ಮೊಳಕಾಲ್ಮುರು | ದಿನಾಂಕ : 27-04-2026 ಸೋಮವಾರ ದಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ನೇರಲುಕುಂಟೆ ಗ್ರಾಮದಲ್ಲಿ ಡಾ. ಬಿಆರ್ ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ದೇಶದ ಪ್ರತಿಯೊಬ್ಬರು ಗೌರವಯುತವಾಗಿ ಅನುಸರಿಸಿದರೆ ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿತ್ರದುರ್ಗ ಡಾಕ್ಟರ್ ಬಿ ತಿಪ್ಪೇಸ್ವಾಮಿ ಹೇಳಿದ್ದಾರೆ
ನಾಯಕನಹಟ್ಟಿ ಸಮೀಪದ ನೇರಲಗುಂಟೆ ಗ್ರಾಮದಲ್ಲಿ ಸೋಮವಾರ ಡಾಕ್ಟರ್ ಬಿಆರ್ ಅಂಬೇಡ್ಕರ್ ಸಂರಕ್ಷಣ ಸಮಿತಿ ರೀ ನೂತನ ನಾಮಫಲಕ ಉದ್ಘಾಟನೆ ಮತ್ತು ಡಾ. ಬಿಆರ್ ಅಂಬೇಡ್ಕರ್ ಅವರ 135 ನೇ ಜಯಂತೋತ್ಸವ ಹಾಗೂ ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ 119ನೇ ಜಯಂತೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿ ನಂತರ ಮಾತನಾಡಿದವರು ಡಾ. ಬಿಆರ್ ಅಂಬೇಡ್ಕರ್ ಅವರು ಮಹಿಳೆಯರಿಗಾಗಿ ಸಂವಿಧಾನದಲ್ಲಿ ಹಕ್ಕುಗಳನ್ನು ನೀಡಿದರು ಸಂವಿಧಾನ ಬರೆದಿದ್ದು ಕೇವಲ ಒಂದು ಧರ್ಮಕ್ಕೆ ಒಂದು ಜಾತಿ ಒಂದು ವ್ಯಕ್ತಿಗೆ ಸೀಮಂತವಾದದ್ದಲ್ಲ ಸಮಾಜದ ಕಟ್ಟ ಕಡೆ ವ್ಯಕ್ತಿಗೆ ಸ್ವಾತಂತ್ರ್ಯವನ್ನು ಕೊಟ್ಟಂತ ನಮ್ಮ ಭಾರತದ ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಲೇಬೇಕೆಂದು ಹೇಳಿದರು.
ಏಪ್ರಿಲ್ 14.ರಂದು ಭಾರತದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನ ಪ್ರತಿವರ್ಷ ಈ ದಿನವನ್ನು ದೇಶದಂತ ಅಂಬೇಡ್ಕರ್ ಜಯಂತಿಯಾಗಿ ಆಚರಿಸುತ್ತಾರೆ ಡಾ. ಬಾಬಾ ಸಾಹೇಬ್ ಎಂದು ಜನಪ್ರಿಯರಾದ ಅಂಬೇಡ್ಕರ್ ಭಾರತದ ಸಂವಿಧಾನದ ರೂವಾರಿಯಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹರಿಕಾರರಾಗಿ ಶಾಶ್ವತ ಚಾಪೂ ಮೂಡಿಸಿದ್ದಾರೆ ಅವರ ಜೀವನ ಮತ್ತು ತತ್ವಗಳು ಎಂದು ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿದೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಜಯಂತಿಯನ್ನು 143 ರಾಷ್ಟ್ರಗಳಲ್ಲಿ ಆಚರಣೆ ಮಾಡುವ ಮೂಲಕ ವಿಶೇಷ ಗೌರವ ನೀಡಲಾಗುತ್ತದೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಶಿಕ್ಷಣ ಪಡೆದರೆ ಮಾತ್ರ ಮುಂದು ಹೋಗಲಿಕ್ಕೆ ಸಾಧ್ಯ ಎಂದರು
