Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

17/06/2026 ರ ನಿತ್ಯ ಭವಿಷ್ಯ (ಬುಧವಾರ)

ಕೆಂಪೇಗೌಡ ಬಡಾವಣೆಯಲ್ಲಿ ಈ ಬಾರಿಯ ಕೆಂಪೇಗೌಡ ಜಯಂತಿ; 15 ಲಕ್ಷ ಗಿಡ ನೆಡಲು ಬಿಡಿಎ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್

16/06/2026 ರ ನಿತ್ಯ ಭವಿಷ್ಯ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ಅರ್ಹ ಮತದಾರರು ವಂಚಿತರಾಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ
ಚಿತ್ರದುರ್ಗ

ಅರ್ಹ ಮತದಾರರು ವಂಚಿತರಾಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

Times Of Bayaluseeme StaffBy Times Of Bayaluseeme StaffJune 3, 2026No Comments3 Mins Read
Share WhatsApp Facebook Twitter Threads Telegram
Follow Us
Facebook Instagram
chitradurga-dc-voter-list-bla-training-meeting
Share
WhatsApp Twitter Facebook Telegram

ಚಿತ್ರದುರ್ಗ: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಕುರಿತು ಬೂತ್ ಮಟ್ಟದ ಏಜೆಂಟರುಉ (ಬಿಎಲ್‍ಒ) ಸಂಪೂರ್ಣ ಮಾಹಿತಿ ಹೊಂದುವುದು ಅಗತ್ಯವಾಗಿದ್ದು, ತಮಗೆ ನೀಡಿರುವ ಜವಾಬ್ದಾರಿ ಅರಿತು ನಿಷ್ಠೆಯಿಂದ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಯಾವುದೇ ಒಬ್ಬ ಅರ್ಹ ಮತದಾರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಬೂತ್ ಮಟ್ಟದ ಏಜೆಂಟರಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಕುರಿತು ಮಾನ್ಯತಾ ಪಡೆದ ರಾಜಕೀಯ ಪಕ್ಷಗಳ ವತಿಯಿಂದ ವಿಧಾನಸಭಾ ಕ್ಷೇತ್ರವಾರು ನೇಮಕ ಮಾಡಲಾದ ಬಿಎಲ್‍ಎ-1 ಅವರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕಳೆದ ಆರು ತಿಂಗಳಿನಿಂದ ಜಿಲ್ಲಾಡಳಿತವು ನಿರಂತರವಾಗಿ ನಡೆಸಿದ ಸರ್ವೇ ಕಾರ್ಯದಿಂದಾಗಿ 2025ರ ಮತದಾರರ ಪಟ್ಟಿಯ 14,40,316 ಮತದಾರರ ಪೈಕಿ ಈಗಾಗಲೇ 13,96,284 ಮತದಾರರನ್ನು ಗುರುತಿಸಿ, ಶೇ.96.94 ರಷ್ಟು ಮ್ಯಾಪಿಂಗ್ ಮಾಡಲಾಗಿದೆ. ಆದರೆ, ಇನ್ನೂ 40,032 ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. ಬೂತ್ ಮಟ್ಟದ ಏಜೆಂಟರು ತಮ್ಮ ಭಾಗದ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಬಿಟ್ಟುಹೋಗಿರುವ ಮತದಾರರನ್ನು ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು.

ಗುರುತಿಸಲಾದ ಪ್ರತಿಯೊಬ್ಬ ಮತದಾರನ ದಾಖಲಾತಿ ನಮೂನೆಯಲ್ಲಿ ನೂತನ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಬೇಕು. ಹಳೆಯ ಗುರುತಿನ ಚೀಟಿಗಳ ಭಾವಚಿತ್ರಗಳು ಸರಿಯಾಗಿ ಇಲ್ಲದಿರುವುದರಿಂದ, ಮತಗಟ್ಟೆಗಳಲ್ಲಿ ಆಕ್ಷೇಪಣೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಮತದಾರರನ್ನು ಖುದ್ದಾಗಿ ಭೇಟಿ ಮಾಡಿ, ಅವರಿಂದ ಹೊಸ ಫೋಟೋ ಪಡೆದು ಅಪ್‍ಡೇಟ್ ಮಾಡಬೇಕಿದೆ. ಇದರೊಂದಿಗೆ ಮತದಾರರ ಪಟ್ಟಿ ಅತ್ಯಂತ ಸ್ವಚ್ಛ ಮತ್ತು ಪಾರದರ್ಶಕವಾಗಿರಬೇಕು. ಈ ಮೂಲಕ ಒಬ್ಬ ಮತದಾರನೂ ಬಿಟ್ಟುಹೋಗದಂತೆ ಸಹಕರಿಸಬೇಕು ಎಂದು ತಿಳಿಸಿದರು.

