Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

08/05/2026 ರ ನಿತ್ಯ ಭವಿಷ್ಯ

ಡಿಜಿಟಲ್ ಯುಗದ ಸುಲಭ ಖರ್ಚು – ಕಠಿಣ ಸಂಪಾದನೆ: ಬದಲಾದ ಜೀವನಶೈಲಿಯ ಕಟು ಸತ್ಯ

ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಉದಯ: ಕನ್ನಡಿಗರ ಅಸ್ಮಿತೆ ಮತ್ತು ಪ್ರಾದೇಶಿಕ ಪಕ್ಷದ ಅನಿವಾರ್ಯತೆ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಮುಖಪುಟ»ಡಿಜಿಟಲ್ ಯುಗದ ಸುಲಭ ಖರ್ಚು – ಕಠಿಣ ಸಂಪಾದನೆ: ಬದಲಾದ ಜೀವನಶೈಲಿಯ ಕಟು ಸತ್ಯ
ಮುಖಪುಟ

ಡಿಜಿಟಲ್ ಯುಗದ ಸುಲಭ ಖರ್ಚು – ಕಠಿಣ ಸಂಪಾದನೆ: ಬದಲಾದ ಜೀವನಶೈಲಿಯ ಕಟು ಸತ್ಯ

Times Of Bayaluseeme StaffBy Times Of Bayaluseeme StaffMay 7, 2026No Comments3 Mins Read
Share WhatsApp Facebook Twitter Threads Telegram
Follow Us
Facebook Instagram
ಒಬ್ಬ ವ್ಯಕ್ತಿಯು ಮೊಬೈಲ್ ಮೂಲಕ ಹಣ ಪಾವತಿಸುತ್ತಿರುವ ಮತ್ತು ಅದರ ಪಕ್ಕದಲ್ಲಿಯೇ ಆರ್ಥಿಕ ಸಂಕಷ್ಟದ ಆತಂಕವನ್ನು ಸೂಚಿಸುವ ಸಾಂಕೇತಿಕ ಚಿತ್ರ.
Share
WhatsApp Twitter Facebook Telegram

ಆಧುನಿಕತೆ ಮತ್ತು ಜಾಗತೀಕರಣದ ಪರಿಣಾಮವಾಗಿ ಖರ್ಚು ಮಾಡುವುದು ಸುಲಭವಾಗಿದೆ, ಆದರೆ ಸಂಪಾದನೆ ಸವಾಲಾಗಿದೆ. ನಮ್ಮ ಜೀವನಮಟ್ಟ ಸುಧಾರಿಸುತ್ತಿದೆಯೇ ಅಥವಾ ನಾವು ಕೇವಲ ವಸ್ತು ಸಂಸ್ಕೃತಿಯ ಗುಲಾಮರಾಗುತ್ತಿದ್ದೇವೆಯೇ? ಶಿಕ್ಷಣ, ಆರೋಗ್ಯ ಮತ್ತು ಹೆಚ್ಚುತ್ತಿರುವ ಅವಶ್ಯಕತೆಗಳ ನಡುವೆ ಮಧ್ಯಮ ವರ್ಗದ ಜನರ ಹೋರಾಟದ ಕುರಿತಾದ ಒಂದು ವಿಶೇಷ ಲೇಖನ.

