Author: ಮೃತ್ಯುಂಜಯಾಚಾರ್ ಬಿ

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

IPL 2026: ಚಾಂಪಿಯನ್ RCB ತಂಡದ ಬಲ-ವೇಳಾಪಟ್ಟಿ ಪ್ರಕಟ ಮಾ.28ರಿಂದ ಅಭಿಯಾನ ಆರಂಭ – ಮತ್ತೆ ಟ್ರೋಫಿ ಗುರಿ Royal Challengers Bengaluru (RCB) ತಂಡವು IPL 2026ರಿಗಾಗಿ ಸಜ್ಜಾಗಿದ್ದು, ಚಾಂಪಿಯನ್ ತಂಡವಾಗಿ ಮತ್ತೊಮ್ಮೆ ಕಣಕ್ಕಿಳಿಯುತ್ತಿದೆ. ಕಳೆದ ಸೀಸನ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿದ RCB, ಈ ಬಾರಿ ಟ್ರೋಫಿ ಉಳಿಸಿಕೊಳ್ಳುವ ಗುರಿಯೊಂದಿಗೆ ಅಭಿಯಾನ ಆರಂಭಿಸಲಿದೆ. 💪 ತಂಡದ ಬಲ RCB ತಂಡವು ಈ ಬಾರಿ ಸಮತೋಲನ ಹೊಂದಿದ ಸ್ಕ್ವಾಡ್‌ನೊಂದಿಗೆ ಬಲಿಷ್ಠವಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್ ಪ್ರಮುಖ ಆಧಾರವಾಗಿದ್ದು, ಮಧ್ಯಮ ಕ್ರಮದಲ್ಲಿ ಟಿಮ್ ಡೇವಿಡ್, ರೋಮಾರಿಯೊ ಶೆಫರ್ಡ್ ಪವರ್ ಹಿಟ್ಟಿಂಗ್‌ಗೆ ಹೆಸರಾಗಿದ್ದಾರೆ. ಆಲ್‌ರೌಂಡರ್ ವಿಭಾಗದಲ್ಲಿ ಕ್ರುನಾಲ್ ಪಾಂಡ್ಯ ಹಾಗೂ ವೆಂಕಟೇಶ್ ಅಯ್ಯರ್ ತಂಡಕ್ಕೆ ಬೆಂಬಲ ನೀಡಲಿದ್ದಾರೆ. ಬೌಲಿಂಗ್‌ನಲ್ಲಿ ಭುವನೇಶ್ವರ ಕುಮಾರ್ ಮತ್ತು ಜೋಶ್ ಹೇಝಲ್ವುಡ್ ಅನುಭವದ ಶಕ್ತಿ ಹೆಚ್ಚಿಸಲಿದೆ. 👥 ನಾಯಕತ್ವ ತಂಡದ ನಾಯಕತ್ವವನ್ನು ರಾಜತ್ ಪಾಟಿದಾರ್ ವಹಿಸಿಕೊಂಡಿದ್ದು, ಅನುಭವಿ ಆಟಗಾರರ ಜೊತೆ ಯುವ ಪ್ರತಿಭೆಗಳ…

Read More

ಆಸ್ತಿಯಲ್ಲಿ ಭಾಗ ಕೇಳಿದ ತಂಗಿಯನ್ನೇ ಕುಡುಗೋಲಿಂದ ಕೊಚ್ಚಿ ಕೊಂದ ಅಣ್ಣ ಧಾರವಾಡ: ತಂದೆಯ ಆಸ್ತಿಯಲ್ಲಿ ನನಗೂ ಭಾಗ ನೀಡಬೇಕೆಂದು ಹಠ ಹಿಡಿದಿದ್ದ ತಂಗಿಯನ್ನು ಅಣ್ಣನೇ ಕುಡುಗೋಲಿನಿಂದ ಕೊಚ್ಚಿಬರ್ಬರವಾಗಿ ಕೊಲೆಮಾಡಿರುವ ದುರ್ಘಟನೆ ಧಾರವಾಡ ಜಿಲ್ಲೆ ಅಮ್ಮಿನಬಾವಿಯಲ್ಲಿ ಯುಗಾದಿ ದಿನದಂದು ನಡೆದಿದೆ. ಹನುಮಂತ ಯಲಿವಾಳ (35) ಕೊಲೆ ಆರೋಪಿ. ಈತನ ತಂಗಿ ಶಿವಲೀಲಾ ಸಂಗೊಳ್ಳಿ (32) ಕೊಲೆಯಾದ ದುರ್ದೈವಿ. ಶಿವಲೀಲಾ ಅವರನ್ನು ಸಮೀಪದ ತಡಕೋಡ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ತಾಯಿ ಸಾವಿನ ಬಳಿಕ ಅಣ್ಣ-ತಂಗಿ ಮಧ್ಯೆ ಆಸ್ತಿ ವಿಚಾರವಾಗಿ ಗಲಾಟೆ ಆಗಿತ್ತು. ಯುಗಾದಿ ದಿನ (ಗುರುವಾರ) ‘ತಂದೆಯ 4 ಎಕರೆ ಹೊಲದಲ್ಲಿ ನನಗೆ 2 ಎಕರೆ ನೀಡಬೇಕು’ ಎಂದು ಹೇಳಿ ಹೊಲದ ಪೂಜೆಗೆ ಹೋಗಿದ್ದಳು. ಈ ವೇಳೆ ಹನುಮಂತ ಹೊಲಕ್ಕೆ ತೆರಳಿ ಕುಡುಗೋಲಿನಿಂದ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

Read More

ಹೈಕಮಾಂಡ್‌ಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ರವಾನೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್‌ಗೆ ಶುಕ್ರವಾರವೇ ಪಟ್ಟಿರವಾನಿಸಿದ್ದೇವೆ. ಅಂತಿಮವಾಗಿ ಅವರು ತೀರ್ಮಾನ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಶುಕ್ರವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮ ಗೊಳಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ನೇತೃತ್ವದ ನಿಯೋಗ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದೆ. ಎಲ್ಲರ ಅಭಿಪ್ರಾಯ ಹಾಗೂ ಪಕ್ಷದ ಆಂತರಿಕ ಸಮೀಕ್ಷೆ ಅನುಸಾರ ಹೈಕಮಾಂಡ್‌ಗೆ ನಮ್ಮ ಪಟ್ಟಿ ಕಳಿಸಿದ್ದೇವೆ. ಅಂತಿಮವಾಗಿ ಅಭ್ಯರ್ಥಿಯನ್ನು ಅವರೇ ಆಯ್ಕೆ ಮಾಡುತ್ತಾರೆ ಎಂದರು

Read More

ನೀರಾವರಿಗೆ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ: ಡಿಕೆಶಿದಿಲ್ಲಿ ಸಂಸದರ ಸಭೆಯಲ್ಲಿ ಮಹತ್ವದ ತೀರ್ಮಾನ ಬೆಂಗಳೂರು, ಮಾ.21: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಕೇಂದ್ರದ ಸಹಕಾರ ಪಡೆಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಗುರುವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ರಾಜ್ಯದ ಸಂಸದರ ಸಭೆ ನಡೆಸಲಾಗಿದ್ದು, ಜನತಾ ದಳ (ಸೆಕ್ಯುಲರ್) ಹೊರತುಪಡಿಸಿ ಉಳಿದ ಪಕ್ಷಗಳ 24 ಸಂಸದರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು. ಸಭೆಯಲ್ಲಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ವಿಶ್ಲೇಷಣಾತ್ಮಕ ಚರ್ಚೆ ನಡೆದಿದ್ದು, ಭಾರತೀಯ ಜನತಾ ಪಾರ್ಟಿಯ ಬಹುತೇಕ ಸಂಸದರು ಸಹ ಭಾಗವಹಿಸಿದ್ದರು. ಕೇಂದ್ರ ಸಚಿವರಾದ ವಿ. ಸೋಮಣ್ಣ ಹಾಗೂ ಪ್ರಲ್ಹಾದ್ ಜೋಶಿ ದೂರವಾಣಿ ಮೂಲಕ ಸಭೆಯಲ್ಲಿ ಭಾಗಿಯಾದರು ಎಂದು ತಿಳಿಸಿದರು. ಆಲಮಟ್ಟಿ ಅಣೆಕಟ್ಟು ವಿಚಾರ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ತೊಡಕು ಅಥವಾ ತಡೆಯಾಜ್ಞೆ…

Read More

ರಿಷಬ್ ಶೆಟ್ಟಿ – ಹೊಂಬಾಳೆ ಫಿಲಂಸ್ ನಡುವೆ ಬಿರುಕು? ಸೋಷಿಯಲ್ ಮೀಡಿಯಾ ಚಟುವಟಿಕೆ ಬೆನ್ನಿಗೆ ವದಂತಿ ಗಾಳಿ ಬೆಂಗಳೂರು, ಮಾ.21: ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಕಾಂತಾರ ಯಶಸ್ಸಿನ ಜೋಡಿ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ನಡುವೆ ಬಿರುಕು ಮೂಡಿದೆಯೇ ಎಂಬ ಪ್ರಶ್ನೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲಂಸ್ ಮತ್ತು ಕಾಂತಾರ ಚಿತ್ರದ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳನ್ನು ‘ಅನ್‌ಫಾಲೋ’ ಮಾಡಿದ ಘಟನೆ ಈ ವದಂತಿಗಳಿಗೆ ಕಾರಣವಾಗಿದೆ. ಈ ಬೆಳವಣಿಗೆ ಅಭಿಮಾನಿಗಳಲ್ಲಿ ಕುತೂಹಲ ಮತ್ತು ಆತಂಕವನ್ನು ಹೆಚ್ಚಿಸಿದೆ. ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿಗಳ ಪ್ರಕಾರ, ಮುಂದಿನ ಸಿನಿಮಾಗಳ ಆಯ್ಕೆ, ಕ್ರಿಯೇಟಿವ್ ಭಿನ್ನಾಭಿಪ್ರಾಯಗಳು ಹಾಗೂ ಹೊಸ ನಿರ್ಮಾಣ ಸಂಸ್ಥೆಗಳ ಜೊತೆಗಿನ ಒಪ್ಪಂದಗಳು ಈ ಅಸಮಾಧಾನಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಆದರೆ, ಈ ಎಲ್ಲಾ ವಿಚಾರಗಳ ನಡುವೆ ಗಮನಾರ್ಹ ಸಂಗತಿಯೆಂದರೆ ರಿಷಬ್ ಶೆಟ್ಟಿ ಅವರು ಹೊಂಬಾಳೆ ಸಂಸ್ಥೆಯ ಮುಖ್ಯಸ್ಥರನ್ನು ಇನ್ನೂ ಫಾಲೋ ಮಾಡುತ್ತಿರುವುದು. ಇದರಿಂದ…

Read More

ಗ್ರಹಣ ಹಿಡಿದ ಭದ್ರಾ ಮೇಲ್ದಂಡೆಗೆ ಚಂದ್ರ ದರ್ಶನ ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಸುದೀರ್ಘ ಕಾಲ ಹಿಡಿದಿದ್ದ ಗ್ರಹಣವನ್ನು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯಿಂದ ನಿವಾರಣೆಯಾಗಿದೆ. ಶುಕ್ರವಾರ ದೆಹಲಿಯಲ್ಲಿ ನಡೆದ ತಾಂತ್ರಿಕ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭದ್ರಾ ಮೇಲ್ದಂಡೆ ಪರಿಷ್ಕೃತ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದೆ‌. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಸಂಕಲ್ಪ ಹೊತ್ತ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಯುಗಾದಿ ಹಬ್ಬವನ್ನು ಲೆಕ್ಕಿಸದೆ ಹಬ್ಬದ ಸಂದರ್ಭದಲ್ಲಿ 2ದಿನ ಮುಂಚಿತವಾಗಿ ದೆಹಲಿಗೆ ತೆರಳಿ ಸಂಬಂಧಪಟ್ಟ ಹಲವಾರು ರಾಷ್ಟ್ರೀಯ ನಾಯಕರು, ಕೇಂದ್ರ ಸಚಿವರುಗಳೊಂದಿಗೆ ಎಡಬಿಡದೆ ರಾಜ್ಯದ ಅನೇಕ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ ಪರಿಣಾಮ ಭದ್ರಾ ಮೇಲ್ದಂಡೆ ಯೋಜನೆ ಪರಿಷ್ಕೃತ ಪ್ರಸ್ತಾವನೆಗೆ ತಾಂತ್ರಿಕ ನೀರಾವರಿ ಸಲಹಾ ಸಮಿತಿಯಲ್ಲಿ ಅನುಮೋದನೆ ದೊರತಿದೆ. ಇನ್ನೂ 2 ಹಂತದಲ್ಲಿ ಅಂದರೆ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಬೋರ್ಡ್ ( PIB) ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಬೇಕಾಗಿದೆ. ಈ 2 ಹಂತಗಳಲ್ಲೂ…

