Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಪ್ರಧಾನಿಯವರ ಭಾಷಣ ಮತ್ತು ಭಾರತದ ವಾಸ್ತವ: ಅಂತರಂಗದ ಚಳವಳಿಯೊಂದರ ಅವಲೋಕನ

ನಿತ್ಯ ಭವಿಷ್ಯ – 19/04/2026 (ಭಾನುವಾರ)

ಇಚ್ಚಾ ಶಕ್ತಿಯ ಕೊರತೆ ಅಥವಾ ಕಪಟ ನಾಟಕ ಅಥವಾ ಸ್ವ ಹಿತಾಸಕ್ತಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಮುಖಪುಟ»ಪ್ರಧಾನಿಯವರ ಭಾಷಣ ಮತ್ತು ಭಾರತದ ವಾಸ್ತವ: ಅಂತರಂಗದ ಚಳವಳಿಯೊಂದರ ಅವಲೋಕನ
ಮುಖಪುಟ

ಪ್ರಧಾನಿಯವರ ಭಾಷಣ ಮತ್ತು ಭಾರತದ ವಾಸ್ತವ: ಅಂತರಂಗದ ಚಳವಳಿಯೊಂದರ ಅವಲೋಕನ

Times Of Bayaluseeme StaffBy Times Of Bayaluseeme StaffApril 19, 2026No Comments3 Mins Read
Share WhatsApp Facebook Twitter Threads Telegram
Follow Us
Facebook Instagram
ಭಾರತದ ವಿವಿಧ ರಾಜ್ಯಗಳ ಸಾಮಾಜಿಕ ಸಮಸ್ಯೆಗಳು ಮತ್ತು ನಾಯಕತ್ವದ ಜವಾಬ್ದಾರಿಯನ್ನು ಬಿಂಬಿಸುವ ಸಾಂಕೇತಿಕ ಚಿತ್ರ
Share
WhatsApp Twitter Facebook Telegram

ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನಂತರ ಮೂಡಿದ ಆಲೋಚನೆಗಳು. ದೇಶದ ವಿವಿಧ ರಾಜ್ಯಗಳಲ್ಲಿ ಲೇಖಕರು ಕಂಡ ಕಹಿ ವಾಸ್ತವಗಳು, ಬಡತನ ಮತ್ತು ವ್ಯವಸ್ಥೆಯ ಭ್ರಷ್ಟತೆಯ ಬಗ್ಗೆ ವಿವೇಕಾನಂದ ಎಚ್. ಕೆ. ಅವರ ಮಾರ್ಮಿಕ ವಿಶ್ಲೇಷಣೆ ಇಲ್ಲಿದೆ.

ರಾತ್ರಿ 8 – 30 ರ ಸಮಯ…….

ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿನ್ನೆ ರಾತ್ರಿ 8.30 ರ ನೇರ ಪ್ರಸಾರದ ಭಾಷಣ ಕೇಳಿದ ಮೇಲೆ ನನ್ನಲ್ಲಿ ಉಂಟಾದ ಕೆಲವು ಭಾವನೆಗಳು ಈ ರೀತಿ ಇದೆ.

ದ್ವೇಷ, ಅಸೂಯೆ, ಸೈದ್ಧಾಂತಿಕ ನಿಲುವು, ರಾಜಕೀಯ ಎಲ್ಲವನ್ನು ಮೀರಿ ಇದನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ…..

ಅಗಾಧ ಭಾವನೆಗಳ ಅಕ್ಷಯ ಪಾತ್ರೆ ನಮ್ಮ ಮನಸ್ಸು…….

ಕ್ಷಣಕ್ಷಣಕ್ಕೂ ಬದಲಾಗುತ್ತಾ ವಿಶಾಲ ಸಾಗರದ ಅಲೆಗಳಂತೆ ,
ಎತ್ತರದ ಪರ್ವತಗಳ ನೋಟದಂತೆ
ದಟ್ಟ ಕಾನನದ ಮಾಲೆಗಳಂತೆ,
ಅನಂತ ಆಕಾಶದ ಕೌತುಕದಂತೆ,
ಚಲಿಸುತ್ತಲೇ ಇರುತ್ತದೆ‌.

ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಇರುವಂತೆ,
ಪ್ರೀತಿ, ಪ್ರೇಮ, ಕರುಣೆ, ಕ್ಷಮೆ, ಮಮತೆಗಳೆಂಬ ಭಾವಗಳೂ ತುಂಬಿ ತುಳುಕುತ್ತವೆ….

ಇಲ್ಲಿ ನಾವು ಮಾಡಬೇಕಿರುವುದು ಹೆಚ್ಚೇನೂ ಇಲ್ಲ.

ಎಲ್ಲ ಭಾವಗಳಲ್ಲೂ ಸಂಚರಿಸುತ್ತಾ ಪ್ರೀತಿ ಎಂಬ ಭಾವವನ್ನು ಅಪ್ಪಿಕೊಳ್ಳೋಣ…..

ಪ್ರೀತಿ ಎಂಬ ಭಾವದಲ್ಲಿ ಸ್ಥಾಯಿಯಾಗೋಣ.
ಅದೊಂದು ಅದ್ಬುತ ಪ್ರಪಂಚ.

ಬೇರೆ ಎಲ್ಲಾ ಭಾವಗಳಿಗೂ ಅಧಿಪತಿ ಈ ಪ್ರೀತಿ ಎಂಬ ಭಾವ. ಇದು ಎಂದೆಂದಿಗೂ ಮುಗಿಯದ ಅಕ್ಷಯ ಭಾವ.

ನಿಷ್ಕಲ್ಮಶ ಪ್ರೀತಿಗೆ ಯಾವ ಮಿತಿಯೂ ಇಲ್ಲ. ಹರಿಯಲು ಬಿಡಿ ಪ್ರೀತಿಯನ್ನು….

ಅದು ಮತ್ತಷ್ಟು ವಿಶಾಲವಾಗುತ್ತಾ ಸಾಗುತ್ತದೆ. ನಿರೀಕ್ಷೆಗಳಿಲ್ಲದ ,
ಸ್ವಾರ್ಥವಿಲ್ಲದ ಪ್ರೀತಿ ನಿಮ್ಮನ್ನು ಆಂತರಿಕವಾಗಿ ಎತ್ತರೆತ್ತರಕ್ಕೆ ಕೊಂಡೊಯ್ಯುತ್ತದೆ.

ಪ್ರೀತಿ ಎಂಬ ಭಾವ ಎಲ್ಲಾ ಸಂಬಂಧಗಳನ್ನು ಮೀರಿ ಬದುಕನ್ನು ಸಾರ್ಥಕತೆಯತ್ತಾ ಮುನ್ನಡೆಸುತ್ತದೆ.

ಸಾಮಾನ್ಯ ವ್ಯಾವಹಾರಿಕ ಬದುಕಿನಲ್ಲಿ ಇದು ಅತ್ಯಂತ ಕಠಿಣ.
ಆದರೆ,
ಅಸಾಮಾನ್ಯರಾಗಲು ಅಸಾಧ್ಯವಾದುದನ್ನೇ ಸಾಧಿಸಬೇಕಲ್ಲವೇ ?

ದೇಶದ ಹಿತಾಸಕ್ತಿಯಿಂದ ಪ್ರಯತ್ನಿಸಿ ಇಂದಿನಿಂದಲೇ, ನೀವಿರುವ ನೆಲೆಯಲ್ಲಿಯೇ..
ಇದರಿಂದ ಯಾವ ದುಷ್ಪರಿಣಾಮಗಳು ಇಲ್ಲವೆಂಬ ಖಚಿತ ಭರವಸೆ ನೀಡಬಲ್ಲೆ ಮಾನ್ಯ ನರೇಂದ್ರ ಮೋದಿ ಅವರೇ…

ಏಕೆಂದರೆ,

“ಸಮಾಜದ ಕಟ್ಟಕಡೆಯ ವ್ಯಕ್ತಿ, ಸ್ವಾತಂತ್ರ್ಯ ಮತ್ತು ಸಾಮಾಜಿಕ ವ್ಯವಸ್ಥೆ ” ಎಂಬ ಅಪ್ರಕಟಿತ ಕೃತಿಯಲ್ಲಿ ಮತ್ತು ಅದನ್ನು ಬರೆಯುವಾಗ ತಿಳಿದ ಕೆಲವು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಕೇಳಲು, ಓದಲು ಹಿಂಸೆಯಾದರೆ ಕ್ಷಮೆ ಇರಲಿ.

ರಸ್ತೆ ಬದಿಯಲ್ಲಿ ಅನಾಥರಂತೆ ಸಾಯುವ ಮಾಹಿತಿಯೇ ಇಲ್ಲದ ಬಹಳಷ್ಟು ಜನರನ್ನು ಬಿಹಾರದಲ್ಲಿ ನೋಡಿದೆ.

ತನ್ನ ಕುಟುಂಬದವರ ಎರಡೊತ್ತಿನ ಊಟಕ್ಕಾಗಿ 5/6 ಜನ ವಿಟ ಪುರುಷರಿಗೆ ತನ್ನ ಮುದಿ ದೇಹವನ್ನು ಮಾರಿಕೊಂಡ ಹೆಣ್ಣನ್ನು ಅಸ್ಸಾಮಿನಲ್ಲಿ ಭೇಟಿಯಾದೆ.