ಆಧುನಿಕತೆ – ಜಾಗತೀಕರಣದ ಬಹುದೊಡ್ಡ ಪರಿಣಾಮವೆಂದರೆ ಇರುವ ಹಣವನ್ನು ಅತ್ಯಂತ ಸುಲಭವಾಗಿ, ಸುಲಲಿತವಾಗಿ – ಸರಳವಾಗಿ ಕುಳಿತಲ್ಲಿಂದಲೇ ಹೇಗೆ ಬೇಕಾದರು, ಯಾರು ಬೇಕಾದರೂ ಹಣ ಖರ್ಚು ಮಾಡಬಹುದು. ನಮಗೆ ಬೇಕಾದ ವಸ್ತುಗಳನ್ನು, ಹೂಡಿಕೆಯನ್ನು, ಪಾವತಿಗಳನ್ನು, ವರ್ಗಾವಣೆಯನ್ನು ಮಾಡಬಹುದು ಮತ್ತು ಕೊಳ್ಳಬಹುದು. ಇದಕ್ಕೆ ಯಾವುದೇ ಶ್ರಮ ಬೇಕಿಲ್ಲ. ಒಂದು ಮೊಬೈಲಿನ ಮೂಲಕವೇ ಕೋಟ್ಯಾಂತರ ಹಣ ಖರ್ಚು ಮಾಡಬಹುದು. ಅದಕ್ಕಾಗಿ ಎಲ್ಲಾ ಬಗೆಯ ವೇದಿಕೆ – ಅವಕಾಶ – ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಹಣ ನಿಮ್ಮ ಬಳಿ ಇರಬೇಕಷ್ಟೇ…

ಆದರೆ ಅದಕ್ಕೆ ವಿರುದ್ಧವಾಗಿ ಹಣ ಸಂಪಾದನೆಯ ಮಾರ್ಗಗಳ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ಇಷ್ಟು ಸುಲಭವಾಗಿ, ಸರಳವಾಗಿ, ಯಾವುದೇ ಒತ್ತಡವಿಲ್ಲದೇ ಹಣವನ್ನು ಸಂಪಾದನೆ ಮಾಡಲು ಸಾಧ್ಯವೇ. ಹೌದು ಕೆಲವು ಅಪರೂಪದ ಜೂಜಿನಂತ ಸ್ವಲ್ಪ ಅಪಾಯಕಾರಿ ಟ್ರೇಡಿಂಗ್ ನಂತಹ ವ್ಯವಹಾರ ಹೊರತುಪಡಿಸಿ ಇತರೇ ವಹಿವಾಟು ಮಾಡಲು ಸಾಧ್ಯವೇ…..

ಬಹುಶಃ ಇಂದು ನಮ್ಮೆಲ್ಲರ ಬಹುದೊಡ್ಡ ಸವಾಲು ಇದೇ ಆಗಿದೆ. ಸಂಪಾದನೆ ಮತ್ತು ಲಾಭಗಳು ಕಡಿಮೆಯಾಗುತ್ತಾ, ಖರ್ಚುಗಳು ಹೆಚ್ಚಾಗುತ್ತಾ ಅವುಗಳ ನಡುವೆ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ಇದು ದಿನೇ ದಿನೇ ಅಧಿಕವಾಗುತ್ತಿದೆ…..

ಒಬ್ಬ ವ್ಯಕ್ತಿಯು ಮೊಬೈಲ್ ಮೂಲಕ ಹಣ ಪಾವತಿಸುತ್ತಿರುವ ಮತ್ತು ಅದರ ಪಕ್ಕದಲ್ಲಿಯೇ ಆರ್ಥಿಕ ಸಂಕಷ್ಟದ ಆತಂಕವನ್ನು ಸೂಚಿಸುವ ಸಾಂಕೇತಿಕ ಚಿತ್ರ.

ಹಾಗೇ ಒಮ್ಮೆ 30/40 ವರ್ಷಗಳ ಹಿಂದಿನ ಜನಜೀವನದ ಬಗ್ಗೆ ಯೋಚಿಸಿ. ಮೊಬೈಲ್ ಇರಲಿಲ್ಲ. ಅದರ ಖರ್ಚು ಸಂಪೂರ್ಣ ಉಳಿತಾಯ. ಇಂದು ಅದು ಅನಿವಾರ್ಯ. ಟಿವಿ ಪ್ರಸಾರ ಉಚಿತವಾಗಿತ್ತು. ಬಟ್ಟೆಗಳು ಹಬ್ಬದ ಸಂದರ್ಭದಲ್ಲಿ ಮಾತ್ರ. ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ಕಡಿಮೆ ದುಡ್ಡು. ಸಾಮಾನ್ಯ ಖಾಯಿಲೆಗೆ ಸರ್ಕಾರಿ ಆಸ್ಪತ್ರೆಗಳೇ ಸಾಕಾಗಿದ್ದವು. ನೀರಿಗೆ ಬಿಲ್ ಇರಲಿಲ್ಲ. ಹುಟ್ಟಿದ ಹಬ್ಬ, ಮದುವೆ ವಾರ್ಷಿಕೋತ್ಸವದ ನೆನಪುಗಳೇ ಇರುತ್ತಿರಲಿಲ್ಲ. ಮನೆಯ ಊಟವೇ ಹೆಚ್ಚು. ಹೋಟೆಲ್ ಮತ್ತು ಇತರ ಬೀದಿ ಬದಿಯ ತಿಂಡಿಗಳು ಅಪರೂಪ. ಫ್ರಿಡ್ಜ್, ವಾಶಿಂಗ್ ಮಿಷಿನ್, ವ್ಯಾಕ್ಯೂಮ್ ಕ್ಲೀನರ್, ಎಸಿ, ದ್ವಿಚಕ್ರ ವಾಹನ ಮುಂತಾದವುಗಳ ಅವಶ್ಯಕತೆಯೇ ಇರಲಿಲ್ಲ. ಈಗ ಹೀಗೇ ದಿನೇ ದಿನೇ ನಮ್ಮ ಅವಶ್ಯಕತೆಗಳು ಹೆಚ್ಚಾಗುತ್ತಲೇ ಇವೆ ಮತ್ತು ಅದನ್ನು ಮನೆ ಬಾಗಿಲಿಗೆ ಸಾಲದ ರೂಪದಲ್ಲಿ ಪೂರೈಸಲಾಗುತ್ತದೆ……

ಆದರೆ ಸರ್ಕಾರಿ ಅಧಿಕಾರಿಗಳು ಮತ್ತು ಕೆಲವೇ ನಿರ್ದಿಷ್ಟ ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಮಧ್ಯಮ ವರ್ಗದ ಜನರ ವ್ಯಾಪಾರ ವಹಿವಾಟುಗಳ ಲಾಭದ ಪ್ರಮಾಣದಲ್ಲಿ ಸ್ಪರ್ಧೆಯ ಕಾರಣದಿಂದಾಗಿ ಕಡಿಮೆ ಆಗುತ್ತಲೇ ಇದೆ. ಜೊತೆಗೆ ಬೇರೆ ಬೇರೆ ಅನಿವಾರ್ಯ ಖರ್ಚುಗಳು ಅದಕ್ಕೆ ಜೊತೆಯಾಗುತ್ತಿದೆ……

ಹೊರ ಹೋಗುವುದು ದೊಡ್ಡ ಪ್ರಮಾಣದ ಹಣ – ಒಳ ಬರುವುದು ಚಿಲ್ಲರೆ ಹಣ ಎಂಬಂತಾಗಿದೆ. ಆದರೆ ಬೃಹತ್ ಉದ್ದಿಮೆಗಳಿಗೆ ಇದು ತದ್ವಿರುದ್ಧವಾಗಿ ಅಪಾರ ಲಾಭವನ್ನು ತಂದುಕೊಡುತ್ತಿದೆ……

ಅಂದರೆ ಖರ್ಚುಗಳನ್ನು ಹೆಚ್ಚು ಮಾಡಿ ಆ ಹಣವನ್ನು ಕೆಲವೇ ವ್ಯಕ್ತಿಗಳು ಮತ್ತು ಕಂಪನಿಗಳು ಕೇಂದ್ರೀಕೃತ ಮಾಡಿಕೊಂಡು ಜನರ ಆರ್ಥಿಕ ಅಸಮಾನತೆಗೆ ಕಾರಣವಾಗಿ. ಅದೇ ಅಂಶಗಳು ಅವರ ಒಟ್ಟು ಜೀವನಮಟ್ಟ ಕುಸಿಯುವಂತೆ ಮಾಡಿವೆ. ಮಾನಸಿಕ ಮತ್ತು ದೈಹಿಕ ಅಸಹಿಷ್ಣತೆ ಉಂಟಾಗಿ ರೋಗಗಳ ಗೂಡಾಗುವಂತೆ ಮಾಡಿದೆ……

