Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆ -ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಕ್ರೋಶ

ಸುವಾಸನೆಯ ಸಿರಿ, ಹಣ್ಣುಗಳ ರಾಜ ಮಾವು: ಇದರ ಪೌಷ್ಟಿಕಾಂಶ, ವಿವಿಧ ತಳಿಗಳು ಮತ್ತು ಕೃಷಿಯ ಮಹತ್ವದ ಬಗ್ಗೆ ಗೊತ್ತೇ?

ಇದೀಗ 02/05/2026 ರ ನಿತ್ಯ ಭವಿಷ್ಯ 👇

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಮುಖಪುಟ»ಸುವಾಸನೆಯ ಸಿರಿ, ಹಣ್ಣುಗಳ ರಾಜ ಮಾವು: ಇದರ ಪೌಷ್ಟಿಕಾಂಶ, ವಿವಿಧ ತಳಿಗಳು ಮತ್ತು ಕೃಷಿಯ ಮಹತ್ವದ ಬಗ್ಗೆ ಗೊತ್ತೇ?
ಮುಖಪುಟ

ಸುವಾಸನೆಯ ಸಿರಿ, ಹಣ್ಣುಗಳ ರಾಜ ಮಾವು: ಇದರ ಪೌಷ್ಟಿಕಾಂಶ, ವಿವಿಧ ತಳಿಗಳು ಮತ್ತು ಕೃಷಿಯ ಮಹತ್ವದ ಬಗ್ಗೆ ಗೊತ್ತೇ?

Times Of Bayaluseeme StaffBy Times Of Bayaluseeme StaffMay 2, 2026No Comments3 Mins Read
Share WhatsApp Facebook Twitter Threads Telegram
Follow Us
Facebook Instagram
ವಿವಿಧ ಜಾತಿಯ ಮಾವಿನ ಹಣ್ಣುಗಳು ಮತ್ತು ಅವುಗಳ ಆರೋಗ್ಯ ಪ್ರಯೋಜನಗಳ ಮಾಹಿತಿ ನೀಡುವ ಲೇಖನ
Share
WhatsApp Twitter Facebook Telegram

ಮಾವು ನಮ್ಮ ದೇಶದ ಅತ್ಯಂತ ಪ್ರಿಯಕರವಾದ ಹಣ್ಣು. ಅದನ್ನು “ಹಣ್ಣಿನ ರಾಜ” ಎಂದು ಕರೆಯಲಾಗುತ್ತದೆ. ಭಾರತ ಸೇರಿದಂತೆ ಅನೇಕ ಉಷ್ಣವಲಯದ ದೇಶಗಳಲ್ಲಿ ಮಾವು ವ್ಯಾಪಕವಾಗಿ ಬೆಳೆಯುತ್ತದೆ. ಅದರ ಸಿಹಿ, ರುಚಿ, ಸುಗಂಧ ಮತ್ತು ಪೌಷ್ಟಿಕ ಗುಣಗಳಿಂದಲೇ ಇದು ಜನಮನ ಗೆದ್ದಿದೆ. ಉತ್ಸವಗಳು ಮತ್ತು ಕುಟುಂಬ ಸಮಾರಂಭಗಳಲ್ಲಿ ಮಾವು ಪ್ರಮುಖ ಸ್ಥಾನ ಪಡೆದಿದೆ. ಕರ್ನಾಟಕದ ಮಾವುಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿವೆ. ಕರ್ನಾಟಕದ ಉಷ್ಣ ಹವಾಮಾನ ಮತ್ತು ಕೆಂಪು-ಕಪ್ಪು ಮಣ್ಣಿನ ಗುಣವನ್ನು ಹೊಂದಿರುವ ಪ್ರದೇಶವು ಮಾವಿನ ಬೆಳೆಗಾಗಿ ಅತ್ಯಂತ ಅನುಕೂಲಕರವಾಗಿದೆ. ವಿಶೇಷವಾಗಿ ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ಉತ್ತಮ ಗುಣಮಟ್ಟದ ಮಾವುಗಳು ದೊರೆಯುತ್ತವೆ. ಮಾವಿನ ಹಣ್ಣು ಕೃಷಿ, ಕೈಗಾರಿಕೆ ಮತ್ತು ವ್ಯಾಪಾರ ಕ್ಷೇತ್ರಗಳನ್ನು ಸಂಪರ್ಕಿಸುವ ಪ್ರಮುಖ ಬೆಳೆಯಾಗಿದ್ದು. ಇದು ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಬಲ ನೀಡುವುದರ ಜೊತೆಗೆ ದೇಶದ ಒಟ್ಟಾರೆ ಆರ್ಥಿಕತೆಯಲ್ಲೂ ಮಹತ್ವದ ಪಾತ್ರವಹಿಸುತ್ತದೆ.

ಭಾರತದಲ್ಲಿ ಮಾವಿನ ಬೆಳೆ, ಫಲಶೋಧನೆ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಗೆ ಕೃಷಿ ಮತ್ತು ಅಗ್ರಿಕಲ್ಚರಲ್ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತವೆ. ಸ್ಥಳೀಯ ಹವಾಮಾನಕ್ಕೆ ತಕ್ಕಂತೆ ಬೆಳೆಯ ತಂತ್ರಜ್ಞಾನ ರೂಡಿಸುವುದು, ಬೇರುಗಳಿಗೆ ಪೋಷಕಾಂಶ ನೀಡುವುದು, ಹೊಸ ಜಾತಿ-ಸರಣಿ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಸರಿಯಾದ ಜಾತಿ ಆಯ್ಕೆ, ಸಮರ್ಪಕ ನೀರಾವರಿ ಮತ್ತು ಕೀಟ ನಿಯಂತ್ರಣ ಕ್ರಮಗಳಿಂದ ಉತ್ತಮ ಉತ್ಪಾದನೆ ಸಾಧ್ಯವಾಗುತ್ತದೆ. ಕೃಷಿ ವಿಶ್ವವಿದ್ಯಾಲಯ ಅಥವಾ ಸ್ಥಳೀಯ ಕೃಷಿ ಅಧಿಕಾರಿಗಳ ಸಲಹೆ ಪಡೆದುಕೊಂಡು ರೈತರು ತಮ್ಮ ಇಳುವರಿಯಲ್ಲಿ ಇನ್ನಷ್ಟು ಲಾಭ ಕಂಡುಕೊಳ್ಳಬಹುದು.ಮಾವಿನ ಬೆಳೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಪ್ರಾಚೀನ ಕಾಲದಿಂದಲೇ ಇದು ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ವಿಶೇಷ ಸ್ಥಾನ-ಮಾನ ಪಡೆದುಕೊಂಡಿದೆ. ದೇವಾಲಯಗಳ ಅಲಂಕಾರದಲ್ಲಿ, ಹಬ್ಬ-ಹರಿದಿನಗಳಲ್ಲಿ ಹಾಗೂ ಶುಭಕಾರ್ಯಗಳಲ್ಲಿ ಮನೆಯ ಬಾಗಿಲ ಅಲಂಕಾರಿಕ ತೋರಣಗಳನ್ನಾಗಿ ಮಾವಿನ ಎಲೆಗಳನ್ನು ಬಳಸುವುದು ಹಿಂದೂಗಳ ಆಚರಣೆಯಲ್ಲಿ ರೂಢಿಯಾಗಿದೆ ಹಾಗೂ ಶುಭ ಸಂಕೇತವೆಂದು ಪರಿಗಣಿಸಲಾಗಿದೆ.

100 ಗ್ರಾಂ ಮಾವಿನಲ್ಲಿ ಇರುವ ಪೌಷ್ಟಿಕಾಂಶ

  • ಕ್ಯಾಲೊರಿಗಳು – ಸುಮಾರು 60 kcal
  • ಕಾರ್ಬೋಹೈಡ್ರೇಟ್‌ಗಳು – 15 ಗ್ರಾಂ
  • ಸಕ್ಕರೆ – 13–14 ಗ್ರಾಂ
  • ನಾರಿನಾಂಶ (ಫೈಬರ್) – 1.5–2 ಗ್ರಾಂ
  • ಪ್ರೋಟೀನ್ – 0.8 ಗ್ರಾಂ
  • ಕೊಬ್ಬು (ಫ್ಯಾಟ್) – 0.4 ಗ್ರಾಂ

ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸೀ, ವಿಟಮಿನ್ ಈ, ವಿಟಮಿನ್ ಬಿ6, ಫೈಬರ್ ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ. ಕಣ್ಣಿನ ದೃಷ್ಟಿ ಆರೋಗ್ಯಕ್ಕೆ ಉತ್ತಮ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕುಗಳಿಂದ ರಕ್ಷಿಸುತ್ತದೆ, ಚರ್ಮ ಮತ್ತು ಕೂದಲಿಗೆ ಒಳ್ಳೆಯದು, ಮೆದುಳಿನ ಕ್ಷಮತೆಯನ್ನು ಕಾಪಾಡುತ್ತದೆ, ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ, ನೈಸರ್ಗಿಕ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಶಕ್ತಿ ಹಾಗೂ ಚೈತನ್ಯ ನೀಡುತ್ತದೆ, ಪೊಟಾಷಿಯಂ ಮತ್ತು ಮ್ಯಾಗ್ನೀಷಿಯಂ ಹೇರಳವಾಗಿರುವುದರಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು.

