Author: Times Of Bayaluseeme Staff
ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಮದಕರಿನಾಯಕ ವಿದ್ಯಾ ಸಂಸ್ಥೆ ಆಶ್ರಯದಲ್ಲಿ ಶ್ರೀಮತಿ ಯಶೋದರಮ್ಮ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಗೂ ಶ್ರೀ ಕೋಟೆ ಸಣ್ಣ ಬೋರಪ್ಪ–ಬೋರಮ್ಮ ಪ್ರಥಮ ದರ್ಜೆ ಕಾಲೇಜಿನಿಂದ ಸಂಯುಕ್ತವಾಗಿ ಜೆ.ಎನ್.ಕೋಟೆಯಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ವಿಶೇಷ ಶಿಬಿರ ಮಂಗಳವಾರ ಯಶಸ್ವಿಯಾಗಿ ಮುಕ್ತಾಯವಾಯಿತು. ಶಿಬಿರದ 6ನೇ ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ದೀಪೋತ್ಸವ ಸಮಾರಂಭಕ್ಕೆ ಅಧ್ಯಕ್ಷತೆ ವಹಿಸಿದ್ದ ಎಸ್. ಸಂದೀಪ್, ಎನ್‌ಎಸ್‌ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ ಎಂದು ಹೇಳಿದರು. ಗ್ರಾಮಸ್ಥರ ಸಮ್ಮುಖದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, ಯುವಜನರಲ್ಲಿ ಸಮಾಜಮುಖಿ ಚಿಂತನೆ ಬೆಳೆಸುವಲ್ಲಿ ಇಂತಹ ಶಿಬಿರಗಳ ಪಾತ್ರ ಅನನ್ಯ ಎಂದರು. ಪ್ರಾಂಶುಪಾಲರಾದ ಡಾ. ಲತಾ ಎಸ್. ಮಾತನಾಡಿ, ಆರು ದಿನಗಳ ಅವಧಿಯಲ್ಲಿ ಸ್ವಚ್ಛತಾ ಕಾರ್ಯ, ಶ್ರಮದಾನ, ಆರೋಗ್ಯ ಜಾಗೃತಿ ಮತ್ತು ಪಶು ಸಂಗೋಪನೆ ಕುರಿತ ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮಾಧಿಕಾರಿಗಳಾದ ಡಾ. ಧನಂಜಯ…
ಇಂದಿನ ರಾಶಿ ಭವಿಷ್ಯ (14-04-2026): ಇಂದು ಮೇಷ ರಾಶಿಯವರಿಗೆ ಕಾರ್ಯಸಿದ್ಧಿ, ಸಿಂಹ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ಮತ್ತು ಧನು ರಾಶಿಯವರಿಗೆ ಪ್ರಯಾಣ ಯೋಗವಿದೆ. ನಿಮ್ಮ ರಾಶಿಯ ಆರ್ಥಿಕ, ಆರೋಗ್ಯ ಮತ್ತು ಕೌಟುಂಬಿಕ ಭವಿಷ್ಯ ಹೇಗಿದೆ ಎಂದು ತಿಳಿಯಲು ಈಗಲೇ ಓದಿ. ಮೇಷ (Aries) ಇಂದು ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸುಧಾರಣೆ. ವೃಷಭ (Taurus) ಹಣಕಾಸಿನ ವಿಚಾರಗಳಲ್ಲಿ ಲಾಭ. ಕುಟುಂಬದ ಜೊತೆ ಸಮಯ ಕಳೆಯುವಿರಿ. ಆರೋಗ್ಯ ಉತ್ತಮವಾಗಿರುತ್ತದೆ. ಹೂಡಿಕೆಗಳಿಗೆ ಉತ್ತಮ ದಿನ. ಮಿಥುನ (Gemini) ಕೆಲಸದ ಒತ್ತಡ ಸ್ವಲ್ಪ ಹೆಚ್ಚಾಗಬಹುದು. ಆದರೆ ನಿಮ್ಮ ಚಾತುರ್ಯದಿಂದ ಎಲ್ಲವನ್ನು ನಿಭಾಯಿಸುತ್ತೀರಿ. ಸ್ನೇಹಿತರ ಸಹಾಯ ಸಿಗಲಿದೆ. ಕರ್ಕಾಟಕ (Cancer) ಭಾವನಾತ್ಮಕವಾಗಿ ಸ್ವಲ್ಪ ಅಸ್ಥಿರತೆ ಇರಬಹುದು. ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳಿ. ಕುಟುಂಬದ ಬೆಂಬಲ ಸಿಗುತ್ತದೆ. ಸಿಂಹ (Leo) ಪ್ರತಿಭೆ ಹೊರಹೊಮ್ಮುವ ದಿನ. ಉದ್ಯೋಗದಲ್ಲಿ ಪ್ರಗತಿ. ಮೇಲಾಧಿಕಾರಿಗಳ ಮೆಚ್ಚುಗೆ ಪಡೆಯುವಿರಿ. ಕನ್ಯಾ (Virgo) ಆರೋಗ್ಯದ ಕಡೆ…
ಚಿತ್ರದುರ್ಗ: ಶಿಕ್ಷಣವು ಕೇವಲ ನಾಲ್ಕು ಗೋಡೆಗಳೊಳಗೆ ಪಾಠ ಕಲಿಯುವುದಕ್ಕೆ ಸೀಮಿತವಾಗಿಲ್ಲ. ಸಮಾಜದ ಸ್ಥಿತಿ, ಆಡಳಿತ ವ್ಯವಸ್ಥೆ, ಸಮಕಾಲೀನ ಘಟನೆಗಳು ಹಾಗೂ ಸಾಮಾನ್ಯ ಜ್ಞಾನವನ್ನು ಅರ್ಥಮಾಡಿಕೊಳ್ಳಲು ದಿನಪತ್ರಿಕೆಗಳ ಓದು ಅತ್ಯಂತ ಅಗತ್ಯ ಎಂದು ಹಿರಿಯ ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ ತಿಳಿಸಿದರು. ತಾಲ್ಲೂಕಿನ ದ್ವಾಮವ್ವನಹಳ್ಳಿಯಲ್ಲಿ ಡಾನ್ ಬೋಸ್ಕೋ ಪದವಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆಯಿಂದ ಸೋಮವಾರ ಆಯೋಜಿಸಿದ್ದ ವಿಶೇಷ ವಾರ್ಷಿಕ ಶಿಬಿರದಲ್ಲಿ ವಿದ್ಯಾರ್ಥಿ ಜೀವನದಲ್ಲಿ ದಿನಪತ್ರಿಕೆ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪತ್ರಿಕೆಗಳು ಸಾಮಾನ್ಯ ಜ್ಞಾನ, ಸಮಕಾಲೀನ ಮಾಹಿತಿ ಹಾಗೂ ಸಮಾಜದ ಸಮಸ್ಯೆಗಳ ಅರಿವಿಗೆ ಪ್ರಮುಖ ಮೂಲವಾಗಿವೆ ಎಂದು ತಿಳಿಸಿದರು. ಪತ್ರಿಕೆ ಜಗತ್ತನ್ನು ನೋಡುವ ಕಿಟಕಿಯಂತಿದೆ. ಆಡಳಿತದ ತಪ್ಪುಗಳನ್ನು ಪ್ರಶ್ನಿಸುವುದು, ಅನ್ಯಾಯವನ್ನು ಬೆಳಕಿಗೆ ತರುವುದು ಮತ್ತು ಸಮಾಜದ ದಿಕ್ಕು ತಿದ್ದುವುದು ಪತ್ರಿಕೋದ್ಯಮದ ಮಹತ್ವದ ಕರ್ತವ್ಯ ಎಂದು ಹೇಳಿದರು. ಪತ್ರಿಕೆಗಳು ಕೇವಲ ಸುದ್ದಿಗಳಿಗೆ ಸೀಮಿತವಾಗಿಲ್ಲ. ಕ್ರೀಡೆ, ಸಾಹಿತ್ಯ,…
