Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ‘ಟಿವಿಕೆ’ ಅಲೆ: ದಳಪತಿಯನ್ನು ಗೆಲುವಿನತ್ತ ನಡಸಿದ ಆ 7 ಪ್ರಮುಖ ಗ್ಯಾರಂಟಿಗಳು ಇಲ್ಲಿವೆ!

ಸೀಬೆ ಎಲೆ: ಕೇವಲ ಹಣ್ಣಷ್ಟೇ ಅಲ್ಲ, ಇದರ ಎಲೆಯೂ ಅಪ್ಪಟ ಔಷಧದ ಗಣಿ!

ಸಮುದ್ರದಾಳದಲ್ಲಿ ಭಾರತದ ಬೃಹತ್ ತ್ರಿವರ್ಣ ಧ್ವಜ ಅನಾವರಣ: ಗಿನ್ನೆಸ್ ದಾಖಲೆ ಬರೆದ ಐತಿಹಾಸಿಕ ಸಾಹಸದಲ್ಲಿ ಕನ್ನಡಿಗ ಶರತ್ ಆರ್. ಅಶೋಕ್ ಭಾಗಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ಎಐ ಯುಗದ ಬದುಕಿಗೆ ಜ್ಞಾನದ ಠೇವಣಿ ಅಗತ್ಯ: ಎಚ್‌.ಎಸ್‌.ರಾಘವೇಂದ್ರ ಸಲಹೆ
ಚಿತ್ರದುರ್ಗ

ಎಐ ಯುಗದ ಬದುಕಿಗೆ ಜ್ಞಾನದ ಠೇವಣಿ ಅಗತ್ಯ: ಎಚ್‌.ಎಸ್‌.ರಾಘವೇಂದ್ರ ಸಲಹೆ

Times Of Bayaluseeme StaffBy Times Of Bayaluseeme StaffMay 3, 2026No Comments3 Mins Read
Share WhatsApp Facebook Twitter Threads Telegram
Follow Us
Facebook Instagram
ai-era-education-and-career-guidance-nayakanahatti-raghavendra
Share
WhatsApp Twitter Facebook Telegram

ನಾಯಕನಹಟ್ಟಿ: ಬಡ್ಡಿ ಹಾಗೂ ಜೀವನದ ಭದ್ರತೆಗೆ ಹಣವನ್ನು ಬ್ಯಾಂಕ್‌ನಲ್ಲಿ ಇರಿಸಿದಂತೆ ಎಐ ಯುಗದಲ್ಲಿ ಶಿಕ್ಷಣ ಮತ್ತು ಜ್ಞಾನವನ್ನು ಠೇವಣಿಯನ್ನಾಗಿಸಬೇಕಿದೆ ಎಂದು ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌.ರಾಘವೇಂದ್ರ ತಿಳಿಸಿದರು.

 

ಪಟ್ಟಣದ ವಿದ್ಯಾವಿಕಾಸ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಎಐ ಯುಗದಲ್ಲಿ ಎಸ್ಸೆಸ್ಸೆಲ್ಸಿ ನಂತರ ಮುಂದೇನು ? ಶೈಕ್ಷಣಿಕ ಮಾರ್ಗದರ್ಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಬರುವ ಜ್ಞಾನ ಎಂಬ ಬಡ್ಡಿಯನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಹಣವಿದ್ದರೆ ಕಳೆಯುವ ಚಿಂತೆ ಇರುತ್ತದೆ. ಆದರೆ ಜ್ಞಾನವನ್ನು ಕದಿಯಲು, ಕಳೆಯಲು ಸಾಧ್ಯವಿಲ್ಲ ಎಂದರು.

