುತ್ತವೆ. ಕುಟುಂಬದವರೊಂದಿಗೆ ಸಮಯ ಕಳೆಯಿರಿ. ವೃಷಭ (Taurus) ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿದರೆ ಉತ್ತಮ. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಹರಿಸಿ. ಮಿಥುನ (Gemini) ಸಂವಹನ ಕೌಶಲ್ಯದಿಂದ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಸ್ನೇಹಿತರ ಸಹಕಾರ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಶುಭ ದಿನ. ಕಟಕ (Cancer) ಮನಸ್ಸಿನಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು. ಆತುರದ ನಿರ್ಧಾರಗಳನ್ನು ತಪ್ಪಿಸಿ. ಹಿರಿಯರ ಸಲಹೆ ನಿಮಗೆ ಮಾರ್ಗದರ್ಶನ ನೀಡಲಿದೆ. ಸಿಂಹ (Leo) ನಾಯಕತ್ವ ಗುಣಗಳು ಇಂದು ಮೆಚ್ಚುಗೆ ಪಡೆಯಲಿವೆ. ಉದ್ಯೋಗದಲ್ಲಿ ಪ್ರಗತಿಯ ಸೂಚನೆಗಳಿವೆ. ಆತ್ಮವಿಶ್ವಾಸ ಹೆಚ್ಚಲಿದೆ. ಕನ್ಯಾ (Virgo) ಕೆಲಸದಲ್ಲಿ…
ಬೆಂಗಳೂರು: ನಮ್ಮ ಸರ್ಕಾರದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸ್ಪಂದಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಎರಡು ಪ್ರತ್ಯೇಕ ಸಚಿವಾಲಯಗಳನ್ನು ಆರಂಭಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮೇಲ್ಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿಗಳು ಮತ್ತು ಮೇಲ್ಪಟ್ಟ ಅರಣ್ಯ ಅಧಿಕಾರಿಗಳ ಸಭೆ ನಡೆಸಿದರು. ನಂತರ ಮಾಧ್ಯಮಗೋಷ್ಠಿ ನಡೆಸಿ ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು. “ನಮ್ಮ ಸರ್ಕಾರದಲ್ಲಿ ಅನಿವಾಸಿ ಭಾರತೀಯರ (ಎನ್ಆರ್ ಐ) ಸಚಿವಾಲಯ ತೆರೆಯಲು ಸರ್ಕಾರ ಮುಂದಾಗಿದೆ. ನಮ್ಮ ರಾಜ್ಯದಲ್ಲಿ ಎನ್ಆರ್ ಐಗಳು ಬಂಡವಾಳ ಹೂಡಿಕೆಗೆ ಆಸಕ್ತಿ ಹೊಂದಿದ್ದರೆ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಈ ಸಚಿವಾಲಯ ಸಹಾಯವಾಗುತ್ತದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿರುವೆ. ಸಾರ್ವಜನಿಕರ ಕುಂದುಕೊರತೆಯ ಸಚಿವಾಲಯ ಆರಂಭಿಸಿ, ಜನರ ಅರ್ಜಿ, ವಿಚಾರಧಾರೆ, ಸಮಸ್ಯೆ…
