Author: Times Of Bayaluseeme Staff

ಚಿತ್ರದುರ್ಗ:  ನಗರದ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯರಸ್ತೆ ಒತ್ತುವರಿ ತೆರವು ಅನಿವಾರ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ನಿಯಮ ಉಲ್ಲಂಘಿಸಿದ ಕಟ್ಟಡ ಮಾಲೀಕರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ನಗರ ಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮುಖ್ಯರಸ್ತೆ ಒತ್ತುವರಿ ತೆರವು ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಚಿತ್ರದುರ್ಗ ಜಿಲ್ಲಾ ಕೇಂದ್ರವಾಗಿದ್ದು, ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಉನ್ನತಿಕರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಗರದ ಮುಖ್ಯ ರಸ್ತೆ ಸೇರಿದಂತೆ, ವಾಣಿಜ್ಯ ಚಟುವಟಿಕೆಗಳು ನಡೆಯುವ ರಸ್ತೆಗಳಲ್ಲಿ ನಿಯಮ ಮೀರಿ ನಿರ್ಮಿಸಿದ ಕಟ್ಟಡಗಳಿಂದಾಗಿ ರಸ್ತೆ ಕಿರಿದಾಗಿವೆ. ಇದರಿಂದ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುತ್ತಿದೆ. ನಗರದ ಮುಖ್ಯ ರಸ್ತೆಯ 373 ವಾಣಿಜ್ಯ ಮಳಿಗೆಗಳ ಪೈಕಿ ಬಹುತೇಕ ಕಟ್ಟಡ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸಿದ್ದಾರೆ. ಈಗಾಗಲೇ ನೋಟಿಸ್ ನೀಡಿರುವ ಕಟ್ಟಡ ಮಾಲೀಕರ ಪ್ರಕರಣಗಳನ್ನು ಒಂದು ತಿಂಗಳ ಒಳಗಾಗಿ ಆಲಿಸಿ, ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕ…

Read More

ಇಸ್ರೇಲ್ ತನ್ನ ಭದ್ರತೆ ಮತ್ತು ರಕ್ಷಣೆಯ ನೆಪವೊಡ್ಡಿ ಇಡೀ ವಿಶ್ವಕ್ಕೆ ಬೆಂಕಿ ಹಾಕುತ್ತಿದೆ. ತನ್ನ ವಿರೋಧಿಗಳನ್ನೆಲ್ಲಾ ಸರ್ವನಾಶ ಮಾಡಿ ತಾನು ಮಾತ್ರ ಅತ್ಯಂತ ಸುರಕ್ಷಿತವಾಗಿ ಇರಬೇಕು ಎನ್ನುವ ಸ್ವಾರ್ಥ ಮತ್ತು ಮಹತ್ವಕಾಂಕ್ಷೆ ಹೊಂದಿದೆ. ಅಂದರೆ ಸುಮಾರು ಒಂದು ಕೋಟಿ ಜನರ ಹಿತಕ್ಕಾಗಿ ಉಳಿದ ಸುಮಾರು 699 ಕೋಟಿ ಜನ ಕಷ್ಟ ಪಡಬೇಕಾಗಿದೆ. ಇದು ಕ್ರೌರ್ಯದ ಪರಾಕಾಷ್ಟೇ. ಹೋಗಲಿ, ಇಸ್ರೇಲ್ ತನ್ನ ಸುರಕ್ಷತೆಗಾಗಿ ಮಾಡುತ್ತಿರುವ ಕಸರತ್ತುಗಳು ಶಾಂತಿ, ಸೌಹಾರ್ದತೆ, ಮಾತುಕತೆಯಿಂದಲ್ಲ, ಬದಲಾಗಿ ತನ್ನಲ್ಲಿರುವ ಬಾಂಬು, ಬಂದೂಕು, ದ್ರೋಣ್, ಮಿಸ್ಸೈಲ್, ಹಣ, ಆಧುನಿಕ ತಂತ್ರಜ್ಞಾನ ಮತ್ತು ಮೊಸಾದ್ ಎಂಬ ತನ್ನದೇ ಅತ್ಯಂತ ಬುದ್ಧಿವಂತ ಬೇಹುಗಾರಿಕೆ ಸಂಸ್ಥೆಯನ್ನು ಉಪಯೋಗಿಸಿಕೊಂಡು ತಾನು ಉಳಿಯಲು ಇತರರನ್ನು ನಾಶಪಡಿಸುತ್ತಿದೆ. ಒಂದು ದೇಶ ಒಂದು ಹಂತಕ್ಕೆ ತನ್ನ ಭದ್ರತೆಗಾಗಿ ಮಾಡಿಕೊಳ್ಳುವ ಮುಂಜಾಗ್ರತಾ ಕ್ರಮಗಳನ್ನು ಒಪ್ಪಿಕೊಳ್ಳಬಹುದೇನೋ, ಆದರೆ ಅದು ತುಂಬಾ ಅತಿರೇಕಕ್ಕೆ ಹೋಗಿ ವಿಶ್ವದ ಬುಡಕ್ಕೇ ಬಂದಾಗ ಅದನ್ನು ಖಂಡಿಸಬೇಕಾಗಿರುವುದು ನಮ್ಮ ಕರ್ತವ್ಯವಲ್ಲವೇ. ಈಗ ಯುದ್ಧಕ್ಕಿಂತ ಮಾತುಕತೆ ಮತ್ತು ಹೊಂದಾಣಿಕೆ ಅನಿವಾರ್ಯವಲ್ಲವೇ. ತನ್ನ…

