ಇನ್ನು ಮುಂದೆ ಸಿದ್ದರಾಮಯ್ಯ ಸಿಎಂ ಆಗಿ ದಾವಣಗೆರೆಗೆ ಬರಲ್ಲ: ಛಲವಾದಿ
ದಾವಣಗೆರೆ: ಸಿದ್ದರಾಮಯ್ಯನವರು ಬಹಿರಂಗ ಸಭೆಗೆ ಹಣ ಕೊಟ್ಟು, ಜನರನ್ನು ಸೇರಿಸಿ, ಭಾಷಣ ಮಾಡುತ್ತಿದ್ದಾರೆ. ಇದು ಅವರ ರಾಜಕೀಯ ಜೀವನದ ಅಂತ್ಯದ ದಿನಗಳಾಗಿವೆ. ಇನ್ನು ಮುಂದೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ದಾವಣಗೆರೆಗೆ ಬರುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಕಾಂಗ್ರೆಸ್ಸಿನ ನಾಯಕರು ಜಮೀರ್ ಅಹಮ್ಮದ್ ಅವರ ಕಾಲು ಹಿಡಿದು, ಭಾನುವಾರ ದಾವಣಗೆರೆಗೆ ಕರೆದುಕೊಂಡು ಬಂದಿದ್ದಾರೆ. ಓಟಿಗಾಗಿ ಕಬಾಬು ತಿನ್ನಿಸುವ ಪರಿಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಕಾಂಗ್ರೆಸ್ಸಿನ ನಾಯಕರು ಏನೇ ಮಾಡಿದರೂ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಪವಾಡ ಆಗುವುದಿಲ್ಲ. ಎರಡೂ ಕ್ಷೇತ್ರದಲ್ಲೂ ಬಿಜೆಪಿ ಜಯ ಸಾಧಿಸಲಿದೆ ಎಂದರು
