Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಒತ್ತಡಕ್ಕೆ ಮಣಿಯದೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ: ಅಧಿಕಾರಿಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ

ಚಿತ್ರದುರ್ಗ: ಜೂನ್ 5 ರಂದು ನಗರದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಬಿ.ಕೆ.ಹರಿಪ್ರಸಾದ್ ಕೈಗೆ ಕೆಪಿಸಿಸಿ ಸಾರಥ್ಯ: ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನ ಎಂದ ಮಾಜಿ ಸಚಿವ ಎಚ್.ಆಂಜನೇಯ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ಬಿ.ಕೆ.ಹರಿಪ್ರಸಾದ್ ಕೈಗೆ ಕೆಪಿಸಿಸಿ ಸಾರಥ್ಯ: ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನ ಎಂದ ಮಾಜಿ ಸಚಿವ ಎಚ್.ಆಂಜನೇಯ
ಚಿತ್ರದುರ್ಗ

ಬಿ.ಕೆ.ಹರಿಪ್ರಸಾದ್ ಕೈಗೆ ಕೆಪಿಸಿಸಿ ಸಾರಥ್ಯ: ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನ ಎಂದ ಮಾಜಿ ಸಚಿವ ಎಚ್.ಆಂಜನೇಯ

Times Of Bayaluseeme StaffBy Times Of Bayaluseeme StaffJune 4, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
bk-hariprasad-and-h-anjaneya-congress
Share
WhatsApp Twitter Facebook Telegram

ಚಿತ್ರದುರ್ಗ, ಜೂ.4:* ಕಾಂಗ್ರೆಸ್ ಪಕ್ಷದ ಕಟ್ಟಾಳು, ನಿಷ್ಠಾವಂತ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ರಾಜ್ಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿರುವ ಬಿ.ಕೆ.ಹರಿಪ್ರಸಾದ್ ಆಯ್ಕೆ ಉತ್ತಮವಾಗಿದ್ದು, ಕಾಂಗ್ರೆಸ್ ಪಾಳಯದಲ್ಲಿ ಹೊಸ ಹುರುಪು ಮೂಡಿಸಿದೆ ಎಂದಿದ್ದಾರೆ.

ಬಿ.ಕೆ.ಹರಿಪ್ರಸಾದ್ ಕಟ್ಟಾ ಕಾಂಗ್ರೆಸ್ಸಿಗ. ಪಕ್ಷಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನಿಷ್ಠಾವಂತ. ವಿದ್ಯಾರ್ಥಿ, ಯುವ, ಸೇವಾದಳ ಬಳಿಕ ರಾಷ್ಟ್ರಮಟ್ಟದಲ್ಲಿ ಯುವ ಕಾಂಗ್ರೆಸ್ ಸಂಘಠನೆ ಜವಾಬ್ದಾರಿ ಬಳಿಕ ಎಐಸಿಸಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ನಾಲ್ಕೈದು ರಾಜ್ಯಗಳ ಉಸ್ತುವಾರಿ, ರಾಜ್ಯಸಭಾ ಸದಸ್ಯರಾಗಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ನಾಯಕ. ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿ ಸೇವೆ ಸಲ್ಲಿಸಿರುವ ಹರಿಪ್ರಸಾದ್, ಎಂತಹ ಕಷ್ಟಕಾದಲ್ಲೂ ಪಕ್ಷದ ಸಿದ್ಧಾಂತ ಹಾಗೂ ದೇಶದ ಹಿತಕ್ಕೆ ಧಕ್ಕೆ ಬಾರದಂತೆ ಬದ್ಧತೆ ರಾಜಕಾರಣ ಮಾಡಿದವರು. ಸಂಘಟನಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಹಿರಿಯ ನಾಯಕರಿಗೆ ಕೆಪಿಸಿಸಿ ಸಾರಥ್ಯ ನೀಡಿರುವುದು ಅತ್ಯಂತ ಸೂಕ್ತ ನಿರ್ಧಾರ ಎಂದು ಹೇಳಿದ್ದಾರೆ.

ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಹರಿಪ್ರಸಾದ್ ನೇತೃತ್ವ ದಿಕ್ಸೂಚಿಯಾಗಲಿದೆ. ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪಕ್ಷ ಸಂಘಟನೆಯಲ್ಲಿ ಹರಿಪ್ರಸಾದ್ ನೈಪುಣ್ಯತೆ ಹೊಂದಿದ್ದಾರೆ. ಎಲ್ಲ ಬಣಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕಟ್ಟುವ ಚಾಕಚಕ್ಯತೆ ಅವರಿಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖ್ಯವಾಗಿ ಸರ್ಕಾರದ ವಿವಿಧ ಮಂಡಳಿ, ನಿಗಮಗಳ ಅಧ್ಯಕ್ಷ, ನಿರ್ದೇಶಕ, ಸದಸ್ಯ ಹಾಗೂ ಜಿಲ್ಲಾ-ತಾಲ್ಲೂಕು ಮಟ್ಟದಲ್ಲಿನ ಸರ್ಕಾರಿ ಸಂಸ್ಥೆಗಳಿಗೆ ನಾಮನಿರ್ದೇಶನ ಸೇರಿ ವಿವಿಧ ಸ್ಥಾನಗಳನ್ನು ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಕೊಡಿಸುವಲ್ಲಿ ಹರಿಪ್ರಸಾದ್ ವಿಶೇಷ ಶ್ರಮವಹಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದುವರೆಗೆ ಕಡೆಗಣಿಸಲ್ಪಟ್ಟಿದ್ದ ತಳಮಟ್ಟದ ಕಾರ್ಯಕರ್ತರಿಗೆ ನ್ಯಾಯ ಸಿಗಲಿದೆ. ಜೊತೆಗೆ ಕೆಪಿಸಿಸಿಯ ವಿವಿಧ ಘಟಕ, ಜಿಲ್ಲಾ-ಬ್ಲಾಕ್ ಪದಾಧಿಕಾರಿ ಸ್ಥಾನಗಳು ಸಂಘಟಕರಿಗೆ, ಪಕ್ಷದ ನಿಷ್ಠರಿಗೆ ಲಭಿಸಲಿವೆ. ಇದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ ಎಂದಿದ್ದಾರೆ.