ಡಾಕ್ಟರ್ ಬಿಆರ್ ಅಂಬೇಡ್ಕರ್ ಕೇವಲ ಒಂದು ಜಾತಿ ಅಥವಾ ಒಂದೇ ಜನಾಂಗೋಸ್ಕರ ಶ್ರಮಿಸದೆ ಪ್ರತಿಯೊಬ್ಬರಿಗೂ ಸಹಾಯ ಆಗುವಂತೆ ಶ್ರಮಿಸಿದರು
ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಸರ್ವಕಾಲಕ್ಕೂ ಸರ್ವರಿಗೂ ಒಪ್ಪುವಂತಹ ಸಂವಿಧಾನವನ್ನು ನಮಗೆ ನೀಡಿದ್ದಾರೆ ಎಂದು ತಿಳಿಸಿದರು ನಾನು ಚಿಕ್ಕ ವಯಸ್ಸಿನಲ್ಲೇ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದೆ ಜನರ ಸಂಪರ್ಕ ನಿರಂತರವಾಗಿಇಟ್ಟುಕೊಂಡಿದ್ದೇನೆ ಎಂದು ಅವರು ಭಾವುಕರಾದರು
ಈ ಸಂದರ್ಭದಲ್ಲಿ ಉಪಸ್ಥಿತರಾದ ಓ. ಶಂಕರ್ ಮಾಜಿ ಅಧ್ಯಕ್ಷರು ಡಾ. ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಕರ್ನಾಟಕ ಸರ್ಕಾರ, ಭಾಗವಹಿಸಿ ಕಾರ್ಯಕ್ರಮ ವನ್ನು ಉದ್ದೇಶಿಸಿ ಸುದೀರ್ಘವಾಗಿ ಮಾತನಾಡಿದರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ವಿಜಯ ಮಾಂತೇಶ್ವರ ಶಾಖ ಮಠ ಸಿದ್ದಯ್ಯನ ಕೋಟೆ ಮೊಳಕಾಲ್ಮೂರು , ನೆಹ ಮಲ್ಲೇಶ್ ಟಿ ಶಿವದತ್ತ ಜಿ.ಎ.ಚ್. ಮೋಹನ್ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿತ್ರದುರ್ಗ
ಶಂಕರ ಸ್ವಾಮಿ ಮಾಜಿ ಅಧ್ಯಕ್ಷರು ಅಬ್ಬೆನಹಳ್ಳಿ ಗ್ರಾಮ ಪಂಚಾಯಿತಿ ಎಸ್ ರಾಜಣ್ಣ ದಲಿತ ಮುಖಂಡರು ಮರಿಪಾಲಯ್ಯ ಚೌಡಪ್ಪ ಪಾಲೇಶ್ ವಿಶ್ವನಾಥ ದಲಿತ ಮುಖಂಡರು ಜೋಗಿಹಟ್ಟಿ ಆರ್ ಬಸಪ್ಪ ಗ್ಯಾರಂಟಿ ಕಮಿಟಿ ಸದಸ್ಯರು ತೊರೆಕೋಲಮ್ಮನಹಳ್ಳಿ
ಡಾಕ್ಟರ್ ಗುರುನಾಥ್ ಭೋಗೇಶ್ ಗೌಡ್ರು ಮುರಾರ್ಜಿ ಮಾದರ ಚೆನ್ನಯ್ಯ ಸ್ವಾಮೀಜಿ ಸಮಿತಿ ಅಧ್ಯಕ್ಷ ಪರಶುರಾಮ್ ಭೀಮನಕೆರೆ ಶಿವಮೂರ್ತಿ ಕುದಾಪುರ ತಿಪ್ಪೇಸ್ವಾಮಿ ಸರ್ಕಲ್ ಇನ್ಸ್ಪೆಕ್ಟರ್ ಕುದಾಪುರಉಮೇಶ್ ನಾಯಕ, ತಿಪ್ಪೇಸ್ವಾಮಿ ಮಾದಿಗ ದಂಡೋರ ಸಮಿತಿಯ ಅಧ್ಯಕ್ಷ ,ದುರ್ಗೇಶ್ ಅಧ್ಯಕ್ಷರು ಓಬಳೇಶ್ ದಲಿತ ಮುಖಂಡರು ಎತ್ತಿನಹಟ್ಟಿ ನಾಗರಾಜ್ ಅಬ್ಬೆನಹಳ್ಳಿಪೊಲೀಸ್ ಇಲಾಖೆಯವರು ನೇರಲಗುಂಟೆ ಗ್ರಾಮದ ಗ್ರಾಮಸ್ಥರು ಹಾಗೂ ಇನ್ನೂ ಇತರರು ಇದ್ದರು