ಕೇವಲ ಬಿಎ, ಬಿಎಸ್ಸಿಗಳಿಂದ ಇದೀಗ ಜೀವನ ಸಾಧ್ಯವಿಲ್ಲ. ಉತ್ತಮ ಜೀವನಕ್ಕಾಗಿ ಕೌಶಲ್ಯ ಮತ್ತು ಜ್ಞಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಕೇಂದ್ರ ಸರಕಾರದ ಕೌಶಲ್ಯ ತರಬೇತಿ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಜಿಟಿಟಿಸಿ ನಂತರ ಇಂಜಿನಿಯರಿಂಗ್ ಗೆ ಅವಕಾಶಗಳಿವೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಪೂರ್ಣಗೊಂಡ ಈ ಕ್ಷಣ, ಮಕ್ಕಳಿಗಷ್ಟೇ ಅಲ್ಲ ತಂದೆ ತಾಯಿಗಳಿಗೆ ಕೂಡ ಮಹತ್ವದ ಹಂತ. ಇವರೆಗೂ ನೀವು ನಿಮ್ಮ ಮಕ್ಕಳನ್ನು ಕೈ ಹಿಡಿದು ನಡೆಸಿದ್ದೀರಿ. ಇನ್ನು ಮುಂದೆ ಅವರು ತಮ್ಮ ಬದುಕಿನ ದಾರಿಯನ್ನು ಆಯ್ಕೆ ಮಾಡುವ ತಿರುವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

ನಿಮ್ಮ ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರಬೇಡಿ. ಪ್ರತಿಯೊಬ್ಬ ಮಗುವಿನಲ್ಲೂ ವಿಭಿನ್ನ ಪ್ರತಿಭೆ ಇದೆ. ಇತರರ ಜೊತೆ ಹೋಲಿಕೆ ಮಾಡುವುದರಿಂದ ಅವರ ಆತ್ಮವಿಶ್ವಾಸ ಕುಗ್ಗುತ್ತದೆ. ಬದಲಾಗಿ, ಅವರ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿ, ಅವರಿಗೆ ತಕ್ಕ ಮಾರ್ಗವನ್ನು ಆಯ್ಕೆ ಮಾಡಲು ಬೆಂಬಲ ನೀಡಿ ಎಂದು ಪೋಷಕರಿಗೆ ಮನವಿ ಮಾಡಿದರು.

ಅಂಕಗಳ ಜತೆಗೆ ವ್ಯಕ್ತಿತ್ವ, ನೈತಿಕ ಮೌಲ್ಯಗಳು, ಶಿಸ್ತು ಇವೆಲ್ಲವೂ ಬದುಕಿನಲ್ಲಿ ದೊಡ್ಡ ಪಾತ್ರವಹಿಸುತ್ತವೆ. ನಿಮ್ಮ ಮಕ್ಕಳಿಗೆ ಇವುಗಳನ್ನು ಕಲಿಸುವುದು ನಿಮ್ಮ ಮಹತ್ವದ ಕರ್ತವ್ಯ. ಮೊಬೈಲ್‌ ಮತ್ತು ಇಂಟರ್‌ನೆಟ್‌ ಬಗ್ಗೆ ಜಾಗೃತಿ ಅತ್ಯಗತ್ಯ. ಇವು ಕೇವಲ ಮನರಂಜನೆಗೆ ಮಾತ್ರವಲ್ಲ ಕಲಿಕೆಯ ದೊಡ್ಡ ಸಾಧನಗಳೂ ಆಗಿವೆ. ಆದ್ದರಿಂದ ನಿಯಂತ್ರಣದ ಜೊತೆಗೆ ಸರಿಯಾದ ಮಾರ್ಗದರ್ಶನ ನೀಡಿ. ಬಳಕೆ ಮತ್ತು ದುರ್ಬಳಕೆ ನಡುವಿನ ವ್ಯತ್ಯಾಸವನ್ನು ಮಕ್ಕಳಿಗೆ ತಿಳಿಸಿ.
ಮಕ್ಕಳಿಗೆ ಪ್ರಶ್ನೆ ಕೇಳಲು, ಯೋಚಿಸಲು, ಸೃಜನಾತ್ಮಕವಾಗಿ ಆಲೋಚಿಸಲು ಪ್ರೋತ್ಸಾಹಿಸಿ. ಎಐ ಯುಗದಲ್ಲಿ ನೀವು ಅವರಿಗೆ ಉತ್ತರ ಹೇಳುವುದಕ್ಕಿಂತ, ಉತ್ತರ ಹುಡುಕಲು ಮಾರ್ಗ ತೋರಿಸುವವರಾಗಬೇಕು ಎಂದು ತಿಳಿಸಿದರು.

ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಿ. ಅವರು ಎದುರಿಸುವ ಸವಾಲುಗಳು, ಭಯಗಳು, ಕನಸುಗಳು ಇವೆಲ್ಲವನ್ನು ಕೇಳಿ, ಅರ್ಥಮಾಡಿಕೊಳ್ಳಿ. ನಿಮ್ಮ ಪ್ರೋತ್ಸಾಹವೇ ಅವರಿಗೆ ದೊಡ್ಡ ಶಕ್ತಿ. ಯಶಸ್ಸು ಬರಲು ಸಮಯ ಬೇಕು. ಮಕ್ಕಳಿಗೆ ಸಹನೆ ಮತ್ತು ಪರಿಶ್ರಮದ ಮಹತ್ವವನ್ನು ತಿಳಿಸಿ. ಅವರು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯಲ್ಲೂ ನಿಮ್ಮ ಬೆಂಬಲ ಇರಲಿ ಎಂದರು.

ಇಂದು ಪ್ರಪಂಚವೇ ವೇಗವಾಗಿ ಬದಲಾಗುತ್ತಿದೆ. ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಹೊಸ ಆವಿಷ್ಕಾರಗಳು ಇವೆಲ್ಲವೂ ನಿಮ್ಮ ಮುಂದೆ ಅಪಾರ ಅವಕಾಶಗಳನ್ನು ತೆರೆದಿವೆ. ಆದರೆ ಅವುಗಳ ಜೊತೆಗೆ ಸವಾಲುಗಳೂ ಇವೆ. ಆದ್ದರಿಂದ ಕೇವಲ ಅಂಕಗಳ ಜತೆಗೆ, ಕೌಶಲ್ಯ, ನೈತಿಕತೆ ಮತ್ತು ಮಾನವೀಯತೆ ಎಂಬ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಸಲಹೆ ನೀಡಿದರು.

ಬೆಂಗಳೂರಿನ ಶೈಕ್ಷಣಿಕ ಕೌಶಲ್ಯ ಸಲಹೆಗಾರ ಟಿ.ದಿಲೀಪ್‌ ಕುಮಾರ್‌ ಮಾತನಾಡಿ, ಮಾರುಕಟ್ಟೆ ವ್ಯವಸ್ಥೆಗೆ ತಕ್ಕಂತೆ ವಿದ್ಯಾಭ್ಯಾಸದ ವಿಧಾನಗಳು ಬದಲಾಗುತ್ತಿವೆ. ಐಟಿ,ಬಿಟಿ ನಂತರ ಇದೀಗ ಎಲ್ಲೆಡೆ ಕೃತಕ ಬುದ್ದಿಮತ್ತೆ (ಎಐ) ಎಲ್ಲೆಡೆ ವ್ಯಾಪಿಸುತ್ತಿದೆ ಎಂದರು.

ಐದು ವರ್ಷಗಳ ಹಿಂದೆ ಎಐ ಬಗ್ಗೆ ಸಣ್ಣ ಪ್ರಮಾಣದಲ್ಲಿ ಕಲಿಕೆ ಆರಂಭಿಸಲಾಗಿತ್ತು. ಸಾಫ್ಟ್‌ವೇರ್‌ ಕಂಪನಿಗಳ ಸಂಶೋಧನಾ ವಿಭಾಗದಲ್ಲಿ ಇದರ ಬಗ್ಗೆ ಹೆಚ್ಚಿನ ಕುತೂಹಲವಿತ್ತು. ಅಪಾರ ಪ್ರಮಾಣದಲ್ಲಿನ ದತ್ತಾಂಶಗಳನ್ನು ಸಂಗ್ರಹಿಸಿ ನೀಡಿದಾಗ ಕಂಪ್ಯೂಟರ್‌ ನಿರ್ಣಯ ಅಥವ ಪರಿಹಾರಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು.