Read More

ನಿತ್ಯ ಭವಿಷ್ಯ 16/04/2026: ಇಂದಿನ ಗುರುವಾರದ ರಾಶಿಭವಿಷ್ಯದಲ್ಲಿ ಮೇಷದಿಂದ ಮೀನದವರೆಗೆ ನಿಮ್ಮ ರಾಶಿಯ ಫಲ ಹೇಗಿದೆ? ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸ್ಥಿತಿಗತಿ ತಿಳಿಯಿರಿ. ಇಂದಿನ ಶುಭ ಸಂಖ್ಯೆ ಮತ್ತು ಬಣ್ಣದ ಸಂಪೂರ್ಣ ಮಾಹಿತಿ ಇಲ್ಲಿದೆ. 🔮 ಮೇಷ (Aries) ಇಂದು ಹೊಸ ಅವಕಾಶಗಳು ನಿಮ್ಮತ್ತ ಬರುತ್ತವೆ. ಉದ್ಯೋಗದಲ್ಲಿ ಪ್ರಗತಿ ಸಾಧ್ಯ. ಹಣಕಾಸಿನಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ. ಕುಟುಂಬದಲ್ಲಿ ಸಂತೋಷದ ವಾತಾವರಣ. 🔮 ವೃಷಭ (Taurus) ಮನಸ್ಸಿಗೆ ಶಾಂತಿ ದೊರೆಯುತ್ತದೆ. ವ್ಯವಹಾರದಲ್ಲಿ ಲಾಭದ ಸೂಚನೆ. ಹಳೆಯ ಸ್ನೇಹಿತರ ಭೇಟಿ ಸಂತೋಷ ತರುತ್ತದೆ. ಆರೋಗ್ಯ ಉತ್ತಮ. 🔮 ಮಿಥುನ (Gemini) ಕೆಲಸಗಳಲ್ಲಿ ಸ್ವಲ್ಪ ಅಡಚಣೆ ಎದುರಾಗಬಹುದು. ತಾಳ್ಮೆ ಇಟ್ಟು ಕಾರ್ಯ ನಿರ್ವಹಿಸಿ. ಹಣ ವ್ಯಯ ಹೆಚ್ಚಾಗಬಹುದು. 🔮 ಕಟಕ (Cancer) ಕುಟುಂಬದ ಬೆಂಬಲ ದೊರೆಯುತ್ತದೆ. ಉದ್ಯೋಗದಲ್ಲಿ ಮೆಚ್ಚುಗೆ ಸಿಗಬಹುದು. ಪ್ರಯಾಣ ಸಾಧ್ಯತೆ ಇದೆ. 🔮 ಸಿಂಹ (Leo) ನೀವು ತೆಗೆದುಕೊಳ್ಳುವ ನಿರ್ಧಾರಗಳು ಲಾಭಕರ. ಹೊಸ ಯೋಜನೆಗಳು ಯಶಸ್ವಿಯಾಗುತ್ತವೆ. ಆರೋಗ್ಯದ ಕಡೆ ಗಮನ ಕೊಡಿ.…

Read More

ವಿಜಯನಗರ, ಏ.15: ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಿಪಿಐ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತರನ್ನು ಕೊಪ್ಪಳ ಜಿಲ್ಲೆಯ ಡಿಸಿಆರ್‌ಇ ಘಟಕದ ಸಿಪಿಐ ರಘುನಾಥ್ ಎಂದು ಗುರುತಿಸಲಾಗಿದೆ. ಅವರು ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಡಿಸಿಆರ್‌ಇ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿಜಯನಗರ–ದಾವಣಗೆರೆ ಗಡಿಭಾಗದ ಮುಸ್ಟೂರು–ಕಡಬನಕಟ್ಟೆ ಮಧ್ಯೆ ಈ ಅಪಘಾತ ಸಂಭವಿಸಿದೆ. ರಘುನಾಥ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬೇವಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೂಲ ನಿವಾಸಿಯಾಗಿದ್ದ ರಘುನಾಥ್ ಅವರು ಹೊಸಪೇಟೆಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಇತ್ತೀಚೆಗೆ ಅವರಿಗೆ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆ ಆದೇಶ ಹೊರಡಿಸಲಾಗಿತ್ತು. ಆದರೆ ಅವರು ಇನ್ನೂ ಹೊಸ ಹುದ್ದೆಗೆ ವರದಿ ಮಾಡಿಕೊಳ್ಳುವ ಮುನ್ನವೇ ಸಾವನ್ನಪ್ಪಿರುವುದು ವಿಷಾದನೀಯ ಸಂಗತಿಯಾಗಿದೆ. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More

15 ಏಪ್ರಿಲ್ 2026 ರ ನಿತ್ಯ ಭವಿಷ್ಯ: ಮೇಷ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾದರೆ, ವೃಷಭ ರಾಶಿಯವರಿಗೆ ಹೊಸ ಉದ್ಯೋಗದ ಅವಕಾಶಗಳು ಬರಲಿವೆ. ನಿಮ್ಮ ರಾಶಿಯ ಇಂದಿನ ಫಲ ಮತ್ತು ಕೈಗೊಳ್ಳಬೇಕಾದ ಜಾಗ್ರತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. ಮೇಷ (Aries) ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸಗಳಲ್ಲಿ ಚುರುಕು ತೋರಿಸುತ್ತೀರಿ. ಆರ್ಥಿಕವಾಗಿ ಸ್ವಲ್ಪ ಲಾಭ ಸಾಧ್ಯ. ಕುಟುಂಬದವರ ಜೊತೆ ಸಣ್ಣ ಮಾತಿನ ಭೇದ ಉಂಟಾಗಬಹುದು. ವೃಷಭ (Taurus) ಹೊಸ ಅವಕಾಶಗಳು ನಿಮ್ಮತ್ತ ಬರುತ್ತವೆ. ಉದ್ಯೋಗದಲ್ಲಿ ಮೆಚ್ಚುಗೆ ಸಿಗುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನ ಕೊಡಿ. ಅನಗತ್ಯ ಖರ್ಚು ತಪ್ಪಿಸಿ. ಮಿಥುನ (Gemini) ಇಂದು ನಿಮ್ಮ ಮಾತುಗಳಿಗೆ ಮಹತ್ವ ಸಿಗುತ್ತದೆ. ಸ್ನೇಹಿತರಿಂದ ಸಹಾಯ ಲಭ್ಯ. ವ್ಯಾಪಾರದಲ್ಲಿ ನಿಧಾನ ಪ್ರಗತಿ. ಕುಟುಂಬದಲ್ಲಿ ಸಂತೋಷದ ವಾತಾವರಣ. ಕಟಕ (Cancer) ಭಾವನಾತ್ಮಕವಾಗಿ ಸ್ವಲ್ಪ ಅಶಾಂತಿ ಇರಬಹುದು. ಕೆಲಸದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ಹಿರಿಯರ ಸಲಹೆ ನಿಮಗೆ ಉಪಯೋಗವಾಗುತ್ತದೆ. ಸಿಂಹ (Leo) ನಿಮ್ಮ ನಾಯಕತ್ವ ಗುಣ ಮೆರೆದಾಡುತ್ತದೆ. ಉದ್ಯೋಗದಲ್ಲಿ…