ಭಾರತವು ಮಾವಿನ ವೈವಿಧ್ಯತೆಯ ಕೇಂದ್ರವೆಂದೇ ಪ್ರಸಿದ್ಧ. ನಮ್ಮ ದೇಶದಲ್ಲಿ ನೂರಕ್ಕೂ ಹೆಚ್ಚಿನ ವಿವಿಧ ಜಾತಿಯ ಮಾವುಗಳು ಬೆಳೆಯುತ್ತವೆ.

ಪ್ರಮುಖ ಮಾವಿನ ಜಾತಿಗಳು

1. ಹಾಪುಸ್ ಮಾವು

  • ಮಹಾರಾಷ್ಟ್ರದಲ್ಲಿ ಪ್ರಸಿದ್ಧ.
  • ಗಾಢ ಹಳದಿ ಬಣ್ಣ, ಅತ್ಯಂತ ಸಿಹಿ ಮತ್ತು ಸುಗಂಧ ಬರಿತ ಹಣ್ಣು.

2. ಭಂಗನಪಲ್ಲಿ ಮಾವು

  • ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಸಿದ್ಧ.
  • ಉದ್ದವಾದ ಆಕಾರ, ಮೃದುವಾದ ತಿರುಳು ಹೊಂದಿರುವ ಹಣ್ಣು.

3. ದಶೇರಿ ಮಾವು

  • ಉತ್ತರ ಪ್ರದೇಶದಲ್ಲಿ ಪ್ರಸಿದ್ಧ.
  • ತುಂಬಾ ಸಿಹಿ, ಹಾಗೂ ರಸವತಾದ ಮಾವು.

4. ಕೇಸರ್ ಮಾವು

  • ಗುಜರಾತಿನಲ್ಲಿ ಪ್ರಸಿದ್ಧ.
  • ಕೇಸರಿ ಬಣ್ಣ, ಸುಗಂಧಭರಿತ, ಸ್ವಾದಿಷ್ಟಕರ ಹಣ್ಣು.

5. ತೋತಾಪುರಿ ಮಾವು

  • ಕರ್ನಾಟಕ, ತಮಿಳುನಾಡಿನಲ್ಲಿ ಪ್ರಸಿದ್ಧ.
  • ಸಾಮಾನ್ಯ ತುದಿಯಲ್ಲಿ ಚೀಚು ಇರುವ ವಿಶೇಷ ಆಕಾರ ಹೊಂದಿರುವ ಹಣ್ಣು.

6. ಲಂಗ್ರಾ ಮಾವು

  • ಉತ್ತರ ಭಾರತದಲ್ಲಿ ಪ್ರಸಿದ್ಧ.
  • ಹಸಿರು ತೊಲೆ, ಸ್ವಲ್ಪ-ಸಿಹಿ ಸ್ವಲ್ಪ-ಹುಳಿ ರುಚಿ ಹೊಂದಿರುತ್ತದೆ.

7. ಹಿಂಸಗರ್ ಮಾವು

  • ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ಧ.
  • ನಾರು ಕಡಿಮೆ, ಮೃದುವಾದ ತಿರುಳು ಹೊಂದಿರುವ ರುಚಿಕರ ಹಣ್ಣು.

8. ಬಾದಾಮ್ ಮಾವು

  • ಕರ್ನಾಟಕದಲ್ಲಿ ಪ್ರಸಿದ್ಧ.
  • “ಕರ್ನಾಟಕದ ಆಲ್ಫೋನ್ಸೋ” ಎಂದು ಕರೆಯಲಾಗುತ್ತದೆ. ಮೃದುವಾದ ತಿರುಳು ಸಿಹಿಯನ್ನು ಹೊಂದಿದೆ.

9. ನೀಲಂ ಮಾವು

  • ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಪ್ರಸಿದ್ಧ.
  • ತಡವಾಗಿ ಪಕ್ವವಾಗುವ ಜಾತಿ. ಮೃದುವಾದ ಸಿಹಿ ರುಚಿಯನ್ನು ಹೊಂದಿದೆ.

