Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

11/05/2026 ರ ನಿತ್ಯ ಭವಿಷ್ಯ

ಸೋಲಿಲ್ಲದ ಸರದಾರನ ಪಯಣ ಅಂತ್ಯ: ಸಚಿವ ಡಿ. ಸುಧಾಕರ್ ಅಕಾಲಿಕ ನಿಧನಕ್ಕೆ ರಾಜ್ಯಸ್ತಬ್ದ

ಮೈಸೂರು ಕೆಫೆ ಮಾಲೀಕ ವೇದವ್ಯಾಸ ಆಚಾರ್ಯ ( ಅಣ್ಣಾದೊರೈ) ನಿಧನ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ರಾಜ್ಯ»ಹವಾಮಾನದಲ್ಲಿ ತೀವ್ರ ಬದಲಾವಣೆ: ರಾಜ್ಯದಲ್ಲಿ ಮಳೆ–ಗಾಳಿ 
ರಾಜ್ಯ

ಹವಾಮಾನದಲ್ಲಿ ತೀವ್ರ ಬದಲಾವಣೆ: ರಾಜ್ಯದಲ್ಲಿ ಮಳೆ–ಗಾಳಿ 

ಮೃತ್ಯುಂಜಯಾಚಾರ್ ಬಿBy ಮೃತ್ಯುಂಜಯಾಚಾರ್ ಬಿMarch 26, 2026Updated:March 26, 2026No Comments2 Mins Read
Share WhatsApp Facebook Twitter Threads Telegram
Follow Us
Facebook Instagram
Share
WhatsApp Twitter Facebook Telegram

ಹವಾಮಾನದಲ್ಲಿ ತೀವ್ರ ಬದಲಾವಣೆ: ರಾಜ್ಯದಲ್ಲಿ ಮಳೆ–ಗಾಳಿ

ದೇಶದ ವಿವಿಧ ಭಾಗಗಳಲ್ಲಿ ಹವಾಮಾನದಲ್ಲಿ ತೀವ್ರ ಬದಲಾವಣೆ ಕಂಡುಬಂದಿದ್ದು, ಪಶ್ಚಿಮ ಅಲೆಗಳು ಮತ್ತು ದಕ್ಷಿಣ ಮಾರುತಗಳ ಸಂಯೋಜಿತ ಪರಿಣಾಮದಿಂದ ಅನಿಶ್ಚಿತ ವಾತಾವರಣ ನಿರ್ಮಾಣವಾಗಿದೆ. ಉತ್ತರ ಭಾರತದಿಂದ ದಕ್ಷಿಣ ಹಾಗೂ ಈಶಾನ್ಯ ರಾಜ್ಯಗಳವರೆಗೆ ವಿಭಿನ್ನ ಹವಾಮಾನ ಮಾದರಿಗಳು ಒಂದೇ ಸಮಯದಲ್ಲಿ ಕಾಣಿಸುತ್ತಿವೆ.

ಭಾರತೀಯ ಹವಾಮ ಇಲಾಖೆ ಮಾಹಿತಿ ಪ್ರಕಾರ, ಮಾರ್ಚ್ 26ರಿಂದ 30ರವರೆಗೆ ಈ ಹವಾಮಾನ ಚಟುವಟಿಕೆಗಳು ಸಕ್ರಿಯವಾಗಿರಲಿವೆ. ಈ ಅವಧಿಯಲ್ಲಿ ಗಾಳಿಯ ವೇಗ ಗಂಟೆಗೆ 30ರಿಂದ 50 ಕಿ.ಮೀ.ವರೆಗೆ ಹೆಚ್ಚಾಗುವ ಸಾಧ್ಯತೆ ಇದ್ದು, ಕೆಲವೆಡೆ 70 ಕಿ.ಮೀ.ವರೆಗೆ ಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದೆ.