Read More

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಕಳೆದ ತಿಂಗಳು ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣವಾಗಿದ್ದ ಹೆಣ್ಣು ನೀರಾನೆ ಹಂಸಿಣಿ (12) ಅನಾರೋಗ್ಯದಿಂದ ಸಾವನ್ನಪ್ಪಿದೆ. ಗರ್ಭಿಣಿಯಾಗಿದ್ದ ಹಂಸಿಣಿಗೆ ಮರಿ ಹಾಕುವ ಅವಧಿ ಮುಗಿದಿದ್ದರೂ ಪ್ರಸವವಾಗಿರಲಿಲ್ಲ. ಈ ಹಿನ್ನೆಲೆ ಏಪ್ರಿಲ್ 10ರಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ಹಾಗೂ ಮೈಸೂರು ವನ್ಯಜೀವಿ ಪಶುವೈದ್ಯರ ವಿಶೇಷ ತಂಡ ಆರೋಗ್ಯ ತಪಾಸಣೆ ನಡೆಸಿತ್ತು. ರಕ್ತ ಸೇರಿದಂತೆ ವಿವಿಧ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಹಂಸಿಣಿಯ ಗರ್ಭಾಶಯದಲ್ಲಿ ಗಂಭೀರ ಸೋಂಕು ಇರುವುದು ದೃಢಪಟ್ಟಿದ್ದು, ಗರ್ಭದಲ್ಲಿದ್ದ ಭ್ರೂಣ ಮೃತಪಟ್ಟಿರುವ ಸಾಧ್ಯತೆಯೂ ವ್ಯಕ್ತವಾಗಿತ್ತು. ಸೋಂಕು ತೀವ್ರಗೊಂಡ ಪರಿಣಾಮ ಪ್ರಮುಖ ಅಂಗಾಂಗಗಳ ಕಾರ್ಯ ಸ್ಥಗಿತಗೊಂಡಿದ್ದು, ಇಂದು ಮಧ್ಯಾಹ್ನ 3.30ರ ಸುಮಾರಿಗೆ ಹಂಸಿಣಿ ಕೊನೆಯುಸಿರೆಳೆದಿದೆ ಎಂದು ಹುಲಿ ಮತ್ತು ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅಮರಾಕ್ಷರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ನೀರಾನೆ ಕಳೆದ ಮಾರ್ಚ್ 19ರ ರಾತ್ರಿ 11.45ರ ವೇಳೆಗೆ ಯುವ…

Read More

ಚಿತ್ರದುರ್ಗ: 21ನೇ ಶತಮಾನ ಅತ್ಯಂತ ವೇಗವಾಗಿ ಸಾಗುತ್ತಿರುವ ಬಿಕ್ಕಟ್ಟಿನ ಕಾಲಘಟ್ಟವಾಗಿದೆ. ಮೌಲ್ಯಗಳು ಇಂದು ಅಪಮೌಲ್ಯಗಳಾಗುತ್ತಿವೆ. ಸತ್ಯ ಮತ್ತು ಸುಳ್ಳುಗಳ ಗೊಂದಲದಲ್ಲಿರುವ ಈ ದುರಿತಕಾಲದಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದಾಗಿದೆ ಎಂದು ಹಿರಿಯ ಸಾಹಿತಿ ಡಾ.ಜೆ.ಕರಿಯಪ್ಪ ಮಾಳಿಗೆ ತಿಳಿಸಿದರು. ನಗರದ ಬಾಪೂಜಿ ಸ್ಕೂಲ್ ಆವರಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ರಂಗಸೌರಭ ಕಲಾ ಸಂಘದಿಂದ ಆಯೋಜಿಸಿದ್ದ ಶಿವಸಂಚಾರ ನಾಟಕೋತ್ಸವದಲ್ಲಿ ಮಾತನಾಡಿದರು. ವಿಶ್ವದ ಪ್ರಖರ ಮಾಧ್ಯಮ ರಂಗಭೂಮಿ. ಹೊಸ ರಂಗಪ್ರಯೋಗಗಳು ಯುವಕರನ್ನು ಆಕರ್ಷಿಸುತ್ತವೆ. ಸಾಧ್ಯವಾಗದ ಸಾಮಾಜಿಕ ಬದಲಾವಣೆಯನ್ನು ರಂಗಭೂಮಿಯಿಂದ ಮಾತ್ರ ಸಾಧಿಸಲು ಸಾಧ್ಯ. ಸಾಮಾಜಿಕ ಬದಲಾವಣೆಗೆ ರಂಗಭೂಮಿ ಪ್ರಮುಖ ಅಸ್ತ್ರ ಎಂದರು. ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸುವ ಶಕ್ತಿ ಹೊಂದಿದೆ. ಕಳ್ಳ ಎಂಬ ಪದಕ್ಕೆ ಹಲವು ಅರ್ಥಗಳಿವೆ. ಹಣ, ಒಡವೆದೋಚುವ ದರೋಡೆ ಮಾತ್ರವಲ್ಲ ನಮ್ಮಲ್ಲಿ ಮಾತು, ಮೌಲ್ಯ, ನ್ಯಾಯ ಮತ್ತು ಸ್ನೇಹ ಹೀಗೆ ಹಲವು ಕಳ್ಳರಿದ್ದಾರೆ. ಸಮಾಜವು ಮಗುವನ್ನು ಛೀ ಕಳ್ಳ ಎಂದು ಲೇವಡಿ ಮಾಡುವುದೂ ಉಂಟು. ತಪ್ಪು ಮಾಡಿದಾಗ ಅದನ್ನು ಮುಚ್ಚಿಡಲು…

