Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಉಜ್ವಲ ಗ್ರಾಹಕರಿಗೆ ಬಿಗ್ ಶಾಕ್: ಇನ್ಮುಂದೆ ವರ್ಷಕ್ಕೆ ಕೇವಲ 4 ಸಿಲಿಂಡರ್‌ಗೆ ಮಾತ್ರ ಸಬ್ಸಿಡಿ!

ಬದುಕಿನ ನಿಜವಾದ ಶ್ರೀಮಂತಿಕೆ ಯಾವುದು? ಬಿ.ಆರ್.ಮಲ್ಲೇಶ್ ಅವರ ಚಿಂತನಶೀಲ ಲೇಖನ

ದಿನವೂ ‘ಅಧೋಮುಖ ಶ್ವಾನಾಸನ’ ಮಾಡುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ!

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಮುಖಪುಟ»ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ವ್ಯವಸ್ಥೆಯ ಮುಖವಾಡ ಕಳಚಿದ ಕಹಿ ಸತ್ಯ!
ಮುಖಪುಟ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ವ್ಯವಸ್ಥೆಯ ಮುಖವಾಡ ಕಳಚಿದ ಕಹಿ ಸತ್ಯ!

Times Of Bayaluseeme StaffBy Times Of Bayaluseeme StaffMay 15, 2026No Comments4 Mins Read
Share WhatsApp Facebook Twitter Threads Telegram
Follow Us
Facebook Instagram
ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರದ ಬಗ್ಗೆ ಸಾಂಕೇತಿಕ ಚಿತ್ರ.
Share
WhatsApp Twitter Facebook Telegram

ನೀಟ್ ಪ್ರಶ್ನೆ ಪತ್ರಿಕೆ ಬಯಲಾಗುತ್ತಿರುವುದು ಕೇವಲ ಪರೀಕ್ಷಾ ವೈಫಲ್ಯವಲ್ಲ, ಇದು ಇಡೀ ವ್ಯವಸ್ಥೆಯ ನೈತಿಕ ಪತನ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಆರೋಪ-ಪ್ರತ್ಯಾರೋಪಗಳ ನಡುವೆ ಸಾಮಾನ್ಯ ವಿದ್ಯಾರ್ಥಿಯ ಭವಿಷ್ಯ ಏನಾಗುತ್ತಿದೆ? ಬದಲಾವಣೆಯ ಮೂಲವನ್ನು ಹುಡುಕುವ ವಿವೇಕಾನಂದ ಎಚ್. ಕೆ. ಅವರ ವಿಶೇಷ ಲೇಖನ.

ನನಗೆ ಇದೇನು ದೊಡ್ಡ ಆಶ್ಚರ್ಯವಲ್ಲ. ಇಡೀ ಸಮಾಜದ ನಡೆಯುತ್ತಿರುವುದೇ ಮುಖವಾಡಗಳ ಮರೆಯಲ್ಲಿ. ಎಲ್ಲವೂ ಬಟಾ ಬಯಲಾಗುತ್ತಿದೆ. ಇದು ಕಳ್ಳರ ಸಂತೆ. ಆದರೆ ಸಿಕ್ಕಿಹಾಕಿಕೊಂಡವನು ಮಾತ್ರ ಕಳ್ಳ ಎಂದು ನಾವು ಭ್ರಮಿಸಿದ್ದೇವೆ . ಇಡೀ ವ್ಯವಸ್ಥೆಯೇ ತೂತು ಬಿದ್ದಿದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಂದರೇನು ? ಎರಡೂ ಸರ್ಕಾರಿಗಳಿಗೆ ಮತದಾನ ಮಾಡಿ ಆಯ್ಕೆ ಮಾಡುವುದು ನಾವೇ ತಾನೆ. ಎರಡೂ ಸರ್ಕಾರದ ಖಜಾನೆ ತುಂಬಲು ತೆರಿಗೆ Implementation ನಾವೇ ಹೌದೇ. ಎರಡೂ ಸರ್ಕಾರಗಳು ನಡೆಯುತ್ತಿರುವುದು ಒಂದೇ ಸಂವಿಧಾನದ ಅಡಿಯಲ್ಲಿ ಅಲ್ಲವೇ. ಹಾಗಾದರೆ ಸರ್ಕಾರಗಳ ನಡುವೆ ಭಿನ್ನತೆ ಏಕೆ. ಒಬ್ಬರಿಗೊಬ್ಬರು ನಾನು ಸರಿ, ನೀನು ತಪ್ಪು ಎಂದು ಆರೋಪ ಹೊರಿಸುವುದು ಏಕೆ. ನಾವು ಈ ಸರ್ಕಾರಗಳ ಮೇಲೆ ಕೈ ತೋರಿಸಿ ಎರಡೂ ಭಿನ್ನ ಎಂಬುದಾಗಿ ಏಕೆ ಭಾವಿಸಬೇಕು. ಪಕ್ಷ ಯಾವುದೇ ಇರಲಿ ಆಯ್ಕೆ ನಮ್ಮದೇ ತಾನೆ. ಹಾಗಾದರೆ ಸರಿ ತಪ್ಪುಗಳಿಗೆ ಸರ್ಕಾರವನ್ನು ಹೊಣೆ ಮಾಡಲು ಕೇಂದ್ರ, ರಾಜ್ಯ ಎಂದು ಪಲಾಯನವಾದದ ಒಂದು ಮಾರ್ಗ ಹುಡುಕುವುದು ಬೇಡ.

