Author: Times Of Bayaluseeme Staff
🔮 23 ಏಪ್ರಿಲ್ 2026ರ ನಿತ್ಯ ಭವಿಷ್ಯ: ಇಂದು ನಿಮ್ಮ ಅದೃಷ್ಟ ಹೇಗಿರಲಿದೆ? ಯಾವ ರಾಶಿಯವರಿಗೆ ಆರ್ಥಿಕ ಲಾಭ? ಮೇಷದಿಂದ ಮೀನದವರೆಗೆ ನಿಮ್ಮ ಇಂದಿನ ದಿನದ ಸಮಗ್ರ ಫಲ ಇಲ್ಲಿದೆ. ತಪ್ಪದೇ ಓದಿ. ಮೇಷ (Aries) ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಕೆಲಸಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ಹೊಸ ಪ್ರಯತ್ನಗಳಿಗೆ ಶುಭ ಸಮಯ. ಕುಟುಂಬದ ಬೆಂಬಲ ಸಿಗುತ್ತದೆ. ವೃಷಭ (Taurus) ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಅನಾವಶ್ಯಕ ಖರ್ಚು ತಪ್ಪಿಸಿ. ಆರೋಗ್ಯದ ಕಡೆ ಗಮನ ಕೊಡಿ. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಸಂತೋಷ ತರಲಿದೆ. ಮಿಥುನ (Gemini) ಸಂವಹನದಲ್ಲಿ ಜಾಗರೂಕರಾಗಿರಿ. ಮಾತಿನಿಂದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಬರಬಹುದು. ಕಟಕ (Cancer) ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ದಿನ. ಮನಸ್ಸಿಗೆ ಶಾಂತಿ ಸಿಗುತ್ತದೆ. ಆರ್ಥಿಕವಾಗಿ ಲಾಭದ ಸೂಚನೆ ಇದೆ. ಸಿಂಹ (Leo) ನಿಮ್ಮ ನಾಯಕತ್ವ ಗುಣಗಳು ಹೊಳೆಯುವ ದಿನ. ಕೆಲಸದ ಜಾಗದಲ್ಲಿ ಪ್ರಶಂಸೆ ಸಿಗಬಹುದು. ಹೊಸ ಪರಿಚಯಗಳು…
ಚಿತ್ರದುರ್ಗ : ಭೋಧನೆಯಲ್ಲಿ ರಂಗಭೂಮಿಯ ಕೌಶಲ್ಯಗಳ ಮಹತ್ವದ ಅರಿವಿರಬೇಕು. ದಾರ್ಶನಿಕರ ಜೀವನ ಚರಿತ್ರೆಗಳ ಬದುಕಿನ ಮೌಲ್ಯಗಳು ಉತ್ತಮ ಶಿಕ್ಷಕನ ಸ್ವತ್ತಾಗಿರಬೇಕು.ಶಿಕ್ಷಕರಿಗೆ ಬೋಧನಾ ಪ್ರೇರಣೆ ನೀಡುವುದರಿಂದ ಶೈಕ್ಷಣಿಕ ಗುಣಮಟ್ಟದ ಉತ್ತಮ ಫಲಿತಾಂಶವನ್ನು ಕಾಣಬಹುದು ಎಂದು ಶಿಕ್ಷಣತಜ್ಞ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ತಿಳಿಸಿದರು. ನಗರದ ಕೋಟೆರಸ್ತೆಯಲ್ಲಿರುವ ರಾಘವೇಂದ್ರ ಶಿಕ್ಷಣ ವಿದ್ಯಾಲಯದಲ್ಲಿ ಬುಧವಾರ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಶಿಕ್ಷಣದಲ್ಲಿ ರಂಗಕಲೆ -2026 ತರಬೇತಿ ಕಾರ್ಯಾಗಾರ, ರಂಗಗೀತೆ, ಉಪನ್ಯಾಸ, ಕವಿಕಾವ್ಯ ಪರಿಚಯ ಮತ್ತು ನಾಟಕ ಪ್ರದರ್ಶನದಲ್ಲಿ ಶೈಕ್ಷಣಿಕ ರಂಗಕಲೆಯ ಮಹತ್ವ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಸೀಮಿತವಾಗದೆ ಅಂತರಂಗ ಮತ್ತು ಬಹಿರಂಗದ ಸದೃಢವಾದ ಶಿಕ್ಷಣದ ಸೌಂದರ್ಯ ಪ್ರಜ್ಞೆಯನ್ನು ಸಂಪಾದಿಸಬೇಕು ಎಂದರು. ಆಳವಾದ ಅಧ್ಯಯನ ಬೋಧನೆಗೆ ಅನುಕೂಲವಾಗುತ್ತದೆ. ಮಕ್ಕಳಿಗೆ ಮುದನೀಡುವ ಶಿಕ್ಷಕರ ವಾಕ್‌ಚಾತುರ್ಯ ಪರಿಣಾಮಕಾರಿ ಕಲಿಕೆಗೆ ಸಹಾಯಕವಾಗುತ್ತದೆ. ಶಿಕ್ಷಕರ ದೇಹದ ನಿಲುವು, ಸ್ಪಷ್ಟವಾದ ಮಾತಿನ ಏರಿಳಿತ, ಪಾಠೋಪಕರಣಗಳ ಬಳಕೆ ಮತ್ತು ಭಾವಾಭಿವ್ಯಕ್ತಿ…
ಚಳ್ಳಕೆರೆ-22 ದಿನೆ,ದಿನೇ ಏರುತ್ತಿರುವ ನೆತ್ತಿ ಸುಡುವ ಬಿಸಿಲು, ಬಾನಿನಿಂದ ಧರೆಗೆ ಬೆಂಕಿ ಸುರಿಯುವಷ್ಟು ಉಷ್ಣತೆ ಪ್ರತಿನಿತ್ಯ ಭಾಸವಾಗಿತ್ತಿದೆ. ಜನರು ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ತಂಪುಪಾನಿಯ, ಕಲಂಗಡಿ, ಎಳನೀರು, ತಾಳೆಕಾಯಿಯತ್ತ ಮೊರೆ ಹೋಗುತ್ತಿದ್ದಾರೆ. ಇದರ ಜೊತೆಯಲ್ಲಿ ತಾಲೂಕಿನ ಅತ್ಯಂತ 40 ಡಿಗ್ರಿ ಎಷ್ಟು ತಾಪಮಾನ ಹೆಚ್ಚಿ ಜನ, ಜಾನುವಾರುಗಳನ್ನ ಹೈರಾಣಾಗಿಸಿದೆ. ಪ್ರತಿನಿತ್ಯ ಬಿಸಿಲು ಏರಿದಂತೆ ಧರೆ ಕಾದಕಾವಲಿಯಂತಾಗಿ ಉಷ್ಣಾಂಶ ಹೆಚ್ಚಿದೆ, ಬಿಸಿಗಾಳಿಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮನುಷ್ಯರಿಗೆ ಮಾತ್ರವಲ್ಲದೆ ಜಾನುವಾರುಗಳು ಸಹ ಬಿಸಿಲಿನ ತಾಪಕ್ಕೆ ನರಳಿ ಹೋಗಿವೆ. ಉಷ್ಟಾಂಶ ಏರಿಕೆಯಿಂದ ಆರೋಗ್ಯದ ಮೇಲೆಕೆಟ್ಟ ಪರಿಣಾಮ ಬೀರುತ್ತಿದೆ. ಸುಡುಬಿಸಿಲಿನಿಂದ ತಪ್ಪಿಸಿಕೊಳ್ಳುಲು ನೆರಳು ಹುಡುಕಾಟ ಸ್ಥಿತಿ ನಗರದಲ್ಲಿದೆ. ನೀರು, ನೆರಳಿಗೆ ಹುಡುಕಾಟ ;- ಆಂದ್ರಗಡಿಭಾಗಕ್ಕೆ ಹೊಂದಿಕೊಂಡಿರುವ ಚಳ್ಳಕೆರೆ ತಾಲ್ಲೂಕಿಗೆ ಪ್ರತಿನಿತ್ಯ ಸುತ್ತಮುತ್ತಲ 40ಗ್ರಾಮಗಳಿಂದ ನೂರಾರು ಜನರು ವಿವಿಧ ಕೆಲಸ ಕಾರ್ಯಗಳಿಗೆ, ಶಾಲಾ ಲಾಲೇಜಿಗೆ ಬರುತ್ತಾರೆ. ನಗರಕ್ಕೆ ಬರುವ ಜನರಿಗೆ ನೀರು, ನೆರಳಿನ ವ್ಯವಸ್ಥೆಯೇ ಇಲ್ಲವಾಗಿದೆ. ಬಿಸಿಲಿಂದ ಬರುವ ಪ್ರಯಾಣಿಕರಿಗೆ, ಜನರಿಗೆ ನಗರದ ಯಾವ…