ಇನ್ನೂ ಟಿವಿ ಎಂದರೆ ಏನೆಂದು ತಿಳಿಯದ ಜನರನ್ನು ನಾಗಾ ಲ್ಯಾಂಡ್ ನಲ್ಲಿ ಕಂಡೆ.

ಹಣಕ್ಕಾಗಿ ತಮ್ಮ ಕಿಡ್ನಿಯನ್ನೇ ಬೇಗ ಮಾರಿಸಿಕೊಡಲು ದಲ್ಲಾಳಿಗಳಿಗೆ ದಂಬಾಲು ಬಿದ್ದು ಲಂಚ ಕೊಡುವ ಹಳ್ಳಿ ಯೊಂದನ್ನು ಜಾರ್ಖಂಡ್ ನಲ್ಲಿ ಗಮನಿಸಿದೆ.

ಹಣಕ್ಕಾಗಿ ಮಕ್ಕಳನ್ನು ಹೆತ್ತು ಮಾರುವ ಒಂದು ಗ್ರಾಮವೇ ಒರಿಸ್ಸಾದಲ್ಲಿದೆ.

ತಮ್ಮ ಮನೆಯಲ್ಲಿಯೇ ತಾಯಿ, ಹೆಂಡತಿ, ಅಕ್ಕ, ತಂಗಿಯರನ್ನು ಇಟ್ಟುಕೊಂಡು ವೇಶ್ಯಾಗೃಹ ನಡೆಸುವ ಅನೇಕ ಊರುಗಳು ಆಂಧ್ರ ಪ್ರದೇಶದಲ್ಲಿ ಇವೆ.

ಮಕ್ಕಳನ್ನು ಕದ್ದು ಅವರ ಕಣ್ಣುಕಿತ್ತು ಅಥವಾ ಅಂಗವಿಕಲರನ್ನಾಗಿ ಮಾಡಿ ಅವರಿಂದ ಭಿಕ್ಷೆ ಬೇಡಿಸಿ ಜೀವಿಸುವ ಕೆಲವು ಕುಟುಂಬಗಳು
ಛತ್ತೀಸ್ ಗಡದಲ್ಲಿವೆ.

ಇಡೀ ಜೀವನವನ್ನೇ ಕುಟುಂಬ ಸಮೇತ ರಸ್ತೆಯ ಬದಿಯಲ್ಲಿಯೇ ಕಳೆದ ಸಂಸಾರಗಳನ್ನು ಮುಂಬೈನಲ್ಲಿ ಮಾತನಾಡಿಸಿದೆ.

ಹುಟ್ಟಿಸಿದ ತಂದೆ ತಾಯಿಯನ್ನೇ ಅನುಕೂಲಸ್ತ ಮಗನೊಬ್ಬ ಹೆಂಡತಿಯ ಮಾತು ಕೇಳಿ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಭಿಕ್ಷಾಟನೆ ಮಾಡುತ್ತಿದ್ದ ಅಪರಾಧಿಗಳೆಂದು ಸುಳ್ಳು ಹೇಳಿ ಸೇರಿಸಿದ ಪ್ರಕರಣಕ್ಕೆ ಕರ್ನಾಟಕದಲ್ಲಿ ನಾನೇ ಖುದ್ದು ಸಾಕ್ಷೀದಾರ.

ಪ್ರಧಾನಿ, ಮುಖ್ಯಮಂತ್ರಿ ಇರಲಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬ ಅರಿವೇ ಇರದ ಬಹಳಷ್ಟು ಜನರನ್ನು ಉತ್ತರಪ್ರದೇಶದಲ್ಲಿ ಮಾತನಾಡಿಸಿದೆ.

ಇದು ಕೆಲವು ಉದಾಹರಣೆಗಳು ಅಷ್ಟೆ. ಮುಂದೊಮ್ಮೆ ಬಹಳಷ್ಟು ಹೃದಯ ಬಿರಿಯುವ ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಇನ್ನೂ,
ಕಳ್ಳತನ, ಸುಳ್ಳು, ವಂಚನೆಗಳನ್ನೇ ವೃತ್ತಿ ಮಾಡಿಕೊಂಡಿರುವ ಅನೇಕರನ್ನು ದೇಶದ ಎಲ್ಲಾ ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ಕಂಡೆ ಎಂದು ನಿಮಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ.

