Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಶಿವಮೊಗ್ಗದಲ್ಲಿ ಮತ್ತೊಂದು ದುರಂತ: ನೀರಾನೆ ‘ಹಂಸಿಣಿ’ ಸಾವು

ಸಾಮಾಜಿಕ ಬದಲಾವಣೆಗೆ ರಂಗಭೂಮಿ ಪ್ರಮುಖ ಅಸ್ತ್ರ ; ಡಾ.ಜೆ.ಕರಿಯಪ್ಪ ಮಾಳಿಗೆ

ಅಂಬೇಡ್ಕರ್ ಚಿಂತನೆಗಳು ಇಂದಿಗೂ ಪ್ರಸ್ತುತ: ತಾರಿಣಿ ಶುಭದಾಯಿನಿ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಜಿಲ್ಲಾ ಸುದ್ದಿ»ಚಿತ್ರದುರ್ಗ»ಎನ್‌ಎಸ್‌ಎಸ್ ಶಿಬಿರ: ವಿದ್ಯಾರ್ಥಿಗಳ ಸೇವಾ ಮನೋಭಾವಕ್ಕೆ ಮೆಚ್ಚುಗೆ
ಚಿತ್ರದುರ್ಗ

ಎನ್‌ಎಸ್‌ಎಸ್ ಶಿಬಿರ: ವಿದ್ಯಾರ್ಥಿಗಳ ಸೇವಾ ಮನೋಭಾವಕ್ಕೆ ಮೆಚ್ಚುಗೆ

Times Of Bayaluseeme StaffBy Times Of Bayaluseeme StaffApril 14, 2026No Comments1 Min Read
Share WhatsApp Facebook Twitter Threads Telegram
Follow Us
Facebook Instagram
ಚಿತ್ರದುರ್ಗದ ಜೆ.ಎನ್.ಕೋಟೆಯಲ್ಲಿ ಎನ್‌ಎಸ್‌ಎಸ್ ಶಿಬಿರದ ವೇಳೆ ವಿದ್ಯಾರ್ಥಿಗಳಿಂದ ಶ್ರಮದಾನ ಮತ್ತು ಸ್ವಚ್ಛತಾ ಕಾರ್ಯ.
Share
WhatsApp Twitter Facebook Telegram

ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಮದಕರಿನಾಯಕ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಶ್ರೀಮತಿ ಯಶೋದರಮ್ಮ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಗೂ ಶ್ರೀ ಕೋಟೆ ಸಣ್ಣ ಬೋರಪ್ಪ–ಬೋರಮ್ಮ ಪ್ರಥಮ ದರ್ಜೆ ಕಾಲೇಜಿನಿಂದ ಸಂಯುಕ್ತವಾಗಿ ಜೆ.ಎನ್.ಕೋಟೆಯಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ವಿಶೇಷ ಶಿಬಿರ ಮಂಗಳವಾರ ಯಶಸ್ವಿಯಾಗಿ ಮುಕ್ತಾಯವಾಯಿತು.

 

ಶಿಬಿರದ 6ನೇ ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ದೀಪೋತ್ಸವ ಸಮಾರಂಭಕ್ಕೆ ಅಧ್ಯಕ್ಷತೆ ವಹಿಸಿದ್ದ ಎಸ್. ಸಂದೀಪ್, ಎನ್‌ಎಸ್‌ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ ಎಂದು ಹೇಳಿದರು.

ಗ್ರಾಮಸ್ಥರ ಸಮ್ಮುಖದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, ಯುವಜನರಲ್ಲಿ ಸಮಾಜಮುಖಿ ಚಿಂತನೆ ಬೆಳೆಸುವಲ್ಲಿ ಇಂತಹ ಶಿಬಿರಗಳ ಪಾತ್ರ ಅನನ್ಯ ಎಂದರು.

ಪ್ರಾಂಶುಪಾಲರಾದ ಡಾ. ಲತಾ ಎಸ್. ಮಾತನಾಡಿ, ಆರು ದಿನಗಳ ಅವಧಿಯಲ್ಲಿ ಸ್ವಚ್ಛತಾ ಕಾರ್ಯ, ಶ್ರಮದಾನ, ಆರೋಗ್ಯ ಜಾಗೃತಿ ಮತ್ತು ಪಶು ಸಂಗೋಪನೆ ಕುರಿತ ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮಾಧಿಕಾರಿಗಳಾದ ಡಾ. ಧನಂಜಯ ಆರ್.ಜಿ., ಶ್ರೀನಿವಾಸ ದೊಡ್ಡಮನಿ ಅವರ ನೇತೃತ್ವದಲ್ಲಿ ಜೆ.ಎನ್. ಕೋಟೆ ಹಾಗೂ ನರೇನಹಾಳ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ಮತ್ತು ಶ್ರಮದಾನ ನಡೆಸಲಾಯಿತು. ಊರಿನ ಪ್ರಮುಖ ಬೀದಿಗಳು, ದೇವಸ್ಥಾನಗಳ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಮೆರೆದರು. ಗ್ರಾಮಸ್ಥರು ಹಾಗೂ ಗ್ರಾಮದ ಮುಖಂಡರು ಸಹ ಉತ್ತಮ ಸಹಕಾರ ನೀಡಿದರು.

