ನಡು ರಸ್ತೆಯಲ್ಲೇ ಶಿಕ್ಷಕಿಯನ್ನು ಕೊಚ್ಚಿ, ಪೆಟ್ರೋಲ್ ಹಾಕಿ ಸುಟ್ಟರು!
ಕಲಬುರಗಿ: ಕಮಲಾಪುರ ತಾಲೂಕಿನ ಕಲ್ಕೂಡ ಗ್ರಾಮದ ಸಮೀಪ ನಡುರಸ್ತೆಯಲ್ಲೇ ಶಿಕ್ಷಕಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ದುಷ್ಕರ್ಮಿ ಗಳು, ಬಳಿಕ ಶವವನ್ನು ರಸ್ತೆಬದಿಯಲ್ಲಿ ಸುಟ್ಟುಹಾಕಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಜ್ಯೋತಿ ಕಪಾಳೆ (57) ಹತ್ಯೆಗೀಡಾದ ಶಿಕ್ಷಕಿ. ಜ್ಯೋತಿ ಬೀದರ್‌ಜಿಲ್ಲೆಯ ವಂಜರಖೇಡ ಗ್ರಾಮದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ವಾರಕ್ಕೊಮ್ಮೆ ಕಲಬುರಗಿಯಲ್ಲಿರುವ ಮನೆಗೆ ಆಗಮಿಸು ತ್ತಿದ್ದರು. ಘಟನೆಯ ದಿನ ಕಲಬುರಗಿಯಿಂದ ಬೀದರ್ ಕಡೆ ಪ್ರಯಾಣಿಸುತ್ತಿದ್ದ ವೇಳೆ, ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ ಬಳಿಕ, ಗುರುತು ಸಿಗದಂತೆ ಮಾಡಲು ಮಕ ದಳ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಕೊಲೆಯ ಹಿಂದಿನ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ
