Author: ಮೃತ್ಯುಂಜಯಾಚಾರ್ ಬಿ

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

ಅಖಾಡಕ್ಕೆ ಸಿಎಂ-ಡಿಸಿಎಂ ; ಗೆಲುವಿಗೆ ರಣತಂತ್ರ ದಾವಣಗೆರೆ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ನಾನಾ ರಣತಂತ್ರ ರೂಪಸಿದೆ. ಸೋಮವಾರ ದಾವಣಗೆರೆ ಹಾಗೂ ಬಾಗಲಕೋಟೆ ಎರಡೂ ಕ್ಷೇತ್ರಗಳಿಗೆ ಹೆಲಿಕಾಪ್ಟರ್ ಮೂಲಕ ಸಿಎಂ, ಡಿಸಿಎಂ ತೆರಳಲಿದ್ದಾರೆ. ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಲಿದ್ದಾರೆ. ಬೆಳಿಗ್ಗೆ 11.15ಕ್ಕೆ ದಾವಣಗೆರೆ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಭ್ಯರ್ಥಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿರಲಿದ್ದಾರೆ. ಬಳಿಕ ಮಧ್ಯಾಹ್ನ 2 ಘಂಟೆಗೆ ಬಾಗಲಕೋಟೆ ಮಿನಿವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಲಿರುವ ಕಾಂಗ್ರೆಸ್ ಅಭ್ಯರ್ಥಿಗೂ ಸಾಥ್ ನೀಡಲಿದ್ದಾರೆ.

Read More

ಸಮರ್ಥ್ ಗೆ ಸಾದಿಕ್ ಪೈಲ್ವಾನ್ ಸವಾಲ್ ; ಅಖಾಡಕ್ಕೆ ಇಳಿಯೋದು ಖಚಿತ ದಾವಣಗೆರೆ: ದಾವಣಗೆರೆಯಲ್ಲಿ ಶಾಮನೂರು ಮೊಮ್ಮಗನಿಗೆ ಟಿಕೆಟ್ ಘೋಷಣೆ ಆಗ್ತಿದ್ದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತರು ಸಿಡಿದೆದ್ದಿದ್ದಾರೆ. ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್​ ನೀಡಬೇಕು ಎಂದು ಮುಸ್ಲಿಂ ನಾಯಕರು ಪಟ್ಟು ಹಿಡಿದಿದ್ದರು. ಆದರೆ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ ಅವರು ಮಗ ಸಮರ್ಥ್​​ಗೆ ಟಿಕೆಟ್ ಕೊಡಿಸುವಲ್ಲಿ ಗೆದ್ದಿದ್ದಾರೆ. ಇದೀಗ ಶಾಮನೂರು ಕುಟುಂಬದ ವಿರುದ್ದ ಮುಸ್ಲಿಂ ನಾಯಕರು ಸಿಡಿದೇಳು ಭೀತಿ ಎದುರಾಗಿದ್ದು, ಬಿ ಫಾರಂ ಸಿಗದ ಹಿನ್ನೆಲೆ ಮುಸ್ಲಿಂ ಮುಖಂಡ ಸಾದಿಕ್ ಪೈಲ್ವಾನ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್​ ಟಿಕೆಟ್ ಸಿಗುವ ನಿರೀಕ್ಷೆಯಾಗಿದ್ದ ಸಾದಿಕ್ ಪೈಲ್ವಾನ್​​ಗೆ ನಿರಾಸೆಯಾಗಿದ್ದು, ಸಮರ್ಥ್ ಶಾಮನೂರು ವಿರುದ್ಧ ಸ್ಪರ್ಧೆಗೆ ಮುಂದಾಗಿದ್ದಾರೆ. ದಾವಣಗೆರೆಯಲ್ಲಿ ಮಾತಾಡಿದ ಮುಸ್ಲಿಂ ಮುಖಂಡ ಸಾದಿಕ್ ಪೈಲ್ವಾನ್, ಶುಕ್ರವಾದ ವರೆಗೆ ಬಿ- ಫಾರಂ ಸಿಗುವ ಭರವಸೆ ಇತ್ತು. ಆದರೆ ಸಿಕ್ಕಿಲ್ಲ ಇದೀಗ ಶಾಮನೂರು ಫ್ಯಾಮಿಲಿ ವಿರುದ್ಧ ಅಖಾಡಕ್ಕೆ ಇಳಿಯಲು ನಾನು ಸಿದ್ಧ ಎಂದಿದ್ದಾರೆ. ಅಲ್ಪಸಂಖ್ಯಾತರಿಗೆ…

Read More

ಬರಿಗಾಲಲ್ಲಿ ಶಾಮನೂರು ಮೊಮ್ಮಗ ಸುತ್ತಾಟ; ಎಲ್ಲ ದುಗ್ಗಮ್ಮ ದೇವಿ ಕೃಪೆ ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಅವರಿಗೆ ಟಿಕೆಟ್ ಖಚಿತವಾಗುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಸಿಹಿ ತಿನ್ನಿಸಿ, ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿದ ಜೈಕಾರ ಕೂಗಿದರು. ಕುರುಬರಕೇರಿಯಲ್ಲಿ ಕಾಂಗ್ರೆಸ್ ಮುಖಂಡರ ಮನೆಗಳಿಗೆ ಭೇಟಿ ನೀಡಿದ ಸಮರ್ಥ್ ಅವರು ಬರಿಗಾಲಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ‌ ಕ್ಷೇತ್ರ ಸುತ್ತಾಟ ನಡೆಸುತ್ತಿದ್ದಾರೆ. ಟಿಕೆಟ್ ಘೋಷಣೆ ಬಳಿಕ ದಾವಣಗೆರೆ ಕಾಂಗ್ರೆ ಅಭ್ಯರ್ಥಿ ಸಮರ್ಥ್ ಶಾಮನೂರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ದುಗ್ಗಮ್ಮ ದೇವಸ್ಥಾನ ಒಳಗಡೆ ಹೋಗಿ ಕೈ ಮುಗಿಯುತ್ತಿದ್ದಂತೆ ಟಿಕೆಟ್ ಘೋಷಣೆ ಆಯಿತು. ನಮ್ಮ ಜೊತೆ ಯಾವಾಗಲೂ ಶುಭ ಸೂಚನೆಗಳೇ ಇರುತ್ತವೆ ಎಂದರು. ನಮ್ಮ ಜನರ ಮೇಲೆ ನಮಗೆ ವಿಶ್ವಾಸ ಇದೆ. ಆಕಾಂಕ್ಷಿಗಳು ಬಹಳ ಜನ ಇದ್ದಾಗ ಗೊಂದಲ ಸಾಮಾನ್ಯ, ಆದರೆ ಯಾರು ಗೆಲ್ಲುವಂಥಹ ಅಭ್ಯರ್ಥಿ ಇರ್ತಾರೆ ಅವರಿಗೆ ಟಿಕೆಟ್ ಕೊಡುತ್ತಾರೆ. ಎಲ್ಲರೂ ನನ್ನನ್ನು ಊರಿನ ಮಗ ಅಂತ ಹೇಳುತ್ತಾರೆ. ಈ ಬಾರಿ…