10. ರಸಪುರಿ ಮಾವು

  • ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಪ್ರಸಿದ್ಧಿ.
  • ಹೆಚ್ಚು ರಸದ ಮಾವು, ಜ್ಯೂಸ್ ಮತ್ತು ಶೇಕ್‌ಗಳಿಗೆ ಸೂಕ್ತ.

11. ಮಲ್ಲಿಕಾ/ಮಲ್ಗೋವಾ

  • ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಪ್ರಸಿದ್ಧಿ
  • ದೊಡ್ಡ ಗಾತ್ರ, ಗಟ್ಟಿಯಾದ ತಿರುಳು ಸಿಹಿ ರುಚಿ ಮತ್ತು ಕಡಿಮೆ ನಾರು.

ಮಾವಿನ ಹಣ್ಣಿನ ರುಚಿ, ಪೌಷ್ಟಿಕತೆ ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣಿನ ಸವಿಯೇ ಬೇರೆ ಕಿರಿಯರಿಂದ, ಹಿರಿಯರವರೆಗೂ ಬಲು ಇಷ್ಟಪಟ್ಟು ಸ್ವಾದಿಸುವ ಹಣ್ಣಾಗಿದೆ. ಆದ್ದರಿಂದಲೇ ಮಾವಿನ ಹಣ್ಣನ್ನು “ ಹಣ್ಣುಗಳ ರಾಜ ” ಎಂದು ಕರೆಯಲಾಗುತ್ತದೆ.

ಲೇಖನ
ಡಾ. ಎಂ. ವಸಂತ್ ಆಚಾರ್
Guggalvasu@gmail.com
Mob: 9535006266

ಆರೋಗ್ಯ (Health) ಆಲ್ಫೋನ್ಸೋ (Alphonso) ಕರ್ನಾಟಕ (Karnataka) ಕೃಷಿ (Agriculture) ಡಾ. ಎಂ. ವಸಂತ್ ಆಚಾರ್ (Dr. M Vasant Achar) ಪೌಷ್ಟಿಕಾಂಶ (Nutrition) ಬಾದಾಮಿ ಮಾವು (Badami Mango) ಮಾವು (Mango) ಲೇಖನ (Article). ಹಣ್ಣುಗಳ ರಾಜ (King of Fruits)
Follow on Facebook Follow on Instagram
Share. Facebook Twitter WhatsApp Telegram
Previous Articleಇದೀಗ 02/05/2026 ರ ನಿತ್ಯ ಭವಿಷ್ಯ 👇
Next Article ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆ -ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಕ್ರೋಶ
Times Of Bayaluseeme Staff
  • Website

Related Posts

‘ಹಾರೋ ಹರವೋ ಜಿತೋ’: ಮೊಳಕಾಲ್ಮೂರಿನಲ್ಲಿ ಸಂವಿಧಾನ ಶಿಲ್ಪಿಯ ಜಯಂತೋತ್ಸವ; ಡಾ. ಬಿ. ತಿಪ್ಪೇಸ್ವಾಮಿ ಅವರಿಂದ ರಾಜಕೀಯ ಜಾಗೃತಿಯ ಕರೆ!

April 28, 2026

ರಾಷ್ಟ್ರೀಯತೆ ಮತ್ತು ದೇಶದ್ರೋಹ: ಇಂದಿನ ಭಾರತದ ಗೊಂದಲ ಮತ್ತು ವಾಸ್ತವ

April 27, 2026

ಪ್ರೀತಿ, ಸತ್ಯ ಮತ್ತು ವಾಸ್ತವದ ಸಂಘರ್ಷ: ಜೀವನದ ನಿಜ ಮುಖ

April 26, 2026
Add A Comment
Leave A Reply Cancel Reply

Advertisement
Latest Posts

ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆ -ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಕ್ರೋಶ

ಸುವಾಸನೆಯ ಸಿರಿ, ಹಣ್ಣುಗಳ ರಾಜ ಮಾವು: ಇದರ ಪೌಷ್ಟಿಕಾಂಶ, ವಿವಿಧ ತಳಿಗಳು ಮತ್ತು ಕೃಷಿಯ ಮಹತ್ವದ ಬಗ್ಗೆ ಗೊತ್ತೇ?

ಇದೀಗ 02/05/2026 ರ ನಿತ್ಯ ಭವಿಷ್ಯ 👇

ಇಂದು 01/05/2026 (ಶುಕ್ರವಾರ) ರ ನಿತ್ಯ ಭವಿಷ್ಯ 👇

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.