ಒಂದು ಅಧ್ಯಯನದ ಪ್ರಕಾರ ಕುಟುಂಬವೊಂದು ಭಾರತದಲ್ಲಿ ಕಳೆದ 10/15 ವರ್ಷಗಳಲ್ಲಿ ಕುಟುಂಬಕ್ಕಾಗಿ ಖರ್ಚು ಮಾಡುವ ಹಣ ಎರಡು ಪಟ್ಟು ಹೆಚ್ಚಾಗಿದೆ ಹಾಗು ಅತಿಹೆಚ್ಚು ಹಣ ಖರ್ಚು ಮಾಡುವುದು ಶಿಕ್ಷಣ ಮತ್ತು ಆರೋಗ್ಯಕ್ಕೆ……..

ನೋಡಿ, ಇದು ನಮ್ಮ ನೇರ ಅರಿವಿಗೆ ಬಾರದೆ ಪರೋಕ್ಷವಾಗಿ ನಮ್ಮ ಜೇಬುಗಳಿಗೆ ಕತ್ತರಿ ಬೀಳುತ್ತಿದೆ…..

ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಜನರ ವಿವಿಧ ರೀತಿಯ ಪರದಾಟಗಳನ್ನು ನೋಡಿದಾಗ ಇದೆಲ್ಲಾ ಮನದ ಮೂಲೆಯಲ್ಲಿ ನೆನಪಾಗುತ್ತಿದೆ……

ಅಭಿವೃದ್ಧಿ ಎಂಬುದು ನಮ್ಮ ಬದುಕಿನ ನೆಮ್ಮದಿಯನ್ನು ನಾಶ ಮಾಡುತ್ತಾ, ಮೇಲ್ನೋಟಕ್ಕೆ ನಮ್ಮನ್ನು ವಸ್ತು ಸಂಸ್ಕೃತಿಯ ಶ್ರೀಮಂತರಂತೆ ಬಿಂಬಿಸುತ್ತಾ, ಕೊನೆಗೆ ಜೀವನದ ಬಗ್ಗೆಯೇ ಜಿಗುಪ್ಸೆ ಮೂಡುವಂತೆ ಮಾಡುತ್ತದೆ……

ನಮ್ಮೆಲ್ಲರ ಕ್ರಿಯಾತ್ಮಕ ಚಟುವಟಿಕೆಗಳನ್ನು ನಾಶ ಮಾಡಿ ಪರೋಕ್ಷ ಗುಲಾಮಿ ಸಂಸ್ಕೃತಿಗೆ ದಾಸರನ್ನಾಗಿ ಮಾಡುತ್ತಿದೆ……

ಬಹುತೇಕ ವಿದ್ಯಾವಂತ ಯುವ ಜನಾಂಗ ಸ್ವಿಗ್ಗಿ, ಅಮೆಜಾನ್, ಫ್ಲಿಪ್ ಕಾರ್ಟ್, ಜೊಮಾಟೋ, ಕಾಲ್ ಸೆಂಟರ್ ಮುಂತಾದ ಕಂಪನಿಗಳಲ್ಲಿ ಪೋಸ್ಟ್ ಮ್ಯಾನ್ ಗಳ ರೀತಿಯ ಉದ್ಯೋಗಗಳಲ್ಲಿ ಕೇವಲ ಬದುಕುವ ಏಕೈಕ ಉದ್ದೇಶದಿಂದ ತಮ್ಮ ಅಪೂರ್ವ ಶಕ್ತಿಯನ್ನು ವಿನಿಯೋಗಿಸಿದರೆ ಅವರ ಬದುಕಿನ ಸಾರ್ಥಕತೆ ಮತ್ತು ದೇಶದ ಭವಿಷ್ಯದ ಉತ್ಪಾದನಾ ಸಾಮರ್ಥ್ಯ ಏನಾಗಬಹುದು……