ಚಿತ್ರದುರ್ಗ: ನೆರೆಯ ಆಂಧ್ರ ಪ್ರದೇಶದಲ್ಲಿ ತನ್ನದೇ ಆದ ರಾಜಕೀಯ ಪ್ರಭಾವ ಮೂಡಿಸಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಾರಥ್ಯದ ‘ಜನಸೇನಾ ಪಕ್ಷ’ ಈಗ ಚಿತ್ರದುರ್ಗದ ಮೂಲಕ ತಳಮಟ್ಟದಿಂದ ಪಕ್ಷ ಸಂಘಟನೆಗೆ ಸಜ್ಜಾಗಿದೆ ಎಂದು ಪಕ್ಷದ ಸದಸ್ಯ ಡಿ.ಬಸವರಾಜ್ (ಬಿ.ಟಿ.ರಾಜ್) ತಿಳಿಸಿದ್ದಾರೆ. ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಕೋಟೆನಾಡು ಚಿತ್ರದುರ್ಗದ ಮೂಲಕ ಪಕ್ಷವು ರಾಜ್ಯ ಪ್ರವೇಶದ ಅಧಿಕೃತ ಘೋಷಣೆ ಮಾಡುತ್ತಿದ್ದು, ಇದರೊಂದಿಗೆ ಸದಸ್ಯತ್ವ ಅಭಿಯಾನಕ್ಕೂ ಭರ್ಜರಿ ಚಾಲನೆ ನೀಡಲಾಗುತ್ತಿದೆ. ಚಿತ್ರದುರ್ಗದ ಚಳ್ಳಕೆರೆ ರಸ್ತೆಯಲ್ಲಿರುವ ಎಸ್‌ಜಿ ಕನ್ವೆನ್ಶನ್ ಹಾಲ್ ನಲ್ಲಿ ಏಪ್ರಿಲ್ 25 (ಶನಿವಾರ) ರಂದು ಬೆಳಿಗ್ಗೆ 9.30ರಿಂದ ಈ ಮಹತ್ವದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಆಂಧ್ರ ಪ್ರದೇಶ ವಿಧಾನ ಪರಿಷತ್ ಸದಸ್ಯ ನಾಗಬಾಬು ಹಾಗೂ ಜನಾಸೇನಾ ಪಕ್ಷದ ಆಂಧ್ರ ಪ್ರದೇಶ ಪ್ರಧಾನ ಕಾರ್ಯದರ್ಶಿ ರಾಮ್ ತಲ್ಲೂರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪಕ್ಷದ ಸಂಘಟನೆಗೆ ಬಲ ನೀಡುವ ಪ್ರಮುಖ ಹುದ್ದೆಗಳ ಘೋಷಣೆ ನಡೆಯಲಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಆಯಾಮಗಳನ್ನು ತರುವ ಪ್ರಯತ್ನಕ್ಕೆ ಚಾಲನೆ ಸಿಗಲಿದೆ.…
