ಚಿತ್ರದುರ್ಗ: ಚಿತ್ರದುರ್ಗ ನಗರ ಉಪವಿಭಾಗ ಘಟಕ-1 ವ್ಯಾಪ್ತಿಯಲ್ಲಿ ಬರುವ ಎಫ್-12 ಜೆಸಿಆರ್ ಮಾರ್ಗದಲ್ಲಿ ಇರುವ 11 ಕೆ.ವಿ ಮಾರ್ಗ ಹಾಗೂ ಎಫ್-21 ತರಾಸು ಮಾರ್ಗದಲ್ಲಿ ಇರುವ 11 ಕೆ ವಿ ಮಾರ್ಗವನ್ನು ತುರ್ತು ಕಾಮಗಾರಿ ಇರುವುದರಿಂದ ಈ ಮಾರ್ಗದ ಕೆಲವು ಪ್ರದೇಶಗಳಲ್ಲಿ ಇದೇ ಜೂನ್ 05ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-12 ಜೆಸಿಆರ್ ಮಾರ್ಗದ ಜೆ.ಸಿ.ಆರ್ ಬಡಾವಣೆ, ಮಾರುತಿ ನಗರ, ದರ್ಜಿ ಕಾಲೋನಿ, ಹಿಮ್ಮತ್ ನಗರ, ಅಜಾದ್ ನಗರ, ಹೊರಪೇಟೆ, ಗೋಪಾಲಪುರ ಮುಖ್ಯ ರಸ್ತೆ, ಪ್ರಸನ್ನ ಟಾಕೀಸ್ ಮುಖ್ಯ ರಸ್ತೆ, ರಾಮದಾದ ಕಾಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-21 ತರಾಸು ಮಾರ್ಗದ ಲಕ್ಷ್ಮೀ ಬಜಾರ್, ಚಿಕ್ಕಪೇಟೆ, ಗಾಂಧಿ ವೃತ್ತ, ಎಸ್ಬಿಎಂ ಸರ್ಕಲ್, ವಾಸವಿ ಶಾಲೆ, ಬಾಲಕಿಯರ ಪದವಿ ಪೂರ್ವ ಕಾಲೇಜು, ಪ್ರವಾಸಿ ಮಂದಿರ, ತಾಲ್ಲೂಕು ಕಚೇರಿ, ವಾಲ್ಮೀಕಿ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಚಿತ್ರದುರ್ಗ ನಗರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