Read More

ಡಿಜಿಟಲ್ ಅರೆಸ್ಟ್‌ ; ವಂಚಕರ ಜಾಲಕ್ಕೆ ಸಿಲುಕಿದ ಉದ್ಯಮಿ ಸೈಬರ್ ವಂಚಕರು ಹೆಣೆದ ಡಿಜಿಟಲ್ ಅರೆಸ್ಟ್‌ಗೆ ಬೆಳಗಾವಿಯ ಹಿರಿಯ ಉದ್ಯಮಿ ಸಿಲುಕಿದ್ದು, ಒಂದಲ್ಲ, ಎರಡಲ್ಲ ಬರೊಬ್ಬರಿ 15 ಕೋಟಿ ಹಣ ಕಳೆದುಕೊಂಡಿದ್ದಾರೆ‌. ಸೈಬರ್‌ ವಂಚನೆ ಕುರಿತು ಜಾಗೃತಿ ಹೆಚ್ಚಾದಂತೆ ವಂಚಕರೂ ತಮ್ಮ ಕೃತ್ಯದ ಮಾರ್ಗವನ್ನು ಬದಲಿಸಿದ್ದಾರೆ.‌ ಹೀಗೆ ಡಿಜಿಟಲ್‌ ಅರೆಸ್ಟ್ ಮಾಡಿ ಬೆಳಗಾವಿ ನಗರದ 81 ವರ್ಷದ ವೃದ್ಧ ಉದ್ಯಮಿ‌ ಒಬ್ಬರನ್ನು ತಮ್ಮ ವಂಚನೆ ಖೆಡ್ಡಾಗೆ ಕೆಡವಿ, ಬರೊಬ್ಬರಿ 15 ಕೋಟಿ ರೂಪಾಯಿಯನ್ನು ಎಗರಿಸಿದ್ದಾರೆ. ಡಾರ್ಕ್‌ ವೆಬ್‌ನಿಂದ ವ್ಯಕ್ತಿಯನ್ನು ಸಂಪರ್ಕಿಸಿರುವ ವಂಚಕರು, ಬಳಿಕ ನಿಮ್ಮ ಬ್ಯಾಂಕ್‌ ಖಾತೆ ಮನಿ ಲಾಂಡ್ರಿಂಗ್‌ ಪಟ್ಟಿಯಲ್ಲಿ ತೋರಿಸುತ್ತಿದೆ ಎಂದು ಹೆದರಿಸಿದ್ದಾರೆ. ವಿಡಿಯೋ ಕಾಲ್ ಮಾಡಿ ನಾವು ಇಡಿ ಅಧಿಕಾರಿಗಳು ಎಂದು ಬೆದರಿಸಿದ್ದಾರೆ. ನಾನೇನೂ ಮನಿ ಲಾಂಡ್ರಿಂಗ್ ಮಾಡಿಲ್ಲ ಎಂದು ವೃದ್ಧ ಹೇಳುತ್ತಿದ್ದಂತೆ ವರಸೆ ಬದಲಿಸಿರುವ ಖದೀಮರು, ಈಗ ತನಿಖೆ ಮಾಡುತ್ತಿದ್ದೇವೆ. ಅಲ್ಲಿಯವರೆಗೂ ನಿಮ್ಮ ಬಳಿಯ ಹಣವನ್ನು ನಾವು ಕೊಡುವ ಖಾತೆಗೆ ವರ್ಗಾಯಿಸಿ. ತನಿಖೆ ಮುಗಿಯುವವರೆಗೂ ನಿಮ್ಮ…

Read More

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸ್ವತಃ ಅಭ್ಯಂಜನ ಸ್ನಾನ ಮಾಡಿಸಿದ ಶಿಕ್ಷಕ! ಬೀರೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಕಳೆದಮಾ.18ರಿಂದಲೇ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ವಸತಿ ಶಾಲೆಯ ಪ್ರಾಂಶುಪಾಲರು ಯಾವ ಮಕ್ಕಳನ್ನು ತಮ್ಮ ಊರುಗಳಿಗೆ ಕಳುಹಿಸದೆ, ಶ್ರದ್ದೆ ಮತ್ತು ಏಕಾಗ್ರತೆಯಿಂದ ಮಕ್ಕಳನ್ನು ತಮ್ಮ ವಸತಿ ಶಾಲೆಗಳಲ್ಲಿ ಪರೀಕ್ಷೆಗೆ ಸಂಬಂಧಿಸಿದ ಪಠ್ಯಗಳನ್ನು ಕಲಿಸುತ್ತಿದ್ದಾರೆ. ಯುಗಾದಿ ಹಬ್ಬವನ್ನು ನಾವು ಮಿಸ್ ಮಾಡಿಕೊಂಡೆವು, ಈ ಬಾರಿ ಊರಿಗೆ ಹೋಗಿದ್ದರೆ ಅಪ್ಪ-ಅಮ್ಮಂದಿರು ಎಣ್ಣೆ ಹಚ್ಚಿ ನಮಗೆ ಸ್ನಾನ ಮಾಡಿಸಿ, ಹೊಸ ಬಟ್ಟೆಗಳನ್ನು ಕೊಡಿಸುತ್ತಿದ್ದರು ಎಂಬ ವಿದ್ಯಾರ್ಥಿಗಳ ಮನೋಭಾವನೆ ಅರಿತ ಕಡೂರು ತಾಲೂಕಿನ ಜೋಡಿಹೋಚಿಹಳ್ಳಿ ಮೊರಾರ್ಜಿ ಶಾಲೆಯ ಶಿಕ್ಷಕ ಕೆ.ಎಚ್.ಗಿರೀಶ್ ಮತ್ತು ನಿಲಯಾಧಿಕಾರಿ ಹೊನ್ನಪ್ಪ, ಶಿಕ್ಷಕರ ತಂಡ ಮಕ್ಕಳೊಂದಿಗೆ ಯುಗಾದಿ ಆಚರಿಸಲು ಮುಂದಾಗಿ, ತಾವೇ ಅರಿಶಿಣ, ಹರಳೆಣ್ಣೆ ತರಿಸಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಚ್ಚಿ ಅವರಿಗೆಲ್ಲ ಅಭ್ಯಂಜನ ಸ್ನಾನ ಮಾಡಿಸಿ ಮಕ್ಕಳೊಂದಿಗೆ ಯುಗಾದಿ ಆಚರಿಸಿರುವುದು ವಿದ್ಯಾರ್ಥಿಗಳಲ್ಲಿ ಸಂತಸ ಹೆಚ್ಚಿಸಿದೆ.