Read More

ಚಿತ್ರದುರ್ಗ: ದೇಶದ ಬಹುತ್ವ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಒಳಗೊಂಡ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವುಗಳ ಬಲದಿಂದಲೇ ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯುತ್ತಿದೆ ಎಂದು ನಗರದ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲೆ ಪ್ರೊ. ತಾರಿಣಿ ಶುಭದಾಯಿನಿ ಹೇಳಿದರು. ನಗರದ ಸರ್ಕಾರಿ ಕಲಾ ಕಾಲೇಜಿನ ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ದಲಿತರು ಮತ್ತು ಮಹಿಳೆಯರು ದ್ವಂದ್ವ ಶೋಷಣೆಗೆ ಒಳಗಾಗುತ್ತಿದ್ದಾರೆ. ಹಿಂದುಳಿದ ವರ್ಗಗಳು ಸಂಖ್ಯೆಯಲ್ಲಿ ಹೆಚ್ಚಾಗಿದ್ದರೂ ಅಧಿಕಾರದಿಂದ ವಂಚಿತರಾಗಿ ಅಸ್ಪೃಶ್ಯತೆಯ ಅನುಭವವನ್ನು ಎದುರಿಸುತ್ತಿರುವುದು ಕಳವಳಕಾರಿ ಸಂಗತಿ ಎಂದು ಅವರು ಹೇಳಿದರು. ಪತ್ರಕರ್ತ ಪಿ. ಲಂಕೇಶ್ ಅವರ ‘ಮುಟ್ಟಿಸಿಕೊಂಡವರು’ ಕಥೆಯನ್ನು ಉಲ್ಲೇಖಿಸಿದ ಅವರು, ಜಾತಿ ವ್ಯವಸ್ಥೆಯನ್ನು ಒಂದು ಸಾಮಾಜಿಕ ರೂಪಕವಾಗಿ ಕಥೆಯಲ್ಲಿ ಚಿತ್ರಿಸಲಾಗಿದೆ ಎಂದರು. ಹೊರಗಡೆ ಕಾಣಿಸದ ಜಾತಿ ಭೇದಗಳು ಮನೆಯೊಳಗೇ ಆರಂಭವಾಗುತ್ತವೆ. ಆದ್ದರಿಂದ ಸಮಾಜಕ್ಕೆ ಅಂಟಿಕೊಂಡಿರುವ ಜಾತಿ, ಭ್ರಷ್ಟಾಚಾರ ಮತ್ತು ಶ್ರೇಷ್ಠತೆಯ ವ್ಯಸನದಂತಹ ರೋಗಗಳನ್ನು…