Read More

ಯುಗಾದಿ ಹಬ್ಬದಲ್ಲಿ ಚಂದ್ರ ದರ್ಶನದ ನಂತರ ಪಠಿಸಬೇಕಾದ ಮಂತ್ರ – ಧಾರ್ಮಿಕ ಹಿನ್ನಲೆ ಧಾರ್ಮಿಕ ವಿಶೇಷ: ಯುಗಾದಿ ಹಬ್ಬವು ಕನ್ನಡ ಹಾಗೂ ದಕ್ಷಿಣ ಭಾರತದ ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಈ ದಿನ ಪಂಚಾಂಗ ಪಠಣ, ಬೇವು-ಬೆಲ್ಲ ಸೇವನೆ ಜೊತೆಗೆ ಕೆಲಡೆ ಚಂದ್ರ ದರ್ಶನಕ್ಕೂ ವಿಶೇಷ ಮಹತ್ವ ನೀಡಲಾಗುತ್ತದೆ. ಚಂದ್ರ ದರ್ಶನದ ನಂತರ ಪಠಿಸಬೇಕಾದ ಮಂತ್ರ: “ದಧಿಶಂಖ ತುಷಾರಾಭಂ ಕ್ಷೀರೋದಾರ್ಣವ ಸಂಭವಂ ನಮಾಮಿ ಶಶಿನಂ ಸೋಮಂ ಶಂಭೋರ್ಮಕುಟ ಭೂಷಣಂ॥” ಅಥವಾ “ಓಂ ಶ್ರಾಂ ಶ್ರೀಂ ಶ್ರೌಂ ಸಃ ಚಂದ್ರಾಯ ನಮಃ॥” ಮಂತ್ರದ ಅರ್ಥ: ಈ ಮಂತ್ರವು ಚಂದ್ರನನ್ನು ಹಾಲಿನಂತೆ ಶ್ವೇತವರ್ಣ, ಶಾಂತಸ್ವಭಾವ ಹಾಗೂ ಶೀತಳತೆಯ ಪ್ರತೀಕವಾಗಿ ಕೊಂಡಾಡುತ್ತದೆ. ಈ ಮಂತ್ರ ಪಠಿಸುವುದರಿಂದ ಮನಸ್ಸಿಗೆ ಶಾಂತಿ, ಆರೋಗ್ಯ ಹಾಗೂ ಸೌಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಧಾರ್ಮಿಕ ಹಿನ್ನಲೆ: ಹಿಂದೂ ಧರ್ಮದಲ್ಲಿ ಚಂದ್ರನನ್ನು ಚಂದ್ರ ದೇವ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನು ಮನಸ್ಸಿನ ಅಧಿಪತಿಯಾಗಿದ್ದು, ವ್ಯಕ್ತಿಯ ಭಾವನೆಗಳು ಮತ್ತು ಚಿಂತನೆಗಳ ಮೇಲೆ…

Read More

ವಾಹನ ಸವರರೇ ಎಚ್ಚರ ಯುದ್ಧದ ಎಫೆಕ್ಟ್: ಭಾರತದಲ್ಲಿ ಪೆಟ್ರೋಲ್ ಬೆಲೆ ಏರಿಕೆ – ಇಲ್ಲಿದೆ ನೂತನ ದರಪಟ್ಟಿ ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮ ಭಾರತದಲ್ಲೂ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಹೆಚ್ಚಳ ಕಂಡುಬಂದಿದೆ. ತೈಲ ಕಂಪನಿಗಳು ಬಿಡುಗಡೆ ಮಾಡಿದ ನೂತನ ದರಪಟ್ಟಿಯ ಪ್ರಕಾರ, ದೇಶದ ಪ್ರಮುಖ ನಗರಗಳಲ್ಲಿ ಇಂಧನದ ಬೆಲೆಗಳಲ್ಲಿ ಏರಿಕೆ ದಾಖಲಾಗಿದೆ. ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ಲೀಟರ್‌ಗೆ ₹1 ರಿಂದ ₹3 ರವರೆಗೆ ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಮುಖ ನಗರಗಳ ದರಪಟ್ಟಿ (ಅಂದಾಜು): ಬೆಂಗಳೂರು: ಪೆಟ್ರೋಲ್ ₹103+, ಡೀಸೆಲ್ ₹89+ ನವದೆಹಲಿ: ಪೆಟ್ರೋಲ್ ₹97+, ಡೀಸೆಲ್ ₹90+ ಮುಂಬೈ: ಪೆಟ್ರೋಲ್ ₹106+, ಡೀಸೆಲ್ ₹94+ ಚೆನ್ನೈ: ಪೆಟ್ರೋಲ್ ₹102+, ಡೀಸೆಲ್ ₹94+ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ, ರೂಪಾಯಿ ಮೌಲ್ಯದಲ್ಲಿ ಕುಸಿತ ಹಾಗೂ ಸಾಗಣೆ ವೆಚ್ಚ ಹೆಚ್ಚಳ ಇಂಧನ ದರ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.…