ಹರಿಹರ, ಏಪ್ರಿಲ್ 13: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಸಮೀಪದ ಪಂಚಮಸಾಲಿ ಗುರುಪೀಠದಲ್ಲಿ ಮಹತ್ವದ ಬೆಳವಣಿಗೆಯಾಗಿ, ಪೀಠಾಧಿಪತಿಗಳಾದ ವಚನಾನಂದ ಸ್ವಾಮೀಜಿಯನ್ನು ಉಚ್ಚಾಟನೆ ಮಾಡುವ ನಿರ್ಧಾರ ಧರ್ಮದರ್ಶಿ ಮಂಡಳಿ ತೆಗೆದುಕೊಂಡಿದೆ. 🔍 ಏನಾಯಿತು? ಗುರುಪೀಠದಲ್ಲಿ ನಡೆದ ಧರ್ಮದರ್ಶಿಗಳ ಸಭೆಯಲ್ಲಿ ಒಟ್ಟು 15 ಮಂದಿ ಸದಸ್ಯರು ಭಾಗವಹಿಸಿದ್ದು, ಇವರಲ್ಲಿ 12 ಮಂದಿ ವಚನಾನಂದ ಶ್ರೀಗಳ ವಿರುದ್ಧ ಮತ ಚಲಾಯಿಸಿದ್ದಾರೆ. ಬಹುಮತದ ಆಧಾರದ ಮೇಲೆ ಉಚ್ಚಾಟನೆಗೆ ಅಂತಿಮ ಮುದ್ರೆ ಬಿದ್ದಿದೆ. ⚠️ ಉಚ್ಚಾಟನೆಗೆ ಕಾರಣಗಳು ಸಭೆಯ ಬಳಿಕ ಸಮಿತಿ ಸದಸ್ಯರಾದ ಬಸವರಾಜ ದಿಂಡೂರ ಹಾಗೂ ಬಾವಿ ಬೆಟ್ಟಪ್ಪ ಮಾಹಿತಿ ನೀಡಿದ್ದು, ಪ್ರಮುಖ ಕಾರಣಗಳನ್ನು ಬಹಿರಂಗಪಡಿಸಿದರು: 📌 ಸ್ಪಷ್ಟನೆ ನೀಡದ ಆರೋಪ: ಪೀಠದ ಆಡಳಿತ ಮತ್ತು ನಡವಳಿಕೆ ಕುರಿತು 12 ಅಂಶಗಳ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡದಿರುವುದು 📌 ‘ಶ್ವಾಸ ಪೀಠ’ ವಿವಾದ: ಪೀಠದ ಘನತೆಗೆ ಧಕ್ಕೆ ತರುವ ಚಟುವಟಿಕೆಗಳ ಆರೋಪ 🔄 ಮುಂದೇನು? ಈ ನಿರ್ಧಾರದಿಂದ ಪಂಚಮಸಾಲಿ ಗುರುಪೀಠದಲ್ಲಿ ಆಡಳಿತಾತ್ಮಕ ಬದಲಾವಣೆಗಳು ಅನಿವಾರ್ಯವಾಗಿವೆ. ಭಕ್ತರು…
ಹಾಸನ, ಏಪ್ರಿಲ್ 13: ಎಂಟು ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಮಹಿಳೆಯೊಬ್ಬರು ತನ್ನ ಪತಿ ಹಾಗೂ ಏಳು ವರ್ಷದ ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ವಿವಾಹವಾಗಿರುವ ಘಟನೆ ಹಾಸನ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ. ಅರಕಲಗೂಡು ತಾಲೂಕಿನ ಮುಂಡಗೋಡು ಗ್ರಾಮದ ಹರ್ಷಿತಾ ಅವರು 2017ರಲ್ಲಿ ಹಾಸನ ತಾಲೂಕಿನ ಮುಕಂದೂರು ಗ್ರಾಮದ ಪ್ರಕಾಶ್ ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಏಳು ವರ್ಷದ ಗಂಡು ಮಗನಿದ್ದಾನೆ. ಮಾರ್ಚ್ 30ರಂದು ‘ಆಸ್ಪತ್ರೆಗೆ ಹೋಗಿ ಬರುತ್ತೇನೆ’ ಎಂದು ಮನೆಯಿಂದ ಹೊರಟ ಹರ್ಷಿತಾ ನಂತರ ವಾಪಸ್ ಮನೆಗೆ ಬಂದಿರಲಿಲ್ಲ. ಮಗಳು ಕಾಣೆಯಾಗಿರುವ ಬಗ್ಗೆ ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಹರ್ಷಿತಾಳನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದರು. ಈ ವೇಳೆ ಪತಿ ಜೊತೆ ಹೋಗಲು ನಿರಾಕರಿಸಿದ ಆಕೆ, ತನ್ನ ಪ್ರಿಯಕರ ಸಚಿನ್ ಜೊತೆಗೇ ಹೋಗುವುದಾಗಿ ಹಠ ಹಿಡಿದಿದ್ದರಿಂದ, ಪೊಲೀಸರು ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಆದರೆ, ಸಾಂತ್ವನ ಕೇಂದ್ರದಲ್ಲಿದ್ದ ಹರ್ಷಿತಾ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿ ಆಸ್ಪತ್ರೆಗೆ…
ಸಂಗೀತವೆಂದರೆ ಕೇವಲ ಧ್ವನಿಯೇ ಅಥವಾ ಭಾವನೆಗಳ ಸಮ್ಮಿಲನವೇ? ಸುಮಾರು 12,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾದ ಆಶಾ ಭೋಸ್ಲೆ ಅವರ ಸ್ವರಯಾನ ಮತ್ತು ಬದುಕಿನ ಸಾರ್ಥಕತೆಯ ಬಗ್ಗೆ ವಿವೇಕಾನಂದ ಎಚ್. ಕೆ. ಅವರ ವಿಶೇಷ ಲೇಖನ ಇಲ್ಲಿದೆ. ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ…… ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ – ಶಿಸ್ತುಬದ್ಧತೆಯ ತರಂಗಗಳನ್ನು ಸಂಗೀತ ಎಂದು ಗ್ರಹಿಸಬಹುದೇ ? ಅಥವಾ, ಆ ಶಬ್ದಗಳ ಸುಶ್ರಾವ್ಯತೆ ಮಾತ್ರ ಸಂಗೀತವೇ ? ಅಥವಾ, ಧ್ವನಿ ಮತ್ತು ವಾದ್ಯಗಳ ಸಮ್ಮಿಲನದ ಭಾಷೆಗೆ ಸಂಗೀತ ಎನ್ನಬಹುದೇ…… ಅಥವಾ, ಸಾಹಿತ್ಯ ಧ್ವನಿ ವಾದ್ಯಗಳ ಮಿಲನದ ಪ್ರಕ್ರಿಯೆಯೇ ಸಂಗೀತವೇ…… ಅಥವಾ, ಧ್ವನಿಯ ಸ್ವರ, ಲಯ ತಾಳಗಳ ರೂಪವೇ ಸಂಗೀತ ಸೃಷ್ಟಿಸುತ್ತದೆಯೇ….. ಭಾವನೆಗಳು ಅಕ್ಷರ ರೂಪದ ಸಾಹಿತ್ಯವಾಗಿ ಮೂಡಿದ ಮೇಲೆ ಆ ಅಕ್ಷರಗಳು ಮತ್ತೆ ಭಾವನೆಗಳಾಗಿ ಹಾಡಿನ ಮೂಲಕ ಪರಿವರ್ತನೆ ಹೊಂದಿ ಕೆಲವೊಮ್ಮೆ ಮತ್ತೆ ಅಕ್ಷರಗಳಾಗಿ ಮತ್ತೆ ಭಾವನೆಗಳಾಗುವ ಸರಪಳಿಯ ಕೊಂಡಿಯೊಂದು…
13 ಏಪ್ರಿಲ್ 2026, ಸೋಮವಾರದ ನಿತ್ಯ ಭವಿಷ್ಯ: ಇಂದು ನಿಮ್ಮ ರಾಶಿಗೆ ಶುಭ ಯೋಗವಿದೆಯೇ? ಮೇಷದಿಂದ ಮೀನ ರಾಶಿಯವರ ಇಂದಿನ ಉದ್ಯೋಗ, ಆರ್ಥಿಕ ಮತ್ತು ಆರೋಗ್ಯ ಭವಿಷ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ. ಇಂದಿನ ಶುಭ ಬಣ್ಣ ಮತ್ತು ಸಂಖ್ಯೆಯನ್ನು ತಿಳಿಯಿರಿ ಮೇಷ (Aries) ಇಂದು ಕೆಲಸಗಳಲ್ಲಿ ವೇಗ ಹೆಚ್ಚಾಗುತ್ತದೆ. ಹೊಸ ಅವಕಾಶಗಳು ದೊರೆಯಬಹುದು. ಆರ್ಥಿಕವಾಗಿ ಸಾಧಾರಣ ದಿನ. ಕುಟುಂಬದಲ್ಲಿ ಸಂತೋಷಕರ ವಾತಾವರಣ. ವೃಷಭ (Taurus) ಸಣ್ಣ ಅಡೆತಡೆಗಳು ಎದುರಾಗಬಹುದು, ಆದರೆ ಧೈರ್ಯದಿಂದ ಮುಂದೆ ಸಾಗಿದರೆ ಯಶಸ್ಸು ನಿಮ್ಮದೇ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಮಿಥುನ (Gemini) ಹೊಸ ಪರಿಚಯಗಳು ಜೀವನದಲ್ಲಿ ಬದಲಾವಣೆ ತರಬಹುದು. ಉದ್ಯೋಗ ಕ್ಷೇತ್ರದಲ್ಲಿ ಮೆಚ್ಚುಗೆ ಸಿಗುವ ಸಾಧ್ಯತೆ ಇದೆ. ಕರ್ಕಾಟಕ (Cancer) ಮನಸ್ಸು ಚಂಚಲವಾಗಿರಬಹುದು. ಕುಟುಂಬದವರ ಜೊತೆ ಸಮಯ ಕಳೆಯುವುದು ಉತ್ತಮ. ಆರೋಗ್ಯದ ಕಡೆ ಗಮನ ನೀಡಿ. ಸಿಂಹ (Leo) ನಿಮ್ಮ ನಾಯಕತ್ವ ಗುಣಗಳು ಹೊರಹೊಮ್ಮುವ ದಿನ. ವ್ಯವಹಾರದಲ್ಲಿ ಲಾಭದ ಸೂಚನೆ. ಸ್ನೇಹಿತರ ಸಹಕಾರ ಸಿಗುತ್ತದೆ. ಕನ್ಯಾ (Virgo) ಕೆಲಸದ…
ಟೈಮ್ಸ್ ಆಫ್ ಬಯಲುಸೀಮೆ ಕನ್ನಡ ದಿನಪತ್ರಿಕೆ ವತಿಯಿಂದ ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ವಿಶೇಷಾಂಕ ಪ್ರಕಟಿಸಲಾಗುತ್ತಿದೆ. ಈ ವಿಶೇಷಾಂಕಕ್ಕಾಗಿ ಯುವಜನರಿಂದ 150 ಪದಗಳ ಚುಟುಕು ಲೇಖನಗಳನ್ನು ಆಹ್ವಾನಿಸಲಾಗಿದೆ. ವಿಷಯ: “ನನ್ನ ಮನದ ಕಣ್ಗಳಲ್ಲಿ ಕಂಡ ಜಗಜ್ಯೋತಿ ಬಸವೇಶ್ವರರು” ಬಸವಣ್ಣನ ವಚನಗಳು, ಅವರ ಚಿಂತನೆಗಳ ಇಂದಿನ ಪ್ರಸ್ತುತತೆ ಹಾಗೂ ಯುವ ಮನಸ್ಸಿನ ಅನಿಸಿಕೆಗಳನ್ನು ಒಳಗೊಂಡ ಲೇಖನಗಳಿಗೆ ಆದ್ಯತೆ ನೀಡಲಾಗುವುದು. ವಿದ್ಯಾರ್ಥಿಗಳು, ಯುವ ಲೇಖಕರು, ಆಸಕ್ತ ಬರಹಗಾರರು ಹಾಗೂ ಬಸವ ಚಿಂತನೆಗೆ ಆಸಕ್ತಿ ಹೊಂದಿರುವ ಯುವಜನರಿಗೆ ಅವಕಾಶ ಕಲ್ಪಿಸಲಾಗಿದೆ. ಲೇಖನ ಕಳುಹಿಸಲು ಏಪ್ರಿಲ್ 14 ಕೊನೆ ದಿನ. 9620139796 ಈ ಸಂಖ್ಯೆಗೆ ವಾಟ್ಸಾಪ್ ಮೂಲಕ ಪೂರ್ಣ ಹೆಸರು, ನಿಮ್ಮ ಬಗ್ಗೆ ಒಂದೆರಡು ಸಾಲು ಪರಿಚಯ, ಫೋನ್ ನಂಬರ್ ಹಾಗೂ ಭಾವಚಿತ್ರವಿರಲಿ. ವಂದನೆಗಳೊಂದಿಗೆ ವೀರೇಂದ್ರ ಕೋಗುಂಡೆ ಮಠ ಕಾರ್ಯನಿರ್ವಾಹಕ ಸಂಪಾದಕರುಟೈಮ್ಸ್ ಆಫ್ ಬಯಲುಸೀಮೆ ಕನ್ನಡ ದಿನಪತ್ರಿಕೆ