ಚಿತ್ರದುರ್ಗ: ಚಿತ್ರದುರ್ಗ ನಗರ ಉಪವಿಭಾಗ ಘಟಕ-1 ವ್ಯಾಪ್ತಿಯಲ್ಲಿ ಬರುವ ಎಫ್-12 ಜೆಸಿಆರ್ ಮಾರ್ಗದಲ್ಲಿ ಇರುವ 11 ಕೆ.ವಿ ಮಾರ್ಗ ಹಾಗೂ ಎಫ್-21 ತರಾಸು ಮಾರ್ಗದಲ್ಲಿ ಇರುವ 11 ಕೆ ವಿ ಮಾರ್ಗವನ್ನು ತುರ್ತು ಕಾಮಗಾರಿ ಇರುವುದರಿಂದ ಈ ಮಾರ್ಗದ ಕೆಲವು ಪ್ರದೇಶಗಳಲ್ಲಿ ಇದೇ ಜೂನ್ 05ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಎಫ್-12 ಜೆಸಿಆರ್ ಮಾರ್ಗದ ಜೆ.ಸಿ.ಆರ್ ಬಡಾವಣೆ, ಮಾರುತಿ ನಗರ, ದರ್ಜಿ ಕಾಲೋನಿ, ಹಿಮ್ಮತ್ ನಗರ, ಅಜಾದ್ ನಗರ, ಹೊರಪೇಟೆ, ಗೋಪಾಲಪುರ ಮುಖ್ಯ ರಸ್ತೆ, ಪ್ರಸನ್ನ ಟಾಕೀಸ್ ಮುಖ್ಯ ರಸ್ತೆ, ರಾಮದಾದ ಕಾಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಎಫ್-21 ತರಾಸು ಮಾರ್ಗದ ಲಕ್ಷ್ಮೀ ಬಜಾರ್, ಚಿಕ್ಕಪೇಟೆ, ಗಾಂಧಿ ವೃತ್ತ, ಎಸ್‍ಬಿಎಂ ಸರ್ಕಲ್, ವಾಸವಿ ಶಾಲೆ, ಬಾಲಕಿಯರ ಪದವಿ ಪೂರ್ವ ಕಾಲೇಜು, ಪ್ರವಾಸಿ ಮಂದಿರ, ತಾಲ್ಲೂಕು ಕಚೇರಿ, ವಾಲ್ಮೀಕಿ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಚಿತ್ರದುರ್ಗ ನಗರ…
ಚಿತ್ರದುರ್ಗ, ಜೂ.4:* ಕಾಂಗ್ರೆಸ್ ಪಕ್ಷದ ಕಟ್ಟಾಳು, ನಿಷ್ಠಾವಂತ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ರಾಜ್ಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿರುವ ಬಿ.ಕೆ.ಹರಿಪ್ರಸಾದ್ ಆಯ್ಕೆ ಉತ್ತಮವಾಗಿದ್ದು, ಕಾಂಗ್ರೆಸ್ ಪಾಳಯದಲ್ಲಿ ಹೊಸ ಹುರುಪು ಮೂಡಿಸಿದೆ ಎಂದಿದ್ದಾರೆ. ಬಿ.ಕೆ.ಹರಿಪ್ರಸಾದ್ ಕಟ್ಟಾ ಕಾಂಗ್ರೆಸ್ಸಿಗ. ಪಕ್ಷಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನಿಷ್ಠಾವಂತ. ವಿದ್ಯಾರ್ಥಿ, ಯುವ, ಸೇವಾದಳ ಬಳಿಕ ರಾಷ್ಟ್ರಮಟ್ಟದಲ್ಲಿ ಯುವ ಕಾಂಗ್ರೆಸ್ ಸಂಘಠನೆ ಜವಾಬ್ದಾರಿ ಬಳಿಕ ಎಐಸಿಸಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ನಾಲ್ಕೈದು ರಾಜ್ಯಗಳ ಉಸ್ತುವಾರಿ, ರಾಜ್ಯಸಭಾ ಸದಸ್ಯರಾಗಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ನಾಯಕ. ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿ ಸೇವೆ ಸಲ್ಲಿಸಿರುವ ಹರಿಪ್ರಸಾದ್, ಎಂತಹ ಕಷ್ಟಕಾದಲ್ಲೂ ಪಕ್ಷದ ಸಿದ್ಧಾಂತ ಹಾಗೂ ದೇಶದ ಹಿತಕ್ಕೆ ಧಕ್ಕೆ ಬಾರದಂತೆ ಬದ್ಧತೆ ರಾಜಕಾರಣ ಮಾಡಿದವರು. ಸಂಘಟನಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಹಿರಿಯ ನಾಯಕರಿಗೆ ಕೆಪಿಸಿಸಿ ಸಾರಥ್ಯ ನೀಡಿರುವುದು ಅತ್ಯಂತ ಸೂಕ್ತ ನಿರ್ಧಾರ…