ಶಿಬಿರದ ಕೊನೆಯ ದಿನ ಧ್ವಜಾರೋಹಣದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ನಿವೃತ್ತ ಪಿಎಸ್‌ಐ ತ್ಯಾಗರಾಜ್ , ವಿದ್ಯಾರ್ಥಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಮತ್ತು ಸಂವಿಧಾನ ಮೌಲ್ಯಗಳ ಕುರಿತು ಸಂದೇಶ ನೀಡಿದರು.

ಆರು ದಿನಗಳ ಶಿಬಿರವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ಮತ್ತು ಗ್ರಾಮೀಣ ಸೇವೆಗೆ ಮಹತ್ವದ ವೇದಿಕೆಯಾಗಿದ್ದು, ಯಶಸ್ವಿಯಾಗಿ ಪೂರ್ಣಗೊಂಡಿತು.

ಎನ್‌ಎಸ್‌ಎಸ್ ಶಿಬಿರ ಚಿತ್ರದುರ್ಗ ಸುದ್ದಿ ಜೆ.ಎನ್.ಕೋಟೆ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ದಾವಣಗೆರೆ ವಿಶ್ವವಿದ್ಯಾಲಯ ದೀಪೋತ್ಸವ. ವಿದ್ಯಾರ್ಥಿಗಳ ಸೇವೆ ಶ್ರಮದಾನ ಸಾಮಾಜಿಕ ಜವಾಬ್ದಾರಿ
Follow on Facebook Follow on Instagram
Share. Facebook Twitter WhatsApp Telegram
Previous Article14/04/2026 ರ ದಿನ ಭವಿಷ್ಯ (ಮಂಗಳವಾರ)
Next Article ಆಧುನಿಕ ಭಾರತದ ಶಿಲ್ಪಿ ಅಂಬೇಡ್ಕರ್: ಬಹುಮುಖ ಸಾಧನೆಗಳ ಸ್ಮರಣೆ
Times Of Bayaluseeme Staff
  • Website

Related Posts

ಸಾಮಾಜಿಕ ಬದಲಾವಣೆಗೆ ರಂಗಭೂಮಿ ಪ್ರಮುಖ ಅಸ್ತ್ರ ; ಡಾ.ಜೆ.ಕರಿಯಪ್ಪ ಮಾಳಿಗೆ

April 14, 2026

ಅಂಬೇಡ್ಕರ್ ಚಿಂತನೆಗಳು ಇಂದಿಗೂ ಪ್ರಸ್ತುತ: ತಾರಿಣಿ ಶುಭದಾಯಿನಿ

April 14, 2026

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಬಣ್ಣನೆ; ಮನುಸ್ಮೃತಿಯ ಮನಸ್ಥಿತಿ ಹೋಗಲಾಡಿಸಿದ ಕ್ರಾಂತಿ ಪುರುಷ ಡಾ.ಬಿ.ಆರ್.ಅಂಬೇಡ್ಕರ್

April 14, 2026
Add A Comment
Leave A Reply Cancel Reply

Advertisement
Latest Posts

ಶಿವಮೊಗ್ಗದಲ್ಲಿ ಮತ್ತೊಂದು ದುರಂತ: ನೀರಾನೆ ‘ಹಂಸಿಣಿ’ ಸಾವು

ಸಾಮಾಜಿಕ ಬದಲಾವಣೆಗೆ ರಂಗಭೂಮಿ ಪ್ರಮುಖ ಅಸ್ತ್ರ ; ಡಾ.ಜೆ.ಕರಿಯಪ್ಪ ಮಾಳಿಗೆ

ಅಂಬೇಡ್ಕರ್ ಚಿಂತನೆಗಳು ಇಂದಿಗೂ ಪ್ರಸ್ತುತ: ತಾರಿಣಿ ಶುಭದಾಯಿನಿ

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಬಣ್ಣನೆ; ಮನುಸ್ಮೃತಿಯ ಮನಸ್ಥಿತಿ ಹೋಗಲಾಡಿಸಿದ ಕ್ರಾಂತಿ ಪುರುಷ ಡಾ.ಬಿ.ಆರ್.ಅಂಬೇಡ್ಕರ್

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.