ಜಗಜ್ಯೋತಿ ಬಸವೇಶ್ವರರ ಜಯಂತಿ ಅಂಗವಾಗಿ ಟೈಮ್ಸ್ ಆಫ್ ಬಯಲುಸೀಮೆ ಕನ್ನಡ ದಿನಪತ್ರಿಕೆ ವತಿಯಿಂದ ವಿಶೇಷಾಂಕ ಹೊರತರಲಾಗುತ್ತಿದೆ. ಈ ವಿಶೇಷಾಂಕಕ್ಕೆ ‘ನನ್ನ ಮನದ ಕಣ್ಗಳಲ್ಲಿ ಕಂಡ ಜಗಜ್ಯೋತಿ ಬಸವೇಶ್ವರರು’ ಎಂಬ ವಿಷಯದ ಕುರಿತು ಯುವಜನರಿಂದ 150 ಪದಗಳ ಚುಟುಕು ಲೇಖನಗಳನ್ನು ಆಹ್ವಾನಿಸಲಾಗಿದೆ. ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವತೆಯ ಮೌಲ್ಯಗಳನ್ನು ಸಮಾಜಕ್ಕೆ ಬಿತ್ತಿದ ಜಗಜ್ಯೋತಿ ಬಸವೇಶ್ವರರ ತತ್ವಗಳು ಇಂದಿನ ಯುವಜನರ ಬದುಕಿನಲ್ಲಿ ಹೇಗೆ ಸ್ಪಂದಿಸುತ್ತಿವೆ ಎಂಬುದನ್ನು ತಮ್ಮದೇ ಶೈಲಿಯಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಬಸವಣ್ಣನ ವಚನಗಳು, ಅವರ ಚಿಂತನೆಗಳ ಪ್ರಸ್ತುತತೆ ಮತ್ತು ಯುವ ಮನಸ್ಸಿನ ಅನಿಸಿಕೆಗಳನ್ನು ಒಳಗೊಂಡ ಲೇಖನಗಳಿಗೆ ಆದ್ಯತೆ ನೀಡಲಾಗುವುದು. ಯುವ ಲೇಖಕರು, ವಿದ್ಯಾರ್ಥಿಗಳು ಹಾಗೂ ಆಸಕ್ತ ಬರಹಗಾರರು ಉತ್ಸಾಹದಿಂದ ಭಾಗವಹಿಸುವಂತೆ ಸಂಪಾದಕ ಮಂಡಳಿ ಮನವಿ ಮಾಡಿದೆ. ವಿಶೇಷ ಸೂಚನೆ ; ಲೇಖನಕ್ಕೆ ಏಪ್ರಿಲ್ 14 ಕೊನೆ ದಿನ. 9620139796 ಈ ನಂಬರ್ ಗೆ ಪೂರ್ಣ ಹೆಸರು, ನಿಮ್ಮ ಬಗ್ಗೆ ಒಂದೆರಡು ಸಾಲು ವಿವರಣೆ, ಫೋನ್ ನಂಬರ್ ಜತೆ ಭಾವಚಿತ್ರದ ಜತೆ…
ಬೆಂಗಳೂರು, ಏ. 12: ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ಅವರು ನೀಡಿರುವ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಂಗೀಕರಿಸಿದ್ದಾರೆ. “ಅಬ್ದುಲ್ ಜಬ್ಬಾರ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಅಲ್ಪಸಂಖ್ಯಾತ ವಿಭಾಗದ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ ಎಂದು ಡಿ ಕೆ ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ನೂತನ ಸಮಿತಿ ಶೀಘ್ರ ರಚನೆಗೆ ಕ್ರಮ ವಹಿಸಲಾಗಿದೆ” ಎಂದು ಶಿವಕುಮಾರ್ ಅವರು ಹೇಳಿದ್ದಾರೆ.
Subscribe to Updates
Get the latest creative news from FooBar about art, design and business.