Author: Times Of Bayaluseeme Staff
ನಮ್ಮ ಮನೆಯ ಹಿತ್ತಲಲ್ಲಿ ಹಸಿರಾಗಿ ನಳನಳಿಸುವ ಸೀಬೆ ಮರವನ್ನು ಕಂಡಾಗ ನಮಗೆ ನೆನಪಾಗುವುದು ರುಚಿಯಾದ ಸೀಬೆ ಹಣ್ಣು ಮಾತ್ರ. ಆದರೆ, ಹಣ್ಣಿಗಿಂತಲೂ ಅದರ ಎಲೆಯಲ್ಲಿ ನೂರಾರು ಪಟ್ಟು ಹೆಚ್ಚಿನ ಆರೋಗ್ಯದ ರಹಸ್ಯ ಅಡಗಿದೆ ಎಂಬ ವಿಷಯ ನಿಮಗೆ ಗೊತ್ತೇ? ಆಯುರ್ವೇದದಲ್ಲಿ ಸೀಬೆ ಎಲೆಯನ್ನು ಹಣ್ಣಿಗಿಂತಲೂ ಶಕ್ತಿಶಾಲಿ ಮದ್ದು ಎಂದು ಪರಿಗಣಿಸಲಾಗಿದೆ. ಈ ಪುಟ್ಟ ಎಲೆಗಳಲ್ಲಿ ಅಡಗಿರುವ ಔಷಧೀಯ ಗುಣಗಳು ಮಧುಮೇಹದಿಂದ ಹಿಡಿದು ಹಠಮಾರಿ ಚರ್ಮ ರೋಗಗಳವರೆಗೆ ಎಲ್ಲದಕ್ಕೂ ರಾಮಬಾಣವಾಗಿ ಕೆಲಸ ಮಾಡುತ್ತವೆ .ಆಯುರ್ವೇದದಲ್ಲಿ ಸೀಬೆ ಎಲೆಯನ್ನು ‘ನೈಸರ್ಗಿಕ ಇನ್ಸುಲಿನ್’ ಎಂದೇ ಕರೆಯಲಾಗುತ್ತದೆ. ಇಂದಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಸಕ್ಕರೆ ಕಾಯಿಲೆ (Diabetes) ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ಸಾಮಾನ್ಯವಾಗುತ್ತಿವೆ. ಇಂತಹ ಸಮಯದಲ್ಲಿ ನಾವು ಆಸ್ಪತ್ರೆಯ ದುಬಾರಿ ಮಾತ್ರೆಗಳ ಬದಲಾಗಿ, ನಮ್ಮ ಸುತ್ತಮುತ್ತ ಸಿಗುವ ಇಂತಹ ಅದ್ಭುತ ಗಿಡಮೂಲಿಕೆಗಳ ಮೊರೆ ಹೋಗುವುದು ಉತ್ತಮ. ಈ ಪುಟ್ಟ ಎಲೆಗಳು ನಮ್ಮ ದೇಹಕ್ಕೆ ರಕ್ಷಾ ಕವಚದಂತೆ ಕೆಲಸ ಮಾಡುತ್ತವೆ. ಬನ್ನಿ, ಸೀಬೆ ಎಲೆ ನಮ್ಮ ಆರೋಗ್ಯಕ್ಕೆ ಹೇಗೆಲ್ಲಾ…
ಬೆಂಗಳೂರು: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಸ್ವರಾಜ್ ದ್ವೀಪದಲ್ಲಿ ಭಾರತದ ಸಾಹಸ ಯಾನದ ಸುವರ್ಣ ಅಧ್ಯಾಯವೊಂದು ಬರೆಯಲ್ಪಟ್ಟಿದೆ. ಸಮುದ್ರದ ಆಳದಲ್ಲಿ ಭಾರತದ ಅತಿ ದೊಡ್ಡ ತ್ರಿವರ್ಣ ಧ್ವಜವನ್ನು ಯಶಸ್ವಿಯಾಗಿ ಅನಾವರಣಗೊಳಿಸುವ ಮೂಲಕ ‘ಗಿನ್ನೆಸ್ ವರ್ಲ್ಡ್ ರೆಕಾರ್ಡ್’ ನಿರ್ಮಿಸಲಾಗಿದೆ. ಈ ಐತಿಹಾಸಿಕ ಸಾಹಸದಲ್ಲಿ ಬೆಂಗಳೂರಿನ ಪ್ರತಿಭಾವಂತ ಸಾಹಸ ಕ್ರೀಡಾ ತಜ್ಞ ಶರತ್ ಆರ್. ಅಶೋಕ್ ಅವರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ. ಶರತ್ ಆರ್. ಅಶೋಕ್ ಅವರು ಸಾಹಸ ಕ್ರೀಡಾ ಕ್ಷೇತ್ರದಲ್ಲಿ ಕಳೆದ ಒಂದು ದಶಕದಿಂದ ನಿರಂತರವಾಗಿ ತೊಡಗಿಸಿಕೊಂಡಿದ್ದು, ಅಪಾರ ಅನುಭವ ಹೊಂದಿದ್ದಾರೆ. ಆಟೋಮೊಬೈಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಇವರು, ಪ್ರಮಾಣೀಕೃತ ‘ಡೈವ್ ಮಾಸ್ಟರ್’ ಮತ್ತು ಸ್ಕೂಬಾ ಇನ್ಸ್ಟ್ರಕ್ಟರ್ ಆಗಿ ಅಂತರಾಷ್ಟ್ರೀಯ ಮಟ್ಟದ ಪರಿಣತಿ ಪಡೆದಿದ್ದಾರೆ. ಜಲ ಸಾಹಸ ಮಾತ್ರವಲ್ಲದೆ, ಪ್ಯಾರಾಗ್ಲೈಡಿಂಗ್ ಮತ್ತು ಪ್ಯಾರಾಮೋಟರ್ ಪೈಲಟ್ ಆಗಿ ಆಕಾಶದಲ್ಲೂ ಸಾಹಸ ಮೆರೆದಿರುವ ಇವರು, ಮೊಟೊಕ್ರಾಸ್ ಮತ್ತು ಪರ್ವತಾರೋಹಣದಲ್ಲಿಯೂ ಸಿದ್ಧಹಸ್ತರು. ಇಂತಹ ಹತ್ತು ವರ್ಷಗಳ ವೈವಿಧ್ಯಮಯ ಸಾಹಸೀ…
ಇಂದಿನ ರಾಶಿಫಲದಲ್ಲಿ ಯಾವ ರಾಶಿಯವರಿಗೆ ಆರ್ಥಿಕ ಲಾಭವಿದೆ ಮತ್ತು ಯಾರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ♈ ಮೇಷ (Aries) ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಹೊಸ ಕೆಲಸಗಳನ್ನು ಪ್ರಾರಂಭಿಸಲು ಸೂಕ್ತ ದಿನ. ಕುಟುಂಬದವರ ಜೊತೆ ಸಂತೋಷದ ಕ್ಷಣಗಳು. ♉ ವೃಷಭ (Taurus) ಆರ್ಥಿಕವಾಗಿ ಸ್ವಲ್ಪ ಜಾಗ್ರತೆ ಅಗತ್ಯ. ಅನಗತ್ಯ ಖರ್ಚು ತಪ್ಪಿಸಿ. ಆರೋಗ್ಯದ ಕಡೆ ಗಮನ ಕೊಡಿ. ♊ ಮಿಥುನ (Gemini) ಸ್ನೇಹಿತರ ಸಹಾಯದಿಂದ ಕೆಲಸಗಳು ಸುಗಮವಾಗಿ ನಡೆಯುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಮೆಚ್ಚುಗೆ ದೊರೆಯಬಹುದು. ♋ ಕರ್ಕಾಟಕ (Cancer) ಮನಸ್ಸಿನಲ್ಲಿ ಸ್ವಲ್ಪ ಗೊಂದಲ ಇರಬಹುದು. ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿ. ಕುಟುಂಬ ಬೆಂಬಲ ಸಿಗುತ್ತದೆ. ♌ ಸಿಂಹ (Leo) ನಿಮ್ಮ ನಾಯಕತ್ವ ಗುಣಗಳು ಇಂದು ಹೊರಹೊಮ್ಮುತ್ತವೆ. ಹೊಸ ಅವಕಾಶಗಳು ಎದುರಾಗಬಹುದು. ♍ ಕನ್ಯಾ (Virgo) ಕೆಲಸದ ಒತ್ತಡ ಹೆಚ್ಚಾಗಬಹುದು. ಆದರೆ ನೀವು ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತೀರಿ. ಆರೋಗ್ಯದ ಕಡೆ ಗಮನ ಕೊಡಿ. ♎ ತುಲಾ (Libra)…
ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಅಂಕಗಳಿಗೆ ಸೀಮಿತವಾಗಿದೆಯೇ? ಜ್ಞಾನಾರ್ಜನೆ, ಉದ್ಯೋಗ ಮತ್ತು ಮಾನವೀಯ ಮೌಲ್ಯಗಳ ನಡುವಿನ ಗೊಂದಲಗಳಿಗೆ ಉತ್ತರ ಹುಡುಕುವ, ಶಿಕ್ಷಣದ ನೈಜ ಅರ್ಥ ಮತ್ತು ಅಮೂಲಾಗ್ರ ಬದಲಾವಣೆಯ ಅಗತ್ಯವನ್ನು ವಿವರಿಸುವ ವಿವೇಕಾನಂದ ಎಚ್. ಕೆ. ಅವರ ವಿಶೇಷ ಲೇಖನ ಶೈಕ್ಷಣಿಕ ಹಾದಿ…….. ಶಿಕ್ಷಣ ಕ್ಷೇತ್ರದ ಬಗ್ಗೆ ಪರೀಕ್ಷೆಗಳ ಫಲಿತಾಂಶಗಳು ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ……. ಶಿಕ್ಷಣ… ಜ್ಞಾನಾರ್ಜನೆಗಾಗಿಯೇ, ಉದ್ಯೋಗಕ್ಕಾಗಿಯೇ, ಬದುಕಿಗಾಗಿಯೇ, ಸಾಧನೆಗಾಗಿಯೇ, ಪೋಷಕರ ಒತ್ತಾಯಕ್ಕಾಗಿಯೇ, ಸರ್ಕಾರದ ಕಡ್ಡಾಯಕ್ಕಾಗಿಯೇ, ವ್ಯವಹಾರಕ್ಕಾಗಿಯೇ, ಮಾನವೀಯ ಮೌಲ್ಯಗಳಿಗಾಗಿಯೇ, ಸಮಾಜದ ಮುಂದುವರಿಕೆಗಾಗಿಯೇ ಅಥವಾ ವ್ಯವಸ್ಥೆಯ ಸಹಜ ಸ್ವಾಭಾವಿಕ ಕ್ರಿಯೆಯೇ ಎಂಬ ಪ್ರಶ್ನೆಗಳ ಜೊತೆಗೆ,……. ಗುರುಕುಲ ವ್ಯವಸ್ಥೆ ಸರಿಯೇ, ಮೆಕಾಲೆ ಪದ್ದತಿ ಸರಿಯೇ, ಉದ್ಯೋಗ ಖಾತ್ರಿ ಶಿಕ್ಷಣ ಸರಿಯೇ, ಪ್ರಾಣಿ ಪಕ್ಷಿಗಳಂತೆ ಪ್ರಾಕೃತಿಕ ಶಿಕ್ಷಣ ಸರಿಯೇ, ಕೃತಕ ಜ್ಞಾನಾರ್ಜನೆಯ ಪದ್ದತಿ ಸರಿಯೇ,……… ಎಂಬ ಗೊಂದಲಗಳ ನಡುವೆ, ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ವ್ಯಕ್ತಿತ್ವ ಬೆಳೆಸುವ ಕ್ರಮಗಳಲ್ಲಿ… ನೆನಪಿನ ಶಕ್ತಿ ಮುಖ್ಯವೇ, ಮಾನವೀಯ ಮೌಲ್ಯಗಳು ಮುಖ್ಯವೇ, ಶ್ರದ್ಧೆ ಮತ್ತು ಸ್ಪಂದನೆ ಮುಖ್ಯವೇ, ದೈಹಿಕ…
ನಾಯಕನಹಟ್ಟಿ: ಬಡ್ಡಿ ಹಾಗೂ ಜೀವನದ ಭದ್ರತೆಗೆ ಹಣವನ್ನು ಬ್ಯಾಂಕ್‌ನಲ್ಲಿ ಇರಿಸಿದಂತೆ ಎಐ ಯುಗದಲ್ಲಿ ಶಿಕ್ಷಣ ಮತ್ತು ಜ್ಞಾನವನ್ನು ಠೇವಣಿಯನ್ನಾಗಿಸಬೇಕಿದೆ ಎಂದು ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ರಾಘವೇಂದ್ರ ತಿಳಿಸಿದರು. ಪಟ್ಟಣದ ವಿದ್ಯಾವಿಕಾಸ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಎಐ ಯುಗದಲ್ಲಿ ಎಸ್ಸೆಸ್ಸೆಲ್ಸಿ ನಂತರ ಮುಂದೇನು ? ಶೈಕ್ಷಣಿಕ ಮಾರ್ಗದರ್ಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಬರುವ ಜ್ಞಾನ ಎಂಬ ಬಡ್ಡಿಯನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಹಣವಿದ್ದರೆ ಕಳೆಯುವ ಚಿಂತೆ ಇರುತ್ತದೆ. ಆದರೆ ಜ್ಞಾನವನ್ನು ಕದಿಯಲು, ಕಳೆಯಲು ಸಾಧ್ಯವಿಲ್ಲ ಎಂದರು. ಕೇವಲ ಬಿಎ, ಬಿಎಸ್ಸಿಗಳಿಂದ ಇದೀಗ ಜೀವನ ಸಾಧ್ಯವಿಲ್ಲ. ಉತ್ತಮ ಜೀವನಕ್ಕಾಗಿ ಕೌಶಲ್ಯ ಮತ್ತು ಜ್ಞಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಕೇಂದ್ರ ಸರಕಾರದ ಕೌಶಲ್ಯ ತರಬೇತಿ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಜಿಟಿಟಿಸಿ ನಂತರ ಇಂಜಿನಿಯರಿಂಗ್ ಗೆ ಅವಕಾಶಗಳಿವೆ ಎಂದು ಹೇಳಿದರು. ಎಸ್‌ಎಸ್‌ಎಲ್‌ಸಿ ಪೂರ್ಣಗೊಂಡ ಈ ಕ್ಷಣ, ಮಕ್ಕಳಿಗಷ್ಟೇ ಅಲ್ಲ ತಂದೆ ತಾಯಿಗಳಿಗೆ ಕೂಡ ಮಹತ್ವದ ಹಂತ. ಇವರೆಗೂ ನೀವು…
ಚಿತ್ರದುರ್ಗ ನಗರದಲ್ಲಿ ಶಾಕಿಂಗ್ ಘಟನೆ ನಡೆದಿದೆ. ರಾಮದಾಸ್ ಕಂಪೌಂಡ್ ಬಡಾವಣೆಯಲ್ಲಿ 46 ವರ್ಷದ ಪ್ರಮೋದ್ ಅವರನ್ನು ದುಷ್ಕರ್ಮಿಗಳು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾರೆ. ಮಾಹಿತಿ ಪ್ರಕಾರ, ಪ್ರಮೋದ್ ಅವರು ಮನೆಯಲ್ಲಿ ಒಬ್ಬರೇ ಇದ್ದ ವೇಳೆ ರಾತ್ರಿ ಸಮಯದಲ್ಲಿ ದಾಳಿ ನಡೆದಿದೆ. ಮಹಿಳೆಯೊಂದಿಗಿನ ಅಕ್ರಮ ಸಂಬಂಧದ ಹಿನ್ನೆಲೆ ಈ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾಗಿದ್ದು, ಬೆಳಗ್ಗೆ ಸುಮಾರು 8 ಗಂಟೆಗೆ ಮನೆ ಬಾಗಿಲು ತೆರೆಯುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಅರುಣ್ ಗೌಡ ಹಾಗೂ ಸಿಪಿಐ ನಯೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಚಿತ್ರದುರ್ಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. 