ಲೇಸರ್ ಕಿರಣಗಳ ಈ ಆಧುನಿಕ ಯುಗದಲ್ಲಿ ಇನ್ನೂ ಪಟಾಕಿ ದುರಂತಗಳಿಗೆ ಬಡ ಜೀವಗಳು ಬಲಿಯಾಗುತ್ತಿರುವುದು ನಮ್ಮ ಸಮಾಜದ ಅಸಹಾಯಕತೆಯನ್ನು ತೋರಿಸುತ್ತದೆ. ಪಟಾಕಿ ನಿಷೇಧದ ಅಗತ್ಯತೆ ಮತ್ತು ಪರಿಸರ ಸ್ನೇಹಿ ಆಚರಣೆಯ ಬಗ್ಗೆ ವಿವೇಕಾನಂದ ಎಚ್. ಕೆ. ಅವರ ವಿಶೇಷ ಲೇಖನ. ಲೇಸರ್ ಗಳ ಯುಗದಲ್ಲಿ ಪಟಾಕಿಗಳಿಗಾಗಿ ಜೀವ ತೆರುತ್ತಿರುವ ಸಮಾಜದಲ್ಲಿ ನಾವಿದ್ದೇವೆ ಎಂದರೆ ಎಷ್ಟು ಅನಾಗರಿಕ ಸಮಾಜ ನಮ್ಮದು ಎಂದು ಊಹಿಸಿ. ಒಂದರ ಹಿಂದೆ ಒಂದು ಪಟಾಕಿ ದುರಂತಗಳು ದೇಶದಾದ್ಯಂತ ಸುದ್ದಿಯಾಗುತ್ತಿವೆ. ಅದನ್ನು ಕೇಳಿ ಕರುಳು ಹಿಂಡಿದಂತಾಗುತ್ತಿದೆ. ಬಹುತೇಕ ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ನಿಸ್ಸಂಶಯವಾಗಿ ಕರೆಯಬಹುದು. ಹಿಂದೆ ವಿದ್ಯುತ್ ಇಲ್ಲದಿದ್ದಾಗ ಬೆಳಕೆಂಬುದು ಅಪ್ಯಾಯಮಾನ ಆನಂದವನ್ನು ನೀಡುತ್ತಿತ್ತು. ಆಕಾಶದಲ್ಲಿಯ ಹುಣ್ಣಿಮೆಯ ಚಂದ್ರ, ಆ ಮಿಂಚಿನ ನಕ್ಷತ್ರಗಳು ನಮಲ್ಲಿ ನವೋಲ್ಲಾಸ ತುಂಬುತ್ತಿದ್ದವು. ಮನಸ್ಸು ಚೇತೋಹಾರಿ ಆಗಿರುತ್ತಿತ್ತು. ತದನಂತರ ಒಂದಷ್ಟು ರಾತ್ರಿಯ ಫೈರ್ ಕ್ಯಾಂಪ್ ಗಳು, ಬುಡ್ಡಿ ದೀಪಗಳು, ಕ್ಯಾಂಡಲ್ ಗಳು ನಮಗೆ ಬೆಳಕಿನ ಸುಂದರ ಅನುಭವ ನೀಡುತ್ತಿದ್ದವು ಅನಂತರ ವಿದ್ಯುತ್ ಸಂಶೋಧನೆಯಾಯಿತು.…
ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಹಣ್ಣು (Watermelon) ಸೇವಿಸುವುದು ದೇಹಕ್ಕೆ ತುಂಬಾ ಉಪಯುಕ್ತ. ಇದು ಕೇವಲ ತಂಪು ನೀಡುವುದಲ್ಲ, ಹಲವಾರು ಆರೋಗ್ಯ ಲಾಭಗಳನ್ನು ಕೊಡುತ್ತದೆ. 🍉 ಕಲ್ಲಂಗಡಿ ಹಣ್ಣಿನ ಉಪಯೋಗಗಳು: 1. ದೇಹಕ್ಕೆ ತಂಪು ನೀಡುತ್ತದೆ ಕಲ್ಲಂಗಡಿಯಲ್ಲಿ ಸುಮಾರು 90% ಕ್ಕಿಂತ ಹೆಚ್ಚು ನೀರಿನ ಅಂಶವಿರುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಬೇಸಿಗೆಯಲ್ಲಿ ಡಿಹೈಡ್ರೇಶನ್ ತಪ್ಪಿಸಲು ಸಹಾಯಕ. 2. ನೀರಿನ ಕೊರತೆ ನಿವಾರಣೆ ಬೆವರು ಮೂಲಕ ಕಳೆದುಹೋಗುವ ನೀರನ್ನು ಪೂರೈಸುತ್ತದೆ. ದೇಹ ಹೈಡ್ರೇಟ್ ಆಗಿರಲು ಉತ್ತಮ. 3. ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಇದಲ್ಲಿರುವ ವಿಟಮಿನ್ A ಮತ್ತು C ಚರ್ಮವನ್ನು ಆರೋಗ್ಯಕರವಾಗಿಡುತ್ತವೆ. ಚರ್ಮದ ಹೊಳಪು ಹೆಚ್ಚುತ್ತದೆ. 