Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಬರಬೇಕೇ? ಈ 3 ನಿಯಮಗಳು ಇಂದೇ ಪೂರ್ಣಗೊಳಿಸಿ!

ಸೇವಾಸಿಂಧು ಫೋರ್ಟಲ್ ಮೂಲಕ ವಿದ್ಯಾರ್ಥಿ ಬಸ್ ಪಾಸ್‍ಗೆ ಅರ್ಜಿ ಆಹ್ವಾನ

ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡಲು ಡಾ. ಬಿ.ಚಂದ್ರನಾಯ್ಕ್ ಒತ್ತಾಯ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ಸೇವಾಸಿಂಧು ಫೋರ್ಟಲ್ ಮೂಲಕ ವಿದ್ಯಾರ್ಥಿ ಬಸ್ ಪಾಸ್‍ಗೆ ಅರ್ಜಿ ಆಹ್ವಾನ
ಚಿತ್ರದುರ್ಗ

ಸೇವಾಸಿಂಧು ಫೋರ್ಟಲ್ ಮೂಲಕ ವಿದ್ಯಾರ್ಥಿ ಬಸ್ ಪಾಸ್‍ಗೆ ಅರ್ಜಿ ಆಹ್ವಾನ

Times Of Bayaluseeme StaffBy Times Of Bayaluseeme StaffMay 31, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
sevasindhu-student-bus-pass-chitradurga
Share
WhatsApp Twitter Facebook Telegram

ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗದ ವತಿಯಿಂದ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಬಸ್ ಪಾಸ್‍ಗಳ ವಿತರಣೆಗೆ ಚಾಲನೆ ನೀಡಲಾಗಿದ್ದು, ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಶಾಲಾ-ಕಾಲೇಜುಗಳು ಹಾಗೂ ಪದವಿ ಪೂರ್ವ ಕಾಲೇಜುಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶದಂತೆ ಸಂಪೂರ್ಣ ವಿದ್ಯಾರ್ಥಿ ಬಸ್ ಪಾಸ್‍ಗಳನ್ನು ವಿತರಿಸಲು ನಿಗಮವು ಅಗತ್ಯ ಕ್ರಮ ಕೈಗೊಂಡಿದೆ.

ವಿದ್ಯಾರ್ಥಿಗಳು ಸೇವಾಸಿಂಧು ಫೋರ್ಟಲ್ ನ ಲಿಂಕ್ https://sevasindhuservices.karnataka.gov.in/buspassservices ಮೂಲಕ ಆನ್‍ಲೈನ್‍ನಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ದಿನಾಂಕ 29-05-2026 ರಿಂದಲೇ ಸೇವಾಸಿಂಧು ಫೋರ್ಟಲ್ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್‍ಲೈನ್ ಫೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿರುವುದಿಲ್ಲ.

ಚಿತ್ರದುರ್ಗ ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು ತಮ್ಮ ಹತ್ತಿರದ ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಬಹುದು. ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸರ್ಕಾರದ ಆದೇಶದಂತೆ 30 ರೂ. ಶುಲ್ಕ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಬಸ್ ಪಾಸ್‍ಗಾಗಿ ಅರ್ಜಿ ಪಡೆಯಲು ಡಿಕ್ಲರೇಷನ್ ಫಾರಂ ಅನ್ನು ಸೇವಾಸಿಂಧು ತಂತ್ರಾಂಶ ಅಥವಾ ಕರಾರಸಾ ನಿಗಮದ ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು, ಅರ್ಜಿ ಸಲ್ಲಿಸುವಾಗ ತಮ್ಮ ವ್ಯಾಪ್ತಿಯಲ್ಲಿ ಬರುವ ಪಾಸ್ ಕೌಂಟರ್ ಅನ್ನು ಆಯ್ಕೆ ಮಾಡಿ ಸಬ್‍ಮಿಟ್ ಮಾಡಬೇಕಾಗುತ್ತದೆ.

ಅರ್ಜಿ ಅನುಮೋದನೆಯಾದ ವಿದ್ಯಾರ್ಥಿಗಳಿಗೆ ಕೌಂಟರ್ ವಿಳಾಸದ ಮಾಹಿತಿಯನ್ನು ಅರ್ಜಿಯಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಎಸ್‍ಎಂಎಸ್ ಮೂಲಕ ಕಳುಹಿಸಲಾಗುವುದು. ದಿನಾಂಕ 01.06.2026 ರಿಂದ ವಿದ್ಯಾರ್ಥಿ ಪಾಸ್‍ಗಳ ವಿತರಣೆ ಆರಂಭವಾಗಲಿದ್ದು, ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿದ ಕೌಂಟರ್‍ಗೆ ತೆರಳಿ, ನಿಗದಿತ ಪಾಸ್ ಶುಲ್ಕವನ್ನು ನಗದು, ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಪಾವತಿಸಿ ಪಾಸ್ ಪಡೆದುಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಂಚಾರ ಅಧಿಕಾರಿಗಳು-9606908962, ಚಿತ್ರದುರ್ಗ ಘಟಕ ವ್ಯವಸ್ಥಾಪಕರು-7760990465, ಚಳ್ಳಕೆರೆ ಘಟಕ ವ್ಯವಸ್ಥಾಪಕರು-7760999445, ಹೊಸದುರ್ಗ ಘಟಕ ವ್ಯವಸ್ಥಾಪಕರು-7760998020, ಪಾವಗಡ ಘಟಕ ವ್ಯವಸ್ಥಾಪಕರು-7760990918 ಹಾಗೂ ಹಿರಿಯೂರು ಘಟಕ ವ್ಯವಸ್ಥಾಪಕರು-6364220531 ಅನ್ನು ಸಂಪರ್ಕಿಸಬಹುದು.