👉 ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಲು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇಂದಿನ ನಿತ್ಯ ಭವಿಷ್ಯ (03-05-2026): ಮೇಷದಿಂದ ಮೀನ ರಾಶಿಯವರೆಗಿನ ಸಂಪೂರ್ಣ ರಾಶಿಫಲ ಇಲ್ಲಿದೆ. ಇಂದು ನಿಮ್ಮ ಗ್ರಹಗತಿ ಹೇಗಿದೆ? ಉದ್ಯೋಗ, ಆರೋಗ್ಯ ಮತ್ತು ಹಣಕಾಸಿನ ಸ್ಥಿತಿಗತಿ ತಿಳಿಯಲು ಈಗಲೇ ಓದಿ. 🔮 ಮೇಷ (Aries) ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹೊಸ ಕೆಲಸಗಳಿಗೆ ಚಾಲನೆ ನೀಡಲು ಉತ್ತಮ ದಿನ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. 🔮 ವೃಷಭ (Taurus) ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ. ಅನಾವಶ್ಯಕ ಖರ್ಚು ತಪ್ಪಿಸಿ. ಆರೋಗ್ಯದ ಕಡೆ ಗಮನ ಕೊಡಿ. 🔮 ಮಿಥುನ (Gemini) ಸಂಪರ್ಕ ಮತ್ತು ಸಂಭಾಷಣೆಯಿಂದ ಲಾಭವಾಗುತ್ತದೆ. ಸ್ನೇಹಿತರ ಸಹಾಯದಿಂದ ಕೆಲಸಗಳು ನೆರವೇರುತ್ತವೆ. 🔮 ಕರ್ಕಾಟಕ (Cancer) ಮನಸ್ಸಿನಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು. ತಾಳ್ಮೆ ಇಟ್ಟು ನಿರ್ಧಾರ ತೆಗೆದುಕೊಳ್ಳಿ. ಕುಟುಂಬದ ಬೆಂಬಲ ಸಿಗುತ್ತದೆ. 🔮 ಸಿಂಹ (Leo) ನಿಮ್ಮ ನಾಯಕತ್ವ ಗುಣಗಳು ಹೊರಹೊಮ್ಮುತ್ತವೆ. ಉದ್ಯೋಗದಲ್ಲಿ ಮೆಚ್ಚುಗೆ ಸಿಗಬಹುದು. 🔮 ಕನ್ಯಾ (Virgo) ಇಂದು ನಿಮ್ಮ ಪರಿಶ್ರಮ ಫಲ ನೀಡುತ್ತದೆ. ಕೆಲಸದಲ್ಲಿ ಗಮನ ಕೊಟ್ಟರೆ ಯಶಸ್ಸು…
ಬುದ್ಧ ಪೂರ್ಣಿಮೆಯ ಈ ಸಂದರ್ಭದಲ್ಲಿ ಗೌತಮ ಬುದ್ಧನ ತತ್ವಗಳು ಇಂದಿನ 21ನೇ ಶತಮಾನಕ್ಕೆ ಹೇಗೆ ಪ್ರಸ್ತುತ? ಸಿದ್ಧಾರ್ಥ ಬುದ್ಧನಾದ ಕಥೆ ಮತ್ತು ನಮ್ಮೊಳಗಿನ ಮಾನವೀಯತೆಯಲ್ಲಿ ಬುದ್ಧನನ್ನು ಹುಡುಕುವ ಬಗೆಯನ್ನು ವಿವರಿಸುವ ವಿಶೇಷ ಲೇಖನ. ” ಜಗತ್ತಿನ ಎಲ್ಲಾ ಶೋಷಿತರು – ದೌರ್ಜನ್ಯಕ್ಕೆ ಒಳಗಾದವರು ನನ್ನ ಸಂಗಾತಿಗಳು “…… ಚೆಗುವಾರ………… ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೇ ಎಂಬ ಭಾವದೊಂದಿಗೆ…. ಎಲ್ಲರಿಗೂ ಶುಭಾಶಯಗಳು…….. ನಿಮ್ಮ ಸಂತೋಷದ ಸಂದರ್ಭಗಳಲ್ಲಿ ಇವರುಗಳು ಸಹ ನೆನಪಾಗಲಿ……… ಚುಮು ಚುಮು ಚಳಿಯಲ್ಲಿ ನಿಮಗೆ ನಿಮ್ಮ ಪ್ರೇಯಸಿ/ ಪ್ರಿಯಕರ ನೆನಪಾದರೆ ಸಂತೋಷಿಸುವೆವು. ಹಾಗೆಯೇ, ಹಿಮಾಲಯದ ತಪ್ಪಲಿನಲ್ಲಿ ಆ ನಡುಗುವ ಚಳಿಯಲ್ಲಿ ನಮಗಾಗಿ ಕಾರ್ಯ ನಿರ್ವಹಿಸುತ್ತಿರುವ ಸೈನಿಕರೂ ನೆನಪಾಗಲಿ ಎಂದು ಆಶಿಸುವೆ ……. ಅತ್ಯಂತ ತೀವ್ರ ಉಷ್ಣ ತಾಪಮಾನದಲ್ಲಿ ಅನಿರೀಕ್ಷಿತವಾಗಿ ತಣ್ಣನೆಯ ನೀರ ಮಜ್ಜಿಗೆ ಮತ್ತು ಎಳನೀರು ದೊರೆತು ಅದು ಗಂಟಲಲ್ಲಿ ಇಳಿಯುವಾಗ ಆಸ್ವಾದಿಸುವ ನಿಮ್ಮ ಮನಸ್ಥಿತಿಗೆ ಸಂತೋಷಪಡುವೆವು, ಆದರೆ ಅದೇ ಸಮಯದಲ್ಲಿ ಅದು…
ಬೆಂಗಳೂರು, ಮೇ. 2:ದೊಡ್ಡಬಳ್ಳಾಪುರದ ಕಾರ್ಮಿಕ ಇಲಾಖೆ ಅಡಿಯಲ್ಲಿ ಬರುವ ಈಎಸ್ಐ ಆಸ್ಪತ್ರೆಯನ್ನು ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಶಿಷ್ಟಾಚಾರ ಉಲ್ಲಂಘಿಸಿದಕ್ಕೆ ರಾಜ್ಯದ ಕಾರ್ಮಿಕ ಇಲಾಖೆ ಆಕ್ರೋಶ ವ್ಯಕ್ತಪಡಿಸಿದೆ. ಅಂದಹಾಗೆ ಕರ್ನಾಟಕ ರಾಜ್ಯದ ದೊಡ್ಡಬಳ್ಳಾಪುರಡ 100 ಹಾಸಿಗೆಗಳ ಈಎಸ್ಐ ಆಸ್ಪತ್ರೆಯ ಉದ್ಘಾಟನೆ ನಾಳೆ ಭಾನುವಾರ ಮೇ 3ರಂದು ನಡೆಯಲಿದ್ದು, ಇದರ ಶಿಲಾನ್ಯಾಸ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಜ್ಯದ ಬಿಜೆಪಿ ಸಚಿವರನ್ನು ಮಾತ್ರ ಆಹ್ವಾನಿಸಿದಲ್ಲದೇ ಸದರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರ ಹೆಸರನ್ನು ಮುದ್ರಿಸಿಲ್ಲ. ಕಾರ್ಮಿಕ ಇಲಾಖೆಯ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ರಾಜ್ಯದ ಕಾರ್ಮಿಕ ಸಚಿವರನ್ನೇ ಕಡೆಗಣಿಸಿರುವುದು ಸಲ್ಲದ್ದಾಗಿದೆ.