Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಅರ್ಹ ಮತದಾರರು ವಂಚಿತರಾಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

03/06/2026 ಬುಧವಾರದ ನಿತ್ಯ ಭವಿಷ್ಯ

ಬಡ್ತಿ ಸಿಕ್ಕ ಮರುದಿನವೇ ನಿವೃತ್ತಿ..! ಚಿತ್ರದುರ್ಗದ ಅಧಿಕಾರಿಯ ಅಪರೂಪದ ಸೇವಾ ಪಯಣ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಭವಿಷ್ಯ»ಬಡ್ತಿ ಸಿಕ್ಕ ಮರುದಿನವೇ ನಿವೃತ್ತಿ..! ಚಿತ್ರದುರ್ಗದ ಅಧಿಕಾರಿಯ ಅಪರೂಪದ ಸೇವಾ ಪಯಣ
ಭವಿಷ್ಯ

ಬಡ್ತಿ ಸಿಕ್ಕ ಮರುದಿನವೇ ನಿವೃತ್ತಿ..! ಚಿತ್ರದುರ್ಗದ ಅಧಿಕಾರಿಯ ಅಪರೂಪದ ಸೇವಾ ಪಯಣ

Times Of Bayaluseeme StaffBy Times Of Bayaluseeme StaffJune 2, 2026No Comments1 Min Read
Share WhatsApp Facebook Twitter Threads Telegram
Follow Us
Facebook Instagram
yk-mallappa-chitradurga-promotion-retirement
Share
WhatsApp Twitter Facebook Telegram

ಚಿತ್ರದುರ್ಗ: ಸರ್ಕಾರಿ ಸೇವೆಯಲ್ಲಿ ಬಡ್ತಿ ಎನ್ನುವುದು ಪ್ರತಿಯೊಬ್ಬ ಉದ್ಯೋಗಿಯ ಕನಸು. ವರ್ಷಗಳ ಶ್ರಮ, ಸೇವಾ ಹಿರಿತನ ಮತ್ತು ನಿಷ್ಠೆಗೆ ಸಿಗುವ ಮಾನ್ಯತೆಯೇ ಪದೋನ್ನತಿ. ಆದರೆ ಆ ಬಹುನಿರೀಕ್ಷಿತ ಬಡ್ತಿ ದೊರೆತ ಮರುದಿನವೇ ನಿವೃತ್ತಿಯಾಗಬೇಕಾದರೆ ಅದು ಸಂತಸದ ಜೊತೆಗೆ ಒಂದು ರೀತಿಯ ಬೇಸರವನ್ನೂ ಉಂಟುಮಾಡುತ್ತದೆ. ಇಂತಹ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಸೇವೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸ್ಕಿಲ್ ಟ್ರೇಡ್ಸ್‌ಮನ್ (ವೃಂದ–ಸಿ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈ.ಕೆ. ಮಲ್ಲಪ್ಪ ಅವರಿಗೆ ಹಲವು ವರ್ಷಗಳ ಸೇವೆಯ ಬಳಿಕ ಸೇವಾ ಹಿರಿತನದ ಆಧಾರದ ಮೇಲೆ ಸೇವಾ ಅಭಿಯಂತರರು (ವೃಂದ–ಬಿ) ಹುದ್ದೆಗೆ ಪದೋನ್ನತಿ ನೀಡಿ ಮೇ 29ರಂದು ಇಲಾಖೆ ಆದೇಶ ಹೊರಡಿಸಿತ್ತು.

1966ರ ಜೂನ್ 1ರಂದು ಜನಿಸಿದ ಮಲ್ಲಪ್ಪ ಅವರು ಮೇ 31ರಂದು 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಿವೃತ್ತಿಯಾಗಬೇಕಾಗಿತ್ತು. ಆದರೆ ಮೇ 31 ಭಾನುವಾರ ಸರ್ಕಾರಿ ರಜೆ ಆಗಿದ್ದರಿಂದ, ನಿಯಮಾನುಸಾರ ಮೇ 30ರ ಮಧ್ಯಾಹ್ನವೇ ಇಲಾಖೆಯು ಅವರನ್ನು ಸರ್ಕಾರಿ ಸೇವೆಯಿಂದ ವಿಮುಕ್ತಿಗೊಳಿಸಿದೆ.
ಹೀಗಾಗಿ ಮೇ 29ರಂದು ಪದೋನ್ನತಿ ಆದೇಶ ಪಡೆದ ಮಲ್ಲಪ್ಪ ಅವರು ಮೇ 30ರ ಬೆಳಗ್ಗೆ ಹೊಸ ಹುದ್ದೆಯ ಅಧಿಕಾರವನ್ನು ಸ್ವೀಕರಿಸಿ, ಕೇವಲ ಒಂದೇ ದಿನದೊಳಗೆ ಸಂಜೆ ನಿವೃತ್ತಿ ಹೊಂದುವ ಅಪರೂಪದ ಅನುಭವಕ್ಕೆ ಸಾಕ್ಷಿಯಾದರು.

