Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

18 ಏಪ್ರಿಲ್ 2026 (ಶನಿವಾರ) ರ ನಿತ್ಯ ಭವಿಷ್ಯ

ಆರೋಗ್ಯ ರಕ್ಷಣೆಗೆ ಜೀವನ ಶೈಲಿ ಬದಲಾಗಬೇಕು: ಮಾಜಿ ಸಚಿವ ಹೆಚ್. ಆಂಜನೇಯ ಸಲಹೆ

ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ತೀರ್ಪು: ವಿನಯ್ ಕುಲಕರ್ಣಿಗೆ ಜೀವಾವಧಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ಆರೋಗ್ಯ ರಕ್ಷಣೆಗೆ ಜೀವನ ಶೈಲಿ ಬದಲಾಗಬೇಕು: ಮಾಜಿ ಸಚಿವ ಹೆಚ್. ಆಂಜನೇಯ ಸಲಹೆ
ಚಿತ್ರದುರ್ಗ

ಆರೋಗ್ಯ ರಕ್ಷಣೆಗೆ ಜೀವನ ಶೈಲಿ ಬದಲಾಗಬೇಕು: ಮಾಜಿ ಸಚಿವ ಹೆಚ್. ಆಂಜನೇಯ ಸಲಹೆ

Times Of Bayaluseeme StaffBy Times Of Bayaluseeme StaffApril 17, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಮಾಜಿ ಸಚಿವ ಹೆಚ್. ಆಂಜನೇಯ ಅವರು ಉದ್ಘಾಟಿಸುತ್ತಿರುವುದು.
Share
WhatsApp Twitter Facebook Telegram

ಚಿತ್ರದುರ್ಗ : ಬದಲಾದ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಮನುಷ್ಯನ ಅರೋಗ್ಯ ದಿನ ದಿನಕ್ಕೂ ಕ್ಷಿಣಿಸುತ್ತಿದೆ. ನಾನಾ ನಮೂನೆಯ ಖಾಯಿಲೆಗಳಿಗೆ ತುತ್ತಾಗುವ ಮುನ್ನ ಎಚ್ಚರ ವಹಿಸುವುದು ಅನಿವಾರ್ಯ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಅಭಿಪ್ರಾಯ ಪಟ್ಟರು

ಇಲ್ಲಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ಗೋಡೆಮನೆ ಅರೋಗ್ಯ ಮತ್ತು ರಸ್ತೆ ಜಾಗೃತಿ ಟ್ರಸ್ಟ್, ರೋಟರಿ ಕ್ಲಬ್ ಚಿನ್ಮೂಲದ್ರಿ, ರೆಡ್ ಕ್ರಾಸ್ ಸಂಸ್ಥೆ ಹಾಗೂ ಬೆಂಗಳೂರು ಸಪ್ತಗಿರಿ ಆಸ್ಪತ್ರೆ ಸಹಯೋದಲ್ಲಿ ಗೋಡೆಮನೆ ವಿನಯ್ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಬೃಹತ್ ಅರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು

ಮನುಷ್ಯ ಒತ್ತಡದ ಬದುಕಿನಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಿಕರು ತುಂಬಾ ಗಟ್ಟಿಮುಟ್ಟಿಯಾಗಿ ಇರುತ್ತಿದ್ದರು. ಅವರ ಕಾಲದಲ್ಲಿ ಈಗಿನಷ್ಟು ಭಯಂಕರ ರೋಗ ಖಾಯಿಲೆಗಳು ಬರುತ್ತಿರಲಿಲ್ಲ. ಅವರು ಅನುಸರಿಸುತ್ತಿದ್ದ ಜೀವನ ಶೈಲಿಯೇ ಅವರ ಅರೋಗ್ಯದ ಗುಟ್ಟು ಎಂದು ಹೇಳಿದರು

ಇಗೀಗ ಎಲ್ಲವೂ ಕಲುಷಿತವಾಗುತ್ತಿದೆ,ನಾವು ತಿನ್ನುವ ಅನ್ನ, ನೀರು, ಸೇವಿಸುವ ಗಾಳಿಯೂ ಸಹ ಶುದ್ಧವಿಲ್ಲ. ಎಲ್ಲವೂ ಕಲಬೆರೆಕೆಯಿಂದ ಕೊಡಿದೆ. ಈ ಕಾರಣಕ್ಕಾಗಿಯೇ ಇಂದು ಅರೋಗ್ಯ ಹಾಳಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು

ಹಿಂದಿನ ಕಾಲದ ನೈಸರ್ಗಿಕ ಕೃಷಿ ಪದ್ಧತಿ ಮಾಯವಾಗಿ ವಿಷಕಾರಿಕ ಪದ್ಧತಿ ಅನುಸರಿಸುವಂತಾಗಿದೆ. ಈಗಿನ ರೈತರು ಬೆಳೆಯುವ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಕಲಾಗುತ್ತಿದೆ. ಕೃಷಿ ಸಹ ಕಲಬೆರಕೆ ಆಗಿದೆ, ನಿತ್ಯ ಸೇವಿಸುವ ಆಹಾರ, ಅನ್ನ, ನೀರು ಸಹ ವಿಷ ಪೂರಿತ ಆಗುತ್ತಿರವ ಹಿನ್ನಲೆಯಲ್ಲಿ ಮನುಷ್ಯ ಅರೋಗ್ಯವಾಗಿರಲು ಪ್ರಯತ್ನ ಮಾಡಬೇಕು ಎಂದು ಹೇಳಿದರು

ಪ್ರಕೃತಿಯ ಮೇಲೆ ಮನುಷ್ಯನ ದಾಳಿ ನಿಲ್ಲಬೇಕು, ಭೂಮಿ ಬೆಳೆಯುವುದಿಲ್ಲ. ಇರುವ ಭೂಮಿಯನ್ನು ಹಸಿರಾಗಿಸಿ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಭವಿಷ್ಯದ ದಿನದಲ್ಲಿ ದೊಡ್ಡ ಪ್ರಮಾಣದಲ್ಲಿ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಹೆಚ್. ಆಂಜನೇಯ ಎಚ್ಚರಿಸಿದರು
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಬಿಜೆಪಿ ಯುವ ಮುಖಂಡ ಎಂ. ಸಿ. ರಘುಚಂದನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಸೇವಾ ಭಾವನೆಯಿಂದ ಮಾಡುವ ಯಾವುದೇ ಕೆಲಸಗಳಿಗೆ ಉತ್ತೇಜನ ಸಿಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ
ಗೋಡೆಮನೆ ಟ್ರಸ್ಟ್ ಕೈಗೊಂಡಿರುವ ಜನೋಪಯೋಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ನುಡಿದರು

ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಯುವಕರ ಪ್ರವೇಶ ಕಡಿಮೆಯಾಗುತ್ತಿದೆ. ರಾಜಕಾರಣಿಗಳ ಮಕ್ಕಳೇ ಈ ಈ ರಂಗದಲ್ಲಿ ಬರಬೇಕು ಎನ್ನುವ ಯಾವ ಕರಾರು ಇಲ್ಲ, ಕಾನೂನು ಸಹ ಇಲ್ಲ. ಆದರೆ ಯುವಕರು ಸ್ವಂತ ಶಕ್ತಿಯ ಮೇಲೆ ರಾಜಕಾರಣ ಪ್ರವೇಶ ಮಾಡಬೇಕು. ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು

ಬೋವಿ ಸಮಾಜದಲ್ಲಿ ರಾಜಕೀಯ ನಾಯಕರ ಕೊರತೆ ಇದೆ. ಹೆಚ್ಚು ಜನಸಂಖ್ಯೆ ಇದ್ದರೂ ಪ್ರತಿನಿದ್ಯ ಇಲ್ಲ. ಹೀಗಾಗಿ ರಾಜಕೀಯ ರಂಗಕ್ಕೆ ನಮ್ಮ ಸಮಾಜದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ನಾಯಕತ್ವ ಗುಣಗಳನ್ನು ಬೆಳೆಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಪ್ರತಿಪಾಧಿಸಿದರು
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ. ಕೆ. ತಾಜ್ ಪೀರ್ ಮಾತನಾಡಿ,ಯುವಕರು ಮತ್ತು ಕೂಲಿ ಕಾರ್ಮಿಕರು ದುಶ್ಚಟಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಗುಟ್ಕಾ. ಕುಡಿತ ಸೇರಿದಂತೆ ಇನ್ನಿತರೆ ಕೆಟ್ಟ ಹವ್ಯಾಸ ಬೆಳೆಸಿಕೊಂಡು ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು

ಗೋಡೆಮನೆ ಟ್ರಸ್ಟ್ ಅವರು ಮುಂದಿನ ದಿನಗಳಲ್ಲಿ ಇಂತಹ ಜೀವಪರವಾದ, ಬಡವರ ಪರವಾದ ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಮತ್ತು ಶ್ರಮಜೀವಿಗಳು ಹೆಚ್ಚಿನ ಪ್ರಮಾಣದಲ್ಲಿ ವಾಸಿಸುವ ಕಡೆ ಆಯೋಜನೆ ಮಾಡಿದರೆ ಒಳಿತು ಎಂದರು

ಕನ್ನಡ ಪರ ಹೋರಾಟಗಾರ ಕೆ ಟಿ ಶಿವಕುಮಾರ್ ಇದೇ ವೇಳೆ ಮಾತನಾಡಿ ಗೋಡೆಮನೆ ವಿನಯ್ ಅವರ ಸಾಮಾಜಿಕ ಸೇವಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ. ಹನುಮಂತಪ್ಪ ಗೋಡೆಮನೆ, ರೆಡ್ ಕ್ರಾಸ್ ಸಂಸ್ಥೆಯ ಗಾಯತ್ರಿ ಶಿವರಾಮ್ , ನಗರ ಸಭೆ ಮಾಜಿ ಅಧ್ಯಕ್ಷರಾದ ಸಿ. ಟಿ. ಕೃಷ್ಣ ಮೂರ್ತಿ, ಡಿ. ಎನ್. ಮೈಲಾರಪ್ಪ, ವಿನಯ್ ಗೋಡೆಮನೆ, ನವೀನ್ ಮಾಸ್ಕಲ್, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Follow on Facebook Follow on Instagram
Share. Facebook Twitter WhatsApp Telegram
Previous Articleಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ತೀರ್ಪು: ವಿನಯ್ ಕುಲಕರ್ಣಿಗೆ ಜೀವಾವಧಿ
Next Article 18 ಏಪ್ರಿಲ್ 2026 (ಶನಿವಾರ) ರ ನಿತ್ಯ ಭವಿಷ್ಯ
Times Of Bayaluseeme Staff
  • Website

Related Posts

ಚಿತ್ರದುರ್ಗ ನಗರದ ಮುಖ್ಯರಸ್ತೆ ಒತ್ತುವರಿ ತೆರವಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕಟ್ಟುನಿಟ್ಟಿನ ಸೂಚನೆ

April 16, 2026

ಸಾಮಾಜಿಕ ಬದಲಾವಣೆಗೆ ರಂಗಭೂಮಿ ಪ್ರಮುಖ ಅಸ್ತ್ರ ; ಡಾ.ಜೆ.ಕರಿಯಪ್ಪ ಮಾಳಿಗೆ

April 14, 2026

ಅಂಬೇಡ್ಕರ್ ಚಿಂತನೆಗಳು ಇಂದಿಗೂ ಪ್ರಸ್ತುತ: ತಾರಿಣಿ ಶುಭದಾಯಿನಿ

April 14, 2026
Add A Comment
Leave A Reply Cancel Reply

Advertisement
Latest Posts

18 ಏಪ್ರಿಲ್ 2026 (ಶನಿವಾರ) ರ ನಿತ್ಯ ಭವಿಷ್ಯ

ಆರೋಗ್ಯ ರಕ್ಷಣೆಗೆ ಜೀವನ ಶೈಲಿ ಬದಲಾಗಬೇಕು: ಮಾಜಿ ಸಚಿವ ಹೆಚ್. ಆಂಜನೇಯ ಸಲಹೆ

ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ತೀರ್ಪು: ವಿನಯ್ ಕುಲಕರ್ಣಿಗೆ ಜೀವಾವಧಿ

ಲವ್ ಜಿಹಾದ್…..ಪ್ರೀತಿ – ಪ್ರೇಮದ ಧರ್ಮ ಯುದ್ಧ…..ಒಂದು ಆತ್ಮಾವಲೋಕನ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.