ಕಂಪ್ಯೂಟರನ್ನು ಬಳಸುವ ಎಲ್ಲ ಕ್ಷೇತ್ರಗಳಲ್ಲಿ ಎಐ ಕಾಲಿಟ್ಟಿದೆ. ಮುದ್ರಣ, ಪತ್ರಿಕೆ, ಕಾರ್ಖಾನೆ, ಸಾಗಣಿಕೆ, ಸಂವಹನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಎಐ ಪ್ರಭಾವವನ್ನು ಕಾಣಬಹುದಾಗಿದೆ. ಡಿಜಿಟಲ್‌ ಯುಗದಲ್ಲಿನ ಎಲ್ಲ ಕ್ಷೇತ್ರಗಳಲ್ಲಿ ಎಐ ದಾಪುಗಾಲಿಡುತ್ತಿದೆ. ಇದು ಪೂರಕ ಅಥವ ಮಾರಕ ಎನ್ನುವುದು ಮುಖ್ಯವಲ್ಲ. ಆದರೆ ಇದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನ ಅವಕಾಶಗಳಿವೆ ಎಂದರು.

ಬ್ಯಾಚುಲರ್‌ ಆಫ್ ಕಾರ್ಡಿಯೋ ಟೆಕ್ನೋಲಜಿ ಎನ್ನುವ ಕೋರ್ಸ್‌ ಅತಿಹೆಚ್ಚಿನ ಅವಕಾಶಗಳನ್ನು ಹೊಂದಿದೆ. ಹೀಗೆ ಫಾರ್ಮಸಿ, ಔಷಧ ಕ್ಷೇತ್ರದಲ್ಲಿ ಸಂಶೋಧನೆ, ನರ್ಸಿಂಗ್‌, ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳು ಮತ್ತು ಉತ್ತಮ ಗಳಿಕೆಗೆ ದಾರಿಗಳಿವೆ ಎಂದು ವಿವರಿಸಿದರು.

ಎಲ್ಲರೂ ಸೀಮಿತವಾಗಿ ಡಾಕ್ಟರ್‌ ಮತ್ತು ಇಂಜಿನಿಯರ್‌ಗಳಾಗುವ ಬಗ್ಗೆ ಚಿಂತನೆ ಮಾಡುವುದು ಸರಿಯಲ್ಲ. ಭವಿಷ್ಯದ ಚಿಂತನೆಗಳಿಗೆ ಆಯಾಕ್ಷೇತ್ರಗಳಲ್ಲಿರುವವರು ಮತ್ತು ಶಿಕ್ಷಕರ ಸಲಹೆಗಳನ್ನು ಪಡೆದುಕೊಳ್ಳಬೇಕು. ಅಂಗಡಿ,ಮುಂಗಟ್ಟುಗಳ ಮುಂದೆ ಮಾತನಾಡುವವರು ಹೇಳಿಕೆಗಳ ಬದಲಾಗಿ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ ಇರುವ ವ್ಯಕ್ತಿಗಳಿಂದ ಸಲಹೆ ಪಡೆದುಕೊಳ್ಳಬೇಕು. ಹೊಸ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಮುಂಚೆ ತನ್ನ ಇಷ್ಟ, ಆಸಕ್ತಿ ಮತ್ತು ಗುರುತಿಸಿಕೊಳ್ಳುವಿಕೆಯ ಬಗ್ಗೆ ಸ್ಪಷ್ಟತೆ ಇರಬೇಕು. ಬೇರೆಯವರ ಒತ್ತಡಕ್ಕೆ ಒಳಗಾಗಿ ಅಭ್ಯಾಸದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದರು.

ಸರ್ಕಾರಿ ಶಾಲೆ ಶಿಕ್ಷಕಿ ಚಂದನ ಮಾತನಾಡಿ, ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟ ಚಿಂತನೆಗಳು ಇರುವುದಿಲ್ಲ. ಇಂಥಹ ಕಾರ್ಯಕ್ರಮಗಳು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ತಲುಪಬೇಕು ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಮುಖ್ಯಶಿಕ್ಷಕಿಯರಾದ ಎ.ಉಮಾ, ಟಿ.ರೂಪ, ಮಹಾಂತೇಶ್‌, ಅಭಿಷೇಕ ಮತ್ತಿತರರಿದ್ದರು.