ಪಾಸ್ ವಿತರಣೆ ಮಾಡುವ ಕೌಂಟರ್‍ಗಳ ವಿವರ ಇಂತಿದೆ.

ಚಿತ್ರದುರ್ಗ- ನಗರದ ಎಸ್‍ಬಿಎಂ ರಸ್ತೆಯ ಮೃತ್ಯುಂಜಯ ಕಾಂಪ್ಲೆಕ್ಸ್, ಸೃಜನ್ ಇಎನ್‍ಟಿ ಕ್ಲೀನಿಕ್ ಹತ್ತಿರ ಹಾಗೂ ನಗರದ ಕೆಳಗೋಟೆಯ ವೈಶಾಲಿ ಸರ್ಕಲ್ ಬಾಯ್ಸ್ ಜೂನಿಯರ್ ಕಾಲೇಜು ಎದುರಿನ ಭೀಮಪ್ಪ ನಾಯಕ ರಸ್ತೆಯ ಕರ್ನಾಟಕ ಒನ್‍ನಲ್ಲಿ ಪಾಸ್ ವಿತರಣೆ ಮಾಡಲಾಗುವುದು.

ಚಳ್ಳಕೆರೆ ತಾಲ್ಲೂಕಿನಲ್ಲಿ ಚಳ್ಳಕೆರೆ ಕೆಎಸ್‍ಆರ್‍ಟಿಸಿ ಬಸ್‍ಸ್ಟಾಂಡ್ ಎದುರಿನ ಮುನಿಸಿಪಲ್ ಬಿಲ್ಡಿಂಗ್ ರೂಂ ನಂ-8ರ ಕರ್ನಾಟಕ ಒನ್,

ಮೊಳಕಾಲ್ಮುರು ಎಸ್‍ಬಿಎಂಐ ಬ್ಯಾಂಕ್ ಹತ್ತಿರದ ಕರ್ನಾಟಕ ಒನ್,

ಹೊಸದುರ್ಗ ಗಾಂಧಿ ಸರ್ಕಲ್ ಹತ್ತಿರ ಹೊಳಲ್ಕೆರೆ ರೋಡ್ ಕರ್ನಾಟಕ ಒನ್,

ಹೊಳಲ್ಕೆರೆ ಚಿತ್ರದುರ್ಗ ರೋಡ್ ತಾಲ್ಲೂಕು ಆಫೀಸ್ ಎದುರುಗಡೆಯ ಕರ್ನಾಟಕ ಒನ್,

ಪಾವಗಡದಲ್ಲಿ ತಾಲ್ಲೂಕು ಆಫೀಸ್ ರೋಡ್ ಎಂಟಿಆರ್ ಹೋಟೆಲ್ ಹತ್ತಿರದ ಕರ್ನಾಟಕ ಒನ್ ಹಾಗೂ ಹಿರಿಯೂರು ನಗರದ ಕರೂರು ವೈಶ್ಯ ಬ್ಯಾಂಕ್ ಹತ್ತಿರದ ಕರ್ನಾಟಕ ಒನ್‍ನಲ್ಲಿ ಪಾಸ್ ವಿತರಣೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

KSRTC Student Bus Pass Apply Online Sevasindhu Bus Pass Karnataka. ವಿದ್ಯಾರ್ಥಿ ಬಸ್ ಪಾಸ್ 2026 ಸೇವಾಸಿಂಧು ಬಸ್ ಪಾಸ್ ಆನ್‌ಲೈನ್
Follow on Facebook Follow on Instagram
Share. Facebook Twitter WhatsApp Telegram
Previous Articleಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡಲು ಡಾ. ಬಿ.ಚಂದ್ರನಾಯ್ಕ್ ಒತ್ತಾಯ
Next Article ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಬರಬೇಕೇ? ಈ 3 ನಿಯಮಗಳು ಇಂದೇ ಪೂರ್ಣಗೊಳಿಸಿ!
Times Of Bayaluseeme Staff
  • Website

Related Posts

ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡಲು ಡಾ. ಬಿ.ಚಂದ್ರನಾಯ್ಕ್ ಒತ್ತಾಯ

May 30, 2026

ಸೋಲಿಲ್ಲದ ಸರದಾರನ ಪಯಣ ಅಂತ್ಯ: ಸಚಿವ ಡಿ. ಸುಧಾಕರ್ ಅಕಾಲಿಕ ನಿಧನಕ್ಕೆ ರಾಜ್ಯಸ್ತಬ್ದ

May 10, 2026

ಮೈಸೂರು ಕೆಫೆ ಮಾಲೀಕ ವೇದವ್ಯಾಸ ಆಚಾರ್ಯ ( ಅಣ್ಣಾದೊರೈ) ನಿಧನ

May 10, 2026
Add A Comment
Leave A Reply Cancel Reply

Advertisement
Latest Posts

ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಬರಬೇಕೇ? ಈ 3 ನಿಯಮಗಳು ಇಂದೇ ಪೂರ್ಣಗೊಳಿಸಿ!

ಸೇವಾಸಿಂಧು ಫೋರ್ಟಲ್ ಮೂಲಕ ವಿದ್ಯಾರ್ಥಿ ಬಸ್ ಪಾಸ್‍ಗೆ ಅರ್ಜಿ ಆಹ್ವಾನ

ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡಲು ಡಾ. ಬಿ.ಚಂದ್ರನಾಯ್ಕ್ ಒತ್ತಾಯ

ಕುರೇಕುಪ್ಪ ಪುರಸಭೆಯಿಂದ ಲ್ಯಾಪ್‌ಟಾಪ್ ಹಾಗೂ ಸಾಧನ ಸಲಕರಣೆಗಳಿಗೆ ಅರ್ಜಿ ಆಹ್ವಾನ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.