4. ಹೃದಯ ಆರೋಗ್ಯಕ್ಕೆ ಸಹಾಯಕ ಕಲ್ಲಂಗಡಿಯಲ್ಲಿ ಲೈಕೋಪೀನ್ (Lycopene) ಇರುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. 5. ಜೀರ್ಣಕ್ರಿಯೆ ಸುಧಾರಣೆ ನೀರಿನ ಅಂಶ ಮತ್ತು ಫೈಬರ್ ಇರುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. 6. ತೂಕ ನಿಯಂತ್ರಣಕ್ಕೆ ಸಹಾಯ ಕ್ಯಾಲೊರಿಗಳು ಕಡಿಮೆ ಇರುವುದರಿಂದ ತೂಕ ಇಳಿಸಿಕೊಳ್ಳುವವರಿಗೆ ಉತ್ತಮ ಆಹಾರ. 7.…
22 ಏಪ್ರಿಲ್ 2026ರ ನಿತ್ಯ ಭವಿಷ್ಯ: ಇಂದು ನಿಮ್ಮ ರಾಶಿಫಲ ಹೇಗಿದೆ? ಮೇಷ ರಾಶಿಯವರಿಗೆ ಹೊಸ ಕೆಲಸದ ಚಾಲನೆ, ವೃಷಭಕ್ಕೆ ಆರ್ಥಿಕ ಜಾಗ್ರತೆ ಹಾಗೂ ಮೀನ ರಾಶಿಯವರಿಗೆ ಧನಲಾಭದ ಮುನ್ಸೂಚನೆ ಇದೆ. ಪೂರ್ಣ ವಿವರಗಳಿಗಾಗಿ ಓದಿ. ಮೇಷ (Aries) ಇಂದು ನಿಮ್ಮಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಹೊಸ ಕೆಲಸಗಳಿಗೆ ಚಾಲನೆ ನೀಡಲು ಉತ್ತಮ ದಿನ. ಆದರೆ ತುರ್ತು ನಿರ್ಧಾರಗಳನ್ನು ತಪ್ಪಿಸಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ವೃಷಭ (Taurus) ಆರ್ಥಿಕವಾಗಿ ಸ್ವಲ್ಪ ಜಾಗ್ರತೆ ಅಗತ್ಯ. ಅನಾವಶ್ಯಕ ಖರ್ಚುಗಳನ್ನು ನಿಯಂತ್ರಿಸಿ. ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಸಹಕಾರ ಉತ್ತಮವಾಗಿರುತ್ತದೆ. ಮಿಥುನ (Gemini) ಸ್ನೇಹಿತರ ಸಹಾಯದಿಂದ ಹೊಸ ಅವಕಾಶಗಳು ದೊರೆಯಬಹುದು. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಪ್ರಯಾಣದ ಯೋಗವಿದೆ. ಕಟಕ (Cancer) ಮನಸ್ಸಿನಲ್ಲಿ ಸ್ವಲ್ಪ ಅಶಾಂತಿ ಕಾಣಿಸಬಹುದು. ಧೈರ್ಯದಿಂದ ಮುಂದೆ ಸಾಗಿದರೆ ಎಲ್ಲವೂ ಸರಿಯಾಗುತ್ತದೆ. ಆರೋಗ್ಯದ ಕಡೆ ಗಮನ ಕೊಡಿ. ಸಿಂಹ (Leo) ಇಂದು ನಿಮ್ಮ ನಾಯಕತ್ವ ಗುಣ ಮೆರೆದಿಡುತ್ತದೆ. ಕೆಲಸದಲ್ಲಿ ಮೆಚ್ಚುಗೆ ಸಿಗುತ್ತದೆ. ಹಿರಿಯರಿಂದ ಮಾರ್ಗದರ್ಶನ ದೊರೆಯಲಿದೆ.…