 

ಬಿಟ್ಟುಹೋದ ಮತದಾರರಲ್ಲಿ ಯಾರಾದರೂ ನಿಧನರಾಗಿದ್ದರೆ, ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಕಡ್ಡಾಯವಾಗಿ ಮರಣ ಪ್ರಮಾಣಪತ್ರ ಪಡೆದುಕೊಳ್ಳಲೇಬೇಕು. ಮರಣ ಪ್ರಮಾಣಪತ್ರವಿಲ್ಲದೆ ಯಾವುದೇ ಹೆಸರನ್ನು ಕಡಿತಗೊಳಿಸುವಂತಿಲ್ಲ. ಇದರೊಂದಿಗೆ ಮತದಾರರ ನೋಂದಣಿಗೆ ನಿಗದಿಪಡಿಸಲಾಗಿರುವ 12 ಪ್ರಮುಖ ದಾಖಲೆಗಳ ಪೈಕಿ ಸೂಕ್ತವಾದ ದಾಖಲೆಗಳನ್ನು ಕ್ರೋಢೀಕರಿಸಬೇಕು. ಸಾಮಾನ್ಯ ಕೂಲಿ ಕಾರ್ಮಿಕರು, ಅನಕ್ಷರಸ್ಥರ ಬಳಿ ಸೂಕ್ತ ದಾಖಲೆಗಳಿಲ್ಲದಿದ್ದರೆ, ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಹಾಯ ನೀಡಿ ಆಧಾರ್ ಕಾರ್ಡ್ ಮತ್ತಿತರ ಅಗತ್ಯ ದಾಖಲೆಗಳನ್ನು ಮಾಡಿಸಿಕೊಡಲು ಅಧಿಕಾರಿಗಳು ಮತ್ತು ಏಜೆಂಟರು ನೆರವಾಗಬೇಕೆಂದು ನಿರ್ದೇಶನ ನೀಡಿದರು.

ರಾಜಕೀಯ ಪಕ್ಷಗಳು ತಮ್ಮ ಬೂತ್ ಮಟ್ಟದ ಏಜೆಂಟರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಬೇಕು. ಇದರಿಂದ ಮುಂಬರುವ ಚುನಾವಣೆಗಳ ಸಿದ್ಧತೆಗೆ ಮತ್ತು ಚುನಾವಣಾ ಕಾರ್ಯಗಳು ಸುಸೂತ್ರವಾಗಿ ನಡೆಯಲು ಬಹಳ ಸಹಕಾರಿಯಾಗಲಿದೆ. ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಬಿಎಲ್‍ಎಗಳನ್ನು ನೇಮಕ ಮಾಡುವುದರಿಂದ ತಮ್ಮ ಕ್ಷೇತ್ರ ವ್ಯಾಪ್ತಿಯ ಬೂತ್ ಮಟ್ಟದಲ್ಲಿ ಏನೆಲ್ಲಾ ಚಟುವಟಿಕೆಗಳು ನಡೆಯುತ್ತಿವೆ ಎಂಬ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಬಿಎಲ್‍ಎಗಳಿಗೆ ತಾಲೂಕು ಮಟ್ಟದಲ್ಲಿ ತರಬೇತಿ: ನೇಮಕಗೊಳ್ಳುವ ಬೂತ್ ಮಟ್ಟದ ಏಜೆಂಟರಿಗೆ ಅಗತ್ಯವಿರುವ ತರಬೇತಿಯನ್ನು ನೀಡಲಾಗುವುದು. ತಾಲೂಕು ಮಟ್ಟದಲ್ಲಿ ಇಆರ್‍ಒ ಹಾಗೂ ಎಇಆರ್‍ಒಗಳು ಇರಲಿದ್ದು, ಅವರು ಬಿಎಲ್‍ಎಗಳ ಜವಾಬ್ದಾರಿಗಳು, ಕರ್ತವ್ಯಗಳು ಮತ್ತು ಅವರು ಕಾರ್ಯನಿರ್ವಹಿಸಬೇಕಾದ ಮಿತಿಗಳ ಬಗ್ಗೆ ಸಮಗ್ರವಾಗಿ ತರಬೇತಿ ನೀಡಲಿದ್ದಾರೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸದಾ ಇಆರ್‍ಒಗಳೊಂದಿಗೆ ಸಂಪರ್ಕದಲ್ಲಿದ್ದರೆ ತಾಲೂಕು ಮಟ್ಟದ ಎಲ್ಲಾ ಅಗತ್ಯ ಮಾಹಿತಿಗಳು ಸುಲಭವಾಗಿ ದೊರೆಯಲಿವೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಂದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಮುಖ್ಯ ಉದ್ದೇಶ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವುದು ಮತ್ತು ಅನರ್ಹರನ್ನು ನಿಯಮಾನುಸಾರ ಮತದಾರರ ಪಟ್ಟಿಯಿಂದ ಕೈಬಿಡುವುದಾಗಿದೆ. ಜೂನ್ 20 ರಿಂದ 29 ರವರೆಗೆ ಪೂರ್ವಸಿದ್ಧತೆ, ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ, ಜೂನ್ 30 ರಿಂದ ಜುಲೈ 29 ರವರೆಗೆ ಮತಗಟ್ಟೆ ಅಧಿಕಾರಿಗಳಿಂದ ಮನೆ ಮನೆ ಸಮೀಕ್ಷೆ, ಗಣತಿ ನಮೂನೆಗಳನ್ನು ಮತದಾರರಿಗೆ ಹಂಚುವುದು ಮತ್ತು ಸಂಗ್ರಹಿಸುವ ಕಾರ್ಯ ನಡೆಯಲಿದೆ. ಜುಲೈ 29ರಂದು ಮತಗಟ್ಟೆ ಪುನರ್ ವಿಂಗಡಣೆ ಸಂಬಂಧ ನಿಯಮಾನುಸಾರ ಪ್ರಸ್ತಾವ ಸಲ್ಲಿಕೆ, ಆಗಸ್ಟ್ 05ರಂದು ಎಸ್‍ಐಆರ್ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಈ ಹೊಸ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ, ಇಲ್ಲಿಯವರೆಗೆ ಚಾಲ್ತಿಯಲ್ಲಿದ್ದ ಹಳೆಯ ಎಲ್ಲಾ ಮತದಾರರ ಪಟ್ಟಿಗಳು ಸಂಪೂರ್ಣವಾಗಿ ರದ್ದಾಗಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣಾ ತಹಶೀಲ್ದಾರ್ ಬೀಬೀ ಫಾತಿಮಾ, ಶಿರಸ್ತೆದಾರ ಮಲ್ಲಿಕಾರ್ಜುನ ನಾಯಕ ಸೇರಿದಂತೆ ಮಾನ್ಯತಾ ಪಡೆದ ರಾಜಕೀಯ ಪಕ್ಷಗಳ ವತಿಯಿಂದ ವಿಧಾನಸಭಾ ಕ್ಷೇತ್ರವಾರು ನೇಮಕ ಮಾಡಲಾದ ಬಿಎಲ್‍ಎ-1 ಇದ್ದರು.