ದೆಹಲಿಯಲ್ಲಿ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಸಂಜೆ ವೇಳೆಗೆ ತುಂತುರು ಮಳೆಯ ಸಾಧ್ಯತೆ ಇದೆ. ಗಾಳಿಯ ವೇಗ 20–30 ಕಿ.ಮೀ. ಇರಬಹುದು.

ಉತ್ತರ ಪ್ರದೇಶದಲ್ಲಿ ಗುಡುಗು ಸಹಿತ ಮಿಂಚು ಮತ್ತು ಆಲಿಕಲ್ಲು ಮಳೆಯ ಎಚ್ಚರಿಕೆ ನೀಡಲಾಗಿದೆ. ಸುಮಾರು 15 ಜಿಲ್ಲೆಗಳಲ್ಲಿ ಗಾಳಿಯ ವೇಗ 50–60 ಕಿ.ಮೀ. ತಲುಪಬಹುದು. ಇದರಿಂದ ಗೋಧಿ ಸೇರಿದಂತೆ ರಬಿ ಬೆಳೆಗಳಿಗೆ ಹಾನಿಯಾಗುವ ಭೀತಿ ಇದೆ.

ಉತ್ತರಖಂಡದ  ರುದ್ರಪ್ರಯಾಗ, ಬಾಗೇಶ್ವರ, ಪಿಥೋರಗಢ, ಚಮೋಲಿ, ಉತ್ತರಕಾಶಿ ಜಿಲ್ಲೆಗಳಲ್ಲಿ ಮಳೆ ಮತ್ತು ಹಿಮಪಾತದ ಎಚ್ಚರಿಕೆ ಇದೆ. ತಾಪಮಾನ ಇಳಿಕೆಯಿಂದ ಶೀತ ಹೆಚ್ಚಾಗುವ ಸಾಧ್ಯತೆ ಇದೆ.

ಹಿಮಾಚಲ ಪ್ರದೇಶದ ಶಿಮ್ಲಾ, ಕುಲ್ಲು, ಕಾಂಗ್ರಾ, ಮಂಡಿ ಭಾಗಗಳಲ್ಲಿ ಮಳೆ ಹಾಗೂ ಹಿಮಪಾತ ಮುಂದುವರಿಯುವ ಸಾಧ್ಯತೆ ಇದೆ. ಭೂಕುಸಿತ ಮತ್ತು ರಸ್ತೆ ತಡೆ ಸಮಸ್ಯೆಗಳ ಸಾಧ್ಯತೆ ಹೆಚ್ಚಾಗಿದೆ.

ಕರ್ನಾಟಕ ಸೇರಿದಂತೆ ಕೇರಳ, ತಮಿಳು ನಾಡು ಮತ್ತು ಆಂದ್ರ ಪ್ರದೇಶದಲ್ಲಿ ರ ಗುಡುಗು ಸಹಿತ ಮಳೆಯ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಕೊಡಗು, ಚಿಕ್ಕಮಗಳೂರು ಭಾಗಗಳಲ್ಲಿ ಮಳೆಯ ಸಾಧ್ಯತೆ ಇದೆ.

ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಸ್ವಲ್ಪ ಬದಲಾವಣೆಗಳೊಂದಿಗೆ ಹವಾಮಾನ ಸಾಮಾನ್ಯವಾಗಿರಬಹುದು. ವಿದರ್ಭ ಮತ್ತು ಮರಾಠವಾಡ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ, ತುಂತುರು ಮಳೆ ಹಾಗೂ ಗಾಳಿ ಬೀಸುವ ಸಾಧ್ಯತೆ ಇದೆ.