ಇಂದಿನ ರಾಶಿ ಭವಿಷ್ಯ (21/04/2026): ಮೇಷ ರಾಶಿಯವರಿಗೆ ಹೊಸ ಉತ್ಸಾಹ, ವೃಷಭ ರಾಶಿಯವರಿಗೆ ಕೌಟುಂಬಿಕ ಸುಖ ಮತ್ತು ಸಿಂಹ ರಾಶಿಯವರಿಗೆ ಉದ್ಯೋಗದಲ್ಲಿ ಮೆಚ್ಚುಗೆ! ನಿಮ್ಮ ರಾಶಿಯ ಇಂದಿನ ಭವಿಷ್ಯ ಮತ್ತು ಶುಭ-ಅಶುಭಗಳ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ. ಮೇಷ (Aries): ಇಂದು ನಿಮ್ಮಲ್ಲಿ ಹೊಸ ಉತ್ಸಾಹ ಕಾಣಿಸಿಕೊಳ್ಳಲಿದೆ. ಕೆಲಸದಲ್ಲಿ ಮುಂದಾಳತ್ವ ತೋರಿಸಿದರೆ ಯಶಸ್ಸು ನಿಮ್ಮದಾಗುತ್ತದೆ. ಹಣಕಾಸಿನಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ. ವೃಷಭ (Taurus): ಕುಟುಂಬದ ಜೊತೆ ಉತ್ತಮ ಸಮಯ ಕಳೆಯುವ ಅವಕಾಶ ಸಿಗಲಿದೆ. ಹಳೆಯ ಸಮಸ್ಯೆಗಳು ನಿವಾರಣೆಯಾಗುವ ಸೂಚನೆ ಇದೆ. ಆರೋಗ್ಯದ ಕಡೆ ಗಮನ ಕೊಡಿ. ಮಿಥುನ (Gemini): ನಿಮ್ಮ ಮಾತಿನ ಕೌಶಲ್ಯ ಇಂದು ನಿಮಗೆ ಸಹಾಯ ಮಾಡಲಿದೆ. ಹೊಸ ಪರಿಚಯಗಳು ಭವಿಷ್ಯದಲ್ಲಿ ಉಪಯುಕ್ತವಾಗಬಹುದು. ಸಣ್ಣ ಪ್ರಯಾಣ ಸಾಧ್ಯ. ಕಟಕ (Cancer): ಮನಸ್ಸಿನಲ್ಲಿ ಗೊಂದಲ ಇರಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಿರಿಯರ ಸಲಹೆ ಪಡೆಯುವುದು ಉತ್ತಮ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಸಿಂಹ (Leo): ಉದ್ಯೋಗದಲ್ಲಿ ಮೆಚ್ಚುಗೆ ದೊರೆಯಲಿದೆ. ನಿಮ್ಮ ಪರಿಶ್ರಮಕ್ಕೆ ಫಲ…
ಬೆಂಗಳೂರು: ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಟೈಮ್ಸ್ ಆಫ್ ಬಯಲುಸೀಮೆ’ ಪತ್ರಿಕೆಯ ‘ಬಸವ ಬಯಲು – ಜನಮನದ ಬೆಳಕು’ ವಿಶೇಷಾಂಕವನ್ನು ಬಿಡುಗಡೆ ಮಾಡಿದರು. ಬಸವಣ್ಣನವರ ತತ್ವಗಳು ಮತ್ತು ಶರಣರ ಜೀವನ ಮೌಲ್ಯಗಳನ್ನು ಸಾರುವ ಈ ಸಂಚಿಕೆಯ ಪೂರ್ಣ ವಿವರ ಇಲ್ಲಿದೆ. ಬಸವ ಜಯಂತಿಯ ಪಾವನ ಕ್ಷಣಗಳಲ್ಲಿ, ಕಾಲದ ಮಡಿಲಲ್ಲಿ ಸದಾ ಹೊಸದಾಗಿ ಅರಳುವ ಜಗಜ್ಯೋತಿ ಬಸವಣ್ಣನವರ ಚಿಂತನೆಗಳಿಗೆ ನಮನ ಸಲ್ಲಿಸುವಂತೆ ಟೈಮ್ಸ್ ಆಫ್ ಬಯಲುಸೀಮೆ ಕನ್ನಡ ದಿನಪತ್ರಿಕೆ ಹೊರ ತಂದಿರುವ ‘ಬಸವ ಬಯಲು – ಜನಮನದ ಬೆಳಕ’ ವಿಶೇಷಾಂಕವು