ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ಟೈಮ್ಸ್ ಆಫ್ ಬಯಲುಸೀಮೆ ಕನ್ನಡ ದಿನಪತ್ರಿಕೆ ವತಿಯಿಂದ ವಿಶೇಷಾಂಕ ಹೊರತರಲಾಗುತ್ತಿದೆ.
ಈ ವಿಶೇಷಾಂಕಕ್ಕೆ ‘ನನ್ನ ಮನದ ಕಣ್ಗಳಲ್ಲಿ ಕಂಡ ಜಗಜ್ಯೋತಿ ಬಸವೇಶ್ವರರು’
ಎಂಬ ವಿಷಯದ ಕುರಿತು ಯುವಜನರಿಂದ 150 ಪದಗಳ ಚುಟುಕು ಲೇಖನಗಳನ್ನು ಆಹ್ವಾನಿಸಲಾಗಿದೆ.
ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವತೆಯ ಮೌಲ್ಯಗಳನ್ನು ಸಮಾಜಕ್ಕೆ ಬಿತ್ತಿದ ಜಗಜ್ಯೋತಿ ಬಸವೇಶ್ವರರ ತತ್ವಗಳು ಇಂದಿನ ಯುವಜನರ ಬದುಕಿನಲ್ಲಿ ಹೇಗೆ ಸ್ಪಂದಿಸುತ್ತಿವೆ ಎಂಬುದನ್ನು ತಮ್ಮದೇ ಶೈಲಿಯಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಬಸವಣ್ಣನ ವಚನಗಳು, ಅವರ ಚಿಂತನೆಗಳ ಪ್ರಸ್ತುತತೆ ಮತ್ತು ಯುವ ಮನಸ್ಸಿನ ಅನಿಸಿಕೆಗಳನ್ನು ಒಳಗೊಂಡ ಲೇಖನಗಳಿಗೆ ಆದ್ಯತೆ ನೀಡಲಾಗುವುದು.
ಯುವ ಲೇಖಕರು, ವಿದ್ಯಾರ್ಥಿಗಳು ಹಾಗೂ ಆಸಕ್ತ ಬರಹಗಾರರು ಉತ್ಸಾಹದಿಂದ ಭಾಗವಹಿಸುವಂತೆ ಸಂಪಾದಕ ಮಂಡಳಿ ಮನವಿ ಮಾಡಿದೆ.
ವಿಶೇಷ ಸೂಚನೆ ; ಲೇಖನಕ್ಕೆ ಏಪ್ರಿಲ್ 14 ಕೊನೆ ದಿನ.
9620139796 ಈ ನಂಬರ್ ಗೆ
ಪೂರ್ಣ ಹೆಸರು, ನಿಮ್ಮ ಬಗ್ಗೆ ಒಂದೆರಡು ಸಾಲು ವಿವರಣೆ, ಫೋನ್ ನಂಬರ್ ಜತೆ ಭಾವಚಿತ್ರದ ಜತೆ ವಾಟ್ಸಪ್ ಮಾಡಿ…
ವಂದನೆಗಳೊಂದಿಗೆ
ವೀರೇಂದ್ರ ಕೋಗುಂಡೆ ಮಠ
ಕಾರ್ಯ ನಿರ್ವಾಹಕ ಸಂಪಾದಕರು
ಟೈಮ್ಸ್ ಆಫ್ ಬಯಲುಸೀಮೆ ಕನ್ನೆ ದಿನಪತ್ರಿಕೆ