ಪತ್ರಕರ್ತನ ಕನಸಿನಲ್ಲಿ ಮೂಡಿಬಂದ ಕರ್ನಾಟಕದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ರೋಚಕ ಸಂದರ್ಶನ. ಮಾಧ್ಯಮ, ರಾಜಕೀಯ ವ್ಯವಸ್ಥೆ ಮತ್ತು ಸ್ವಾಮೀಜಿಗಳ ಕುರಿತು ಡಿಕೆಶಿ ಬಿಚ್ಚಿಟ್ಟ ಅಂತರಂಗದ ಸತ್ಯಗಳ ವಿಡಂಬನಾತ್ಮಕ ಲೇಖನ. ತುಂಬಾ ತುಂಬಾ ಆಶ್ಚರ್ಯವಾಗುತ್ತಿದೆ. ಇದು ಕನಸೋ ನನಸೋ ಇನ್ನೂ ಅರ್ಥವಾಗುತ್ತಿಲ್ಲ….. ಪ್ರಮಾಣವಚನಕ್ಕೆ ಸಿದ್ದರಾಗಿ ಕೈಯಲ್ಲಿ ಪ್ರತಿಜ್ಞಾವಿಧಿಯ ಹಸ್ತಪ್ರತಿಯನ್ನು ಹಿಡಿದು ದಟ್ಟ ಕಾಡಿನ ಒಳಗಿನಿಂದ ಶುಭ್ರ ಶ್ವೇತ ವಸ್ತ್ರಧಾರಿಯಾಗಿ, ತಲೆಗೆ ಮೈಸೂರಿನ ಪೇಟಾ ಧರಿಸಿ, ಚಿನ್ನದ ಅಂಚಿನ ಶಲ್ಯವನ್ನು ಹೆಗಲ ಮೇಲೆ ಹಾಕಿಕೊಂಡು ಕರ್ನಾಟಕದ ನೂತನ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರು ನೇರವಾಗಿ ನನ್ನತ್ತಲೇ ಬರುತ್ತಿದ್ದರು…… ನನಗೂ ಒಂದು ಕ್ಷಣ ದಿಗ್ಬ್ರಮೆಯಾಯಿತು. ಇದೇನು ನಾನು ಯಾರನ್ನು ಸಂದರ್ಶಿಸಬೇಕು ಎಂದು ಪತ್ರಕರ್ತನ ವೇಷದಲ್ಲಿ ಪೆನ್ನು, ಪೇಪರ್ ಮತ್ತು ಸ್ವಯಂ ಚಾಲಿತ ದ್ರೋಣ್ ಕ್ಯಾಮರಾದೊಂದಿಗೆ ಹೋಗುತ್ತಿರುವಾಗ ಆ ವ್ಯಕ್ತಿ ನನ್ನ ಎದುರಿಗೆ ಬರುತ್ತಿರುವುದನ್ನು ನೋಡಿ ಎಲ್ಲವೂ ದೈವೇಚ್ಚೆ ಎನಿಸಿತು, ಪವಾಡವೆನಿಸಿತು. ನೇರವಾಗಿ ಶಿವಕುಮಾರ್ ಅವರಿಗೆ ನಮಸ್ಕಾರ ಹೇಳಿ ಮಾತನಾಡಿಸತೊಡಗಿದೆ. ನಾನು…
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಚನೆಯಾದ ಹೊಸ ಸರ್ಕಾರ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರ ರಿಮೋಟ್ ಕಂಟ್ರೋಲ್‌ನಿಂದ ನಡೆಯಲಿದೆ. ಇದರಿಂದ ಜನರಿಗೆ ಏನೂ ಹೊಸತು ಸಿಕ್ಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಿರುವುದು ಹಳೆ ಸಿನಿಮಾದ ಪೋಸ್ಟರ್ ಬದಲಾದಂತಿದೆ. ಮುಖ್ಯಮಂತ್ರಿ ನಿವಾಸದ ಮುಂಭಾಗದ ಫಲಕದಲ್ಲಿ ಹೆಸರು ಬದಲಾಗಿದೆಯೇ ಹೊರತು ಜನರ ಕಷ್ಟಗಳು ನೀಗಿಲ್ಲ. ರಾಜ್ಯಕ್ಕೆ ಹೊಸ ಸಚಿವರು ಸಿಗುತ್ತಾರೆ ಎಂಬ ನಿರೀಕ್ಷೆ ಇದ್ದರೂ, ಹೊಸ ಮುಖಗಳು ಕಂಡಿಲ್ಲ. ಸಿದ್ದರಾಮಯ್ಯನವರ ಮಗ ಯತೀಂದ್ರ ಸಚಿವರಾಗಿ ಬಂದಿದ್ದಾರೆಯೇ ಹೊರತು ಹೊಸದೇನೂ ಇಲ್ಲ ಎಂದರು. ಮಳೆಯಿಂದಾಗಿ ಬೆಳೆಹಾನಿಯಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಬಂದಿದೆ. ಐಪಿಎಲ್ ಸಂಭ್ರಮಾಚರಣೆಯಲ್ಲಿ ಹನ್ನೊಂದು ಅಮಾಯಕರ ಹತ್ಯೆಯಾಯಿತು. ಭ್ರಷ್ಟಾಚಾರದ ನೋವಿನಿಂದ ಅಧಿಕಾರಿಗಳ ಸಾವು, ಸರ್ಕಾರದ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವು, ಮೈಕ್ರೋ ಫೈನಾನ್ಸ್ ಒತ್ತಡದಿಂದ ಜನರ ಸಾವು, ಸಂಬಳ ಸಿಗದೆ ನೌಕರರ ಸಾವು, ಆಸ್ಪತ್ರೆ ಗೋಡೆ ಕುಸಿದು…
