Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡಲು ಡಾ. ಬಿ.ಚಂದ್ರನಾಯ್ಕ್ ಒತ್ತಾಯ

ಕುರೇಕುಪ್ಪ ಪುರಸಭೆಯಿಂದ ಲ್ಯಾಪ್‌ಟಾಪ್ ಹಾಗೂ ಸಾಧನ ಸಲಕರಣೆಗಳಿಗೆ ಅರ್ಜಿ ಆಹ್ವಾನ

ಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ ‘ಅಂಗಾಂಶ ಕೃಷಿ ಬಾಳೆ ಬೇಸಾಯ’ಕ್ಕೆ ರೈತರು ಮುಂದಾಗಲು ತೋಟಗಾರಿಕೆ ಇಲಾಖೆ ಕರೆ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡಲು ಡಾ. ಬಿ.ಚಂದ್ರನಾಯ್ಕ್ ಒತ್ತಾಯ
ಚಿತ್ರದುರ್ಗ

ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡಲು ಡಾ. ಬಿ.ಚಂದ್ರನಾಯ್ಕ್ ಒತ್ತಾಯ

Times Of Bayaluseeme StaffBy Times Of Bayaluseeme StaffMay 30, 2026No Comments1 Min Read
Share WhatsApp Facebook Twitter Threads Telegram
Follow Us
Facebook Instagram
mla-t-raghumurthy-challakere-news
Share
WhatsApp Twitter Facebook Telegram

ಚಳ್ಳಕೆರೆ: ವಿಧಾನಸಭಾ ಕ್ಷೇತ್ರವನ್ನು ಅದ್ವಿತೀಯವಾಗಿ ಅಭಿವೃದ್ಧಿ ಪಡಿಸಿದ ಶಾಸಕ ಟಿ.ರಘುಮೂರ್ತಿ ಅವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನು ನೀಡಬೇಕೆಂದು ಚಳ್ಳಕೆರೆ ಮಕ್ಕಳ ಆಸ್ಪತ್ರೆಯ ಮಾಲೀಕ ಹಾಗೂ ಮಕ್ಕಳ ತಜ್ಞ ಡಾ. ಬಿ.ಚಂದ್ರನಾಯ್ಕ್ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ.

ಅವರು, ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ, ಬಯಲುಸೀಮೆಯ ಬಂಗಾಡಿನಲ್ಲಿ ಶೈಕ್ಷಣಿಕ, ಸಾಮಾಜಿಕ, ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದಂತಹ ನಾಯಕ. ಪಕ್ಷಾತೀತ, ಜಾತ್ಯತೀತವಾಗಿ ಸಮಾಜ ಸೇವೆ ಮಾಡುವಂತಹ ಗುಣವನ್ನು ಹೊಂದಿರುವ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡುವುದರಿಂದ ಕ್ಷೇತ್ರ ಮಾತ್ರವಲ್ಲದೆ, ರಾಜ್ಯದ ಅಭಿವೃದ್ಧಿಯು ಕೂಡ ಆಗಲಿದೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐದು ದಶಕದಿಂದ ನಿರಂತರವಾಗಿ ಗೆಲುವು ಸಾಧಿಸಿದವರೇ ಇಲ್ಲ, ಆದರೆ, ಶಾಸಕ ಟಿ.ರಘುಮೂರ್ತಿ ಕಾಂಗ್ರೆಸ್ ಪಕ್ಣದಿಂದ ಮೂರು ಬಾರಿ ಸ್ಪರ್ಧಿಸಿ ಮೂರುಭಾರಿಯೂ ಗೆಲುವು ಸಾಧಿಸಿ ಹ್ಯಾಟ್ರಿಕ್ ಗೆಲುವು ಕಂಡವರು. ಕಾಂಗ್ರೆಸ್ ಪಕ್ಷದಿಂದ 2013ರಲ್ಲಿ ಕಣಕ್ಕಿಳಿಯುವ ಮೂಲಕ ಮೂರು ಬಾರಿ ಜಯಶೀಲರಾಗಿ ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟು ನಿಂತವರಾಗಿದ್ದಾರೆ. ಎಲ್ಲಾ ಸಮುದಾಯಗಳಿಗೆ ಸಮುದಾಯ ಭವನ ಕಟ್ಟಿ ಹಾಗೂ ಸಣ್ಣಪುಟ್ಟ ಸಮುದಾಯಗಳನ್ನು ಗುರುತಿಸಿ ಅವರನ್ನು ಸಮಾಜಮುಖಿಯಾಗಿ ಬೆಳಕಿಗೆ ತರುವಂತಹ ಕೆಲಸ ಅವರು ಪ್ರಾಮಾಣಿಕವಾಗಿ ಮಾಡಿದ್ದಾರೆ. ಕ್ಷೇತ್ರ ಮಾತ್ರವಲ್ಲದೆ ಜಿಲ್ಲೆಯ ಹಲವಾರು ಸಮಸ್ಯೆಗಳ ಕುರಿತು ರಾಜ್ಯದ ಗಮನ ಸೆಳೆಯುವಂತಹ ಕೆಲಸವನ್ನು ಮಾಡಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಮತ್ತಷ್ಟು ಕೆಲಸ ಕಾರ್ಯಗಳನ್ನು ಮಾಡಲು ಪ್ರೋತ್ಸಾಹ ನೀಡಬೇಕೆಂದು ಈ ಮೂಲಕ ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಮನವಿ ಮಾಡುತ್ತೇನೆ.