ಎಐ ಯುಗ (AI Era) ಎಸ್‌ಎಸ್‌ಎಲ್‌ಸಿ ನಂತರ ಮುಂದೇನು (After SSLC) ಕೃತಕ ಬುದ್ಧಿಮತ್ತೆ (Artificial Intelligence) ಕೌಶಲ್ಯ ಅಭಿವೃದ್ಧಿ (Skill Development) ನಾಯಕನಹಟ್ಟಿ (Nayakanahatti). ಮಾದಾರ ಚನ್ನಯ್ಯ ಗುರುಪೀಠ (Madara Chennaiah Gurupeetha) ಶೈಕ್ಷಣಿಕ ಮಾರ್ಗದರ್ಶಿ (Educational Guidance)
Follow on Facebook Follow on Instagram
Share. Facebook Twitter WhatsApp Telegram
Previous Articleಚಿತ್ರದುರ್ಗದಲ್ಲಿ ಭೀಕರ ಹತ್ಯೆ: ಮನೆಗೆ ನುಗ್ಗಿ ವ್ಯಕ್ತಿ ಕೊಲೆ
Next Article ಶೈಕ್ಷಣಿಕ ಹಾದಿ ಮತ್ತು ಇಂದಿನ ಗೊಂದಲಗಳು: ಒಂದು ಅವಲೋಕನ
Times Of Bayaluseeme Staff
  • Website

Related Posts

ಚಿತ್ರದುರ್ಗದಲ್ಲಿ ಭೀಕರ ಹತ್ಯೆ: ಮನೆಗೆ ನುಗ್ಗಿ ವ್ಯಕ್ತಿ ಕೊಲೆ

May 3, 2026

‘ಹಾರೋ ಹರವೋ ಜಿತೋ’: ಮೊಳಕಾಲ್ಮೂರಿನಲ್ಲಿ ಸಂವಿಧಾನ ಶಿಲ್ಪಿಯ ಜಯಂತೋತ್ಸವ; ಡಾ. ಬಿ. ತಿಪ್ಪೇಸ್ವಾಮಿ ಅವರಿಂದ ರಾಜಕೀಯ ಜಾಗೃತಿಯ ಕರೆ!

April 28, 2026

ಶಿಕ್ಷಕರ ಭಾಷೆ ಸರಳ, ನೇರವಾಗಿರಲಿ ; ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ

April 22, 2026
Add A Comment
Leave A Reply Cancel Reply

Advertisement
Latest Posts

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ‘ಟಿವಿಕೆ’ ಅಲೆ: ದಳಪತಿಯನ್ನು ಗೆಲುವಿನತ್ತ ನಡಸಿದ ಆ 7 ಪ್ರಮುಖ ಗ್ಯಾರಂಟಿಗಳು ಇಲ್ಲಿವೆ!

ಸೀಬೆ ಎಲೆ: ಕೇವಲ ಹಣ್ಣಷ್ಟೇ ಅಲ್ಲ, ಇದರ ಎಲೆಯೂ ಅಪ್ಪಟ ಔಷಧದ ಗಣಿ!

ಸಮುದ್ರದಾಳದಲ್ಲಿ ಭಾರತದ ಬೃಹತ್ ತ್ರಿವರ್ಣ ಧ್ವಜ ಅನಾವರಣ: ಗಿನ್ನೆಸ್ ದಾಖಲೆ ಬರೆದ ಐತಿಹಾಸಿಕ ಸಾಹಸದಲ್ಲಿ ಕನ್ನಡಿಗ ಶರತ್ ಆರ್. ಅಶೋಕ್ ಭಾಗಿ

ಇಂದಿನ ರಾಶಿಫಲ: ಈ 4 ರಾಶಿಯವರಿಗೆ ಇಂದು ಅದೃಷ್ಟದ ದಿನ! ಯಾರ ಮೇಲೆ ಇರಲಿದೆ ದೇವರ ಅನುಗ್ರಹ?

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.