ಆದ್ದರಿಂದ ಕೇವಲ ಹೊಟ್ಟೆಪಾಡಿನ ಉದ್ಯೋಗ ಮಾತ್ರ ಅಭಿವೃದ್ಧಿಯಲ್ಲ. ಮನುಷ್ಯನ ಆಸೆ ಕನಸುಗಳು, ಕ್ರಿಯಾತ್ಮಕ ಸಾಧನೆಗಳು ಮತ್ತು ನೆಮ್ಮದಿಯ ಮಟ್ಟ ಹೆಚ್ಚಿ ತೃಪ್ತಿದಾಯಕ ಬದುಕು ನಮ್ಮದಾಗುವಂತ ಸಮಾಜ ನಮ್ಮದಾಗಲಿ ಎಂದು ಈ ಸಂದರ್ಭದಲ್ಲಿ ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068……
9663750451…….

ಆಧುನಿಕ ಜೀವನಶೈಲಿ ಆರ್ಥಿಕ ಅಸಮಾನತೆ ಉದ್ಯೋಗ ಮಾರುಕಟ್ಟೆ ಡಿಜಿಟಲ್ ಪಾವತಿ ನೆಮ್ಮದಿಯ ಬದುಕು. ಮಧ್ಯಮ ವರ್ಗದ ಸಂಕಷ್ಟ ಶಿಕ್ಷಣ ಮತ್ತು ಆರೋಗ್ಯದ ವೆಚ್ಚ ಹಣದುಬ್ಬರ
Follow on Facebook Follow on Instagram
Share. Facebook Twitter WhatsApp Telegram
Previous Articleಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಉದಯ: ಕನ್ನಡಿಗರ ಅಸ್ಮಿತೆ ಮತ್ತು ಪ್ರಾದೇಶಿಕ ಪಕ್ಷದ ಅನಿವಾರ್ಯತೆ
Next Article 08/05/2026 ರ ನಿತ್ಯ ಭವಿಷ್ಯ
Times Of Bayaluseeme Staff
  • Website

Related Posts

ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಉದಯ: ಕನ್ನಡಿಗರ ಅಸ್ಮಿತೆ ಮತ್ತು ಪ್ರಾದೇಶಿಕ ಪಕ್ಷದ ಅನಿವಾರ್ಯತೆ

May 7, 2026

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚಗಿನ ನೀರು ಕುಡಿದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ!

May 6, 2026

ಬದಲಾಗಬೇಕಿದೆ ನಮ್ಮ ನಾಯಕರ ದೃಷ್ಟಿಕೋನ: ಬಡವ-ಬಲ್ಲಿದನ ನಡುವಿನ ಅಂತರಕ್ಕೆ ಕೊನೆ ಎಂದು?

May 5, 2026
Add A Comment
Leave A Reply Cancel Reply

Advertisement
Latest Posts

08/05/2026 ರ ನಿತ್ಯ ಭವಿಷ್ಯ

ಡಿಜಿಟಲ್ ಯುಗದ ಸುಲಭ ಖರ್ಚು – ಕಠಿಣ ಸಂಪಾದನೆ: ಬದಲಾದ ಜೀವನಶೈಲಿಯ ಕಟು ಸತ್ಯ

ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಉದಯ: ಕನ್ನಡಿಗರ ಅಸ್ಮಿತೆ ಮತ್ತು ಪ್ರಾದೇಶಿಕ ಪಕ್ಷದ ಅನಿವಾರ್ಯತೆ

ರಾಸಲೀಲೆ ವಿಡಿಯೋ ಪ್ರಕರಣ: ಡಿಜಿಪಿ ರಾಮಚಂದ್ರ ರಾವ್ ಅಮಾನತು ವಾಪಸ್.!

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.