ಸೋಮವಾರ ನಗರದಲ್ಲಿ ಅನಾವರಣಗೊಂಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿ ಬಿಡುಗಡೆಗೊಂಡ ಈ ಸಂಚಿಕೆ, ಕೇವಲ ಒಂದು ಪ್ರಕಾಶನವಾಗಿಯೇ ಅಲ್ಲ, ಬಸವ ತತ್ವಗಳ ಬೆಳಕನ್ನು ಮತ್ತೆ ಜನಜೀವನದೊಳಗೆ ಹರಡುವ ಸಂಕೇತವಾಗಿ ಮೂಡಿಬಂದಿತು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಉಪಸ್ಥಿತಿ ಈ ಅನಾವರಣ ಕ್ಷಣ, ಬಸವ ಜಯಂತಿಯ ಅರ್ಥವನ್ನು ಮತ್ತಷ್ಟು ಆಳವಾಗಿ ಮನಸ್ಸಿಗೆ ಮುದ್ರಿಸುವಂತಿತ್ತು. ಪದಗಳಲ್ಲದೇ, ಆ ಕ್ಷಣದ ಮೌನವೇ…
ಅಕ್ಷಯ ತೃತೀಯದ ಕೊಳ್ಳುಬಾಕ ಸಂಸ್ಕೃತಿಯ ಅಬ್ಬರದಲ್ಲಿ ಬಸವಣ್ಣನವರ ಸಮಾನತೆಯ ಆಶಯಗಳು ಮರೆಯಾಗುತ್ತಿವೆಯೇ? ಆಧುನಿಕ ಸೌಲಭ್ಯಗಳ ನಡುವೆಯೂ ಮನುಷ್ಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾನೆಯೇ? ವಿವೇಕಾನಂದ ಎಚ್. ಕೆ. ಅವರ ವಿಶೇಷ ಲೇಖನ ಇಲ್ಲಿದೆ. ನಮ್ಮ ಹಿಂದಿನ ತಲೆಮಾರಿನವರಿಗೆ ಹೋಲಿಸಿಕೊಂಡರೆ ಎಷ್ಟೊಂದು ಅದೃಷ್ಟವಂತರು ನಾವು. ಎಲ್ಲ ವಿಷಯದಲ್ಲೂ ಎಷ್ಟೊಂದು ಆಯ್ಕೆಗಳಿವೆ ನಮಗೆ. ಹಿಂದೆ ಒಂದು ಹೊತ್ತು ಊಟಕ್ಕೂ ಗತಿ ಇರಲಿಲ್ಲ. ಈಗ ಒಂದು ಸಣ್ಣ ಹೋಟೆಲಿನಲ್ಲಿ ಸಹ ಹಲವಾರು ರೀತಿಯ ಭಕ್ಷ್ಯ ಭೋಜನಗಳ ಪಟ್ಟಿಯೇ ಇರುತ್ತದೆ. ಆಹಾರದ ವೈವಿಧ್ಯತೆ ಅಪಾರ. ಅನ್ನ, ಸಾರು, ಮುದ್ದೆ, ರೊಟ್ಟಿ, ಉಪ್ಪು ಸಾರಿನಿಂದ ಇಂದು ನೂರಾರು ವಿಶೇಷ ಖಾದ್ಯಗಳ ಆಹಾರ ಪದ್ಧತಿ ಸಾಮಾನ್ಯ ಜನರ ಕೈಗೆ ನಿಲುಕುವಂತೆ ಆಗಿದೆ. ನಾವು ಅದೃಷ್ಟವಂತರಲ್ಲವೇ. ಕೇವಲ ಪಟಾಪಟಿ ಚಡ್ಡಿ, ಪಂಚೆ, ಪೈಜಾಮ, ಕುರ್ತಾ, ಸೀರೆ, ರವಿಕೆ ಇಷ್ಟರಲ್ಲೇ ಇಡೀ ಜೀವನ ಕಳೆಯುತ್ತಿದ್ದ ನಮ್ಮ ಹಿಂದಿನವರಿಗೂ, ಒಂದು ದೊಡ್ಡ ಉದ್ಯಮವಾಗಿ ಬೆಳೆದು ಉಡುಪೇ ಒಂದು ಅಂತಸ್ತು, ಗೌರವದ ಮಾನದಂಡದ ಸ್ವರೂಪ ಪಡೆದಿರುವ ಇಂದಿನ ಕಾಲದ…
Subscribe to Updates
Get the latest creative news from FooBar about art, design and business.