Read More

ಮೊದಲ-ಎರಡನೇ ಬಾರಿ ಗೆದ್ದವರಿಗೆ ಮಂತ್ರಿಗಿರಿ ನೀಡಿ: ಇನ್ಸಾಲ್ ಆಗ್ರಹ ಮೊದಲ, ಎರಡನೇ ಬಾರಿ ಗೆದ್ದವರಿಗೆ ಸಂಪುಟ ಪುನಾರಚನೆ ವೇಳೆ ಮಂತ್ರಿಗಿರಿ ನೀಡಲಿ ಎಂದು ಕಾಂಗ್ರೆಸ್ ಶಾಸಕ ಇಕ್ಸಾಲ್ ಹುಸೇನ್ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ ಖರ್ಗೆ ಮೊದಲ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾಗ ಸಚಿವರಾಗಿದ್ದರು. ಹಾಗಾಗಿ, ಈಗಲೂ ಮೊದಲ ಬಾರಿ ಗೆದ್ದವರನ್ನು ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸುತ್ತಿದ್ದೇವೆ. 55 ಮಂದಿ ಸೇರಿ, ಒಟ್ಟಿಗೆ ಊಟ ಮಾಡಿ, ಈ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಸಿಎಂಗೆ ತಿಳಿಸಿದ್ದೇವೆ. ನಮ್ಮ ಮನವಿಗೆ ಸಿಎಂ ಸ್ಪಂದಿಸುವ ವಿಶ್ವಾಸ ಇದೆ ಎಂದರು. 3 -4ಬಾರಿ ಗೆದ್ದ ಶಾಸಕರು ಸಭೆ ಮಾಡಿ, ಮುಖ್ಯಮಂತ್ರಿಗಳಲ್ಲಿ ಸಚಿವ ಪದವಿಗೆ ಮನವಿ ಮಾಡಿದ್ದಾರೆ. ಹಾಗಾಗಿ, ಮೊದಲ ಬಾರಿ ಹಾಗೂ ಎರಡು ಬಾರಿ ಗೆದ್ದ ಶಾಸಕರು ಕೂಡ ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದೇವೆ ಎಂದು ಅವರು ಹೇಳಿದರು.

Read More

ಡಿಕೆಶಿ ದುಡಿಮೆಗೆ ಕೂಲಿ ಸಿಗಬೇಕು, ಸಿಎಂ ಆಗಬೇಕು: ಪ್ರಣವಾನಂದ ಶ್ರೀ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಅವರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದು ಅವರಿಗೆ ಕೂಲಿ ಸಿಗಬೇಕು. ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಬಳಿ ಒತ್ತಾಯಿಸುತ್ತೇವೆ ಎಂದು ಬ್ರಹಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. ಶನಿವಾರ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿ ಎಂದು ಒತ್ತಾಯಿಸಿದ ಸ್ವಾಮೀಜಿಗಳ ಮಠಕ್ಕೆ ಬಜೆಟ್‌ನಲ್ಲಿ ನಯಾಪೈಸೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಸಮುದಾಯದ ಯಾವ ಬೇಡಿಕೆಯನ್ನೂ ಸಿದ್ದರಾಮಯ್ಯ ಈಡೇರಿಸಲಿಲ್ಲ, ಹೀಗಾಗಿ ಮೇ ತಿಂಗಳಲ್ಲಿ ವಿವಿಧ ಮಠಾಧೀಶರ ಬೃಹತ್ ಸಭೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಡಿ.ಕೆ.ಶಿವಕುಮಾ‌ರ್ ಅವರ ಸಮಯ ಕೇಳಲು ಬಂದಿದ್ದೆವು. ಸಮಯ ನೀಡಲು ಅವರು ಒಪ್ಪಿದ್ದಾರೆ ಎಂದರು