ವರ್ಷಗಳ ಕಾಲ ಪದೋನ್ನತಿಗಾಗಿ ಕಾಯುತ್ತಿದ್ದ ಮಲ್ಲಪ್ಪ ಅವರಿಗೆ ಕೊನೆ ಕ್ಷಣದಲ್ಲಿ ಬಡ್ತಿ ದೊರೆತಿರುವುದು ಸಂತಸದ ಸಂಗತಿಯಾದರೆ, ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಹೆಚ್ಚಿನ ಅವಕಾಶ ಸಿಗದಿರುವುದು ಸಹಜವಾಗಿಯೇ ಬೇಸರ ಮೂಡಿಸಿದೆ. ಆದರೂ ನಿವೃತ್ತಿಯ ಹೊತ್ತಿನಲ್ಲಿ ಉನ್ನತ ಹುದ್ದೆಯೊಂದಿಗೆ ಸೇವಾ ಬದುಕಿಗೆ ತೆರೆ ಎಳೆದಿರುವುದು ಅವರ ವೃತ್ತಿಜೀವನದ ವಿಶೇಷ ಅಧ್ಯಾಯವಾಗಿ ಉಳಿದಿದೆ.

ಸರ್ಕಾರಿ ಸೇವೆಯಲ್ಲಿ ಬಡ್ತಿ ಮತ್ತು ನಿವೃತ್ತಿ ಒಂದೇ ಸಂದರ್ಭದಲ್ಲಿ ಎದುರಾದ ಈ ಘಟನೆ ಇಲಾಖೆಯ ಸಿಬ್ಬಂದಿ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಬಡ್ತಿ ಸಿಕ್ಕ ಖುಷಿ, ಮರುದಿನವೇ ನಿವೃತ್ತಿಯ ಬೇಸರ ಎಂಬ ಅಪರೂಪದ ಕ್ಷಣಕ್ಕೆ ಮಲ್ಲಪ್ಪ ಅವರು ಸಾಕ್ಷಿಯಾಗಿದ್ದಾರೆ.

Follow on Facebook Follow on Instagram
Share. Facebook Twitter WhatsApp Telegram
Previous Article02/06/2026 ರ ನಿತ್ಯ ಭವಿಷ್ಯ
Next Article 03/06/2026 ಬುಧವಾರದ ನಿತ್ಯ ಭವಿಷ್ಯ
Times Of Bayaluseeme Staff
  • Website

Related Posts

03/06/2026 ಬುಧವಾರದ ನಿತ್ಯ ಭವಿಷ್ಯ

June 3, 2026

02/06/2026 ರ ನಿತ್ಯ ಭವಿಷ್ಯ

June 2, 2026

01/06/2026 ರ ನಿತ್ಯ ಭವಿಷ್ಯ (ಸೋಮವಾರ)

June 1, 2026
Add A Comment
Leave A Reply Cancel Reply

Advertisement
Latest Posts

ಅರ್ಹ ಮತದಾರರು ವಂಚಿತರಾಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

03/06/2026 ಬುಧವಾರದ ನಿತ್ಯ ಭವಿಷ್ಯ

ಬಡ್ತಿ ಸಿಕ್ಕ ಮರುದಿನವೇ ನಿವೃತ್ತಿ..! ಚಿತ್ರದುರ್ಗದ ಅಧಿಕಾರಿಯ ಅಪರೂಪದ ಸೇವಾ ಪಯಣ

02/06/2026 ರ ನಿತ್ಯ ಭವಿಷ್ಯ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.