ಸ್ಪರ್ಧಾ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ವಿಷಯ ತಜ್ಞರೊಬ್ಬರು ಕರೆ ಮಾಡಿ
” ಸತತ ಎರಡು ತಿಂಗಳು ಎಲ್ಲಾ ಸಂಪರ್ಕಗಳಿಂದ ದೂರವಿದ್ದು ನಾವು ಕೆಲವು ಮುಖ್ಯ ವಿಷಯ ತಜ್ಞರು ಕಷ್ಟ ಪಟ್ಟು ಪ್ರಾಮಾಣಿಕತೆಯಿಂದ ಸಿದ್ದಪಡಿಸಿದ ಪ್ರಶ್ನೆ ಪತ್ರಿಕೆ ಬಯಲಾಗಿದೆ. ನಮ್ಮ ಮೇಲಿನ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ” ಎಂದರು…..

ಆದರೆ ವಾಸ್ತವ ಏನು ?…..

ಕಳೆದ ಹಲವಾರು ದಶಕಗಳಿಂದ ರಾಜ್ಯ ಮತ್ತು ರಾಷ್ಟ್ರದ ಬೇರೆ ಬೇರೆ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಬಯಲಾಗುತ್ತಲೇ ಇದೆ. ಕೆಲವೊಮ್ಮೆ ಅದು ಬಹಿರಂಗವಾಗಿದೆ, ಮತ್ತೆ ಕೆಲವೊಮ್ಮೆ ಬಹಿರಂಗವಾಗದೆ ಕದ್ದು ಮುಚ್ಚಿ ನಡೆದು ಹೋಗಿದೆ.

ಇನ್ನೂ ಶಿಕ್ಷಣ ಇಲಾಖೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ವ್ಯವಸ್ಥೆ ಕಂಪ್ಯೂಟರೀಕರಣ ಆಗಿರದ ಸಮಯದಲ್ಲಿ ಇದು ಅತ್ಯಂತ ಸಹಜ, ಸ್ವಾಭಾವಿಕ ಘಟನೆಯಾಗಿತ್ತು. ಇಷ್ಟು ಮಾತ್ರವಲ್ಲದೇ ಹಣ ಪಡೆದು ಪಾಸು ಮಾಡುವುದು ಮತ್ತು ಹೆಚ್ಚು ಅಂಕ ಪಡೆಯುವುದು, ಒಬ್ಬರ ಹೆಸರಲ್ಲಿ ಇನ್ನೊಬ್ಬರು ಕದ್ದು ಉತ್ತರ ಬರೆಯುವುದು, ನಕಲಿ ಅಂಕಪಟ್ಟಿ ಸಿದ್ದಪಡಿಸುವುದು ಸಾಮಾನ್ಯವಾಗಿತ್ತು. ಕಂಪ್ಯೂಟರೀಕೃತ ವ್ಯವಸ್ಥೆ ಬಂದ ನಂತರ ಸ್ವಲ್ಪ ಕಡಿಮೆಯಾಗಿದೆ. ಆದರೆ ಬೇರೆ ರೂಪ ಪಡೆದುಕೊಂಡಿದೆ. ನಕಲಿ ಮಾಡುವುದು ಆಗಲೂ ಈಗಲೂ ಅದೇ ರೀತಿ ಇದೆ.