ವಿಶ್ವಗುರು ಭಾರತ ಎನ್ನುವ ನಾವು ಇದನ್ನೂ ಗಮನಿಸಬೇಕಲ್ಲವೇ.
ಸಂವೇದನೆಗಳೇ ಇಲ್ಲದ ಈ ವ್ಯವಸ್ಥೆಯ ಬಗ್ಗೆ ಆಕ್ರೋಶ ಉಂಟಾಗುತ್ತದೆ.
ಬದಲಾವಣೆ ಕೆಳ ಮಟ್ಟದಿಂದ ಆಗಬೇಕಿದೆ. ಇದರಲ್ಲಿ ನಮ್ಮೆಲ್ಲರ ಜವಾಬ್ದಾರಿಯೂ ಇದೆ. ಅದನ್ನು ನಿಭಾಯಿಸಲು ಸಿದ್ದರಾಗೋಣ.

ನಿನ್ನೆ ಮಾನ್ಯ ನರೇಂದ್ರ ಮೋದಿಯವರ ಭಾಷಣ ಕೇಳಿದ ನಂತರ ಇದೆಲ್ಲಾ ನೆನಪಾದವು. ಏಕೆಂದರೆ ದೇಶದ ಮುಖ್ಯಸ್ಥರು ತುಂಬಾ ಸೂಕ್ಷ್ಮವಾಗಿ, ಸಂವೇದನೆಯಿಂದ, ಸಂಯಮದಿಂದ ತಮ್ಮ ಮನಸ್ಸಿನ ಮೇಲೆ ನಿಯಂತ್ರಣ ಹೊಂದಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಬಹುದೊಡ್ಡ ಜವಾಬ್ದಾರಿಯನ್ನು ಅರಿತು ಮಾತನಾಡಬೇಕು ಎಂಬ ನಿರೀಕ್ಷೆ ನಮ್ಮದು. ಸಾಮಾನ್ಯ ವ್ಯಕ್ತಿಯಂತೆ ಹಗುರವಾಗಿ ಮಾತನಾಡಿದರೆ ಅದು ಅವರ ಘನತೆಗೆ ಕುಂದು. ಉಳಿದದ್ದು ಅವರವರ ವಿವೇಚನೆಗೆ ಬಿಡುತ್ತಾ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

Indian Social Issues PM Modi Speech Analysis Vivekananda HK. ನರೇಂದ್ರ ಮೋದಿ ಭಾಷಣ ಪ್ರಜಾಪ್ರಭುತ್ವದ ರಕ್ಷಣೆ ಬಡತನ ಮತ್ತು ಭ್ರಷ್ಟಾಚಾರ ಭಾರತದ ಸಾಮಾಜಿಕ ವ್ಯವಸ್ಥೆ ಮಾನವೀಯತೆ ವಿವೇಕಾನಂದ ಎಚ್. ಕೆ. ಸಾಮಾಜಿಕ ಕಳಕಳಿ
Follow on Facebook Follow on Instagram
Share. Facebook Twitter WhatsApp Telegram
Previous Articleನಿತ್ಯ ಭವಿಷ್ಯ – 19/04/2026 (ಭಾನುವಾರ)
Times Of Bayaluseeme Staff
  • Website

Related Posts

ಇಚ್ಚಾ ಶಕ್ತಿಯ ಕೊರತೆ ಅಥವಾ ಕಪಟ ನಾಟಕ ಅಥವಾ ಸ್ವ ಹಿತಾಸಕ್ತಿ

April 18, 2026

ಲವ್ ಜಿಹಾದ್…..ಪ್ರೀತಿ – ಪ್ರೇಮದ ಧರ್ಮ ಯುದ್ಧ…..ಒಂದು ಆತ್ಮಾವಲೋಕನ

April 17, 2026

ಜಗಜ್ಯೋತಿ ಬಸವೇಶ್ವರ ಜಯಂತಿ ವಿಶೇಷಾಂಕ ‘ಯುವ ಮನಸ್ಸಿನ ಚಿಂತನೆಗಳಿಗೆ ಸುವರ್ಣ ವೇದಿಕೆ’

April 12, 2026
Add A Comment
Leave A Reply Cancel Reply

Advertisement
Latest Posts

ಪ್ರಧಾನಿಯವರ ಭಾಷಣ ಮತ್ತು ಭಾರತದ ವಾಸ್ತವ: ಅಂತರಂಗದ ಚಳವಳಿಯೊಂದರ ಅವಲೋಕನ

ನಿತ್ಯ ಭವಿಷ್ಯ – 19/04/2026 (ಭಾನುವಾರ)

ಇಚ್ಚಾ ಶಕ್ತಿಯ ಕೊರತೆ ಅಥವಾ ಕಪಟ ನಾಟಕ ಅಥವಾ ಸ್ವ ಹಿತಾಸಕ್ತಿ

18 ಏಪ್ರಿಲ್ 2026 (ಶನಿವಾರ) ರ ನಿತ್ಯ ಭವಿಷ್ಯ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.