ಮುಂದಿನ ಕೆಲವು ದಿನಗಳು ದೇಶಾದ್ಯಂತ ಅಸ್ಥಿರ ಹವಾಮಾನ ಮುಂದುವರಿಯಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಹವಾಮಾನ ಇಲಾಖೆ ಮನವಿ ಮಾಡಿದೆ.

karanataka weather ಚಿತ್ರದುರ್ಗ ಮಳೆ–ಗಾಳಿ ರಾಜ್ಯ ಹವಾಮಾನ
Follow on Facebook Follow on Instagram
Share. Facebook Twitter WhatsApp Telegram
Previous Articleಖಾಕಿ ಬಲೆಗೆ ದೇವಸ್ಥಾನಗಳ ಹುಂಡಿ ಕಳ್ಳರು; ಅಂತರ ಜಿಲ್ಲಾ ಜಾಲ ಪತ್ತೆ
Next Article ಅನುದಾನ ನಿರೀಕ್ಷೆಯಲ್ಲೂ ತಪ್ಪು ಮಾಹಿತಿ: ತೀವ್ರ ತರಾಟೆ
ಮೃತ್ಯುಂಜಯಾಚಾರ್ ಬಿ
  • Website

ಮೃತ್ಯುಂಜಯಾಚಾರ್ ಬಿ ಉಪ ಸಂಪಾದಕರು, ಟೈಮ್ಸ್ ಆಫ್ ಬಯಲುಸೀಮೆ ಮೃತ್ಯುಂಜಯಾಚಾರ್ ಬಿ ಅವರು 'ಟೈಮ್ಸ್ ಆಫ್ ಬಯಲುಸೀಮೆ' (timesofbayaluseeme.com) ಕನ್ನಡ ಸುದ್ದಿ ಪೋರ್ಟಲ್‌ನಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಆಳವಾದ ಆಸಕ್ತಿ ಹೊಂದಿರುವ ಇವರು, ನಿಖರವಾದ ಸುದ್ದಿ ವಿಶ್ಲೇಷಣೆ ಮತ್ತು ಜನಪರ ವರದಿಗಳನ್ನು ನೀಡುವಲ್ಲಿ ಸದಾ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಾದೇಶಿಕ ಸುದ್ದಿಗಳ ಬಗ್ಗೆ ಇವರು ವಿಶೇಷ ಗಮನಹರಿಸುತ್ತಾರೆ.

Related Posts

ರಾಸಲೀಲೆ ವಿಡಿಯೋ ಪ್ರಕರಣ: ಡಿಜಿಪಿ ರಾಮಚಂದ್ರ ರಾವ್ ಅಮಾನತು ವಾಪಸ್.!

May 7, 2026

ಸಮುದ್ರದಾಳದಲ್ಲಿ ಭಾರತದ ಬೃಹತ್ ತ್ರಿವರ್ಣ ಧ್ವಜ ಅನಾವರಣ: ಗಿನ್ನೆಸ್ ದಾಖಲೆ ಬರೆದ ಐತಿಹಾಸಿಕ ಸಾಹಸದಲ್ಲಿ ಕನ್ನಡಿಗ ಶರತ್ ಆರ್. ಅಶೋಕ್ ಭಾಗಿ

May 4, 2026

ಕೇಂದ್ರ ಸರ್ಕಾರದಿಂದ ಶಿಷ್ಟಾಚಾರ ಉಲ್ಲಂಘನೆ -ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಕ್ರೋಶ

May 2, 2026
Add A Comment
Leave A Reply Cancel Reply

Advertisement
Latest Posts

11/05/2026 ರ ನಿತ್ಯ ಭವಿಷ್ಯ

ಸೋಲಿಲ್ಲದ ಸರದಾರನ ಪಯಣ ಅಂತ್ಯ: ಸಚಿವ ಡಿ. ಸುಧಾಕರ್ ಅಕಾಲಿಕ ನಿಧನಕ್ಕೆ ರಾಜ್ಯಸ್ತಬ್ದ

ಮೈಸೂರು ಕೆಫೆ ಮಾಲೀಕ ವೇದವ್ಯಾಸ ಆಚಾರ್ಯ ( ಅಣ್ಣಾದೊರೈ) ನಿಧನ

10/05/2026 ರ ನಿತ್ಯ ಭವಿಷ್ಯ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.