ಆಗಿನಿಂದಲೂ ಪ್ರಶ್ನೆ ಪತ್ರಿಕೆ ತಯಾರು ಮಾಡುವುದು ಯಾರು, ಎಲ್ಲಿ, ಅದು ಹೇಗೆ ಮತ್ತು ಎಲ್ಲಿ ಮುದ್ರಣವಾಗುತ್ತದೆ, ಎಲ್ಲಿ ಸಂಗ್ರಹವಾಗುತ್ತದೆ, ಹೇಗೆ ಹಂಚಿಕೆಯಾಗುತ್ತದೆ, ಯಾರ ನಿಯಂತ್ರಣದಲ್ಲಿ ಇರುತ್ತದೆ ಎಂಬ ಸಂಪೂರ್ಣ ಮಾಹಿತಿ ಇರುವ ಒಂದು ಏಜೆಂಟರ ಪಡೆಯೇ ಇರುತ್ತದೆ. ದೊಡ್ಡ ದೊಡ್ಡ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ತಮ್ಮ ಮಕ್ಕಳ ಅನುಕೂಲಕ್ಕಾಗಿ ಇವರ ಸಂಪರ್ಕದಲ್ಲಿ ಇರುತ್ತಾರೆ. ಎಸ್ ಎಸ್ ಎಲ್ ಸಿ, ಪಿಯುಸಿ, ಇಂಜಿನಿಯರಿಂಗ್, ವೈದ್ಯಕೀಯ, ಎಲ್ ಎಲ್ ಬಿ, ಕೆ.ಪಿ.ಎಸ್.ಸಿ, ಸಿಇಟಿ, ನೀಟ್ ಮುಂತಾದ ಮುಖ್ಯ ಪರೀಕ್ಷೆಗಳು ಇವರ ಗುರಿಯಾಗಿರುತ್ತದೆ.

ಪ್ರತಿ ಬಾರಿ ಪ್ರಶ್ನೆ ಪತ್ರಿಕೆ ಬಯಲಾದ ನಂತರ ಆಯಾಶ ಇಲಾಖೆಗಳು ಹೊಸ ಹೊಸ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಸರಿಯಾಗಿ ಈ ಏಜೆಂಟರುಗಳು ಸಹ ಹೊಸ ಹೊಸ ತಂತ್ರ ಮಾಡುತ್ತಾರೆ. ಕೆಲವರು ಪೋಲೀಸರಿಗೆ ಸಿಕ್ಕಿ ಬೀಳುತ್ತಾರೆ. ಕಿಲಾಡಿಗಳು ತಪ್ಪಿಸಿಕೊಳ್ಳುತ್ತಾರೆ. ಜೊತೆಗೆ ಬಂಧಿತರು ಸ್ವಲ್ಪ ದಿನಗಳ ನಂತರ ಜಾಮೀನು ಪಡೆದು ಮತ್ತೆ ಧಂದೆಯಲ್ಲಿ ತೊಡಗುತ್ತಾರೆ.

ಇಂತಹ ಕೆಟ್ಟ ವ್ಯವಸ್ಥೆಯಲ್ಲಿ ಯಾರಾದರೂ ಮಾಡಬಹುದಾದ್ದರೂ ಏನು ?

ಪಬ್ಲಿಕ್ ಪರೀಕ್ಷೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆ ಎನ್ನುವುದು ಭಾರತದಂತ ದೊಡ್ಡ ಸಂಖ್ಯೆಯ ದೇಶದಲ್ಲಿ ಒಂದು ಬೃಹತ್ ವ್ಯವಸ್ಥೆ. ಕೇವಲ ಶಿಕ್ಷಕರು ಮಾತ್ರವಲ್ಲ ಅಧಿಕಾರಿಗಳು, ಭೋದಕೇತರ ಸಿಬ್ಬಂದಿ, ಶೀಘ್ರಲಿಪಿಗಾರರು, ತಂತ್ರಜ್ಞರು, ಚಾಲಕರು, ತೂಕದ ಕಟ್ಟುಗಳನ್ನು ಸಾಗಿಸುವವರು, ಭದ್ರತಾ ಸಿಬ್ಬಂದಿ ಹೀಗೆ ಹಲವಾರು ಜನರಿರುತ್ತಾರೆ. ಇವರಲ್ಲಿ ಯಾರೋ ಒಬ್ಬರು ಹಣ ಅಥವಾ ಇನ್ಯಾವುದೋ ಆಸೆಗೆ ಕೇವಲ ಮೊಬೈಲಿನಲ್ಲಿ ಒಂದು ಛಾಯಾಚಿತ್ರ ತೆಗೆದಿಟ್ಟುಕೊಂಡರೆ ಮುಗಿಯಿತು. ಎಲ್ಲವೂ ವಿಫಲ.