ಶಾಸಕ ಟಿ.ರಘುಮೂರ್ತಿಯವರು ಸಣ್ಣ,ಸಣ್ಣ ಸಮುದಾಯಗಳನ್ನು ಗುರುತಿಸಿ ಅವರಿಗೆ ಮೂಲ ಸೌಲಭ್ಯಗಳನ್ನು ಒದಗಿಸಿರುವಂತಹ ಮಹತ್ವದ ಕಾರ್ಯವನ್ನು ಮಾಡಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವಂತಹ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಇದರ ಜೊತೆ ಜೊತೆಯಲಿ ಕ್ಷೇತ್ರದ ಜನಸಾಮಾನ್ಯನ ಸಮಸ್ಯೆಗಳನ್ನು ಆಲಿಸುವಂತಹ ಮನಸ್ಸುಳ್ಳವರಾಗಿದ್ದು, ಇವರ ಸೇವಾ ಕಾರ್ಯಗಳನ್ನು ಕ್ಷೇತ್ರದ ಎಲ್ಲಾ ಜನರು ಮೆಚ್ಚಿರುವುದು ಮತ್ತೊಂದು ವಿಶೇಷವಾಗಿದೆ. ಇವರಿಗೆ ಪಕ್ಷದ ಸಚಿವಸ್ಥಾನ ನೀಡಲಿ ಎಂದರು.

Challakere MLA T Raghumurthy Congress Leader Raghumurthy. Karnataka Cabinet ಕಾಂಗ್ರೆಸ್ ಸಚಿವ ಸಂಪುಟ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಡಾ ಬಿ ಚಂದ್ರನಾಯ್ಕ್ ಹ್ಯಾಟ್ರಿಕ್ ಗೆಲುವು
Follow on Facebook Follow on Instagram
Share. Facebook Twitter WhatsApp Telegram
Previous Articleಕುರೇಕುಪ್ಪ ಪುರಸಭೆಯಿಂದ ಲ್ಯಾಪ್‌ಟಾಪ್ ಹಾಗೂ ಸಾಧನ ಸಲಕರಣೆಗಳಿಗೆ ಅರ್ಜಿ ಆಹ್ವಾನ
Times Of Bayaluseeme Staff
  • Website

Related Posts

ಸೋಲಿಲ್ಲದ ಸರದಾರನ ಪಯಣ ಅಂತ್ಯ: ಸಚಿವ ಡಿ. ಸುಧಾಕರ್ ಅಕಾಲಿಕ ನಿಧನಕ್ಕೆ ರಾಜ್ಯಸ್ತಬ್ದ

May 10, 2026

ಮೈಸೂರು ಕೆಫೆ ಮಾಲೀಕ ವೇದವ್ಯಾಸ ಆಚಾರ್ಯ ( ಅಣ್ಣಾದೊರೈ) ನಿಧನ

May 10, 2026

ಸಚಿವ ಡಿ. ಸುಧಾಕರ್ ನಿಧನ; ಸಾರ್ವಜನಿಕ ಅಂತಿಮ ದರ್ಶನ

May 10, 2026
Add A Comment
Leave A Reply Cancel Reply

Advertisement
Latest Posts

ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡಲು ಡಾ. ಬಿ.ಚಂದ್ರನಾಯ್ಕ್ ಒತ್ತಾಯ

ಕುರೇಕುಪ್ಪ ಪುರಸಭೆಯಿಂದ ಲ್ಯಾಪ್‌ಟಾಪ್ ಹಾಗೂ ಸಾಧನ ಸಲಕರಣೆಗಳಿಗೆ ಅರ್ಜಿ ಆಹ್ವಾನ

ಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ ‘ಅಂಗಾಂಶ ಕೃಷಿ ಬಾಳೆ ಬೇಸಾಯ’ಕ್ಕೆ ರೈತರು ಮುಂದಾಗಲು ತೋಟಗಾರಿಕೆ ಇಲಾಖೆ ಕರೆ

ಬಳ್ಳಾರಿ ಸರ್ಕಾರಿ ಐಟಿಐ ಕಾಲೇಜು ಪ್ರವೇಶಾತಿ ಆರಂಭ: 569 ಸೀಟುಗಳಿಗೆ ಆಫ್‌ಲೈನ್ ಅರ್ಜಿ ಆಹ್ವಾನ; ಜೂನ್ 2 ರಿಂದ ಪ್ರಕ್ರಿಯೆ ಶುರು!

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.