ತುಮಕೂರು: ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ಗಡಿಭಾಗದಲ್ಲಿ ಹೃದಯವಿದ್ರಾವಕ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಹಿರಿಯೂರು ಮಾರ್ಗವಾಗಿ ಹುಳಿಯಾರದ ಕಡೆಗೆ ಚಲಿಸುತ್ತಿದ್ದ ಕಾರಿಗೆ ಎದುರಿನಿಂದ ವೇಗವಾಗಿ ಬಂದ ಮಾರುತಿ ಓಮಿನಿ ವಾಹನವು ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಮತ್ತೊಂದು ಕಾರು ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ. ಈ ಭೀಕರ ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತರೆಲ್ಲರೂ ಆಂಧ್ರಪ್ರದೇಶ ಮೂಲದವರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಯಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದು, ಅಪಘಾತದ ಸದ್ದು ಕೇಳಿ ಧಾವಿಸಿದ ಸ್ಥಳೀಯರು ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಘಟನಾ ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ನೆಲಮಂಗಲ ಬೈಪಾಸ್ ಬಳಿ ತಪ್ಪಿದ ಭಾರಿ ಅನಾಹುತ: ಇದೇ ವೇಳೆ ನೆಲಮಂಗಲದ ಕುಣಿಗಲ್ ಬೈಪಾಸ್ ರಸ್ತೆಯ ಬಳಿ ಮತ್ತೊಂದು ಅಪಘಾತ ಸಂಭವಿಸಿದೆ. ರೋಗಿಯೊಬ್ಬರನ್ನು…
ದಾವಣಗೆರೆ: ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಯನ್ನು ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಈ ಹಿಂದೆ ಇಲಾಖೆಯಿಂದ ಮುದ್ರಣಗೊಂಡು, ಪ್ರಸ್ತುತ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಅಥವಾ ಓದುಗರಿಗೆ ಖರೀದಿಸಲು ಸಿಗದೇ ಇರುವ ಅತ್ಯಮೂಲ್ಯ ಮತ್ತು ಪ್ರಮುಖ ಸಾಹಿತ್ಯಿಕ ಕೃತಿಗಳನ್ನು ಮರು ಮುದ್ರಣ (Reprint) ಮಾಡಲು ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ಯಾವ ಕೃತಿಗಳು ಸಾರ್ವಜನಿಕರಿಗೆ ಹಾಗೂ ಇಂದಿನ ತಲೆಮಾರಿನ ಓದುಗರಿಗೆ ತಲುಪಬೇಕು ಎಂಬುದನ್ನು ಸ್ವತಃ ಜನರೇ ನಿರ್ಧರಿಸಲು ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯಾಸಕ್ತರು, ಸಂಶೋಧಕರು ಹಾಗೂ ಸಾರ್ವಜನಿಕರಿಂದ ಮುಕ್ತ ಕೋರಿಕೆ ಮತ್ತು ಅಮೂಲ್ಯ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ. 