ನಿಮಗೆ ಇನ್ನೂ ಒಂದು ಪ್ರಶ್ನೆ ಕಾಡಬಹುದು. ಕೆಲವು ವರ್ಷ, ಕೆಲವು ಪರೀಕ್ಷೆಗಳ, ಕೆಲವು ಪತ್ರಿಕೆಗಳು ಮಾತ್ರ ಹೇಗೆ ಬಯಲಾಗುತ್ತದೆ ಎಂದು. ಇಲ್ಲ ಪ್ರತಿ ವರ್ಷವೂ ಒಂದಲ್ಲ ಒಂದು ಪತ್ರಿಕೆ ಬಯಲಾಗಿರುತ್ತದೆ. ಕೆಲವು ಮಾತ್ರ ಹೊರ ಪ್ರಪಂಚಕ್ಕೆ ತಿಳಿಯುತ್ತದೆ. ಉಳಿದವು ಹಾಗೇ ಮುಚ್ಚಿಹೋಗುತ್ತದೆ.

ವಿಷಯ ತಜ್ಞರೇ, ಶೈಕ್ಷಣಿಕ ವಿದ್ವಾಂಸರೆ, ಶಿಕ್ಷಕರೇ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಶಿಕ್ಷಣ ಮತ್ತು ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಪರೀಕ್ಷೆ ಮತ್ತು ಅಂಕಗಳ ಮೂಲಕ ವಿದ್ಯಾರ್ಥಿಗಳ ಸಾಮರ್ಥ್ಯ ಅಳೆಯುವುದು ಒಂದು ಸಣ್ಣ ಅಂಶ ಮಾತ್ರ. ಇಡೀ ವರ್ಷ ಅವರ ಸಂಪೂರ್ಣ ಮನಸ್ಸನ್ನು ನಿಯಂತ್ರಿಸಿ ಅವರ ಬದುಕು ಮತ್ತು ವ್ಯಕ್ತಿತ್ವವನ್ನು ರೂಪಿಸುವುದೇ ಶಿಕ್ಷಣದ ಬಹುದೊಡ್ಡ ಜವಾಬ್ದಾರಿ ಮತ್ತು ಕರ್ತವ್ಯ – ಧರ್ಮ.

ಪ್ರಶ್ನೆ ಪತ್ರಿಕೆ ಬಯಲಾದಾಗ ನಾಚಿಕೆ ಪಡಬೇಕಾಗಿರುವುದು ಸರ್ಕಾರ ಮತ್ತು ಸಮಾಜ. ಕೇವಲ ಶಿಕ್ಷಕರು ಮಾತ್ರವಲ್ಲ.

ನಿಮಗೆ ತಿಳಿದಿರಲಿ ದೇವರ ಅವತಾರವೆಂದು ಭಾವಿಸಲಾದ ವೈದ್ಯರು ಇಂದು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ,

ನೋಟ್ ಬ್ಯಾನ್ ಸಮಯದಲ್ಲಿ ಗೌರವಯುತ ಸ್ಥಾನ ಗಳಿಸಿದ್ದ ಬ್ಯಾಂಕ್ ಅಧಿಕಾರಿಗಳು ನಂಬಿಕೆ ಕಳೆದುಕೊಂಡರು,

ಪತ್ರಕರ್ತರೆಂಬ ಬುದ್ದಿವಂತರು ನಂಬಿಕೆ ಉಳಿಸಿಕೊಳ್ಳುತ್ತಿಲ್ಲ,

ಸರ್ವ ಸಂಗ ಪರಿತ್ಯಾಗಿ ಧರ್ಮಾಧಿಕಾರಿಗಳು ನಂಬಿಕೆ ಉಳಿಸಿಕೊಂಡಿಲ್ಲ,

ತಮ್ಮ ಭಾವನೆಗಳನ್ನು ಅಕ್ಷರಗಳಲ್ಲಿ ಉಕ್ಕಿಸುವ ಸಾಹಿತಿಗಳು ನಂಬಿಕೆ ಉಳಿಸಿಕೊಂಡಿಲ್ಲ,

ಇನ್ನು ರಾಜಕಾರಣಿಗಳು, ಅಧಿಕಾರಿಗಳ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ.

