ಟೈಮ್ಸ್ ಆಫ್ ಬಯಲುಸೀಮೆ ಕನ್ನಡ ದಿನಪತ್ರಿಕೆ ವತಿಯಿಂದ ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ವಿಶೇಷಾಂಕ ಪ್ರಕಟಿಸಲಾಗುತ್ತಿದೆ.
ಈ ವಿಶೇಷಾಂಕಕ್ಕಾಗಿ ಯುವಜನರಿಂದ 150 ಪದಗಳ ಚುಟುಕು ಲೇಖನಗಳನ್ನು ಆಹ್ವಾನಿಸಲಾಗಿದೆ.
ವಿಷಯ: “ನನ್ನ ಮನದ ಕಣ್ಗಳಲ್ಲಿ ಕಂಡ ಜಗಜ್ಯೋತಿ ಬಸವೇಶ್ವರರು”
ಬಸವಣ್ಣನ ವಚನಗಳು, ಅವರ ಚಿಂತನೆಗಳ ಇಂದಿನ ಪ್ರಸ್ತುತತೆ ಹಾಗೂ ಯುವ ಮನಸ್ಸಿನ ಅನಿಸಿಕೆಗಳನ್ನು ಒಳಗೊಂಡ ಲೇಖನಗಳಿಗೆ ಆದ್ಯತೆ ನೀಡಲಾಗುವುದು.
ವಿದ್ಯಾರ್ಥಿಗಳು, ಯುವ ಲೇಖಕರು, ಆಸಕ್ತ ಬರಹಗಾರರು ಹಾಗೂ ಬಸವ ಚಿಂತನೆಗೆ ಆಸಕ್ತಿ ಹೊಂದಿರುವ ಯುವಜನರಿಗೆ ಅವಕಾಶ ಕಲ್ಪಿಸಲಾಗಿದೆ.
ಲೇಖನ ಕಳುಹಿಸಲು ಏಪ್ರಿಲ್ 14 ಕೊನೆ ದಿನ.
9620139796 ಈ ಸಂಖ್ಯೆಗೆ ವಾಟ್ಸಾಪ್ ಮೂಲಕ ಪೂರ್ಣ ಹೆಸರು, ನಿಮ್ಮ ಬಗ್ಗೆ ಒಂದೆರಡು ಸಾಲು ಪರಿಚಯ, ಫೋನ್ ನಂಬರ್ ಹಾಗೂ ಭಾವಚಿತ್ರವಿರಲಿ.
ವಂದನೆಗಳೊಂದಿಗೆ
ವೀರೇಂದ್ರ ಕೋಗುಂಡೆ ಮಠ
ಕಾರ್ಯನಿರ್ವಾಹಕ ಸಂಪಾದಕರುಟೈಮ್ಸ್ ಆಫ್ ಬಯಲುಸೀಮೆ ಕನ್ನಡ ದಿನಪತ್ರಿಕೆ