💻 ಅಭಿಪ್ರಾಯ ದಾಖಲಿಸುವುದು ಹೇಗೆ? ಪ್ರಸ್ತುತ ಮಾರುಕಟ್ಟೆಯಲ್ಲಿ ಕೊರತೆಯಿರುವ ಮತ್ತು ಮರು ಮುದ್ರಣಗೊಳ್ಳಲೇಬೇಕಾದ ಪುಸ್ತಕಗಳ ಕುರಿತು ಸಲಹೆ ನೀಡಲು ಇಲಾಖೆಯು ಆನ್‌ಲೈನ್ ವ್ಯವಸ್ಥೆ ಕಲ್ಪಿಸಿದೆ. ಸಾಹಿತ್ಯಾಸಕ್ತರು ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ನೆಚ್ಚಿನ ಪುಸ್ತಕಗಳ ಮರು ಮುದ್ರಣಕ್ಕಾಗಿ ಬೇಡಿಕೆಯನ್ನು ಸಲ್ಲಿಸಬಹುದಾಗಿದೆ. ಅಧಿಕೃತ…
ಮನೆಮದ್ದುಗಳ ರಾಜ ಎಂದೇ ಕರೆಯಬಹುದಾದ ವೀಳ್ಯದೆಲೆ ಕೇವಲ ಪೂಜೆಗೆ ಅಥವಾ ಬಾಯಿಯ ರುಚಿಗೆ ಮಾತ್ರ ಸೀಮಿತವಾಗಿಲ್ಲ. ಇದರಲ್ಲಿ ಅಡಗಿರುವ ಅದ್ಭುತ ಔಷಧೀಯ ಗುಣಗಳು ಅನೇಕ ದೈಹಿಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಹೊಂದಿವೆ. ದಿನನಿತ್ಯದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗೆ ಓಡುವ ಮುನ್ನ, ನಮ್ಮ ಮನೆಯಂಗಳದಲ್ಲೇ ಇರುವ ಈ ವೀಳ್ಯದೆಲೆ ಏನೆಲ್ಲಾ ಚಮತ್ಕಾರ ಮಾಡಬಲ್ಲದು ಎಂಬುದನ್ನು ತಿಳಿದುಕೊಳ್ಳಿ. ವೀಳ್ಯದೆಲೆಯ 4 ಅದ್ಭುತ ಆರೋಗ್ಯ ಪ್ರಯೋಜನಗಳು 1. ರಕ್ತದಲ್ಲಿನ ಸಕ್ಕರೆ ಮಟ್ಟ (Blood Sugar) ನಿಯಂತ್ರಣ ಮಧುಮೇಹಿಗಳಿಗೆ ವೀಳ್ಯದೆಲೆ ಒಂದು ಅತ್ಯುತ್ತಮ ನೈಸರ್ಗಿಕ ಮದ್ದು. ಊಟವಾದ ನಂತರ ತಂಬಾಕು ರಹಿತವಾಗಿ ಕೇವಲ ಶುದ್ಧವಾದ ವೀಳ್ಯದೆಲೆಯನ್ನು ಜಗಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಿ, ರಕ್ತದಲ್ಲಿ ಸಕ್ಕರೆಯ ಮಟ್ಟ ಹಠಾತ್ತನೆ ಏರಿಕೆಯಾಗದಂತೆ ತಡೆಯಲು ಅದ್ಭುತವಾಗಿ ಕೆಲಸ ಮಾಡುತ್ತದೆ. 2. ಗಾಯಗಳನ್ನು ತ್ವರಿತವಾಗಿ ಗುಣಪಡಿಸುವ ಶಕ್ತಿ ವೀಳ್ಯದೆಲೆಯಲ್ಲಿ ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ (Anti-bacterial) ಹಾಗೂ ಉರಿಯೂತ ನಿವಾರಕ ಗುಣಗಳಿವೆ. ಆಕಸ್ಮಿಕವಾಗಿ ಬಿದ್ದಾಗ ಅಥವಾ ಗಾಯಗಳಾದಾಗ,…
Subscribe to Updates
Get the latest creative news from FooBar about art, design and business.