ಜನರ ಸೇವೆಯ ಆಸ್ಪತ್ರೆಯಲ್ಲಿಯೂ ಸಹ ಬಿಜೆಪಿ ರಾಜಕೀಯ ಮೆರೆದಿದೆ. ಹೀಗೇ ಸಂಬಂಧಪಟ್ಟ ಇಲಾಖೆಯ ಕಾರ್ಯಕ್ರಮಕ್ಕೆ ರಾಜ್ಯದ ಕಾರ್ಮಿಕ ಸಚಿವರನ್ನೇ ಕಡೆಗಣಿಸಿರುವುದು ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಹೀಗೇ ಶಿಷ್ಟಾಚಾರ ಉಲ್ಲಂಘಿಸಿರುವ ಕೇಂದ್ರ ಸರ್ಕಾರ ಹಾಗೂ ಅದರ ಅಧಿಕಾರಿಗಳ ವಿರುದ್ದ ರಾಜ್ಯ ಕಾರ್ಮಿಕ ಇಲಾಖೆ ಖಂಡಿಸಿದೆ. ಈ ಆಸ್ಪತ್ರೆ ಬೆಂಗಳೂರು ಗ್ರಾಮಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ…
ಮಾವು ನಮ್ಮ ದೇಶದ ಅತ್ಯಂತ ಪ್ರಿಯಕರವಾದ ಹಣ್ಣು. ಅದನ್ನು “ಹಣ್ಣಿನ ರಾಜ” ಎಂದು ಕರೆಯಲಾಗುತ್ತದೆ. ಭಾರತ ಸೇರಿದಂತೆ ಅನೇಕ ಉಷ್ಣವಲಯದ ದೇಶಗಳಲ್ಲಿ ಮಾವು ವ್ಯಾಪಕವಾಗಿ ಬೆಳೆಯುತ್ತದೆ. ಅದರ ಸಿಹಿ, ರುಚಿ, ಸುಗಂಧ ಮತ್ತು ಪೌಷ್ಟಿಕ ಗುಣಗಳಿಂದಲೇ ಇದು ಜನಮನ ಗೆದ್ದಿದೆ. ಉತ್ಸವಗಳು ಮತ್ತು ಕುಟುಂಬ ಸಮಾರಂಭಗಳಲ್ಲಿ ಮಾವು ಪ್ರಮುಖ ಸ್ಥಾನ ಪಡೆದಿದೆ. ಕರ್ನಾಟಕದ ಮಾವುಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿವೆ. ಕರ್ನಾಟಕದ ಉಷ್ಣ ಹವಾಮಾನ ಮತ್ತು ಕೆಂಪು-ಕಪ್ಪು ಮಣ್ಣಿನ ಗುಣವನ್ನು ಹೊಂದಿರುವ ಪ್ರದೇಶವು ಮಾವಿನ ಬೆಳೆಗಾಗಿ ಅತ್ಯಂತ ಅನುಕೂಲಕರವಾಗಿದೆ. ವಿಶೇಷವಾಗಿ ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ಉತ್ತಮ ಗುಣಮಟ್ಟದ ಮಾವುಗಳು ದೊರೆಯುತ್ತವೆ. ಮಾವಿನ ಹಣ್ಣು ಕೃಷಿ, ಕೈಗಾರಿಕೆ ಮತ್ತು ವ್ಯಾಪಾರ ಕ್ಷೇತ್ರಗಳನ್ನು ಸಂಪರ್ಕಿಸುವ ಪ್ರಮುಖ ಬೆಳೆಯಾಗಿದ್ದು. ಇದು ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಬಲ ನೀಡುವುದರ ಜೊತೆಗೆ ದೇಶದ ಒಟ್ಟಾರೆ ಆರ್ಥಿಕತೆಯಲ್ಲೂ ಮಹತ್ವದ ಪಾತ್ರವಹಿಸುತ್ತದೆ. ಭಾರತದಲ್ಲಿ ಮಾವಿನ ಬೆಳೆ, ಫಲಶೋಧನೆ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಗೆ ಕೃಷಿ ಮತ್ತು ಅಗ್ರಿಕಲ್ಚರಲ್…
Subscribe to Updates
Get the latest creative news from FooBar about art, design and business.