Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಅರ್ಹ ಮತದಾರರು ವಂಚಿತರಾಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

03/06/2026 ಬುಧವಾರದ ನಿತ್ಯ ಭವಿಷ್ಯ

ಬಡ್ತಿ ಸಿಕ್ಕ ಮರುದಿನವೇ ನಿವೃತ್ತಿ..! ಚಿತ್ರದುರ್ಗದ ಅಧಿಕಾರಿಯ ಅಪರೂಪದ ಸೇವಾ ಪಯಣ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ ಪತ್ರಿಕೆ ಓದು ಅವಶ್ಯ; ಗೌನಹಳ್ಳಿ ಗೋವಿಂದಪ್ಪ
ಚಿತ್ರದುರ್ಗ

ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ ಪತ್ರಿಕೆ ಓದು ಅವಶ್ಯ; ಗೌನಹಳ್ಳಿ ಗೋವಿಂದಪ್ಪ

Times Of Bayaluseeme StaffBy Times Of Bayaluseeme StaffApril 13, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
ಹಿರಿಯ ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ ದ್ವಾಮವ್ವನಹಳ್ಳಿಯ ಎನ್‌ಎಸ್‌ಎಸ್ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿರುವುದು.
Share
WhatsApp Twitter Facebook Telegram

ಚಿತ್ರದುರ್ಗ: ಶಿಕ್ಷಣವು ಕೇವಲ ನಾಲ್ಕು ಗೋಡೆಗಳೊಳಗೆ ಪಾಠ ಕಲಿಯುವುದಕ್ಕೆ ಸೀಮಿತವಾಗಿಲ್ಲ. ಸಮಾಜದ ಸ್ಥಿತಿ, ಆಡಳಿತ ವ್ಯವಸ್ಥೆ, ಸಮಕಾಲೀನ ಘಟನೆಗಳು ಹಾಗೂ ಸಾಮಾನ್ಯ ಜ್ಞಾನವನ್ನು ಅರ್ಥಮಾಡಿಕೊಳ್ಳಲು ದಿನಪತ್ರಿಕೆಗಳ ಓದು ಅತ್ಯಂತ ಅಗತ್ಯ ಎಂದು ಹಿರಿಯ ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ ತಿಳಿಸಿದರು.

ಹಿರಿಯ ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ ದ್ವಾಮವ್ವನಹಳ್ಳಿಯ ಎನ್‌ಎಸ್‌ಎಸ್ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿರುವುದು.

 

 

 

ತಾಲ್ಲೂಕಿನ ದ್ವಾಮವ್ವನಹಳ್ಳಿಯಲ್ಲಿ ಡಾನ್ ಬೋಸ್ಕೋ ಪದವಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆಯಿಂದ ಸೋಮವಾರ ಆಯೋಜಿಸಿದ್ದ ವಿಶೇಷ ವಾರ್ಷಿಕ ಶಿಬಿರದಲ್ಲಿ ವಿದ್ಯಾರ್ಥಿ ಜೀವನದಲ್ಲಿ ದಿನಪತ್ರಿಕೆ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪತ್ರಿಕೆಗಳು ಸಾಮಾನ್ಯ ಜ್ಞಾನ, ಸಮಕಾಲೀನ ಮಾಹಿತಿ ಹಾಗೂ ಸಮಾಜದ ಸಮಸ್ಯೆಗಳ ಅರಿವಿಗೆ ಪ್ರಮುಖ ಮೂಲವಾಗಿವೆ ಎಂದು ತಿಳಿಸಿದರು.

ಪತ್ರಿಕೆ ಜಗತ್ತನ್ನು ನೋಡುವ ಕಿಟಕಿಯಂತಿದೆ. ಆಡಳಿತದ ತಪ್ಪುಗಳನ್ನು ಪ್ರಶ್ನಿಸುವುದು, ಅನ್ಯಾಯವನ್ನು ಬೆಳಕಿಗೆ ತರುವುದು ಮತ್ತು ಸಮಾಜದ ದಿಕ್ಕು ತಿದ್ದುವುದು ಪತ್ರಿಕೋದ್ಯಮದ ಮಹತ್ವದ ಕರ್ತವ್ಯ ಎಂದು ಹೇಳಿದರು.
ಪತ್ರಿಕೆಗಳು ಕೇವಲ ಸುದ್ದಿಗಳಿಗೆ ಸೀಮಿತವಾಗಿಲ್ಲ. ಕ್ರೀಡೆ, ಸಾಹಿತ್ಯ, ವ್ಯಂಗ್ಯಚಿತ್ರ, ವಿಶೇಷ ಪುರವಣಿಗೆಗಳು, ಮನರಂಜನೆ ಮತ್ತು ಚುಟುಕು ಬರಹಗಳ ಮೂಲಕ ಓದುಗರ ಬದುಕನ್ನು ಸಮೃದ್ಧಗೊಳಿಸುತ್ತವೆ ಎಂದರು.

ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಆನ್‌ಲೈನ್ ಪತ್ರಿಕೆಗಳನ್ನೂ ಪ್ರತಿದಿನ ಕನಿಷ್ಠ ಹತ್ತು ನಿಮಿಷ ಓದಿದರೆ ಭವಿಷ್ಯ ಉಜ್ವಲವಾಗುತ್ತದೆ ಹಾಗೂ ಬದುಕು ಹಸನಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಾಚಕರು ತಮ್ಮ ಅಭಿಪ್ರಾಯಗಳನ್ನು ‘ವಾಚಕರ ವಾಣಿ’ ಮೂಲಕ ಪತ್ರಿಕೆಗಳಿಗೆ ಕಳುಹಿಸಿದರೆ ಸರ್ಕಾರದ ಗಮನಕ್ಕೂ ಸಮಸ್ಯೆಗಳು ತಲುಪುತ್ತವೆ. ಎಲ್ಲರೂ ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಂಡರೆ ಜ್ಞಾನ ವಿಸ್ತಾರವಾಗುತ್ತದೆ, ಸಮಾಜದ ಬಗ್ಗೆ ಜಾಗೃತಿ ಹೆಚ್ಚುತ್ತದೆ ಮತ್ತು ಬದುಕು ಹಸನಾಗುತ್ತದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಜೀವನದಲ್ಲಿ ಎನ್‌ಎಸ್‌ಎಸ್ ಸೇವಾ ಚಟುವಟಿಕೆಗಳು ತಾಳ್ಮೆ, ಶಿಸ್ತು ಮತ್ತು ಸೇವಾ ಗುಣಗಳನ್ನು ಬೆಳೆಸುತ್ತವೆ. ಸ್ವಚ್ಛತಾ ಸೇವೆ, ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿತನ ಮೂಡುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಬಂದಿರುವ ಪ್ರತಿಯೊಬ್ಬರೂ ಸಮಾಜದ ವ್ಯವಹಾರಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಮಾದಾರ ಚನ್ನಯ್ಯ ಗುರುಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ರಾಘವೇಂದ್ರ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಆಯೋಜಿಸಲಾಗುವ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿವೆ. ಒಗ್ಗಟ್ಟಿನ ಜೀವನ, ಶಿಸ್ತು ಹಾಗೂ ಗುರಿ ಸಾಧನೆಯ ಮೌಲ್ಯಗಳನ್ನು ಕಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ತಿಳಿಸಿದರು.
ಗ್ರಾಮೀಣ ಜನರ ಬದುಕಿನ ನೈಜ ಚಿತ್ರಣವನ್ನು ಹತ್ತಿರದಿಂದ ಅರಿಯುವ ಅವಕಾಶ ಶಿಬಿರಗಳ ಮೂಲಕ ಸಿಗುತ್ತದೆ. ಒಂದಾಗಿ ಜೀವನ ಸಾಗಿಸುವುದು, ಪರಸ್ಪರ ಸಹಕಾರದ ಮನೋಭಾವ ಬೆಳೆಸಿಕೊಳ್ಳುವುದು ಮತ್ತು ಸಮಾಜಮುಖಿ ಚಿಂತನೆ ರೂಪಿಸಿಕೊಳ್ಳುವುದು ಇಂತಹ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಲು ಇವು ನೆರವಾಗುತ್ತವೆ ಎಂದರು.

ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ದಿನಪತ್ರಿಕೆ ಓದುವ ಅಭ್ಯಾಸದ ಅಗತ್ಯತೆ ಇನ್ನಷ್ಟು ಹೆಚ್ಚಾಗಬೇಕು. ಪ್ರತಿದಿನ ಕನಿಷ್ಠ 30 ನಿಮಿಷ ಪತ್ರಿಕೆ ಓದುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾನ ವಿಸ್ತಾರವಾಗುವುದರ ಜೊತೆಗೆ ತಾಳ್ಮೆ, ಚಿಂತನಾ ಶಕ್ತಿ ಮತ್ತು ದೇಶದ ಹಿತಾಸಕ್ತಿಯ ಅರಿವು ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಪುಸ್ತಕ ಹಾಗೂ ಪತ್ರಿಕೆಗಳು ಜೀವನದ ಮೊದಲ ಪಾಠ. ಪ್ರಾರಂಭದಿAದಲೇ ಓದುವ ಅಭ್ಯಾಸ ರೂಢಿಸಿಕೊಂಡರೆ ವ್ಯಕ್ತಿತ್ವ ವಿಕಾಸಕ್ಕೆ ಬಲ ಸಿಗುತ್ತದೆ. ಮಾಹಿತಿ ಅಂಗೈಯಲ್ಲೇ ಸಿಗುವ ಕಾಲದಲ್ಲಿಯೂ ಪತ್ರಿಕೆ ಓದಿನ ಮಹತ್ವ ಕಡಿಮೆಯಾಗಬಾರದು ಎಂದರು. ಹಿರಿಯ ಪತ್ರಕರ್ತ ವೀರೇಂದ್ರ ಕೋಗುಂಡೆ ಮಠ, ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಡಾ.ಎನ್.ಧನಕೋಟಿ, ಸಹ ಶಿಬಿರಾಧಿಕಾರಿಗಳಾದ ರಿಂಕಿ ಸುರೇಶ್, ಫೂಬಾಲನ್ ಇದ್ದರು.

ಎನ್‌ಎಸ್‌ಎಸ್ ಶಿಬಿರ ಗೌನಹಳ್ಳಿ ಗೋವಿಂದಪ್ಪ ಚಿತ್ರದುರ್ಗ ಸುದ್ದಿ ಡಾನ್ ಬೋಸ್ಕೋ ಕಾಲೇಜು ದಿನಪತ್ರಿಕೆ ಮಹತ್ವ ದ್ವಾಮವ್ವನಹಳ್ಳಿ ಪತ್ರಿಕೋದ್ಯಮ ಸಾಮಾನ್ಯ ಜ್ಞಾನ ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ
Follow on Facebook Follow on Instagram
Share. Facebook Twitter WhatsApp Telegram
Previous Articleಪಂಚಮಸಾಲಿ ಗುರುಪೀಠದಲ್ಲಿ ಭಾರೀ ಬೆಳವಣಿಗೆ: ವಚನಾನಂದ ಶ್ರೀಗಳ ಉಚ್ಚಾಟನೆ!
Next Article 14/04/2026 ರ ದಿನ ಭವಿಷ್ಯ (ಮಂಗಳವಾರ)
Times Of Bayaluseeme Staff
  • Website

Related Posts

ಅರ್ಹ ಮತದಾರರು ವಂಚಿತರಾಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

June 3, 2026

ಸೇವಾಸಿಂಧು ಫೋರ್ಟಲ್ ಮೂಲಕ ವಿದ್ಯಾರ್ಥಿ ಬಸ್ ಪಾಸ್‍ಗೆ ಅರ್ಜಿ ಆಹ್ವಾನ

May 31, 2026

ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡಲು ಡಾ. ಬಿ.ಚಂದ್ರನಾಯ್ಕ್ ಒತ್ತಾಯ

May 30, 2026
Add A Comment
Leave A Reply Cancel Reply

Advertisement
Latest Posts

ಅರ್ಹ ಮತದಾರರು ವಂಚಿತರಾಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

03/06/2026 ಬುಧವಾರದ ನಿತ್ಯ ಭವಿಷ್ಯ

ಬಡ್ತಿ ಸಿಕ್ಕ ಮರುದಿನವೇ ನಿವೃತ್ತಿ..! ಚಿತ್ರದುರ್ಗದ ಅಧಿಕಾರಿಯ ಅಪರೂಪದ ಸೇವಾ ಪಯಣ

02/06/2026 ರ ನಿತ್ಯ ಭವಿಷ್ಯ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.