ಕರ್ನಾಟಕದಲ್ಲಿ ಹದಿನೈದು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು‌ ಇಡೀ ದೇಶವನ್ನೇ ತನ್ನೆಡೆಗೆ ಸೆಳೆದಿದೆ. ಸಿಎಂ ಹುದ್ದೆಯನ್ನೇ ತ್ಯಾಗ ಮಾಡಿದಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಹಿರಿಯರು, ಅಹಿಂದ ವರ್ಗಕ್ಕೆ ಮನ್ನಣೆ, ಮುಖ್ಯವಾಗಿ ಕೆಪಿಸಿಸಿ ಸಾರಥ್ಯವನ್ನು ಪಕ್ಷದ ಕಟ್ಟಾಳು ಹರಿಪ್ರಸಾದ್ ಅವರಿಗೆ ವಹಿಸಿರುವುದು ಪಕ್ಷದ ಕಾರ್ಯಕರ್ತರಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಪಕ್ಷದ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಬರುವ ಯಾವುದೇ ವ್ಯಕ್ತಿಗೆ ವರಿಷ್ಠರು ಬಹುದೊಡ್ಡ ಜವಾಬ್ದಾರಿಯನ್ನು ಸದ್ದಿಲ್ಲದೆ ನೀಡಿ ಅಚ್ಚರಿ ಮೂಡಿಸುತ್ತಾರೆಂಬುದಕ್ಕೆ ಹರಿಪ್ರಸಾದ್ ಆಯ್ಕೆ ಉತ್ತಮ ಉದಾಹರಣೆ ಆಗಿದೆ.

ಒಟ್ಟಾರೆ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಸಾರಥ್ಯ ಒಲಿದಿರುವುದು ಕಾಂಗ್ರೆಸ್‌ಗೆ ಹೊಸ ಚೈತನ್ಯ ತುಂಬಿದ್ದು, ಮುಂಬರುವ ಚುನಾವಣೆಗಳಿಗೆ ಪಕ್ಷ ಈಗಿನಿಂದಲೇ ಸಜ್ಜಾಗುವ ಸೂಚನೆ ನೀಡಿದೆ ಎಂದು ಆಂಜನೇಯ ತಿಳಿಸಿದ್ದಾರೆ.

ಫೋಟೋ
ಬಿ.ಕೆ.ಹರಿಪ್ರಸಾದ್
ಎಚ್.ಆಂಜನೇಯ

BK Hariprasad H Anjaneya Karnataka Congress News New KPCC President ಎಚ್.ಆಂಜನೇಯ ಕರ್ನಾಟಕ ರಾಜಕಾರಣ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷರು ಚಿತ್ರದುರ್ಗ ಕಾಂಗ್ರೆಸ್ ​ಬಿ.ಕೆ.ಹರಿಪ್ರಸಾದ್
Follow on Facebook Follow on Instagram
Share. Facebook Twitter WhatsApp Telegram
Previous Article“ನಾನು ಸಿಎಂ ಆದ್ರೆ…” – ಪತ್ರಕರ್ತನ ಕನಸಿನಲ್ಲಿ ಡಿಕೆ ಶಿವಕುಮಾರ್ ಬಿಚ್ಚಿಟ್ಟ ರಾಜಕೀಯ ಸತ್ಯಗಳು!
Next Article ಚಿತ್ರದುರ್ಗ: ಜೂನ್ 5 ರಂದು ನಗರದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
Times Of Bayaluseeme Staff
  • Website

Related Posts

ಚಿತ್ರದುರ್ಗ: ಜೂನ್ 5 ರಂದು ನಗರದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

June 4, 2026

ಡಿ.ಕೆ.ಶಿವಕುಮಾರ್ ಸರ್ಕಾರ ರಾಹುಲ್ ಗಾಂಧಿ, ಸಿದ್ದರಾಮಯ್ಯ ರಿಮೋಟ್ ಕಂಟ್ರೋಲ್‌ನಿಂದ ನಡೆಯುತ್ತಿದೆ: ಆರ್.ಅಶೋಕ್ ಲೇವಡಿ

June 4, 2026

ಅರ್ಹ ಮತದಾರರು ವಂಚಿತರಾಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

June 3, 2026
Add A Comment
Leave A Reply Cancel Reply

Advertisement
Latest Posts

ಒತ್ತಡಕ್ಕೆ ಮಣಿಯದೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ: ಅಧಿಕಾರಿಗಳಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ

ಚಿತ್ರದುರ್ಗ: ಜೂನ್ 5 ರಂದು ನಗರದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಬಿ.ಕೆ.ಹರಿಪ್ರಸಾದ್ ಕೈಗೆ ಕೆಪಿಸಿಸಿ ಸಾರಥ್ಯ: ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನ ಎಂದ ಮಾಜಿ ಸಚಿವ ಎಚ್.ಆಂಜನೇಯ

“ನಾನು ಸಿಎಂ ಆದ್ರೆ…” – ಪತ್ರಕರ್ತನ ಕನಸಿನಲ್ಲಿ ಡಿಕೆ ಶಿವಕುಮಾರ್ ಬಿಚ್ಚಿಟ್ಟ ರಾಜಕೀಯ ಸತ್ಯಗಳು!

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.