ಹೀಗಿರುವಾಗ ಒಂದು ವರ್ಗದ ಮೇಲೆ ತಪ್ಪುಗಳನ್ನು ಹೊರಿಸುವುದು ಸೂಕ್ತವಲ್ಲ.

ಭ್ರಷ್ಟಾಚಾರ ಎಂಬುದು ಸರ್ವವ್ಯಾಪಿಯಾಗಿದೆ. ಕೇವಲ ಪ್ರಶ್ನೆ ಪತ್ರಿಕೆ ಬಯಲು ಮಾತ್ರವಲ್ಲ ಅದರ ನಂತರ ಉದ್ಯೋಗಕ್ಕಾಗಿ, ಕಾಲೇಜು ಪ್ರವೇಶಕ್ಕಾಗಿ ಅನೇಕ ರೀತಿಯ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆಯುತ್ತದೆ. ಅದೆಲ್ಲವೂ ವ್ಯವಸ್ಥೆಯ ಭಾಗವಾಗಿ ಅದರೊಳಗೆ ಅಂತರ್ಗತವಾಗಿದೆ. ಅದನ್ನು ತಡೆಯುವುದು ಅಷ್ಟು ಸುಲಭವಲ್ಲ.

ಇಡೀ ವ್ಯವಸ್ಥೆಯ ಎಲ್ಲಾ ಕ್ಷೇತ್ರಗಳ ಜನರ ಮನಸ್ಥಿತಿಯ ಪುನರ್ ಅವಲೋಕನದ ಅವಶ್ಯಕತೆ ಇದೆ. ಹೊಸ ಕಾನೂನುಗಳು ಹೊಸ ಅಪರಾಧಗಳಿಗೆ ದಾರಿ ಮಾಡಿಕೊಡುತ್ತಿದೆ. ಏಕೆಂದರೆ ಇದೇ ಜನರೇ ಆ ಕಾನೂನಿಗೂ ಒಳಪಡುತ್ತಾರೆ.
ಬದಲಾಣೆಯ ಮೂಲವನ್ನು ಹುಡುಕುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

Central vs State Government Competitive Exams Scam Corruption in Exams Education System India Moral Values in Education NEET Paper Leak Question Paper Scam Systemic Failure Vivekananda HK.
Follow on Facebook Follow on Instagram
Share. Facebook Twitter WhatsApp Telegram
Previous Article15/05/2026 ರ ನಿತ್ಯ ಭವಿಷ್ಯ
Next Article 16/05/2026 ರ ನಿತ್ಯ ಭವಿಷ್ಯ
Times Of Bayaluseeme Staff
  • Website

Related Posts

ಉಜ್ವಲ ಗ್ರಾಹಕರಿಗೆ ಬಿಗ್ ಶಾಕ್: ಇನ್ಮುಂದೆ ವರ್ಷಕ್ಕೆ ಕೇವಲ 4 ಸಿಲಿಂಡರ್‌ಗೆ ಮಾತ್ರ ಸಬ್ಸಿಡಿ!

June 9, 2026

ಬದುಕಿನ ನಿಜವಾದ ಶ್ರೀಮಂತಿಕೆ ಯಾವುದು? ಬಿ.ಆರ್.ಮಲ್ಲೇಶ್ ಅವರ ಚಿಂತನಶೀಲ ಲೇಖನ

June 9, 2026

ದಿನವೂ ‘ಅಧೋಮುಖ ಶ್ವಾನಾಸನ’ ಮಾಡುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ!

June 9, 2026
Add A Comment
Leave A Reply Cancel Reply

Advertisement
Latest Posts

ಉಜ್ವಲ ಗ್ರಾಹಕರಿಗೆ ಬಿಗ್ ಶಾಕ್: ಇನ್ಮುಂದೆ ವರ್ಷಕ್ಕೆ ಕೇವಲ 4 ಸಿಲಿಂಡರ್‌ಗೆ ಮಾತ್ರ ಸಬ್ಸಿಡಿ!

ಬದುಕಿನ ನಿಜವಾದ ಶ್ರೀಮಂತಿಕೆ ಯಾವುದು? ಬಿ.ಆರ್.ಮಲ್ಲೇಶ್ ಅವರ ಚಿಂತನಶೀಲ ಲೇಖನ

ದಿನವೂ ‘ಅಧೋಮುಖ ಶ್ವಾನಾಸನ’ ಮಾಡುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ!

09/06/2026 ರ ನಿತ್ಯ ಭವಿಷ್ಯ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.