Read More

ಚಿತ್ರದುರ್ಗ: ಮನುಸ್ಮೃತಿ ಪ್ರತಿಪಾದಿಸಿದ ಅಸಮಾನತೆಯ ಮನಸ್ಥಿತಿ ಹೋಗಲಾಡಿಸಿದ ಕ್ರಾಂತಿ ಪುರುಷ ಡಾ.ಬಿ.ಆರ್.ಅಂಬೇಡ್ಕರ್ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಬಣ್ಣಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರ ಸಭೆ ಸಹಯೋಗದಲ್ಲಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಾ. ಬಿ.ಆರ್. ಅಂಬೇಡ್ಕರ್ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರೊಬ್ಬ ಕ್ರಾಂತಿ ಮತ್ತು ಚಳುವಳಿಯ ಶಕ್ತಿಯಾಗಿದ್ದಾರೆ. ಅಂಬೇಡ್ಕರ್ ಶಿಕ್ಷಣವನ್ನು ಪ್ರಮುಖ ಅಸ್ತçವೆಂದು ನಂಬಿದ್ದರು. ಶಿಕ್ಷಣ ಪುರುಷರಿಗೆ ಸೀಮಿತವಾಗದೆ, ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೂ ಸಮಾನವಾಗಿ ಸಿಗಬೇಕು ಎಂಬುದು ಅವರ ಆಶಯವಾಗಿತ್ತು. ಅಂಬೇಡ್ಕರ್ ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ವಿಷಾದಿಸಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, “ಅಂಬೇಡ್ಕರ್ ಅಂದರೆ ಅದೊಂದು ವ್ಯಕ್ತಿಯಲ್ಲ, ಅದೊಂದು ಕ್ರಾಂತಿ ಮತ್ತು ಚಳವಳಿ. ಅಸ್ಪೃಶ್ಯತೆ ಎಂಬ ಅಸಮಾನತೆಯನ್ನು ಹೋಗಲಾಡಿಸಲು ಅವರು ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅವರು ದೇಶದ ಪ್ರತಿಯೊಬ್ಬರಿಗೂ ಮತ್ತು ಎಲ್ಲಾ…

Read More

ಚಿತ್ರದುರ್ಗ: ಆಧುನಿಕ ಭಾರತದ ಬಹುಮುಖ ಪ್ರತಿಭೆ ಡಾ.ಬಿ.ಆರ್ ಅಂಬೇಡ್ಕರ್. ಅವರು ಒಂದೇ ಜಾತಿ, ಹಾಗೂ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೆ, ಆಧುನಿಕ ಭಾರತದ ಸರ್ವತೋಮುಖ ಬೆಳವಣಿಗೆಯ ಶಕ್ತಿಯಾಗಿ ನಿಂತವರು. ಇಡೀ ರಾಷ್ಟ್ರದ ಭವಿಷ್ಯಕ್ಕೆ ಶಕ್ತಿಯಾಗಿ ನಿಂತ ವ್ಯಕ್ತಿಯೇ ಅಂಬೇಡ್ಕರ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ನಗರದ ಹೊರವಲಯದಲ್ಲಿರುವ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿಗುರುಪೀಠದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತ್ಯೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಅಂಬೇಡ್ಕರ್ ಅವರ ವ್ಯಕ್ತಿತ್ವವು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರದೆ, ಅನೇಕ ಕ್ಷೇತ್ರಗಳಲ್ಲಿ ವ್ಯಾಪಿಸಿದೆ. ಅವರು ರಾಷ್ಟ್ರೀಯತಾವಾದಿಯಾಗಿ ದೇಶದ ಏಕತೆಗಾಗಿ ಶ್ರಮಿಸಿದರೆ, ಕಾನೂನು ತಜ್ಞರಾಗಿ ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಸ್ಥಾಪಿಸಿದರು. ರಾಜಕೀಯ ನಾಯಕನಾಗಿ ಅವರು ಜನತಾಂತ್ರಿಕ ಮೌಲ್ಯಗಳನ್ನು ಬಲಪಡಿಸಿದರು. ಜೊತೆಗೆ, ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತರಾಗಿ ದಲಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಇತಿಹಾಸಕಾರ ಮತ್ತು ತತ್ತ್ವಜ್ಞಾನಿಯಾಗಿ ಅವರು ಸಮಾಜದ ಮೂಲಭೂತ ಸಮಸ್ಯೆಗಳ ಕುರಿತು ಆಳವಾದ ಚಿಂತನೆಗಳನ್ನು ವ್ಯಕ್ತಪಡಿಸಿದರು. ಅಂಬೇಡ್ಕರ್ ಅವರು ಮಾನವಶಾಸ್ತ್ರಜ್ಞರಾಗಿ…

Read More