Read More

ಸಚಿವ ಸಂಪುಟದಲ್ಲಿ ಅವಕಾಶ ಕೋರಿ ಸಿದ್ದು, ಡಿಕೆಶಿಗೆ ಮನವಿ: ಭರತ್ ರೆಡ್ಡಿ ಬಳ್ಳಾರಿ: ಯುವ ಶಾಸಕರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವಂತೆ ಕೋರಿ ಮತ್ತೊಮ್ಮೆ ಸಿಎಂ ಬಳಿ ಮನವಿ ಮಾಡಲಾಗುವುದು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ. ಈದ್ದಾ ಮೈದಾನದಲ್ಲಿ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತ ರಣೆ ವೇಳೆ ಯುವಕರಿಗೆ ಅವಕಾಶ ನೀಡಬೇಕೆಂದು ರಾಜ್ಯದ 45-48 ಜನ ಶಾಸಕರು ಸೇರಿ ಸಭೆ ನಡೆಸಿ ರುವುದು ನಿಜ. ಮೊದಲ ಬಾರಿಗೆ ಹಾಗೂ ಎರಡನೇ ಬಾರಿ ಶಾಸಕರಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಅರ್ಹರಿಗೆ ಅವಕಾಶ ನೀಡುವಂತೆ ಸಿಎಂ ,ಡಿ. ಸಿ. ಎಂ. ಬಳಿ ಮಾನವಿ ಮಾಡಿಕೊಳ್ಳಲಾಗುವುದು. ದೆಹಲಿಗೆ ತೆರಳಿ, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು

Read More

ಆ್ಯಂಬುಲೆನ್ಸಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಕಿ 17 ವರ್ಷದ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡು, ಚಾಮ ರಾಜನಗರ ಸಿಮ್ಸ್ ಆಸ್ಪತ್ರೆಗೆ ತೆರಳುವಾಗ ಆ್ಯಂಬುಲೆನ್ಸ್‌ನಲ್ಲಿಯೇ ಹೆರಿಗೆಯಾ ಗಿರುವ ಘಟನೆಯು ತಾಲೂಕಿನ ದೇಶಿಪುರ ಗ್ರಾಮದಲ್ಲಿ ನಡೆದಿದೆ. ಆಕೆಯನ್ನು ಗರ್ಭಿಣಿ ಮಾಡಿದ ಆರೋಪದ ಮೇರೆಗೆ ಅಪ್ರಾಪ್ತಿಯ ಸಂಬಂಧಿಯೂ ಆಗಿ ರುವ ದೇಶಿಪುರ ಗ್ರಾಮದ ಸುರೇಶ್ (46) ಎಂಬಾತನ ವಿರುದ್ಧ ಪೋಕೋ ಕಾಯ್ದೆಯಡಿಪ್ರಕರಣದಾಖಲಿಸಿದ್ದಾರೆ. ಬಾಲಕಿಗೆ 3 ದಿನಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಗುಂಡ್ಲುಪೇಟೆ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದ್ದಾರೆ. ಬಳಿಕ ಅಲ್ಲಿಂದ ಚಾಮರಾಜನಗರದ ಸಿಮ್ಸ್‌ಗೆ ತೆರಳಲು ವೈದ್ಯರು ಸೂಚಿಸಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್‌ನಲ್ಲಿ ತೆರಳುವಾಗ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಾಳೆ. ಇದೇ ವೇಳೆ ಗರ್ಭಿಣಿಯಾಗಲು ಸಂಬಂಧಿಕ ಸುರೇಶ್ ಕಾರಣ ಎಂದು ಅಪ್ರಾಪ್ತಯು ತನ್ನ ತಂದೆ ಬಳಿ ನಿವೇದಿಸಿಕೊಂಡಿದ್ದಾಳೆ. ಬಳಿಕ ಅಪ್ರಾಪ್ತಿಯ ತಂದೆ ದೂರು ನೀಡಿದ್ದು, ಸುರೇಶ್ ವಿರುದ್ಧ ಪೋಟೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Read More