Read More

ಬೆಂಗಳೂರುದಲ್ಲಿ ಮತ್ತೆ ‘ಟೋಯಿಂಗ್’ ಆರಂಭ: ಡಿಸಿಎಂ ಡಿ.ಕೆ. ಶಿವಕುಮಾರ್  ಘೋಷಣೆ ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮತ್ತು ನಿಯಮ ಉಲ್ಲಂಘನೆ ತಡೆಗಟ್ಟುವ ಉದ್ದೇಶದಿಂದ ವಾಹನಗಳ ‘ಟೋಯಿಂಗ್’ (ಎಳೆದೊಯ್ಯುವ) ಕ್ರಮವನ್ನು ಮತ್ತೆ ಆರಂಭಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಅನಧಿಕೃತವಾಗಿ ನಿಲ್ಲಿಸಲಾದ ವಾಹನಗಳು ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಪುನರಾರಂಭಿಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಹಿಂದೆ ಟೋಯಿಂಗ್ ವ್ಯವಸ್ಥೆ ಕುರಿತು ಸಾರ್ವಜನಿಕರಿಂದ ಹಲವು ಆಕ್ಷೇಪಣೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಇದೀಗ ಪಾರದರ್ಶಕತೆ ಹಾಗೂ ನಿಯಮಿತ ವ್ಯವಸ್ಥೆಯೊಂದಿಗೆ ಟೋಯಿಂಗ್ ಕಾರ್ಯಾಚರಣೆಯನ್ನು ಮತ್ತೆ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಬಾರಿ ಟೋಯಿಂಗ್ ವೇಳೆ ಯಾವುದೇ ದುರುಪಯೋಗವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಿಸಿಟಿವಿ ಮೇಲ್ವಿಚಾರಣೆ ಮತ್ತು ಸ್ಪಷ್ಟ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರದ ವಾಹನ ಸವಾರರು ನಿಯಮ ಉಲ್ಲಂಘನೆ ತಪ್ಪಿಸಿ, ಸೂಚಿಸಿದ ಸ್ಥಳಗಳಲ್ಲಿ ಮಾತ್ರ…

Read More

ಚಿತ್ರದುರ್ಗದಲ್ಲಿ ಭೀಕರ ಆಸಿಡ್ ದಾಳಿ – ವಿಚ್ಛೇದಿತ ಪತ್ನಿ ಸೇರಿ ಐವರಿಗೆ ಗಾಯ, ಆರೋಪಿ ಪರಾರಿ ಚಿತ್ರದುರ್ಗ, ಮಾ.20: ಜಿಲ್ಲೆಯ ಮಾಳಪ್ಪನಹಟ್ಟಿಯಲ್ಲಿ ಕುಟುಂಬ ವೈಷಮ್ಯದ ಹಿನ್ನೆಲೆ ಭೀಕರ ಆಸಿಡ್ ದಾಳಿ ನಡೆದಿದ್ದು, ವಿಚ್ಛೇದಿತ ಪತ್ನಿ ಸೇರಿ ಐವರು ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ತಾಸಿನಾ ಬಾನು (ಮಾಳಪ್ಪನಹಟ್ಟಿ ನಿವಾಸಿ) ತಮ್ಮ ಪತಿ ಸುಹಿಲ್ ಭಾಷಾ ಅವರ ಕಿರುಕುಳದಿಂದ ಬೇಸತ್ತು ಕೆಲವು ತಿಂಗಳ ಹಿಂದೆ ಅವರನ್ನು ತೊರೆದು ಬೆಂಗಳೂರಿನಲ್ಲಿ ವಾಸವಾಗಿದ್ದರು. ಹಬ್ಬದ ನಿಮಿತ್ತ ಸಹೋದರಿ ನಗ್ಮಾ ನಾಯ್ಕ್ ಮನೆಗೆ ಬಂದಿದ್ದ ವೇಳೆ ಆರೋಪಿ ಸುಹಿಲ್ ಭಾಷಾ ಈ ಕೃತ್ಯ ಎಸಗಿದ್ದಾನೆ. ಮಾಹಿತಿಯ ಪ್ರಕಾರ, ಆರೋಪಿ ಮೊದಲು ತಾಸಿನಾ ಬಾನು ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ನಂತರ ಮನೆಯಲ್ಲಿದ್ದ ಇತರರ ಮೇಲೂ ಆಸಿಡ್ ಎರಚಿದ್ದಾನೆ. ಈ ದಾಳಿಯಲ್ಲಿ ತಾಸಿನಾ ಬಾನು, ಅವರ ಪುತ್ರಿ ರೋಷನಿ, ಸಹೋದರಿ ನೇಹಾ, ನೇಹಾ ಪುತ್ರಿ ಇಕ್ರಾ ಹಾಗೂ ನಗ್ಮಾ ನಾಯ್ಕ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ದಾವಣಗೆರೆ ಆಸ್ಪತ್ರೆಗೆ…

Read More