​DC T Venkatesh Chitradurga ಚಿತ್ರದುರ್ಗ ಮತದಾರರ ಪಟ್ಟಿ ಪರಿಷ್ಕರಣೆ ಜಿಲ್ಲಾಧಿಕಾರಿ ಟಿ ವೆಂಕಟೇಶ್
Follow on Facebook Follow on Instagram
Share. Facebook Twitter WhatsApp Telegram
Previous Article03/06/2026 ಬುಧವಾರದ ನಿತ್ಯ ಭವಿಷ್ಯ
Next Article 04/06/2026 ರ ನಿತ್ಯ ಭವಿಷ್ಯ
Times Of Bayaluseeme Staff
  • Website

Related Posts

ಚಿತ್ರದುರ್ಗದಲ್ಲಿ ಅತಿ ಶೀಘ್ರದಲ್ಲೇ ಹೈಟೆಕ್ ‘ಗುರುಭವನ’ ನಿರ್ಮಾಣಕ್ಕೆ ಭೂಮಿ ಪೂಜೆ: ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ

June 14, 2026

ಅಹಿಂದ ವರ್ಗಕ್ಕೆ ರಾಜಕೀಯ ಮನ್ನಣೆ ನೀಡಿ, ಡಿ.ಕೆ.ಶಿವಕುಮಾರ್ ಸಾಮಾಜಿಕ ನ್ಯಾಯ ಪಾಲಿಸಲಿ: ಎಮ್ಮೆಹಟ್ಟಿ ಹನುಮಂತಪ್ಪ ಆಗ್ರಹ

June 7, 2026

ಕೆ.ಎಚ್.ಮುನಿಯಪ್ಪ ಅವರಿಗೆ ಉನ್ನತ ಸ್ಥಾನ ನೀಡಿ; ಮಾದಿಗ ಸಮುದಾಯದ ನಿರೀಕ್ಷೆಗೆ ಸ್ಪಂದಿಸಿ: ಮುಖಂಡ ಯಶವಂತ್ ಆಗ್ರಹ

June 7, 2026
Add A Comment
Leave A Reply Cancel Reply

Advertisement
Latest Posts

17/06/2026 ರ ನಿತ್ಯ ಭವಿಷ್ಯ (ಬುಧವಾರ)

ಕೆಂಪೇಗೌಡ ಬಡಾವಣೆಯಲ್ಲಿ ಈ ಬಾರಿಯ ಕೆಂಪೇಗೌಡ ಜಯಂತಿ; 15 ಲಕ್ಷ ಗಿಡ ನೆಡಲು ಬಿಡಿಎ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್

16/06/2026 ರ ನಿತ್ಯ ಭವಿಷ್ಯ

ಗ್ಯಾಸ್ಟ್ರಿಕ್ ಮತ್ತು ಮುಟ್ಟಿನ ನೋವಿಗೆ ರಾಮಬಾಣ ‘ಇಂಗು’: ಬಳಸುವ ಸರಿಯಾದ ವಿಧಾನ ಇಲ್ಲಿದೆ!

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.